Christmas 2024: ಕ್ರಿಸ್ ಮಸ್ ಹಬ್ಬದ ಆಚರಣೆಯೂ ಆರಂಭವಾದದ್ದು ಹೇಗೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 24, 2024 | 4:24 PM

ಕ್ರಿಸ್ಮಸ್ ಹಬ್ಬ ಕ್ರೈಸ್ತ ಧರ್ಮಿಯರ ಪ್ರಮುಖ ಹಬ್ಬಗಳಲ್ಲಿ ಒಂದು. ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಪರಸ್ಪರ ಕ್ರಿಸ್ಮಸ್ ಕಾರ್ಡ್‌, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಕ್ರಿಸ್ ಮಸ್ ಹಬ್ಬದ ಇತಿಹಾಸ, ಮಹತ್ವ, ಆಚರಣೆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Christmas 2024: ಕ್ರಿಸ್ ಮಸ್ ಹಬ್ಬದ ಆಚರಣೆಯೂ ಆರಂಭವಾದದ್ದು ಹೇಗೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಡಿಸೆಂಬರ್ ತಿಂಗಳು ಬಂತೆಂದರೆ ಮೊದಲು ನೆನಪಾಗುವುದೇ ಕ್ರಿಸ್ ಮಸ್ ಹಬ್ಬ. ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಈ ಕ್ರಿಸ್ ಮಸ್ ಕೂಡ ಒಂದು. ಈ ಹಬ್ಬವನ್ನು ವಿಶ್ವದಾದ್ಯಂತ ಡಿಸೆಂಬರ್ 25 ರಂದು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಡಿಸೆಂಬರ್​ 25ರಂದು ಆಚರಿಸುವ ಈ ಹಬ್ಬದ ಸಂಭ್ರಮವು ಡಿಸೆಂಬರ್ 24ರ ರಾತ್ರಿಯಿಂದಲೇ ಆರಂಭಗೊಳ್ಳುವುದು ವಿಶೇಷ. ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲಹೆಮ್‌ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದರು. ಯೇಸು ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮಿಯರು ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲಾ ಜನರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷ.

ಕ್ರಿಸ್‌ಮಸ್‌ ಹಬ್ಬದ ಇತಿಹಾಸ

ಎರಡು ಸಾವಿರ ವರ್ಷಗಳ ಹಿಂದೆ ಯುರೋಪಿನಲ್ಲಿ ಚಳಿಗಾಲದ ಸಂದರ್ಭದಲ್ಲಿ ದೀರ್ಘವಾದ ರಾತ್ರಿಯಲ್ಲಿ ಯೇಸುವಿನ ಜನನವಾಗಿತ್ತು. ಜೀಸಸ್ ಕ್ರೈಸ್ಟ್​ ಮೇರಿ ಮತ್ತು ಜೋಸೆಫ್​ ದಂಪತಿಗೆ ಲೆಹಮ್​ನ ಮ್ಯಾಂಗರ್​ನಲ್ಲಿ ಯೇಸು ಜನಿಸಿದ್ದ. ಆಗ ಗ್ರೆಗೋರಿಯನ್​ ಕ್ಯಾಲೆಂಡರ್​ ಬಳಸುತ್ತಿದ್ದ ಕಾರಣ ಡಿಸೆಂಬರ್ 25 ರಂದು ಯೇಸು ಜನನವಾಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಬೈಬಲ್​ನಲ್ಲಿ ಕೂಡ ಯೇಸುವಿನ ಜನ್ಮ ದಿನಾಂಕವನ್ನು ಕೂಡ ಉಲ್ಲೇಖಿಸಲಾಗಿಲ್ಲ. ಚಕ್ರವರ್ತಿ ಕಾನ್ಸ್ಟೈನ್​ ಮೊದಲ ಬಾರಿಗೆ ಡಿಸೆಂಬರ್ 25ರಂದು ಕ್ರಿಸ್​ಮಸ್​ ಆಚರಿಸಬೇಕೆಂದು ಘೋಷಿಸಿದ್ದರು. ಆದಾದ ಕೆಲವು ವರ್ಷಗಳ ನಂತರ ಪೋಪ್​ ಜೂಲಿಯನ್​ 1 ಕೂಡ ಡಿಸೆಂಬರ್ 25 ನ್ನು ಕ್ರಿಸ್ತನ ಜನ್ಮದಿನವೆಂದು ಘೋಷಿಸಿದರು. ಆರಂಭಿಕ ದಿನಗಳಲ್ಲಿ ಯೇಸು ಹುತಾತ್ಮನೆಂದು ನಂಬಿದ್ದ ಜನ ಕ್ರಿಸ್ತನದ ಜನನ ದಿನದ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ತದನಂತರದಲ್ಲಿ ಹುತಾತ್ಮರನ್ನು ಗೌರವಿಸುವ ಸಲುವಾಗಿ ಕ್ರಿಸ್​ಮಸ್ ದಿನವನ್ನು ರಜಾದಿನವೆಂದು ಘೋಷಿಸಿ ಈ ಹಬ್ಬವನ್ನು ಆಚರಿಸಲಾಯಿತು.

