Deepavali 2026: ಹಬ್ಬದ ಕ್ಲೀನಿಂಗ್‌ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ

ದೇಶಾದ್ಯಂತ ಬಹಳ ಅದ್ಧೂರಿಯಾಗಿ ಆಚರಿಸುವ ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನೂ ಕೆಲವು ದಿನಗಳು ಬಾಕಿ ಉಳಿದಿವೆ. ಬಹುತೇಕ ಎಲ್ಲಾ ಮನೆಗಳಲ್ಲೂ ಹಬ್ಬದ ತಯಾರಿ ಬಲು ಜೋರಾಗಿ ನಡೆಯುತ್ತಿದೆ. ಈ ಹಬ್ಬದ ಸಮಯದಲ್ಲಿ ಮನೆಯನ್ನು ಡೀಪ್‌ ಕ್ಲೀನ್‌ ಮಾಡುವ ವಾಡಿಕೆಯಿದೆ. ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲು ಕೇವಲ ಮನೆಯನ್ನು ಸ್ವಚ್ಛಗೊಳಿಸಿದರೆ ಸಾಲದು, ಈ ವಸ್ತುಗಳನ್ನು ಮನೆಯಿಂದ ತಹೊರ ಹಾಕೋದು ಕೂಡ ತುಂಬಾನೇ ಮುಖ್ಯ. ಹಾಗಿದ್ರೆ ಲಕ್ಷ್ಮೀ ಕೃಪೆಗೆ ಪಾತ್ರರಾಗಲು ದೀಪಾವಳಿಗೂ ಮುನ್ನ ಮನೆಯಿಂದ ಯಾವೆಲ್ಲಾ ನಕಾರಾತ್ಮಕ ವಸ್ತುಗಳನ್ನು ಬಿಸಾಡಬೇಕು ಎಂಬುದನ್ನು ನೋಡಿ.

Deepavali 2026: ಹಬ್ಬದ ಕ್ಲೀನಿಂಗ್‌ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 27, 2026 | 6:47 PM

ಬೆಳಕಿನ ಹಬ್ಬ ದೀಪಾವಳಿಗೆ (Deepavali) ಇನ್ನೇನೂ ಕೆಲವೇ ದಿನಗಳು ಬಾಕಿ ಇವೆ. ಈ ಹಬ್ಬಕ್ಕೆ ಪ್ರತಿಯೊಬ್ಬರೂ ತಮ್ಮ ಮನೆಯನ್ನು ದೀಪ, ಲೈಟಿಂಗ್ಸ್‌ಗಳಿಂದ ಸಿಂಗರಿಸುತ್ತಾರೆ. ಜೊತೆಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯಲ್ಲಿ ಸ್ವಚ್ಛವಾಗಿಟ್ಟರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಈ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಮನೆಯನ್ನು ಡೀಪ್‌ ಕ್ಲೀನ್‌ ಮಾಡುತ್ತಾರೆ. ಕೇವಲ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಸಾಲದು. ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸಲು  ಮತ್ತು ಅದೃಷ್ಟದ ಬಾಗಿಲು ತೆರೆದುಕೊಳ್ಳಲು ಮನೆಯಿಂದ ಈ ಕೆಲವು  ಅಶುಭ ವಸ್ತುಗಳನ್ನು ಹೊರ ಹಾಕುವುದು ಕೂಡ ತುಂಬಾನೇ ಮುಖ್ಯ. ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಿಮಗೇನಾದರೂ ಈ ಕೆಲವು ವಸ್ತುಗಳು ಸಿಕ್ಕರೆ ತಕ್ಷಣ ಅವುಗಳನ್ನು ಹೊರ ಹಾಕಿ.

ಮುರಿದ ವಿಗ್ರಹಗಳು ಮತ್ತು ಹರಿದ ಚಿತ್ರಗಳು:

ಶಾಸ್ತ್ರಗಳ ಪ್ರಕಾರ, ಮುರಿದ ವಿಗ್ರಹಗಳು ಮತ್ತು ಹರಿದ ಚಿತ್ರಗಳನ್ನು ಮನೆಯಲ್ಲಿ ಇಡುವುದು ಶುಭವಲ್ಲ. ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ದೀಪಾವಳಿಯ ಮೊದಲು, ಮುರಿದ ವಿಗ್ರಹಗಳು ಮತ್ತು ಚಿತ್ರಗಳನ್ನು ಪವಿತ್ರ ನದಿಯಲ್ಲಿ ಮುಳುಗಿಸಬೇಕು ಅಥವಾ ಅರಳಿ ಮರದ ಕೆಳಗೆ ಇಡಬೇಕು.

ನಿಂತುಹೋದ ಗಡಿಯಾರಗಳು:

ಮನೆಯಲ್ಲಿ ನಿಂತುಹೋದ ಗಡಿಯಾರಗಳನ್ನು ಗಡಿಯಾರಗಳನ್ನು ಇಡುವುದು ಒಳ್ಳೆಯದಲ್ಲ. ಅಂತಹ ಗಡಿಯಾರಗಳನ್ನು ಪ್ರಗತಿಗೆ ಅಡ್ಡಿ ಮತ್ತು ದುರದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ದೀಪಾವಳಿ ಮನೆ ಕ್ಲೀನಿಂಗ್‌ ಸಮಯದಲ್ಲಿ, ನಿಂತುಹೋದ ಗಡಿಯಾರ ಅಥವಾ ಗಾಜು ಒಡೆದುಹೋದ ಗಡಿಯಾರ ಸಿಕ್ಕರೆ ತಕ್ಷಣ ಅವುಗಳನ್ನು ಎಸೆದುಬಿಡಿ.

