Chanakya Niti: ಈ ಎರಡು ವೈಯಕ್ತಿಕ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್‌ ಮಾಡಬಾರದು

ಆಚಾರ್ಯ ಚಾಣಕ್ಯರು ಯಶಸ್ಸಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸು, ಶ್ರೀಮಂತಿಕೆ ಗಳಿಸಲು ಜೀವನದಲ್ಲಿ ಏನೆಲ್ಲಾ ಮಾಡಬೇಕು ಎಂದು ಹೇಳಿರುವಂತೆ, ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನೇರಲು ಬಯಸಿದರೆ ಈ ಎರಡು ವಿಚಾರಗಳನ್ನು ಸಹದ್ಯೋಗಿಗಳ ಬಳಿ ಹಂಚಿಕೊಳ್ಳಲೇಬಾರದು ಎಂದು ಹೇಳಿದ್ದಾರೆ. ಸಹದ್ಯೋಗಿಗಳ ಬಳಿ ಯಾವ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಎರಡು ವೈಯಕ್ತಿಕ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್‌ ಮಾಡಬಾರದು
ಚಾಣಕ್ಯ ನೀತಿ
Image Credit source: Pinterest

Updated on: Mar 17, 2026 | 8:29 PM

ವೃತ್ತಿ ಜೀವನದಲ್ಲಿ (career) ಯಶಸ್ಸನ್ನು ಸಾಧಿಸಬೇಕು, ಉನ್ನತ ಸ್ಥಾನವನ್ನು ಪಡೆಯಬೇಕು ಎಂಬ ಬಯಕೆ, ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮವನ್ನೂ ಪಡುತ್ತಾರೆ. ಆದರೆ ಕೆಲವರು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ವೃತ್ತಿ ಜೀವನದಲ್ಲಿ ಅಂದುಕೊಂಡ ಯಶಸ್ಸು ಲಭಿಸುವುದಿಲ್ಲ. ಇದಕ್ಕೆ ಕಾರಣ ನಮ್ಮ ತಪ್ಪುಗಳೇ ಕಾರಣ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯರು. ಹೌದು ಆಚಾರ್ಯ ಚಾಣಕ್ಯರ ಪ್ರಕಾರ ನಾವು ನಮ್ಮ ಕೆಲವು ಸೀಕ್ರೆಟ್‌ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದರಿಂದಲೇ ಸಮಸ್ಯೆಗಳು ಉದ್ಭವಿಸುವುದು. ಆದ್ದರಿಂದ ಬಾಸ್‌ ಮತ್ತು ಸಹದ್ಯೋಗಿಗಳೊಂದಿಗೆ ನಿಮ್ಮ ಈ ಎರಡು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲೇಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಈ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ:

ನಿಮ್ಮ ದೌರ್ಬಲ್ಯ ಅಥವಾ ಭಯ: ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ದೌರ್ಬಲ್ಯಗಳನ್ನು ಯಾರಿಗೂ ಬಹಿರಂಗಪಡಿಸಬಾರದು. ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವಿನ ಸಂಬಂಧ ಎಷ್ಟೇ ಉತ್ತಮವಾಗಿದ್ದರೂ, ನಿಮ್ಮ ದೌರ್ಬಲ್ಯಗಳ ಬಗ್ಗೆ ಯಾರ ಬಳಿಯೂ ಶೇರ್‌ ಮಾಡಬಾರದು. ಏಕೆಂದರೆ ಎಲ್ಲರೂ ವೃತ್ತಿಜೀವನದ ಓಟದಲ್ಲಿ ಮುಂದುವರಿಯಲು ಬಯಸುತ್ತಾರೆ. ಹಾಗಿರುವಾಗ ನಿಮ್ಮ ದೌರ್ಬಲ್ಯಗಳ ಬಗ್ಗೆ ಹೇಳಿದರೆ ಅದನ್ನು ಹೆಚ್ಚಿನವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ನ್ಯೂನತೆಗಳನ್ನು ರಹಸ್ಯವಾಗಿಡಿ ಮತ್ತು  ಧೈರ್ಯದಿಂದಲೇ ನಿಮ್ಮ ಕೆಲಸವನ್ನು ಮಾಡುತ್ತಾ ಮುಂದೆ ಸಾಗಿ.

ಇದನ್ನೂ ಓದಿ: ಮದುವೆಯ ನಂತರವೂ ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುವುದೇಕೆ?

ನಿಮ್ಮ ಮುಂದಿನ ಯೋಜನೆ ಅಥವಾ ಭವಿಷ್ಯದ ಯೋಜನೆ: ಯಾವುದೇ ಕೆಲಸ ಪೂರ್ಣಗೊಳ್ಳುವವರೆಗೆ ನೀವು ಅದನ್ನು ಹಂಚಿಕೊಳ್ಳಬಾರದು. ಹೊಸ ಉದ್ಯೋಗವನ್ನು ಹುಡುಕುವುದು ಅಥವಾ ನಿರ್ದಿಷ್ಟ ಯೋಜನೆಯನ್ನು ಯೋಜಿಸುವಂತಹ ನಿಮ್ಮ ಮುಂದಿನ ಯೋಜನೆಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಕೆಲವು ಸಹದ್ಯೋಗಿಗಳು ಈ ವಿಚಾರದಿಂದಾಗಿ ನಿಮ್ಮ ಮೇಲೆ ಅಸೂಯೆ ಪಡುತ್ತಾರೆ ನಿಮ್ಮ ಯೋಜನೆಗಳನ್ನು ಹಾಳುಮಾಡಲು ಪ್ರಯತ್ನಿಸಬಹುದು. ಇದರಿಂದ ನಿಮ್ಮ ವೃತ್ತಿ ಜೀವನಕ್ಕೆ ಕುತ್ತು ಬರಬಹುದು. ಆದ್ದರಿಂದ ಯಾವಾಗಲೂ ನಿಮ್ಮ ಯೋಜನೆಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:28 pm, Tue, 17 March 26

Follow Us