ಚಾಕೋಲೆಟ್ ಡೇ 2022: ಪ್ರೀತಿಯ ಸಿಹಿ ನೀಡುವ ಚಾಕೋಲೆಟ್​​ ಆರೋಗ್ಯಕ್ಕೂ ಒಳಿತು

| Updated By: Pavitra Bhat Jigalemane

Updated on: Feb 09, 2022 | 10:39 AM

ಈ ಚಾಕೋಲೇಟ್​ ದಿನ ಚಾಕೋಲೆಟ್ಅನ್ನು ತಿನ್ನುತ್ತೀರಿ ಆದರೆ ಅದಕ್ಕೂ ಮುಂಚೆ ಅದರ ಮಹತ್ವವನ್ನು ನೀವು ತಿಳಿದುಕೊಳ್ಳಲೇಬೇಕು. ಇಲ್ಲಿದೆ ನೋಡಿ ಚಾಕೋಲೆಟ್​ ಮಹತ್ವ

ಚಾಕೋಲೆಟ್ ಡೇ 2022: ಪ್ರೀತಿಯ ಸಿಹಿ ನೀಡುವ ಚಾಕೋಲೆಟ್​​ ಆರೋಗ್ಯಕ್ಕೂ ಒಳಿತು
ಚಾಕೋಲೇಟ್​
Follow us on

ಇಂದು ಪ್ರೇಮಿಗಳ ವಾರದ (Valentine’s Week) ಮೂರನೇ ದಿನ ಚಾಕೋಲೆಟ್​ ಡೇ (Chocolate Day). ಪ್ರೇಮಿಗೆ ಚಾಕೋಲೇಟ್​ ನೀಡಿ ಬದುಕು ಮತ್ತಷ್ಟು ಸಿಹಿಯಾಗಲಿ ಎಂದು ಆಶಿಸುವ ದಿನ. ಚಾಕೋಲೇಟ್​ ಕೇವಲ ಪ್ರೀತಿಯನ್ನು ಮಾತ್ರ ಹಂಚುವುದಿಲ್ಲ. ಆರೋಗ್ಯವನ್ನೂ ಉತ್ತಮಪಡಿಸುತ್ತದೆ.  ಒತ್ತಡ, ಆಯಾಸವನ್ನು ಕಡಿಮೆ ಮಾಡಿ ಒಂದಷ್ಟು ಆಹ್ಲಾದತೆಯನ್ನು ನೀಡುತ್ತದೆ. ಪ್ರತೀ ಪ್ರೇಮಿಗೆ ತಾನು ಪ್ರೀತಿಸುವ ವ್ಯಕ್ತಿ ನೀಡುವ ಚಾಕೋಲೆಟ್ ವಿಶೇಷವಾಗಿರುತ್ತದೆ. ಅದು ವೈಟ್​ ಚಾಕೋಲೇಟ್​ ಆಗಿರಲಿ ಅಥವಾ  ಡಾರ್ಕ್​ ಚಾಕೋಲೆಟ್​ ಆಗಿರಲಿ. ಪ್ರೀತಿಯಿಂದ ನೀಡುವ ಒಂದು ಚಾಕೋಲೆಟ್​ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿ, ಸಿಹಿಯಾಗಿಸುತ್ತದೆ. ಈ ಚಾಕೋಲೇಟ್​ ದಿನ ಚಾಕೋಲೆಟ್​ ಅನ್ನು ತಿನ್ನುತ್ತೀರಿ ಆದರೆ ಅದಕ್ಕೂ ಮುಂಚೆ ಅದರ ಮಹತ್ವವನ್ನು ನೀವು ತಿಳಿದುಕೊಳ್ಳಲೇಬೇಕು. ಇಲ್ಲಿದೆ ನೋಡಿ ಚಾಕೋಲೆಟ್ ಮಹತ್ವ:

