
ಪ್ರತಿ ಹಬ್ಬದ ಸಮಯದಲ್ಲೂ ಮನೆಯಲ್ಲಿ ಸಿಹಿ ತಿನಿಸುಗಳನ್ನು (Sweets) ತಯಾರಿಸಲಾಗುತ್ತದೆ. ಹೆಚ್ಚಿನವರು ಪಾಯಸವನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಶ್ಯಾವಿಗೆ, ಬೇಳೆ, ಗೋಧಿ ಪಾಯಸವನ್ನು ಮಾಡುತ್ತಾರೆ. ಕೆಲವರು ಆರೋಗ್ಯಕರವಾಗಿರಬೇಕೆಂದು ಕ್ಯಾರೆಟ್ ಪಾಯಸವನ್ನು ಕೂಡ ತಯಾರಿಸುತ್ತಾರೆ. ನೀವು ಕೂಡ ಕ್ಯಾರೆಟ್ ಪಾಯಸದ ರುಚಿ ನೋಡಿರುತ್ತೀರಿ ಅಲ್ವಾ, ಆದ್ರೆ ಎಂದಾದ್ರೂ ಮೈಸೂರ್ ಪಾಕ್ ಟೇಸ್ಟ್ ನೀಡೋ ಕ್ಯಾರೆಟ್ ಪಾಯವನ್ನು ಸವಿದಿದ್ದೀರಾ? ಈ ಸ್ಪೆಷಲ್ ಪಾಯಸವನ್ನು ಈಸಿಯಾಗಿ ಮನೆಯಲ್ಲಿಯೇ ತಯಾರಿಸಬಹುದು. ಈ ರೆಸಿಪಿಯ ಪೂರ್ಣ ವಿವರ ಇಲ್ಲಿದೆ.
ಈ ಬಾರಿಯ ದೀಪಾವಳಿ ಹಬ್ಬಕ್ಕೆ ಏನಾದ್ರೂ ವಿಶೇಷ ಸಿಹಿ ಖಾದ್ಯವನ್ನು ತಯಾರಿಸುವ ಪ್ಲಾನ್ ಇದ್ರೆ ಸ್ಪೆಷಲ್ ಕ್ಯಾರೆಟ್ ಪಾಯಸ ತಯಾರಿಸಿ. ಇದು ಬರೀ ಪಾಯಸವಲ್ಲ, ಮೈಸೂರ್ ಪಾಕ್ ಟೇಸ್ಟ್ ನೀಡೋ ಸ್ಪೆಷಲ್ ಪಾಯಾಸ. ಕ್ಯಾರೆಟ್ ಪಾಯಸಕ್ಕೆ ಮೈಸೂರ್ ಪಾಕ್ ರುಚಿ ನೀಡುವ ಆ ಸೀಕ್ರೆಟ್ ಇಂಗ್ರಿಡಿಯಂಟ್ ಯಾವುದೆಂದರೆ ಕಡ್ಲೆ ಹಿಟ್ಟು. ಕ್ಯಾರೆಟ್ ಪಾಯಸಕ್ಕೆ ಕಡ್ಲೆ ಹಿಟ್ಟು ಸೇರಿಸುವುದರಿಂದ ಪಾಯಸದ ಟೇಸ್ಟ್ ಮೈಸೂರ್ ಪಾಕ್‌ನಂತಿರುತ್ತದೆ. ಈ ಒಂದು ಸ್ಪೆಷಲ್ ರೆಸಿಪಿಯನ್ನು shimogakitchen.recipes ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಕ್ಯಾರೆಟ್, ಬಾದಾಮಿ, ಹಾಲು, ತುಪ್ಪ, ಗೋಡಂಬಿ, ಕಡ್ಲೆಹಿಟ್ಟು, ಸಕ್ಕರೆ, ಏಲಕ್ಕಿ ಪುಡಿ, ಕೇಸರಿ (ಐಚ್ಛಿಕ)
ಇದನ್ನೂ ಓದಿ: ಹಬ್ಬದ ಕ್ಲೀನಿಂಗ್ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Thu, 29 October 26