AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ

ನೀವೆಲ್ಲಾದರೂ ಅರ್ಜೆಂಟ್​ ಆಗಿ ಹೋಗಬೇಕಾದರೆ ಅಂತಹ ಸಂದರ್ಭಗಳಲ್ಲಿ ಡಾರ್ಕ್​ ಸರ್ಕಲ್​ಗಳನ್ನು ಮುಚ್ಚಲು ಮೇಕಪ್​ ಮಾಡಿಕೊಳ್ಳಿ. ಉತ್ತಮ ಗುಣಮಟ್ಟದ ಕನ್ಸಿಲರ್​, ಪೌಂಡೇಶನ್​ ಕ್ರೀಮ್​ ಮತ್ತು ಮುಖದ ಚರ್ಮಕ್ಕೆ ಹೊಂದುವ ಟಾಲ್​ಕಮ್​ ಗಳನ್ನು ಬಳಸಿ.

ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Feb 08, 2022 | 3:21 PM

Share

ಮುಖದ ಅಂದಗೆಡಿಸುವ ಡಾರ್ಕ್​ ಸರ್ಕಲ್ಸ್ (Dark Circles)​ ಸಾಮಾನ್ಯವಾಗಿ ಎಲ್ಲರಿಗೂ ಕಿರಿಕಿರಿಯಾಗುತ್ತದೆ. ದಿನನಿತ್ಯದ ಒತ್ತಡ, ಓಡಾಡದ ಕಾರಣದಿಂದ ಡಾರ್ಕ್​ ಸರ್ಕಲ್ಸ್​ಗಳು ಉಂಟಾಗುತ್ತದೆ. ಇದು ನಿಜವಾದ ಮುಖದ ಸೌಂದರ್ಯವನ್ನು  ಮರೆಮಾಚುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್​ಗಳ ಬಳಕೆ, ಕಂಪ್ಯೂಟರ್​ಗಳ ಮುಂದೆ ಕುಳಿತಿರುವುದರಿಂದ ಕಣ್ಣುಗಳ ಮೇಲೆ ಒತ್ತಡ ಬೀಳುತ್ತದೆ. ಕಣ್ಣಿನ ಕೆಳಗಿನ ಚರ್ಮ ಮೃದುವಾಗಿರುವುದರಿಂದ  ಕಣ್ಣಿನ ಮೇಲೆ ಒತ್ತಡ ಬಿದ್ದಾಗ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಡಾರ್ಕ್​ ಸರ್ಕಲ್​ಗಳು ಉಂಟಾಗುತ್ತದೆ.  ಕೆಲವೊಮ್ಮೆ ದೇಹದಲ್ಲಿ ಅನಾರೋಗ್ಯ ಇದ್ದರೂ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮೂಡುತ್ತವೆ.

ಡಾರ್ಕ್​ಸರ್ಕಲ್​ಗಳಿಗೆ ಕಾರಣಗಳು: ಮಾನಸಿಕ ಒತ್ತಡಗಳಿಂದ ಕಣ್ಣಿನ ಕೆಳಗೆ ಕಪ್ಪು ಬಣ್ಣ ಮೂಡುತ್ತದೆ. ಇದರ ಜತೆಗೆ ಅತಿಯಾದ ಹೊರಗಿನ ಸುತ್ತಾಟ, ಸೂರ್ಯನ ಕಿರಗಳಿಗೆ ಚರ್ಮವನ್ನು ತೆರೆದುಕೊಳ್ಳುವುದು, ಆಯಾಸ, ನೀರಿನ ಕೊರತೆ, ನಿದ್ದೆ ಮಾಡದಿರುವುದು, ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿರುವುದು, ಅತಿಯಾಗಿ ಮೊಬೈಲ್ ಅಥವಾ ಕಂಪ್ಯೂಟರ್​ ಸ್ಕ್ರೀನ್​ಗಳನ್ನು ನೋಡುವುದು ಮುಖ್ಯ ಕಾರಣವಾಗಿದೆ.

