Chanakya Niti: ಈ ಐದು ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಚಾಣಕ್ಯ

ಮನೆಯ ಶಾಂತಿ, ನೆಮ್ಮದಿ ಮನೆಯ ಸದಸ್ಯರ ಸ್ವಭಾವ, ಅವರ ಗುಣ ನಡತೆಯ ಮೇಲೆ ಅವಲಂಬಿತವಾಗಿರುತ್ತವೆ. ಯಾವ ಮನೆಯ ಸದಸ್ಯರು ಸದ್ಗುಣಗಳನ್ನು ಹೊಂದಿರುತ್ತಾರೋ, ಅವರ ಮನೆಯಲ್ಲಿ ನೆಮ್ಮದಿಯೂ ಇರುತ್ತದೆ. ಅದರಲ್ಲೂ ಯಾವ ಮನೆಯಲ್ಲಿ ಈ ಕೆಲವೊಂದು ಗುಣಗಳನ್ನು ಹೊಂದಿರುವ ಮಹಿಳೆಯರು ಇರುತ್ತಾರೋ, ಅಂತಹ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಮಹಿಳೆಯ ಯಾವ ಗುಣಗಳು ಮನೆಯನ್ನು ಸ್ವರ್ಗವನ್ನಾಗಿಸುತ್ತದೆ ಎಂಬುದನ್ನು ನೋಡೋಣ ಬನ್ನಿ,

Chanakya Niti: ಈ ಐದು ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 12, 2026 | 6:02 PM

ಹೆಣ್ಣನ್ನು ಮನೆಯ ಕಣ್ಣು, ಮನೆಯ (home) ನಂದಾದೀಪ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ನಿಜ, ಏಕೆಂದರೆ ಕುಟುಂಬವನ್ನು ಮುನ್ನಡೆಸುವಲ್ಲಿ ಮಹಿಳೆಯರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಕುಟುಂಬದ ಉನ್ನತಿ-ಅವನತಿ ಕೂಡ ಅವರ ಮೇಲೆಯೇ ನಿಂತಿರುತ್ತದೆ. ಅದಕ್ಕಾಗಿಯೇ ಉತ್ತಮ ಗುಣವುಳ್ಳ ಹೆಣ್ಣನ್ನೇ ಮದುವೆಯಾಗಬೇಕು ಎಂದು ಹಿರಿಯರು ಹೇಳೋದು. ಅಂತಹ ಮಹಿಳೆಯರು ಮನೆಯನ್ನು ಸ್ವರ್ಗವನ್ನಾಗಿಸುತ್ತಾರೆ. ಅದರಲ್ಲೂ ಈ ಕೆಲವೊಂದು ಗುಣಗಳನ್ನು ಹೊಂದಿರುವ ಹೆಣ್ಣು ಇರುವಂತಹ ಮನೆಯಲ್ಲಿ ಹೊಂದಾಣಿಕೆ ಶಾಂತಿ, ಸಂತೋಷ, ನೆಮ್ಮದಿಗೆ ಯಾವುದೇ ಕೊರತೆಯಿಲ್ಲ ಎಂದು ಆಚಾರ್ಯ ಚಾಣಕ್ಯರು ವರ್ಣಿಸಿದ್ದಾರೆ. ಹಾಗಿದ್ರೆ ಮಹಿಳೆಯ ಯಾವ ಗುಣಗಳು ಮನೆಯನ್ನು ಸ್ವರ್ಗವನ್ನಾಗಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ಈ ಗುಣಗಳನ್ನು ಹೊಂದಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ:

ತಾಳ್ಮೆ ಮತ್ತು ಸಹಿಷ್ಣುತೆ: ಪ್ರತಿಯೊಬ್ಬರ ಮನೆಯಲ್ಲೂ ಉದ್ವಿಗ್ನತೆ, ಆರ್ಥಿಕ ತೊಂದರೆಗಳು ಅಥವಾ ಸಂಬಂಧದಲ್ಲಿ ಹದಗೆಡುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಯಾವ ಹೆಣ್ಣು ತಾಳ್ಮೆಯಿಂದ ಇರುತ್ತಾಳೋ ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೇ ತಾಳ್ಮೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೋ, ಆಕೆಯ ಮನೆಯಲ್ಲಿ ಎಂತಹ ಕಠಿಣ ಸಂದರ್ಭಗಳಲ್ಲೂ ಶಾಂತಿ ಹದಗೆಡುವುದಿಲ್ಲ. ಮಹಿಳೆಯ ಈ ಗುಣ ಮನೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು  ಸಹಾಯ ಮಾಡುತ್ತದೆ.

