
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಭಯ (Fear) ಇದ್ದೇ ಇರುತ್ತದೆ. ಕೆಲವರಿಗೆ ಕತ್ತಲನ್ನು ಕಂಡರೆ ಭಯವಾದ್ರೆ ಇನ್ನೂ ಕೆಲವರಿಗೆ ತಾವು ಇಷ್ಟಪಡುವವರನ್ನು ಕಳೆದುಕೊಳ್ಳುವ ಭಯ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಯ. ಆದರೆ ಮುಖ್ಯವಾಗಿ ಈ ಎರಡು ವಿಷಯಗಳಿಗೆ ಯಾರು ಭಯಪಡುತ್ತಾರೋ ಅವರು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು (Acharya Chanakya). ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರು ಯಶಸ್ವಿ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುವವರು ಈ ಎರಡು ವಿಷಯಗಳಿಗೆ ಹೆದರಬಾರದು ಎನ್ನುತ್ತಾರೆ. ಆ ಎರಡು ಪ್ರಮುಖ ಅಂಶಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಟೀಕೆಗೆ ಹೆದರುವ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಟೀಕೆಗಳಿಗೆ ಹೆದರುವ ಜನರು ಎಂದಿಗೂ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಜನ ಏನನ್ನುತ್ತಾರೋ ಎಂದು ಟೀಕೆಗಳಿಗೆ ಹೆದರಿ ತಾವು ಮಾಡಬೇಕಾದ ಕೆಲಸವನ್ನು ಮಾಡದೆ ಕೂರುವವರು ತಮ್ಮ ಗುರಿಯನ್ನು ತಲುಪಲು ಎಂದಿಗೂ ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿಯು ಯಶಸ್ವಿಯಾಗಲು ಬಯಸಿದರೆ, ಅವನು ಎಲ್ಲರ ಎದುರು ವಿಭಿನ್ನವಾದುದನ್ನು ಪ್ರಯತ್ನಿಸಬೇಕು. ಟೀಕೆ ಒಂದು ಅವಕಾಶದಂತೆ, ಅದರ ಮೂಲಕ ಇನ್ನಷ್ಟು ಕಲಿಯಬಹುದು, ತಪ್ಪುಗಳನ್ನು ತಿದ್ದಿ ನಡೆಯಬಹುದು ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಜನರ ಟೀಕೆಗಳಿಗೆ ಯಾವತ್ತೂ ಹೆದರಬೇಡಿ.
ಇದನ್ನೂ ಓದಿ: ಈ ನಾಲ್ಕು ಅಭ್ಯಾಸಗಳೇ ಜೀವನದ ಎಲ್ಲಾ ದುಃಖ, ನೋವನ್ನು ದೂರ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ
ಕಷ್ಟ ಬಂದಾಗ ಓಡಿಹೋಗುವುದು: ಕಷ್ಟಗಳು ಪ್ರತಿಯೊಬ್ಬರ ಜೀವನದಲ್ಲೂ ಇದ್ದೇ ಇರುತ್ತದೆ. ಆ ಕಷ್ಟಗಳನ್ನು ಎದುರಿಸಿ ನಿಂತಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಇದನ್ನು ಬಿಟ್ಟು ಕಷ್ಟ ಬಂತೆಂದು ಭಯ ಪಟ್ಟರೆ ಅಥವಾ ಓಡಿ ಹೋದರೆ ಇದರಿಂದ ಯಾವತ್ತೂ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಕಷ್ಟಗಳು ಬರುವುದೇ ನಮ್ಮನ್ನು ಪರೀಕ್ಷಿಸಲು, ಕಷ್ಟವೆಂಬ ಈ ಪರೀಕ್ಷೆಯನ್ನು ಜಯಿಸಿದರೆ ನಿಮ್ಮ ಬಾಳು ಬೆಳಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಕಷ್ಟ ಬಂದಾಗ ಭಯಪಡಬೇಡಿ. ಒಂದು ವೇಳೆ ನೀವು ಕಷ್ಟಗಳನ್ನು ನೋಡಿ ನೀವು ಭಯಪಟ್ಟರೆ, ಅಂದುಕೊಡ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