ಕ್ರಿಸ್ ಮಸ್ ಹಬ್ಬದ ಮಹತ್ವ ಹಾಗೂ ಆಚರಣೆ

ಕ್ರಿಸ್ ​ಮಸ್ ಕ್ರಿಶ್ಚಿಯನ್ ಸಮುದಾಯದವರಿಗೆ ವಿಶೇಷವಾದ ದಿನವಾಗಿದೆ. ದೇವರು ತನ್ನ ಮಗನನ್ನು ಭೂಮಿಯಲ್ಲಿರುವ ಜನತೆಗೆ ತ್ಯಾಗ ಮತ್ತು ಮಾನವೀಯ ಗುಣಗಳನ್ನು ತಿಳಿಸಲು ಕಳುಹಿಸಿದ್ದಾರೆ. ಜನರಿಗೋಸ್ಕರ ತ್ಯಾಗ ಮಾಡಿ ಯೇಸುಕ್ರಿಸ್ತ ಶಿಲುಬೆಗೆ ಏರಿದ್ದಾನೆ ಎನ್ನುವ ನಂಬಿಕೆಯೂ ಇದೆ. ಅದಲ್ಲದೇ, ಯುಎಸ್​ ಮತ್ತು ಇತರ ದೇಶಗಳಲ್ಲಿ ಸಾಂತಾ ಕ್ಲಾಸ್​ ಎನ್ನುವ ವ್ಯಕ್ತಿಯ ಪರಿಕಲ್ಪನೆಯಿದೆ. ಉತ್ತರ ದ್ರುವದಲ್ಲಿ ವಾಸಿಸುವ ಸಾಂತಾ ಕ್ರಿಸ್​ ಮಸ್​ ಹಿಂದಿನ ದಿನ ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಾನೆ ಎಂದು ನಂಬುತ್ತಾರೆ.

ಇದನ್ನೂ ಓದಿ: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು

ಡಿಸೆಂಬರ್ 24ರ ರಾತ್ರಿಯಿಂದಲೇ ಕ್ರಿಸ್ ಮಸ್ ಹಬ್ಬದ ಸಂಭ್ರಮವು ಆರಂಭಗೊಳ್ಳುತ್ತದೆ. ಡಿಸೆಂಬರ್ 24 ರಂದು ಕ್ರಿಸ್ ಮಸ್ ಈವ್​ ದಿನದಂದು ಕ್ರಿಶ್ಚಿಯನ್ ಸಮುದಾಯದ ಜನರೆಲ್ಲರೂ ಚರ್ಚ್ ನಲ್ಲಿ ಸೇರುತ್ತಾರೆ. ಕ್ಯಾರೋಲೆಲ್​ಗಳನ್ನು ಹಾಡುವ ಮೂಲಕ ಪ್ರಸ್ತುತ ವರ್ಷಕ್ಕೆ ಅಂತ್ಯ ಹೇಳಿ ಹೊಸವರ್ಷವನ್ನು ಸ್ವಾಗತಿಸುವುದು ಬಹಳ ವಿಶೇಷ. ಇನ್ನು ಕ್ರಿಸ್‌ಮಸ್ ಹಬ್ಬದ ದಿನ ಯೇಸುವಿನ ನೆನಪಿಗಾಗಿ ಗೋಶಾಲೆಯನ್ನು ನಿರ್ಮಿಸುತ್ತಾರೆ. ಈ ಗೋಶಾಲೆಯು ಕುರುಬರೊಂದಿಗಿನ ಯೇಸುವಿನ ಬಾಲ್ಯವನ್ನು ಚಿತ್ರಿಸುವುದೇ ವಿಶೇಷ. ಕೈಸ್ತ್ರರು ತಮ್ಮ ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳು, ಕ್ರಿಸ್ಮಸ್ ಟ್ರೀ ಇಟ್ಟು ಲೈಟ್​, ರಿಬ್ಬನ್​ಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಮನೆಯನ್ನು ದೀಪಗಳಿಂದ ಅಲಂಕರಿಸಿ ಹಬ್ಬದ ರಂಗನ್ನು ಹೆಚ್ಚಿಸುತ್ತಾರೆ. ಈ ವಿಶೇಷ ದಿನದಂದು ಕೇಕ್​, ವೈನ್​ ಸೇರಿದಂತೆ ಸಿಹಿತಿನಿಸುಗಳನ್ನು ವಿನಿಮಯ ಮಾಡಿಕೊಂಡು ಕ್ರಿಸ್ಮಸನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