ಡಾರ್ಕ್​ ಚಾಕೋಲೆಟ್:
ಡಾರ್ಕ್​ ಚಾಕೋಲೆಟ್ಅನ್ನು ಅತಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ಡಾರ್ಕ್​ ಚಾಕೋಲೆಟ್​ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಜತೆಗೆ ಇದರಲ್ಲಿ ದೇಹಕ್ಕೆ ಅಗತ್ಯವಾದ ಸಮೃದ್ಧವಾದ ಫೈಬರ್​, ಕಬ್ಬಿಣಾಂಶ​, ಮ್ಯಾಗ್ನಿಶಿಯಂ, ಕಾಪರ್​ ಜತಗೆ ಮ್ಯಾಂಗ್ನನೀಸ್ ಅಂಶಗಳೂ ಕೂಡ ಅಡಕವಾಗಿದೆ. ಈ ಕುರಿತು ಡೈಯಟೀಶಿಯನ್​ ಡಿಟಿ ಅಹ್ಲಾವತ್  ಎನ್ನುವವರು ಮಾಹಿತಿ ನೀಡಿದ್ದಾರೆ. ಡಾರ್ಕ್​ ಚಾಕೋಲೆಟ್ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗಿ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.  ಡಾರ್ಕ್​ ಚಾಕೋಲೆಟ್​ನಲ್ಲಿರುವ ಪಾಲಿಫಿನಾಲ್ಗಳು ಚರ್ಮದ ಕಾಂತಿಯನ್ನೂ ಕೂಡ ಕಾಪಾಡುತ್ತದೆ. ದೇಹದಲ್ಲಿ ಇನ್ಸುಲಿನ್​ ಪ್ರಮಾಣವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ 100 ಗ್ರಾಂ ಡಾರ್ಕ್ ​ಚಾಕೋಲೆಟ್ 500 ಗ್ರಾಂನಷ್ಟು ಕ್ಯಾಲೋರಿಯನ್ನು ನೀಡುತ್ತದೆ. ಹೀಗಾಗಿ ಪ್ರತಿದಿನ 30ರಿಂದ 50 ಗ್ರಾಂನಷ್ಟು ಮಾತ್ರ ಡಾರ್ಕ್​ಚಾಕೋಲೆಟ್​ ಸೇವನೆ ಮಾಡಿ ಎಂದು ಸಲಹೆ ನೀಡುತ್ತಾರೆ.

ವೈಟ್  ಚಾಕೋಲೆಟ್​:
ವೈಟ್ ಚಾಕೋಲೆಟ್ ಗುಣಗಳ ಬಗ್ಗೆ ವಿವರಿಸುವ  ಅಹ್ಲಾವತ್ ಅವರು ಇದು ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ವೈಟ್​ ಚಾಕೋಲೆಟ್​ ನಲ್ಲಿರುವ ಪಾಲಿಫಿನಾಲ್​ ಅಂಶಗಳು ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ತಡೆಯುತ್ತದೆ ಎಂದಿದ್ದಾರೆ.  ವೈಟ್​​ ಚಾಕೋಲೆಟ್ ದೇಹದಲ್ಲಿ ರಕ್ತ ಸಂಚಾರವನ್ನು ಸರಾಗಗೊಳಿಸಿ ಲಿವರ್​ನ ಆರೋಗ್ಯವನ್ನು ಕಾಪಾಡುತ್ತದೆ. ಜತೆಗೆ ವೈಟ್​ ಚಾಕೋಲೆಟ್​ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಿರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.

ತಜ್ಞರ ಪ್ರಕಾರ 100 ಗ್ರಾಂ ವೈಟ್​ ಚಾಕೋಲೆಟ್ ಸುಮಾರು 560 ಗ್ರಾಂನಷ್ಟು ಕ್ಯಾಲೋರಿಯನ್ನು ಪೂರೈಸುತ್ತದೆ. ಹೀಗಾಗಿ ಪ್ರತಿದಿನ 25 ರಿಂದ 20 ಗ್ರಾಂನಷ್ಟು ವೈಟ್​ ಚಾಕೋಲೆಟ್​ ಸೇವನೆ ಉತ್ತಮ ಎನ್ನುತ್ತಾರೆ.

ಇದನ್ನೂ ಓದಿ:

Chocolate Day Gift Ideas: ಚಾಕಲೇಟ್ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ

Published On - 10:39 am, Wed, 9 February 22