Condoms: ಕಾಂಡೋಮ್ ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲೆ ಎರಡನೇ ಸ್ಥಾನ

|

Updated on: Apr 03, 2023 | 3:35 PM

ಕಾಂಡೋಮ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ ಸರ್ಕಾರಗಳು ಕಾಂಡೋಮ್ ಬಳಕೆಯ ಅಭಿಯಾನಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸುತ್ತಿದ್ದವು. ಲೈಂಗಿಕವಾಗಿ ಹರಡುವ ರೋಗಗಳ ತಡೆಗಟ್ಟಲು ಸರ್ಕಾರಗಳು ಅಭಿಯಾನಗಳನ್ನು ಪ್ರಾರಂಭಿಸುತ್ತವೆ.

Condoms: ಕಾಂಡೋಮ್ ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲೆ ಎರಡನೇ ಸ್ಥಾನ
ಸಾಂದರ್ಭಿಕ ಚಿತ್ರ
Follow us on

ಯುವ ಸಮೂಹ ಅಥವಾ ವೈವಾಹಿಕ ಜೀವನವನ್ನು ನಡೆಸುವವರು ಹೆಚ್ಚು ಹೆಚ್ಚು ಕಾಂಡೋಮ್ (Condoms) ಉಪಯೋಗದತ್ತ ಹೋಗುತ್ತಿದ್ದಾರೆ. ಇದೀಗ ಕಾಂಡೋಮ್ ಬಳಸುವುದರಲ್ಲಿ ಭಾರತ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಯುವಕರು ಗೆಳತಿಯ ಜೊತೆಗೆ ಒಂದು ಲೈಂಗಿಕ ಸಂಬಂಧ ಹೊಂದಲು ಹಾಗೂ ಕೇಲವು ವಿವಾಹಿತ ಪುರುಷರು ತಕ್ಷಣಕ್ಕೆ ಮಗು ಬೇಡ ಎನ್ನುವ ಕಾರಣಕ್ಕೆ ಕಾಂಡೋಮ್​​ನ್ನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದಾರೆ. ಇದೀಗ ವರದಿಯೊಂದು ನೀಡಿದ ಆಧಾರ ಮೇಲೆ ಕಾಂಡೋಮ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ ಸರ್ಕಾರಗಳು ಕಾಂಡೋಮ್ ಬಳಕೆಯ ಅಭಿಯಾನಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸುತ್ತಿದ್ದವು. ಲೈಂಗಿಕವಾಗಿ ಹರಡುವ ರೋಗಗಳ ತಡೆಗಟ್ಟಲು ಸರ್ಕಾರಗಳು ಅಭಿಯಾನಗಳನ್ನು ಪ್ರಾರಂಭಿಸುತ್ತವೆ. ಆದರೆ ಪ್ರಸ್ತುತ ಅಂತಹ ಯಾವುದೇ ಪ್ರಚಾರವಿಲ್ಲದಿದ್ದರೂ, ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕಾಂಡೋಮ್​ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದೆ. ಎಷ್ಟರಮಟ್ಟಿಗೆಂದರೆ ಕಾಂಡೋಮ್‌ಗಳನ್ನು ಹೆಚ್ಚು ಬಳಸುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಪ್ರಮುಖ ಟ್ರೇಡಿಂಗ್ ಮತ್ತು ಹೂಡಿಕೆ ಕಂಪನಿ ಸ್ಟಾಕ್‌ಗ್ರೋ ನಡೆಸಿದ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಬಹಿರಂಗವಾಗಿವೆ. ಸ್ಟಾಕ್‌ಗ್ರೋ ವರದಿ ಪ್ರಕಾರ, ಭಾರತದಲ್ಲಿ ಕಾಂಡೋಮ್ ಮಾರುಕಟ್ಟೆಯ ಮೌಲ್ಯವು 2026 ರ ವೇಳೆಗೆ 134 ಮಿಲಿಯನ್ ಡಾಲರ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಪ್ರಸ್ತುತ, ಮ್ಯಾನ್‌ಫೋರ್ಸ್ ಇಂಡಿಯಾ ಭಾರತದಲ್ಲಿ ಕಾಂಡೋಮ್‌ಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಭಾಗವು ಕಾನೂನುಬಾಹಿರವಾಗಿದೆ ಎಂದು ಹೇಳಿದೆ. ಯುವಜನರಲ್ಲಿ ಕಾಂಡೋಮ್‌ಗಳು ಅತ್ಯಂತ ಜನಪ್ರಿಯ ಗರ್ಭನಿರೋಧಕ ವಿಧಾನವಾಗಿರುವುದರಿಂದ, ಇದು ಭಾರತದಲ್ಲಿ ಕಾಂಡೋಮ್ ಕಂಪನಿಗಳಿಗೆ ಭಾರಿ ಆದಾಯದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸ್ಟಾಕ್‌ಗ್ರೋ ಹೇಳಿದೆ.

ಇದನ್ನೂ ಓದಿ:Free Condoms: ಜ. 1ರಿಂದ 25 ವರ್ಷದೊಳಗಿನ ಯುವಕರಿಗೆ ಉಚಿತ ಕಾಂಡೋಮ್; ಫ್ರಾನ್ಸ್ ಸರ್ಕಾರ ಘೋಷಣೆ

ಭಾರತದಲ್ಲಿ ಪ್ರತಿ ವರ್ಷ 2 ಬಿಲಿಯನ್ ಕಾಂಡೋಮ್‌ಗಳು ಮಾರಾಟವಾಗುತ್ತವೆ ಎಂದು ಈ ಸಮೀಕ್ಷೆಯು ಹೇಳಿದೆ. ಇವರಲ್ಲಿ ಶೇ.8.9ರಷ್ಟು ವಿವಾಹಿತ ಮಹಿಳೆಯರು ಮತ್ತು ಶೇ.10.3ರಷ್ಟು ವಿವಾಹಿತ ಪುರುಷರು ಕಾಂಡೋಮ್ ಬಳಸುತ್ತಾರೆ. ಸಮೀಕ್ಷೆಯ ಪ್ರಕಾರ, ಕಳೆದ ಒಂದು ದಶಕದಲ್ಲಿ ಅವಿವಾಹಿತ ಮಹಿಳೆಯರು ಕಾಂಡೋಮ್ ಬಳಕೆ ಆರು ಪಟ್ಟು ಹೆಚ್ಚಾಗಿದೆ.