ಬಿರಿಯಾನಿ(Biryani) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಇಷ್ಟ ಪಡುವ ಖಾದ್ಯಗಳಲ್ಲಿ ಬಿರಿಯಾನಿ ಕೂಡ ಒಂದು. ಭಾರತದಲ್ಲಿ ಇತ್ತೀಚೆಗಷ್ಟೇ ಸ್ವಿಗ್ಗಿ ವರದಿ ಮಾಡಿರುವ ಪ್ರಕಾರ 2022ರಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿರುವ ಫುಡ್ಗಳ ಪಟ್ಟಿಯಲ್ಲಿ ಬಿರಿಯಾನಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿರಿಯಾನಿಯಲ್ಲಿ ಹಲವಾರು ವಿಧಗಳನ್ನು ಕಾಣಬಹುದು. ಅದರಲ್ಲಿ ಒಂದು ದೇಗಿ ಬಿರಿಯಾನಿ. ಇದು ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಾಗಿದೆ. ಈ ಬಿರಿಯಾನಿಯಲ್ಲಿ ಹೆಚ್ಚಾಗಿ ಮೆಣಸಿನ ಫ್ಲೇವರ್ ಕಾಣಬಹುದು. ಅದ್ದರಿಂದ ಇದರ ಸಂಪೂರ್ಣ ಪಾಕ ವಿಧಾನ ಇಲ್ಲಿದೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಈ ದೇಗಿ ಬಿರಿಯಾನಿ ಮಾಡಿ ರುಚಿ ನೋಡಿ.
500 ಗ್ರಾಂ ಅಕ್ಕಿ, ದಾಲ್ಚಿನ್ನಿ ಎಲೆ 2, ಏಲಕ್ಕಿ 2-3, ಲವಂಗ 3-4, ಚಕ್ಕೆ 2-3, ರುಚಿಗೆ ಉಪ್ಪು, ಒಂದು ಚಿಕ್ಕ ಟಿನ್ ತುಪ್ಪ, 700 ಗ್ರಾಂ ಚಿಕನ್, 1 ಟೀಸ್ಪೂನ್ ಗರಂ ಮಸಾಲ ಪುಡಿ, 2 ಚಮಚ ಗರಂ ಮಸಾಲ, 1/2 ಚಮಚ ಜಾಯಿಕಾಯಿ ಪುಡಿ, 2 ಮಧ್ಯಮ ಹುರಿದ ಈರುಳ್ಳಿ, 250 ಮಿಲಿ ಮೊಸರು, 4 ಹಸಿ ಮೆಣಸಿನಕಾಯಿ, 3 ಚಮಚ ಕತ್ತರಿಸಿದ ಪುದೀನಾ ಸೊಪ್ಪು, 8-10 ಒಣದ್ರಾಕ್ಷಿ ಮತ್ತು ಗೋಡಂಬಿ, 2 ಚಮಚ ನಿಂಬೆ ರಸ, ಹಸಿ ಮೆಣಸಿನ ಕಾಯಿಯ ಪೇಸ್ಟ್ 2 ಚಮಚ.
ಬಿರಿಯಾನಿ ಅನ್ನ ಮಾಡುವುದು:
ಅಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ನಂತರ, ಏಲಕ್ಕಿ,ಲವಂಗ, ಚಕ್ಕೆ ಎಲ್ಲಾ ಮಸಾಲೆಗಳನ್ನು ಸೇರಿಸಿ ಮತ್ತು ಅಕ್ಕಿ ಶೇಕಡಾ 80ರಷ್ಟು ಬೇಯುವವರೆಗೆ ಚೆನ್ನಾಗಿ ಕುದಿಸಿ.
ಇದನ್ನೂ ಓದಿ: ಬಾಯಲ್ಲಿ ನಿರೂರಿಸುವ ಹಬ್ಬದ ಸಿಹಿ ಭಕ್ಷ್ಯಗಳು ಇಲ್ಲಿವೆ
ಬಿರಿಯಾನಿ ಮಸಾಲ ಮಾಡುವುದು:
ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಹಸಿರು ಮೆಣಸಿನಕಾಯಿಗಳು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ನಂತರ ಮೇಲೆ ತಿಳಿಸಿದ ಎಲ್ಲಾ ಮಸಾಲೆಗಳನ್ನು ಸೇರಿಸಿ. ಇದನ್ನು ಸುಮಾರು 5-6 ನಿಮಿಷಗಳ ಕಾಲ ಹುರಿಯಿರಿ. ನಂತರ ದಮ್ ಬಿರಿಯಾನಿ ಪುಡಿ ಅಥವಾ ಯಾವುದೇ ಬಿರಿಯಾನಿ ಪುಡಿ ಸೇರಿಸಿ ಮತ್ತು ಮತ್ತೆ 5 ನಿಮಿಷಗಳ ಕಾಲ ಬೆರೆಸಿ. ಈಗ, ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೇಯಿಸಿದ ಅನ್ನವನ್ನು ಚಿಕನ್ ಗ್ರೇವಿಯ ಮೇಲೆ ಸುರಿಯಿರಿ ಮತ್ತು ಅಕ್ಕಿಯ ನಡುವೆ ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಇದನ್ನು 10 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಇದರ ಮೇಲೆ ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳಿಂದ ಅಲಂಕರಿಸಿ. ಈಗ ದೆಹಲಿ ಸ್ಪೆಷಲ್ ದೇಗಿ ಬಿರಿಯಾನಿ ಸಿದ್ದವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:03 pm, Thu, 12 January 23