ಪ್ರೀತಿ ಮತ್ತು ಹೊಂದಾಣಿಕೆ: ಮಹಿಳೆಗೆ ತನ್ನ ಕುಟುಂಬವನ್ನು ಪ್ರೀತಿಸುವ  ಮತ್ತು ಹೊಂದಾಣಿಕೆಯ ಗುಣ ಇರಬೇಕು. ಮಹಿಳೆಯ ಈ ಗುಣ ಕುಟುಂಬ ಸದಸ್ಯರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ ಈ ಗುಣವನ್ನು ಹೊಂದಿರುವ ಹೆಣ್ಣಿನ ಮನೆಯಲ್ಲಿ ಜಗಳ, ಮನಸ್ತಾಪಗಳು ಸಹ ಇರೋದಿಲ್ಲ. ಹೆಣ್ಣಿನ ಈ ಗುಣ ಮನೆಯ ವಾತಾವರಣವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುತ್ತದೆ.

ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ: ಮನೆಯ ನಿಜವಾದ ಶಕ್ತಿ ಬುದ್ಧಿವಂತ ಮಹಿಳೆ. ಬುದ್ಧಿವಂತ ಮಹಿಳೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅದು ಸರಿಯೋ ತಪ್ಪೋ ಎಂದು ಎರಡು ಬಾರಿ ಯೋಚಿಸುತ್ತಾಳೆ. ಅಲ್ಲದೆ ಆಕೆ ಯಾವುದೇ ಪರಿಸ್ಥಿತಿಯನ್ನೂ ಸಹ ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾಳೆ. ಈ ಗುಣವು ಮನೆಯಲ್ಲಿ ಅನಗತ್ಯ ಉದ್ವಿಗ್ನತೆ ಹೆಚ್ಚಾಗುವುದನ್ನು ತಡೆಯುತ್ತದೆ. ಮಹಿಳೆಯ ಈ ಬುದ್ಧಿವಂತಿಕೆಯು ಇಡೀ ಕುಟುಂಬ ತಪ್ಪು ದಿಕ್ಕಿನಲ್ಲಿ ಹೋಗದಂತೆ ತಡೆಯುತ್ತದೆ.

ಇದನ್ನೂ ಓದಿ: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ

ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ: ಜೀವನದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಹೀಗಿರುವಾಗ ಕಷ್ಟದ ಸಮಯದಲ್ಲಿ ಭರವಸೆ ಕಳೆದುಕೊಳ್ಳದೆ, ಧೃತಿಗೆಡದೆ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಾಳೋ ಅಂತಹ ಸಂದರ್ಭಗಳಲ್ಲಿ ಆಕೆಯ ಸದಸ್ಯರು ಸಹ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ, ಅವಳ ಆತ್ಮವಿಶ್ವಾಸವು ಅವಳಿಗೆ ಪ್ರತಿಯೊಂದು ಸವಾಲನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ. ಮಹಿಳೆಯ ಈ ಗುಣ ಕುಟುಂಬದ ಶಕ್ತಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜವಾಬ್ದಾರಿ ಮತ್ತು ಬದ್ಧತೆ: ಮನೆ ಅಂದ್ಮೆಲೇ  ಒಂದಷ್ಟು ಜವಾಬ್ದಾರಿಗಳು ಇದ್ದೇ ಇರುತ್ತವೆ ಮತ್ತು ಅವುಗಳನ್ನು ಪೂರೈಸಲು ಬದ್ಧತೆ ಬಹಳ ಮುಖ್ಯ. ಈ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವ ಮಹಿಳೆಯ ಮನೆ ಸ್ವರ್ಗಕ್ಕೆ ಸಮಾನ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಜವಾಬ್ದಾರಿಯುತ ಮಹಿಳೆ ತನ್ನ ಕೆಲಸವನ್ನು ಕೇವಲ ಕರ್ತವ್ಯವೆಂದು ಪರಿಗಣಿಸುವುದಿಲ್ಲ, ಬದಲಾಗಿ ಅದನ್ನು ಪೂರ್ಣ ಹೃದಯದಿಂದ ನಿರ್ವಹಿಸುತ್ತಾಳೆ. ಮಕ್ಕಳಿಗೆ ಶಿಕ್ಷಣ ನೀಡುವುದು, ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಮನೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಹೀಗೆ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ. ಈ ಸಮರ್ಪಣೆ ಕುಟುಂಬಕ್ಕೆ ವಿಶ್ವಾಸ ಮತ್ತು ಸ್ಥಿರತೆಯನ್ನು ತರುತ್ತದೆ. ಕುಟುಂಬದ ಅಡಿಪಾಯವನ್ನು ಮತ್ತಷ್ಟು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us