AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cooking Tips : ಮನೆಯಲ್ಲಿ ಜ್ಯೂಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಬೇಸಿಗೆ ಬಂತೆಂದರೆ ಸಾಕು, ವಿಪರೀತ ಬಾಯಾರಿಕೆಯಿಂದ ಬಳಲುವುದು ಸಹಜ. ತಣ್ಣನೆಯ ಏನಾದರೂ ಸಿಕ್ಕರೆ ಸಾಕು ಎಂದೆನಿಸುತ್ತದೆ. ಹೀಗಾಗಿ ಹೆಚ್ಚಿನವರು ತಂಪಾದ ಪಾನೀಯಗಳನ್ನು ಕುಡಿದರೆ, ಕೆಲವರು ಮನೆಯಲ್ಲೇ ತಾಜಾ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿಯುವವರು ಇದ್ದಾರೆ. ಆದರೆ ಫ್ರೂಟ್ಸ್ ಜ್ಯೂಸ್ ಮಾಡುವಾಗ ಈ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

Cooking Tips : ಮನೆಯಲ್ಲಿ ಜ್ಯೂಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 02, 2024 | 4:04 PM

Share

ಸುಡು ಬಿಸಿಲಿನ ನಡುವೆ ತಣ್ಣನೆಯ ಪಾನೀಯವಂತೂ ಇದ್ದು ಬಿಟ್ಟರೆ ದೇಹಕ್ಕೆ ತಂಪು ಹಾಗೂ ಮನಸ್ಸಿಗೆ ಹಿತಕರ ಅನುಭವ. ಹೆಚ್ಚಿನವರು ಮನೆಯಲ್ಲೇ ಜ್ಯೂಸ್ ಮಾಡಿ ಸವಿಯುತ್ತಾರೆ. ಆದರೆ ಮನೆಯಲ್ಲೇ ಮಾಡುವ ಜ್ಯೂಸ್ ಗಳು ರೆಸ್ಟೋರೆಂಟ್‌ಗಳಲ್ಲಿ, ಜ್ಯೂಸ್‌ ಅಂಗಡಿಗಳಲ್ಲಿ ಸಿಗುವ ರುಚಿಯನ್ನು ಹೊಂದಿರುವುದಿಲ್ಲ. ತಾಜಾ ಜ್ಯೂಸ್ ತಯಾರಿಸುವಾಗ ಈ ಕೆಲವು ಟ್ರಿಕ್ಸ್ ಗಳನ್ನು ಬಳಸಿದರೆ ತಾಜಾ ಹಾಗೂ ರುಚಿಕರವಾದ ಹಣ್ಣಿನ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

ಹಣ್ಣಿನ ಜ್ಯೂಸ್ ಮಾಡುವಾಗ ಈ ವಿಷಯಗಳು ನೆನಪಿನಲ್ಲಿರಲಿ:

  1. ಮನೆಯಲ್ಲಿ ಜ್ಯೂಸ್‌ ಮಾಡುವಾಗ ಜ್ಯೂಸರ್‌ ಬಿಸಿ ಇರದಂತೆ ನೋಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಜ್ಯೂಸರ್‌ ತುಂಬಾ ಬಿಸಿಯಿದ್ದರೆ ಹಣ್ಣುಗಳ ರುಚಿಯು ಬರುವುದಿಲ್ಲ.
  2. ಹಣ್ಣುಗಳು ಹಾಳಾಗಬಾರದು ಎಂದು ಹೆಚ್ಚಿನವರು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಹೀಗೆ ಇಡುವುದರಿಂದ ಹಣ್ಣಿನಲ್ಲಿರುವ ಪೋಷಕಾಂಶಗಳು ಹಾಳಾಗುತ್ತದೆ. ಅದಲ್ಲದೇ ಹೊರಗಿಟ್ಟ ಹಣ್ಣುಗಳ ಜ್ಯೂಸ್ ಮಾಡಿದರೆ ರುಚಿಯು ಹೆಚ್ಚಾಗಿರುತ್ತದೆ.
  3. ಹಣ್ಣುಗಳ ಜ್ಯೂಸ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಜ್ಯೂಸ್ ಕುಡಿಯುವುದರಿಂದ ಪೋಷಕಾಂಶಗಳು ಹಾಳಾಗುತ್ತದೆ. ಅದಲ್ಲದೇ, ತಣ್ಣಗೆಯೆನಿಸಿದರೂ ರುಚಿಯು ತಾಜಾ ಹಣ್ಣಿನ ಜ್ಯೂಸ್ ನಂತೆ ಇರುವುದಿಲ್ಲ.
  4. ಹೆಚ್ಚಿನವರಿಗೆ ಜ್ಯೂಸ್ ತಯಾರಿಸುವಾಗ ಸಿಹಿ ಹೆಚ್ಚಾಗಲಿ ಎಂದು ಸಕ್ಕರೆ ಹಾಕುವ ಅಭ್ಯಾಸವಿರುತ್ತದೆ. ಆದರೆ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಣ್ಣಿನಲ್ಲಿ ಸಿಹಿಯ ಅಂಶವಿರುವುದರಿಂದ ಆದಷ್ಟು ಸಕ್ಕರೆ ಹಾಕುವುದನ್ನು ತಪ್ಪಿಸುವುದು ಒಳ್ಳೆಯದು.
  5. ಹಣ್ಣುಗಳ ಜ್ಯೂಸ್‌ ಮಾಡುವಾಗ, ಮೊದಲು ಮಾಡಬೇಕಾದ ಕೆಲಸವೆಂದರೆ ಅದರ ಬೀಜಗಳನ್ನು ತೆಗೆಯುವುದು. ಬೀಜಗಳ ಸಹಿತ ಜ್ಯೂಸ್ ಮಾಡಿದರೆ ಕಹಿ ರುಚಿಯಿಂದ ಹಣ್ಣಿನ ಜ್ಯೂಸ್ ಹಾಳಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