AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2024 : ಬೆಳಕಿನ ಹಬ್ಬ ದೀಪಾವಳಿಗೆ ಮನೆಯ ಸ್ವಚ್ಛತೆ ಹೀಗಿರಲಿ

ದಸರಾ ಮುಗಿದು ಇದೀಗ ಎಲ್ಲರೂ ದೀಪಾವಳಿ ಹಬ್ಬದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಹಬ್ಬವು ಹತ್ತಿರ ಬರುತ್ತಿದ್ದಂತೆ ಎಲ್ಲರೂ ಮನೆಯ ಸ್ವಚ್ಛತೆಯ ಕಡೆಗೆ ಗಮನ ಕೊಡುತ್ತಾರೆ. ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ನಮ್ಮದು ಇನ್ನು ಮನೆ ಸ್ವಚ್ಛ ತೆ ಆಗಿಲ್ಲ ಎಂದು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಈ ಕೆಲವು ಸಿಂಪಲ್ ಟಿಪ್ಸ್ ಪಾಲಿಸಿ ಮನೆಯ ಮೂಲೆ ಮೂಲೆಯು ಸ್ವಚ್ಛಗೊಳಿಸಿಕೊಳ್ಳಿ.

Deepavali 2024 : ಬೆಳಕಿನ ಹಬ್ಬ ದೀಪಾವಳಿಗೆ ಮನೆಯ ಸ್ವಚ್ಛತೆ ಹೀಗಿರಲಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Oct 26, 2024 | 11:19 AM

Share

ಮನೆ ಚಿಕ್ಕದಾಗಿದ್ದರೆ ಹೇಗೋ ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದೇ ದೊಡ್ಡದಾಗಿ ಬಿಟ್ಟರಂತೂ ಯಾರಪ್ಪ ಕ್ಲೀನ್ ಮಾಡ್ತಾರೆ ಎನ್ನುತ್ತೇವೆ. ಆದರೆ ಇದೀಗ ಮುಂದಿನ ವಾರವೇ ದೀಪಾವಳಿ ಹಬ್ಬ. ಸಮಯವಂತೂ ಇಲ್ಲವೇ ಇಲ್ಲ, ಅದಕ್ಕೂ ಮೊದಲೇ ಮನೆ ಸ್ವಚ್ಛಗೊಳಿಸಿ ಹಬ್ಬಕ್ಕೆ ಸಿದ್ಧರಾಗಬೇಕು. ಹೀಗಾಗಿ ಸೂಕ್ತ ಸಿದ್ಧತೆ ಹಾಗೂ ವೇಳಾಪಟ್ಟಿಯನ್ನು ಮಾಡಿಕೊಂಡರೆ ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಬಹುದು.