ಡಾರ್ಕ್​ ಸರ್ಕಲ್ಸ್​ಗಳನ್ನು ಹೋಗಲಾಡಿಸಲು ಹೀಗೆ ಮಾಡಿ: ನಿದ್ದೆ: ಕಣ್ಣು ಮತ್ತು ಇಡೀ ದೇಹದ ಆರೋಗ್ಯ ಉತ್ತಮವಾಗಲು ನಿದ್ದೆ ಅತಿ ಮುಖ್ಯ ಅಂಶವಾಗಿದೆ.  7-8 ಗಂಟೆಗಳ ನಿದ್ದೆ ಪ್ರತೀ ಆರೋಗ್ಯವಂತ ವ್ಯಕ್ತಿಗೆ ಅಗತ್ಯವಾಗಿದೆ. ಹೀಗಾಗಿ ಚೆನ್ನಾಗಿ ನಿದ್ದೆ ಮಾಡಿ ಇದರಿಂದ ಡಾರ್ಕ್​ ಸರ್ಕಲ್​ಗಳು ಕಡಿಮೆಯಾಗುತ್ತವೆ. ಜತೆಗೆ ಮಲಗುವಾಗ ಅಥವಾ ಕತ್ತಲೆಯಲ್ಲಿ ಮೊಬೈಲ್​ ಬಳಕೆ ಬೇಡ. ಇದು ಕಣ್ಣಿಗೆ ಹೆಚ್ಚು ಒತ್ತಡ ಉಂಟು ಮಾಡಿ ಕಪ್ಪು ಕಲೆಗಳನ್ನು ಜಾಸ್ತಿ ಮಾಡುತ್ತದೆ.

ತಣ್ಣನೆಯ ವಸ್ತುಗಳ ಬಳಕೆ: ಕಣ್ಣಿನ ಮೇಲೆ  ತಣ್ಣನೆಯ ವಸ್ತುಗಳನ್ನು ಇರಿಸಿಕೊಳ್ಳಿ. ಉದಾಹರಣೆಗೆ  ಸೌತೆಕಾಯಿಯ ಸ್ಲೈಸ್​ಗಳನ್ನು ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದು, ಐಸ್ಕ್ಯೂ​ಬ್​ಗಳಿಂದ ಮಸಾಜ್​ ಮಾಡುವುದು ಸೇರಿದಂತೆ ಕಣ್ಣನ್ನು ಆದಷ್ಟು ತಂಪಾಗಿಡಿ.

ಮೇಕಪ್​: ನೀವೆಲ್ಲಾದರೂ ಅರ್ಜೆಂಟ್​ ಆಗಿ ಹೋಗಬೇಕಾದರೆ ಅಂತಹ ಸಂದರ್ಭಗಳಲ್ಲಿ ಡಾರ್ಕ್​ ಸರ್ಕಲ್​ಗಳನ್ನು ಮುಚ್ಚಲು ಮೇಕಪ್​ ಮಾಡಿಕೊಳ್ಳಿ. ಉತ್ತಮ ಗುಣಮಟ್ಟದ ಕನ್ಸಿಲರ್​, ಪೌಂಡೇಶನ್​ ಕ್ರೀಮ್​ ಮತ್ತು ಮುಖದ ಚರ್ಮಕ್ಕೆ ಹೊಂದುವ ಟಾಲ್​ಕಮ್​ ಗಳನ್ನು ಬಳಸಿ. ಇದು ನಿಮ್ಮ ಡಾರ್ಕ್​ ಸರ್ಕಲ್​ಗಳನ್ನು ಮರೆಮಾಡಿ ಮುಜುಗರ ಉಂಟಾಗುವುದನ್ನು ತಡೆಯುತ್ತದೆ.

ಟೀ ಬ್ಯಾಗ್​: ಗ್ರೀನ್​ ಟೀ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ ಪದಾರ್ಥವಾಗಿದೆ. ಬ್ಲಾಕ್​ ಅಥವಾ ಗ್ರೀನ್​ ಟೀಯನ್ನು ಒಂದೈದು ನಿಮಿಷ ಬಿಸಿ ನೀರಿನಲ್ಲಿ ನೆನಸಿಟ್ಟು, ನಂತರ ಅದನ್ನು ಕಣ್ಣಿನ ಮೇಲೆ ಇರಿಸಿಕೊಳ್ಳಿ. 20 ನಿಮಿಷವಾದರೂ ಕಣ್ಣಿನ ಮೇಲೆ ಟೀ ಬ್ಯಾಗ್​ಗಳನ್ನು ಇಟ್ಟುಕೊಳ್ಳಿ. ಇದರ ನಿರಂತರ ಬಳಕೆಯಿಂದ ಕಣ್ಣಿನ ಕೆಳಗೆ ಕಪ್ಪಾಗಿರುವ ಚರ್ಮ ತಿಳಿಯಾಗತ್ತದೆ.

ಇದನ್ನೂ ಓದಿ:

ಆರೋಗ್ಯ ವೃದ್ಧಿಸುವ ನಿಂಬು-ಶುಂಠಿ ರಸಂ ಮಾಡಿ ಸೇವಿಸಿ; ಇಲ್ಲಿದೆ ರೆಸಿಪಿ

ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!
‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್
‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್