ನಿಮ್ಮ ಮಕ್ಕಳು ಬ್ರೇಕ್​ಫಾಸ್ಟ್ ಸ್ಕಿಪ್ ಮಾಡ್ತಿದ್ದಾರಾ, ಈ ಅಭ್ಯಾಸ ಮಕ್ಕಳನ್ನು ಖಿನ್ನತೆಗೆ ದೂಡಬಹುದು

ಶಾಲೆಗೆ ಹೋಗಲು ಹೊತ್ತಾಯಿತೆಂದು ತಿಂಡಿ ತಿನ್ನದೇ ಮಕ್ಕಳನ್ನು ಶಾಲೆಗೆ ಹೋಗಲು ಬಿಡಬೇಡಿ, ಅಥವಾ ಈ ತಿಂಡಿ ಇಷ್ಟವಿಲ್ಲ ಎಂದು ಮೂಗು ಮುರಿದರೂ ಸೇರಿದಷ್ಟು ತಿನ್ನುವಂತೆ ಹೇಳಿ ಜತೆಗೆ ಹಣ್ಣು, ಮೊಳಕೆ ಕಾಳು ಏನನ್ನಾದರೂ ನೀಡಿ.

ನಿಮ್ಮ ಮಕ್ಕಳು ಬ್ರೇಕ್​ಫಾಸ್ಟ್ ಸ್ಕಿಪ್ ಮಾಡ್ತಿದ್ದಾರಾ, ಈ ಅಭ್ಯಾಸ ಮಕ್ಕಳನ್ನು ಖಿನ್ನತೆಗೆ ದೂಡಬಹುದು
Breakfast
Follow us
TV9 Web
| Updated By: ನಯನಾ ರಾಜೀವ್

Updated on: Aug 25, 2022 | 9:56 AM

ಶಾಲೆಗೆ ಹೋಗಲು ಹೊತ್ತಾಯಿತೆಂದು ತಿಂಡಿ ತಿನ್ನದೇ ಮಕ್ಕಳನ್ನು ಶಾಲೆಗೆ ಹೋಗಲು ಬಿಡಬೇಡಿ, ಅಥವಾ ಈ ತಿಂಡಿ ಇಷ್ಟವಿಲ್ಲ ಎಂದು ಮೂಗು ಮುರಿದರೂ ಸೇರಿದಷ್ಟು ತಿನ್ನುವಂತೆ ಹೇಳಿ ಜತೆಗೆ ಹಣ್ಣು, ಮೊಳಕೆ ಕಾಳು ಏನನ್ನಾದರೂ ನೀಡಿ. ಬೆಳಗ್ಗಿನ ತಿಂಡಿ ತಿನ್ನುವುದನ್ನು ಮಕ್ಕಳು ಎಂದೂ ಬಿಡಬಾರದು, ಸೇರಿದಷ್ಟು ತಿಂಡಿಯನ್ನು ತಿನ್ನಲೇಬೇಕು, ಇಲ್ಲವಾದಲ್ಲಿ ಈ ಅಭ್ಯಾಸವು ಮಕ್ಕಳನ್ನು ಆತಂಕ ಅಥವಾ ಖಿನ್ನತೆಗೆ ದೂಡಬಹುದು ಎಂದು ಅಧ್ಯಯನವೊಂದು ಹೇಳಿದೆ.

ಒಂದೊಮ್ಮೆ ಮಕ್ಕಳು ಬೆಳಗಿನ ಉಪಾಹಾರ ಸೇವಿಸದಿದ್ದರೆ ಶಾಲೆಯಲ್ಲಿ ಚಟುವಟಿಕೆಯಿಂದಿರಲು ಸಾಧ್ಯವಿಲ್ಲ, ಒಂದೊಮ್ಮೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಿದರೆ ಕ್ರಮೇಣವಾಗಿ ಮಗುವಿನ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಮನೆಯಲ್ಲಿ ಆರೋಗ್ಯಕರ ಉಪಹಾರ ಸೇವಿಸುವ ಮಕ್ಕಳ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಹಿಂದಿನ ಸಂಶೋಧನೆಯು ಪೌಷ್ಟಿಕ ಉಪಹಾರದ ಪ್ರಾಮುಖ್ಯತೆಯನ್ನು ಸೂಚಿಸಿದ್ದರೂ, ಮಕ್ಕಳು ಉಪಹಾರವನ್ನು ತಿನ್ನುತ್ತಾರೆಯೇ ಅಥವಾ ಇಲ್ಲವೇ, ಹಾಗೆಯೇ ಅವರು ಎಲ್ಲಿ ಮತ್ತು ಏನು ಸೇವಿಸುತ್ತಾರೆ ಎಂಬ ವರದಿಯ ಪರಿಣಾಮಗಳನ್ನು ಗುರುತಿಸಲಾಗಿದೆ.

ಸಂಶೋಧನೆಗಳನ್ನು ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕೇವಲ ತಿಂಡಿಯನ್ನು ತಿನ್ನುವುದು ಮಾತ್ರ ಮುಖ್ಯವಲ್ಲ ಮಕ್ಕಳು ಎಲ್ಲಿ ಹಾಗೂ ಯಾವ ರೀತಿಯ ಆಹಾರವನ್ನು ಸೇವಿಸುತ್ತಾರೆ ಎಂಬುದು ಕೂಡ ಮುಖ್ಯವಾಗಿರುತ್ತದೆ.

ಬೆಳಗಿನ ಉಪಾಹಾರವನ್ನು ಬಿಡುವುದರಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಉಂಟಾಗುತ್ತದೆ. ಮನೆಯ ತಿಂಡಿ ಬಿಟ್ಟು ಹೊರಗಡೆ ತಿಂಡಿಯನ್ನು ಸೇವಿಸುವುದು ಬೆಳಗ್ಗೆಯ ತಿಂಡಿ ಸೇವಿಸದೆ ಇರುವುದಕ್ಕಿಂತಲೂ ಕೆಟ್ಟ ಅಭ್ಯಾಸವಾಗಿದೆ. ಮನೆಯಿಂದ ಹೊರಗಿರುವ ಊಟವು ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಕಡಿಮೆ ಪೌಷ್ಟಿಕಾಂಶವನ್ನು ಹೊಂದಿರುವುದು ಇದಕ್ಕೆ ಕಾರಣ ಎಂದು ಅಧ್ಯಯನ ಹೇಳಿದೆ.

ಕಾಫಿ, ಹಾಲು, ಚಹಾ, ಚಾಕೊಲೇಟ್, ಕೋಕೋ, ಮೊಸರು, ಬ್ರೆಡ್, ಟೋಸ್ಟ್, ಧಾನ್ಯಗಳು ಮತ್ತು ಪೇಸ್ಟ್ರಿಗಳು ವರ್ತನೆಯ ಸಮಸ್ಯೆಗಳ ಕಡಿಮೆ ಅಪಾಯವನ್ನು ಹೊಂದಿವೆ. ಮೊಟ್ಟೆಗಳು, ಚೀಸ್ ಹೆಚ್ಚಿನ ಅಪಾಯವನ್ನು ಹೊಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