Chocolate Day: ಚಾಕೊಲೇಟ್ ಡೇ ಮಹತ್ವ ಗೊತ್ತಾ? ಚಾಕೊಲೇಟ್ ಕೊಡುವುದಕ್ಕೂ ಮುಂಚೆ ತಿಳಿದುಕೊಳ್ಳಿ
ವ್ಯಾಲೆಂಟೈನ್ಸ್ ವಾರದ ಮೂರನೇ ದಿನ ಅಂದರೆ ಫೆಬ್ರವರಿ 9ನ್ನು ಚಾಕೊಲೇಟ್ ಡೇ ಎಂದು ಆಚರಿಸಲಾಗುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಚಾಕೊಲೇಟ್ ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ದಿನವೇ ಚಾಕೊಲೇಟ್ ಡೇ.
ಹ್ಯಾಪಿ ಚಾಕೊಲೇಟ್ ಡೇ 2022: ಪ್ರಪಂಚದಾದ್ಯಂತ ಆಚರಿಸಲಾಗುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ನಂಬಿಕೆ, ಸಂಪ್ರದಾಯ, ಆಚಾರ-ವಿಚಾರಗಳಿರುತ್ತವೆ. ಹಬ್ಬ ಎಂದತಕ್ಷಣ ಕೆವಲ ದೀಪಾವಳಿ, ಸಂಕ್ರಾಂತಿ, ಯುಗಾದಿ ಇವೇ ಅಷ್ಟೇ ಅಂದು ತಿಳಿದುಕೊಳ್ಳಬೇಡಿ. ನಾವು ಹೇಳ ಹೊರಟಿರುವುದು ಪ್ರೇಮಿಗಳ ಹಬ್ಬ ಅಂದರೇ ವ್ಯಾಲೆಂಟೈನ್ಸ್ ಡೇ ಕುರಿತು. ವ್ಯಾಲೆಂಟೈನ್ಸ್ ವೀಕ್‌ಗೆ ಕಾಲಿಡುತ್ತಿದ್ದಂತೆ ಪ್ರೀತಿಯ ಹಬ್ಬದ ಆಚರಣೆಗಳು ಶುರುವಾಗುತ್ತದೆ. ಪ್ರೇಮ ಪಕ್ಷಿಗಳು ಜಾಗತಿಕವಾಗಿ ಮತ್ತೆ ಒಂದಾಗುವುದು ಮಾತ್ರವಲ್ಲದೆ ಈ ಅವಧಿಯಲ್ಲಿ ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುಕೊಳ್ಳುತ್ತಾರೆ. ಪ್ರೇಮಿಗಳ ದಿನವು ಪ್ರೀತಿ, ಬಂಧ ಮತ್ತು ಸಂಬಂಧದ ವಾರ್ಷಿಕ ಆಚರಣೆ ಎಂದೇ ಹೇಳಬಹುದು. ಪ್ರೇಮಿಗಳ ಹಬ್ಬವು ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಇರುವುದು ಎಂದು ನಮಗೆಲ್ಲರಿಗೂ ಗೊತ್ತಿರುವಂತಹ ಸಂಗತಿ. ಜನರು ತಮ್ಮ ವಿಶೇಷ ವ್ಯಕ್ತಿಗಾಗಿ ತಮ್ಮ ಪ್ರೀತಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಇದನ್ನು ಆಚರಿಸುತ್ತಾರೆ. ವ್ಯಾಲೆಂಟೈನ್ಸ್ ವಾರದ ಮೂರನೇ ದಿನ ಅಂದರೆ ಫೆಬ್ರವರಿ 9ನ್ನು ಚಾಕೊಲೇಟ್ ಡೇ ಎಂದು ಆಚರಿಸಲಾಗುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಚಾಕೊಲೇಟ್ ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ದಿನವೇ ಚಾಕೊಲೇಟ್ ಡೇ.
ಚಾಕೊಲೇಟ್ ಡೇ ಇತಿಹಾಸ: ಇದು ಕ್ರಿಶ್ಚಿಯನ್ ಹಬ್ಬದ ದಿನವಾಗಿ ಹುಟ್ಟಿಕೊಂಡಿದ್ದು, ವ್ಯಾಲೆಂಟೈನ್ಸ್ ಎಂದು ಕರೆಯಲ್ಪಡುವ ಕ್ರಿಶ್ಚಿಯನ್ ಸಂತರೊಂದಿಗೆ ಸಂತ ವ್ಯಾಲೆಂಟೈನ್ನ್ನು ಗೌರವಿಸುತ್ತದೆ. ಅನೇಕ ರಾಷ್ಟ್ರಗಳಲ್ಲಿ, ಇದನ್ನು ಸಂಸ್ಕೃತಿಯ ದೃಷ್ಟಿಯಿಂದ ನಿರ್ಣಾಯಕ ದಿನವೆಂದು ಗುರುತಿಸಲಾಗಿದೆ, ಆದರೆ ಯಾವುದೇ ದೇಶದಲ್ಲಿ ಸಾರ್ವಜನಿಕ ರಜಾದಿನವೆಂದು ಪರಿಗಣಿಸಲಾಗುವುದಿಲ್ಲ. ವಿಕ್ಟೋರಿಯನ್ ಕಾಲದಿಂದಲೂ, ಅಟ್ಲಾಂಟಿಕ್‌ನಾದ್ಯಂತ ಮತ್ತು ಅಮೆರಿಕಗಳಲ್ಲಿ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ಪರಸ್ಪರ ಚಾಕೊಲೇಟ್ಗಳನ್ನು ಉಡುಗೊರೆಯಾಗಿ ಕೊಡುವುದು ಈ ಆಚರಣೆಯ ಒಂದು ಭಾಗವಾಗಿದೆ.
