AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಸಂದರ್ಭಗಳಲ್ಲಿ ನಿಮ್ಮ ಜೊತೆ ನಿಲ್ಲುವವರೇ ನಿಜವಾದ ಸ್ನೇಹಿತ

ಇಂದಿನ ಕಾಲದಲ್ಲಿ, ನಿಜವಾದ ಸ್ನೇಹಿತನನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಹೌದು ಪ್ರೀತಿ ಮಾತ್ರವಲ್ಲ ಅನೇಕರು ಸ್ನೇಹದ ವಿಷಯದಲ್ಲೂ ತುಂಬಾನೇ ಮೋಸ ಹೋಗುತ್ತಾರೆ. ಆದರೆ ಎಲ್ಲರೂ ಹೀಗೆ ಮೋಸ ಮಾಡುವುದಿಲ್ಲ, ಕೆಲವರು ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಜೊತೆಗೆ ನಿಂತಿರುತ್ತಾರೆ. ಅವರೇ ನಿಜವಾದ ಸ್ನೇಹಿತರು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿರುವಂತೆ ಎಂತಹ ಪರಿಸ್ಥಿತಿಯಲ್ಲಿ ಜೊತೆಗೆ ನಿಲ್ಲುವವನು ನಿಜವಾದ ಸ್ನೇಹಿತ ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಸಂದರ್ಭಗಳಲ್ಲಿ ನಿಮ್ಮ ಜೊತೆ ನಿಲ್ಲುವವರೇ ನಿಜವಾದ ಸ್ನೇಹಿತ
ಚಾಣಕ್ಯ ನೀತಿImage Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 13, 2026 | 7:40 PM

Share

ಈ ಜಗತ್ತಿನಲ್ಲಿರುವ ನಿಷ್ಕಲ್ಮಶ ಸಂಬಂಧಗಳಲ್ಲಿ ಸ್ನೇಹವೂ (Friendship) ಒಂದು. ಸ್ನೇಹಿತರು ಯಾವಾಗಲೂ ನಮಗೆ ಹೆಗಲಾಗಿರುತ್ತಾರೆ. ಆದರೆ ಎಲ್ಲಾ ಸ್ನೇಹಿತರು ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಫ್ರೆಂಡ್‌ಶಿಪ್‌ ಹೆಸರಲ್ಲಿ ಜೀವನವನ್ನೇ ಹಾಳು ಮಾಡುವವರಿದ್ದಾರೆ. ಹಾಗಾಗಿ ಇಂದಿನ ಈ ಜಗತ್ತಿನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅದರಲ್ಲೂ ಒಬ್ಬ ವ್ಯಕ್ತಿ ಈ ಕೆಲವೊಂದು ಕಠಿಣ ಪರಿಸ್ಥಿತಿಗಳಲ್ಲಿ ನಿಮ್ಮ ಜೊತೆ ನಿಂತಿದ್ದಾನೆ ಎಂದಾದರೆ ಆತನೇ ನಿಜವಾದ ಸ್ನೇಹಿತ ಎಂದು ಚಾಣಕ್ಯರು ಒತ್ತಿ ಹೇಳಿದ್ದಾರೆ. ಹಾಗಿದ್ದರೆ ನಿಜವಾದ ಸ್ನೇಹಿತನಲ್ಲಿ ಯಾವೆಲ್ಲಾ ಗುಣಗಳಿರುತ್ತವೆ ಎಂಬುದನ್ನು ನೋಡೋಣ ಬನ್ನಿ.

ಈ ಪರಿಸ್ಥಿತಿಗಳಲ್ಲಿ ಜೊತೆ ನಿಲ್ಲುವವನೇ ನಿಜವಾದ ಸ್ನೇಹಿತ:

ದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಜೊತೆ ನಿಲ್ಲುವವರು: ಏನಾದರೂ ಸಮಸ್ಯೆಗಳು ಎದುರಾದಾಗ ಈತ ನಮ್ಮ ಬಳಿ ಸಹಾಯ ಕೇಳಿದರೆ ಏನು ಮಾಡೋದು ಎಂದು ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮಿಂದ ದೂರ ನಿಲ್ಲುವವರೇ ಹೆಚ್ಚು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾನೂನು ಹೋರಾಟ ಇತ್ಯಾದಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾರೊಬ್ಬನಾದರೂ ನಿಮ್ಮ ಜೊತೆ ನಿಂತರೆ ಆತನೇ ನಿಮ್ಮ ನಿಜವಾದ ಸ್ನೇಹಿತನಾಗಿರುತ್ತಾರೆ. ಹೌದು ನಿಜವಾದ ಫ್ರೆಂಡ್‌ ನಿಮ್ಮನ್ನು ಯಾವುದೇ ಸಂದರ್ಭದಲ್ಲೂ ಕೈ ಬಿಡೋದಿಲ್ಲ.

ಅನಾರೋಗ್ಯ: ನೀವು ಅನಾರೋಗ್ಯ ಅಥವಾ ದೈಹಿಕ ಕಾಯಿಲೆಯಿಂದ ಬಳಲುತ್ತಿರುವ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಒಬ್ಬರು ನಿಮ್ಮ ಆರೈಕೆಗಾಗಿ ಬಂದು, ಆತ ನಿಮ್ಮ ಜೊತೆ ನಿಂತರೆ ಆತನೇ ನಿಜವಾದ ಸ್ನೇಹಿತ ಎಂದಿದ್ದಾರೆ ಚಾಣಕ್ಯ.

ಆರ್ಥಿಕ ಸಂಕಷ್ಟ: ಆರ್ಥಿಕ ಸಂಕಷ್ಟ ಎದುರಾದಾಗ ನಮಗೆ ಸಹಾಯ ಮಾಡುವವರಿಗಿಂದ ನಮ್ಮನ್ನು ಟೀಕಿಸುವವರೇ ಹೆಚ್ಚಿರುತ್ತಾರೆ. ಹೀಗಿರುವಾಗ ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಕೈ ಹಿಡಿದು ನಡೆಯುವವನು ನಿಮ್ಮ ನಿಜವಾದ ಸ್ನೇಹಿತ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಇದನ್ನೂ ಓದಿ: ಮಹಿಳೆಯರು ತಮ್ಮ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಶತ್ರುಗಳ ತೊಂದರೆ ನೀಡುವ ಸಮಯದಲ್ಲಿ: ಶತ್ರುಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸಿದಾಗ, ಯಾವುದೇ ಭಯವಿಲ್ಲದೆ ನಿಮ್ಮ ಜೊತೆಯಾಗಿ ನಿಲ್ಲುವವನೇ ನಿಮ್ಮ ನಿಜವಾದ ಸ್ನೇಹಿತ ಎಂದಿದ್ದಾರೆ ಚಾಣಕ್ಯ.

ಅಂತ್ಯಕ್ರಿಯೆ ಅಥವಾ ಸ್ಮಶಾನದಲ್ಲಿ: ಜೀವನದ ಕೊನೆಯ ಹಂತದಲ್ಲಿ ಅಥವಾ ಕುಟುಂಬದಲ್ಲಿ ಯಾವುದೇ ಮರಣ ಸಂಭವಿಸಿದ ಸಮಯದಲ್ಲಿ ಸ್ಮಶಾನದವರೆಗೂ ನಿಮ್ಮೊಂದಿಗೆ ಇರುವ ವ್ಯಕ್ತಿಯನ್ನು ನಿಮ್ಮ ನಿಜವಾದ ಸ್ನೇಹಿತ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us