  • ಗೋಡೆ, ಪ್ಯಾನ್ ಗಳನ್ನು ಸ್ವಚ್ಛಗೊಳಿಸಿ : ಕೆಲವೊಮ್ಮೆ ಮನೆಯ ಮೇಲೆ ಅಥವಾ ಮೂಲೆ ಮೂಲೆಗಳಲ್ಲಿ ಜೇಡಗಳು ಬಲೆ ಕಟ್ಟಿಕೊಂಡಿರುತ್ತದೆ. ಹೀಗಾಗಿ ಉದ್ದನೆಯ ಪೊರಕೆಯ ಸಹಾಯದಿಂದ ಪ್ರತಿ ಕೋಣೆಯ ಗೋಡೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಧೂಳು ಮತ್ತು ಜೇಡರ ಬಲೆಗಳನ್ನು ತೆಗೆದುಹಾಕುವುದು ಸೂಕ್ತ. ಅದಲ್ಲದೇ ಮೇಲಿನಿಂದ ಕೆಳಗೆ ಕ್ಲೀನ್ ಮಾಡಿಕೊಳ್ಳುವ ಮೂಲಕ ಅಚ್ಚುಕಟ್ಟಾಗಿ ಮನೆಯನ್ನು ಸ್ವಚ್ಛಗೊಳಿಸಿ. ಫ್ಯಾನ್‌ ಗಳು ಹಾಗೂ ಪೀಠೋಪಕರಣಗಳ ಮೇಲೆ ಇರುವ ಧೂಳಿನ ಕಣಗಳನ್ನು ಬಟ್ಟೆಯಿಂದ ಸ್ವಚ್ಛಗೊಳಿಸುವುದನ್ನು ಮರೆಯದಿರಿ.
  • ವಾರ್ಡ್ರೋಬ್ ಸ್ವಚ್ಛತೆಯ ಕಡೆಗೂ ಇರಲಿ ಗಮನ : ಮನೆಯನ್ನು ಸ್ವಚ್ಛಗೊಳಿಸಿದರೆ ಸಾಲುವುದಿಲ್ಲ. ಮನೆಯ ಬೀರುಗಳ ಮೇಲಿರುವ ಧೂಳನ್ನು ಒರೆಸಿ..ಅದಲ್ಲದೇ ಬೀರು ಒಳಗಿರುವ ಬಟ್ಟೆಯನ್ನು ಸರಿಯಾಗಿ ಜೋಡಿಸಿ ಇಡಿ. ನೀವು ದೀರ್ಘಕಾಲ ಧರಿಸದ ಬಟ್ಟೆಗಳಿದ್ದರೆ ಅವುಗಳನ್ನು ಬೇರೆ ಯಾರಿಗಾದrರೂ ನೀಡಿ. ಬಟ್ಟೆಗಳು ಕೆಟ್ಟ ವಾಸನೆ ಬರುತ್ತಿದ್ದರೇ ಸುಗಂಧ ದ್ರವ್ಯವನ್ನು ಸ್ಪ್ರೇ ಮಾಡುವುದು ಒಳ್ಳೆಯದು.
  • ಹಾಸಿಗೆಯ ಕವರ್ ಮತ್ತು ಕರ್ಟ್‍ನ್‍ಗಳನ್ನು ಬದಲಾಯಿಸಿ : ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಹಾಸಿಗೆಯ ಕವರ್ ಹಾಗೂ ಕರ್ಟ್‍ನ್ ಗಳನ್ನು ತೊಳೆಯಲು ಹಾಕುವುದು ಉತ್ತಮ. ಹೊಸದಾದ ಕರ್ಟ್‍ನ್ ಹಾಗೂ ಸೋಫಾ ಕವರ್ ಗಳನ್ನು ಬಳಸುವುದು ಮನೆಯ ಅಂದವು ಹೆಚ್ಚುತ್ತದೆ.
  • ಅಡುಗೆ ಮನೆಯೂ ಅಚ್ಚು ಕಟ್ಟಾಗಿರಲಿ :ಅಡುಗೆ ಮನೆಯಲ್ಲಿ ಮರದ ಹಲಗೆಗಳಿದ್ದರೆ ಮೇಲೆ ಧೂಳಿನ ಕಣಗಳು ಸಂಗ್ರಹವಾಗಿ ಬಿಟ್ಟಿರುತ್ತವೆ. ಎಣ್ಣೆಯ ಜಿಡ್ಡುಗಳು ಗೋಡೆಗಳು, ಪಾತ್ರೆಗಳು ಹಾಗೂ ಕಪಾಡುಗಳ ಮೇಲೆ ಸಂಗ್ರಹವಾಗಿರುತ್ತದೆ. ಈ ಜಿಡ್ಡಿನ ಕಲೆಗಳನ್ನು ತೆಗೆದು ಹಾಕಲು ಸೋಪ್ ಲಿಕ್ವಿಡ್‍ಗಳನ್ನು ಬಳಸಿ. ವ್ಯಾಕ್ಯೂಮ್ ಕ್ಲೀನರ್ ಅಥವಾ ಒದ್ದೆ ಬಟ್ಟೆಯಿಂದ ಧೂಳಿನ ಕಣಗಳನ್ನು ಒರೆಸಿ ಬೇಡದ ಕಸ, ಹಾಗೂ ಅಗತ್ಯವಿಲ್ಲದ ಡಬ್ಬಿಗಳನ್ನು ಹೊರಗೆ ಹಾಕಿ.
  • ಬಾತ್ ರೂಮ್ ಸ್ವಚ್ಛವಾಗಿರಲಿ : ಮನೆಯಷ್ಟೇ ಸ್ವಚ್ಛವಾಗಿ ಸುಂದರವಾಗಿದ್ದರೆ ಸಾಲುವುದಿಲ್ಲ. ಮನೆಯ ಸ್ನಾನಗೃಹವು ವಾಸನೆ ಹಾಗೂ ಕೊಳೆಯಿಂದ ಕೂಡಿದ್ದರೆ ಮನೆಯ ಸೊಗಸನ್ನೇ ಹಾಳುಮಾಡಿಬಿಡುತ್ತದೆ. ಬಾತ್ ರೂಮನ್ನು ಪಿನೈಲ್ ಅಥವಾ ಡೊಮೆಕ್ಸ್‍ನಂತಹ ಉತ್ಪನ್ನಗಳನ್ನು ಬಳಸಿ ಸ್ವಚ್ಛಗೊಳಿಸಿ. ಸ್ನಾನ ಗೃಹ ಸುವಾಸನೆಯಿಂದ ಕೂಡಿರಲು ರೂಮ್ ಫ್ರೆಶ್ನರ್ ಬಳಸುವುದನ್ನು ಮರೆಯದಿರಿ.
  • ಮನೆಯ ಹೊರಗಿನ ಸ್ವಚ್ಛತೆಗೆ ಗಮನ ಕೊಡಿ : ಮನೆಯ ಒಳಗೆ ಮಾತ್ರವಲ್ಲ ಹೊರಗೆ ಕೂಡ ಶುಚಿಗೊಳಿಸುವುದು ಬಹಳ ಮುಖ್ಯ. ಮನೆಯ ಹೊರಗಿನ ಗೋಡೆಗಳಲ್ಲಿ ಇರುವ ಧೂಳು, ಬಲೆಗಳನ್ನು ತೆಗೆಯಿರಿ. ಅಂಗಳದಲ್ಲಿ ಬೆಳೆದ ಕಳೆ ಸಸ್ಯಗಳನ್ನು ಕಿತ್ತು ಹಾಕಿ, ಹೀಗೆ ಮನೆಯ ಸುತ್ತಮುತ್ತ ಸುಂದರವಾಗಿ ಕಾಣುವಂತೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