ವಾಷಿಂಗ್ಟನ್ ಸ್ಮಿತ್‌ಸೋನಿಯನ್ ಇನ್‌ಸ್ಟಿಟ್ಯೂಷನ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, 19 ನೇ ಶತಮಾನದಲ್ಲಿ ಬ್ರಿಟಿಷ್ ಕುಟುಂಬವು ತಮ್ಮ ಕೋಕೋ ಬೆಣ್ಣೆಯನ್ನು ಬಳಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಇದನ್ನು ರಿಚರ್ಡ್ ಕ್ಯಾಡ್ಬರಿ ಎಂದು ಹೆಸರಿಸುತ್ತಾರೆ. ರುಚಿಕರವಾದ ಕುಡಿಯುವ ಚಾಕೊಲೇಟ್ನ್ನು ಮಾಡಲು ಕಂಡುಹಿಡಿಯಲಾಯಿತು. ಮತ್ತು ಅದನ್ನು ಅವರು ಸುಂದರವಾದ ವಿನ್ಯಾಸಗೊಳಿಸಿದ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿದರು. ಮಾರ್ಕೆಟಿಂಗ್ ಜೀನಿಯಸ್, ಕ್ಯಾಡ್ಬರಿ 1861 ರಲ್ಲಿ ಹೃದಯದ ಆಕಾರದ ಪೆಟ್ಟಿಗೆಗಳಲ್ಲಿ ಕ್ಯುಪಿಡ್ಸ್ ಮತ್ತು ರೋಸ್ಬಡ್ಗಳನ್ನು ಹಾಕಲು ಪ್ರಾರಂಭಿಸಿದರು. ಪ್ರೇಮ ಪತ್ರಗಳಂತಹ ಸ್ಮರಣಿಕೆಗಳನ್ನು ಉಳಿಸಲು ಜನರು ಸುಂದರವಾದ ಚಾಕೊಲೇಟ್ನ್ನು ಬಳಸಲು ಪ್ರಾರಂಭಿಸಿದರು ಎಂದು ಅಧಿಕೃತ ಸೈಟ್ ಉಲ್ಲೇಖಿಸುತ್ತದೆ. ನಿಮ್ಮ ಪ್ರೀತಿಪಾತ್ರರಿಗೆ ಅಥವಾ ನಿಮ್ಮ ಪ್ರೀಯತಮೆಗೆ ಚಾಕೊಲೇಟ್ಸ್ಗಳನ್ನು ಉಡುಗೊರೆಯಾಗಿ ನೀಡುವುದರಿಂದ ಅವರು ನಿಮ್ಮ ಮೇಲಿಟ್ಟ ಆಗಾಧ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಜೊತೆಗೆ ಪ್ರೇಮಿಗಳಿಬ್ಬರಲ್ಲಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.
ಮಹತ್ವ:
ಚಾಕೊಲೇಟ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಚಾಕೊಲೇಟ್ನ್ನು ಇಷ್ಟಪಡುವರೆ. ನಮ್ಮ ಪ್ರೀತಿಪಾತ್ರರೊಂದಿಗೆ ನಾವು ಮುನಿಸಿಕೊಂಡಾಗ ಅಥವಾ ಜಗಳವಾದಾಗ ಅವರನ್ನು ಸಮಾದಾನ ಪಡಿಸಲು ಅವರಿಗೆ ಇಷ್ಟವಾದ ಚಾಕೊಲೇಟ್ನ್ನು ಕೊಡುತ್ತೇವೆ. ಚಾಕೊಲೇಟ್ ಪರಸ್ಪರ ಪ್ರೀತಿ ಮತ್ತು ಬದ್ಧತೆಯ ಸಂಕೇತವಾಗಿದೆ. ಆದ್ದರಿಂದ, ಪ್ರೇಮಿಗಳ ವಾರದಲ್ಲಿ ಜನರು ಚಾಕೊಲೇಟ್ ದಿನವನ್ನು ಆಚರಿಸಲು ಇದು ಪ್ರಮುಖ ಕಾರಣವಾಗಿದೆ.
ಆಚರಣೆ ಹೇಗೆ ?
ಸಂತೋಷವನ್ನು ಆಚರಿಸಲು ಚಾಕೊಲೇಟ್‌ಗಳಿಗಿಂತ ಉತ್ತಮವಾದ ಮಾರ್ಗ ಇನ್ನೊಂದಿಲ್ಲ ಎಂದು ಹೇಳಬಹುದು. ಚಾಕೊಲೇಟ್ ಡೇ ದಿನದಂದು, ಪ್ರೇಮಿಗಳಿಬ್ಬರು ತಮ್ಮ ಜೀವನದ ಎಲ್ಲಾ ಕಹಿ ಘಟನೆಗಳನ್ನು ಮರೆತು ಸಿಹಿ ಮತ್ತು ರುಚಿಕರವಾದ ಚಾಕೊಲೇಟ್ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಅನೇಕರು ತಮ್ಮ ಪ್ರೀಯತಮೆಗೆ ಅಥವಾ ಕ್ರಶ್‌ಗೆ ಚಾಕೊಲೇಟ್‌ಗಳ ಅಲಂಕೃತ ಬಾಂಕ್ಸ್ನಲ್ಲಿ ಬೇರೆ ಬೇರೆ ಚಾಕೊಲೇಟ್ನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿಪಾತ್ರರಿಗೆ ಇನ್ನಷ್ಷು ಹತ್ತಿರವಾಗುತ್ತಾರೆ.
ಇದನ್ನೂ ಓದಿ;
ಮದುವೆಯ ನಂತರ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿರುವ ಬಿ-ಟೌನ್ನ ಐದು ಜೋಡಿಗಳು; ಇಲ್ಲಿವೆ ಫೋಟೋಗಳು