ಹಳೆಯ ಮತ್ತು ಹರಿದ ಬೂಟುಗಳು, ಚಪ್ಪಲಿಗಳು:

ಮನೆಯಲ್ಲಿ ಹಳೆಯ ಮತ್ತು ಹರಿದ ಬೂಟುಗಳು ಮತ್ತು ಚಪ್ಪಲಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಹೇಳಲಾಗುತ್ತದೆ. , ಇದು ಕುಟುಂಬ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಮನೆಯಲ್ಲಿ ಹಳೆಯ ಮತ್ತು ಹರಿದ ಬೂಟುಗಳು ಮತ್ತು ಚಪ್ಪಲಿಗಳನ್ನು ಇಡುವುದನ್ನು ತಪ್ಪಿಸಬೇಕು. ಅವುಗಳನ್ನು ಎಸೆದುಬಿಡಿ.

ಒಡೆದ ಗಾಜು ಮತ್ತು ಪಾತ್ರೆಗಳು:

ಮನೆಯಲ್ಲಿ ಬಿರುಕು ಬಿಟ್ಟ ಪಾತ್ರೆಗಳು ಮತ್ತು ಒಡೆದ ಗಾಜುಗಳನ್ನು ಸಹ ತಪ್ಪಿಸಬೇಕು. ಶಾಸ್ತ್ರಗಳ ಪ್ರಕಾರ ಒಡೆದ ಗಾಜುಗಳನ್ನು ಮನೆಯಲ್ಲಿ ಇಡುವುದರಿಂದ ನೆಗೆಟಿವ್‌ ಎನರ್ಜಿ ಹೆಚ್ಚಾಗುತ್ತದೆ. ಪರಿಣಾಮವಾಗಿ ಮನೆಮಂದಿಯ ಜೀವನದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ಒಡೆದ ಗಾಜು ಮತ್ತು ಪಾತ್ರೆಗಳಿದ್ದರೆ, ದೀಪಾವಳಿಗೂ ಮುನ್ನ ಅವುಗಳನ್ನು ಎಸೆದುಬಿಡಿ.

ಮುರಿದ ಮತ್ತು ಅನುಪಯುಕ್ತ ವಸ್ತುಗಳು:

ಹಬ್ಬದ ಕ್ಲೀನಿಂಗ್‌ ಸಮಯದಲ್ಲಿ, ಮುರಿದ ಪೆಟ್ಟಿಗೆಗಳು, ಹಾನಿಗೊಳಗಾದ ಆಟಿಕೆಗಳು, ನಿಷ್ಪ್ರಯೋಜಕ ಅಲಂಕಾರಿಕ ವಸ್ತುಗಳು, ಕಾಗದ ತ್ಯಾಜ್ಯಗಳನ್ನು ಕಸದ ಬುಟ್ಟಿಗೆ ಎಸೆದು ಬಿಡಿ. ಈ ರೀತಿ ನಿಷ್ಪ್ರಯೋಜನ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಅವ್ಯವಸ್ಥೆ ಹೆಚ್ಚಾಗುವುದಲ್ಲದೆ, ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುವುದಿಲ್ಲ. ಹಾಗಾಗಿ ಮನೆಯ ಸ್ವಚ್ಛತೆಗೆ ಹೆಚ್ಚಿನ ಗಮನವನ್ನು ಕೊಡಿ.

ಇದನ್ನೂ ಓದಿ: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ಭಗವದ್ಗೀತೆಯ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ

ಹಳೆಯ ಪೊರಕೆ:

ಹಳೆಯ ಪೊರಕೆಗಳನ್ನು ಸಹ ಮನೆಯಲ್ಲಿ ಇಡಬಾರದು. ದೀಪಾವಳಿ ಶುಚಿಗೊಳಿಸುವ ಸಮಯದಲ್ಲಿ ಅವುಗಳನ್ನು ತಕ್ಷಣ ತೆಗೆದುಹಾಕಬೇಕು. ಮನೆಯಲ್ಲಿ ಸವೆದ ಪೊರಕೆಯನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.

ಹರಿದ ಮತ್ತು ಹಳೆಯ ಬಟ್ಟೆಗಳು:

ಹರಿದ, ಹಳೆಯ ಸೇರಿದಂತೆ ಎಲ್ಲಾ ರೀತಿಯ ಬಟ್ಟೆಗಳನ್ನು ನಾವು ವಾರ್ಡ್ರೋಬ್‌ನಲ್ಲಿ ತುಂಬಿಸಿಡುತ್ತೇವೆ. ಆದರೆ ಶಾಸ್ತ್ರಗಳ ಪ್ರಕಾರ ಹಳೆಯ ಮತ್ತು ಹರಿದ ಬಟ್ಟೆಗಳನ್ನು ಮನೆಯಲ್ಲಿ ಇಡುವುದು ಸೂಕ್ತವಲ್ಲ. ಇದು ದುರಾದೃಷ್ಟವನ್ನು ತರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Tue, 27 October 26

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us