AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dental Health: ಹಲ್ಲಿನ ಬಣ್ಣ ಬದಲಾಯಿಸುವ ಈ ಆಹಾರಗಳಿಂದ ದೂರವಿರಿ

Dental Health:ಹಲ್ಲುಗಳು ಬಣ್ಣಗೆಡುವುದು ಹಾಗೂ ಪಾಚಿಗಟ್ಟುವುದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಾಗಿವೆ. ಕೆಲವು ಆಹಾರಗಳಿಂದ ನೀವು ದೂರವಿದ್ದರೆ ಸದಾ ನಿಮ್ಮ ಹಲ್ಲುಗಳು ಬಿಳಿಯಾಗಿರುವಂತೆ ನೋಡಿಕೊಳ್ಳಬಹುದು.

Dental Health: ಹಲ್ಲಿನ ಬಣ್ಣ ಬದಲಾಯಿಸುವ ಈ ಆಹಾರಗಳಿಂದ ದೂರವಿರಿ
ಹಲ್ಲುಗಳ ಆರೋಗ್ಯ
TV9 Web
| Updated By: ನಯನಾ ರಾಜೀವ್|

Updated on: May 18, 2022 | 4:27 PM

Share

ಹಲ್ಲುಗಳು ಬಣ್ಣಗೆಡುವುದು ಹಾಗೂ ಪಾಚಿಗಟ್ಟುವುದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಾಗಿವೆ. ಕೆಲವು ಆಹಾರಗಳಿಂದ ನೀವು ದೂರವಿದ್ದರೆ ಸದಾ ನಿಮ್ಮ ಹಲ್ಲುಗಳು ಬಿಳಿಯಾಗಿರುವಂತೆ ನೋಡಿಕೊಳ್ಳಬಹುದು.

ಹಲ್ಲುಗಳು ಬಣ್ಣಗೆಡಲು ಕಾರಣಗಳೇನು? ಹಲ್ಲುಗಳು ಬಣ್ಣಗೆಡುವುದು ಮತ್ತು ಪಾಚಿಗಟ್ಟುವುದಕ್ಕೆ ಮುಖ್ಯ ಕಾರಣಗಳು ನಾವು ಏನನ್ನು ತಿನ್ನುತ್ತೇವೆ, ಕುಡಿಯುತ್ತೇವೆ ಎಂಬುದು, ವಯಸ್ಸಾಗುವುದು ಮತ್ತು ಹಲ್ಲಿನ ಗಾಯಗಳು’. ಆಹಾರ, ಪಾನೀಯ ಮತ್ತು ತಂಬಾಕು. ಕೆಲವು ಬಗೆಯ ಆಹಾರ ಮತ್ತು ಪಾನೀಯಗಳು ನಿಮ್ಮ ಹಲ್ಲುಗಳ ಸಂರಚನೆಯ ಹೊರ ಪದರಗಳನ್ನು ಕೂಡ ತಲುಪಬಲ್ಲವು ಮತ್ತು ಹಲ್ಲುಗಳ ಬಣ್ಣಗೆಡಿಸಬಲ್ಲವು. ಹಲ್ಲುಗಳನ್ನು ಬಣ್ಣಗೆಡಿಸಬಲ್ಲ ಇಂತಹ ಕೆಲವು ಆಹಾರ ಮತ್ತು ಪಾನೀಯಗಳೆಂದರೆ:

– ಕೆಂಪು ಸಾಸ್‌ಗಳು – ಕೆಂಪು ವೈನ್‌ – ಚಹಾ – ಕಾಫಿ -ಚಾಕೊಲೇಟ್‌ ಸಿಗರೇಟು ಸೇದುವುದು ಅಥವಾ ತಂಬಾಕನ್ನು ಜಗಿಯುವ ರೂಪಗಳಲ್ಲಿ ತಂಬಾಕಿನ ಬಳಕೆಯಿಂದ ಹಲ್ಲುಗಳು ಬಣ್ಣಗೆಡುತ್ತವೆ.

ಪಾಚಿಗಟ್ಟುವುದರ ವಿಧಗಳು ಹಲ್ಲುಗಳು ಪಾಚಿಗಟ್ಟುವುದು ಮುಖ್ಯವಾಗಿ ಮೂರು ವರ್ಗಗಳಲ್ಲಿರುತ್ತದೆ: ಬಾಹ್ಯ, ಆಂತರಿಕ , ವಯೋಸಂಬಂಧಿ

ಬಾಹ್ಯ: ಬಾಹ್ಯ ಪಾಚಿಗಟ್ಟಿರುವುದರಲ್ಲಿ ಪಾಚಿಗಟ್ಟುವುದು ಹಲ್ಲಿನ ಎನಾಮಲ್‌ ಅಥವಾ ಹಲ್ಲಿನ ಮೇಲ್ಮೆ„ಯ ಮೇಲೆ ಮಾತ್ರ ಪರಿಣಾಮ ಬೀರಿರುತ್ತದೆ. ಬಾಹ್ಯ ಪಾಚಿಗಟ್ಟಿರುವುದಕ್ಕೆ ಬಹು ಸಾಮಾನ್ಯ ಕಾರಣಗಳೆಂದರೆ: -ಆಹಾರ

-ತಂಬಾಕು

-ಪಾನೀಯಗಳು

ಆಂತರಿಕ: ಈ ವಿಧವಾದ ಪಾಚಿಗಟ್ಟಿರುವುದು ಹಲ್ಲಿನ ಒಳಗೆ ಇರುತ್ತದೆ, ಇದು ಔಷಧ ಅಂಗಡಿಗಳಲ್ಲಿ ನೀವು ತೆಗೆದುಕೊಳ್ಳುವ ಹಲ್ಲು ಬಿಳುಪಾಗಿಸುವ ಉತ್ಪನ್ನಗಳಿಂದ ಹೋಗುವುದಿಲ್ಲ. ಇದು ಸಾಮಾನ್ಯವಾಗಿ ಕಂದುಬಣ್ಣದ್ದಾಗಿರುತ್ತದೆ. ಆಂತರಿಕ ಪಾಚಿಗಟ್ಟುವುದಕ್ಕೆ ಉದಾಹರಣೆಗಳು: – ಕೆಲವು ಔಷಧಗಳು – ಹಲ್ಲಿಗೆ ಅಪಘಾತ ಅಥವಾ ಗಾಯ – ಹಲ್ಲು ಹುಳುಕಾಗುವುದು – ಫ್ಲೋರೈಡ್‌ ಅಂಶ ಹೆಚ್ಚಾಗುವುದು – ವಂಶವಾಹಿ ಕಾರಣಗಳು

ವಯೋಸಂಬಂಧಿ: ವಯಸ್ಸಾದಂತೆ ಹಲ್ಲುಗಳ ಎನಾಮಲ್‌ ಕ್ಷಯಿಸಲು ಆರಂಭವಾಗುತ್ತದೆ, ಇದರಿಂದಾಗಿ ಹಲ್ಲುಗಳು ಹಳದಿ ವರ್ಣದವಾಗಿ ಕಾಣುತ್ತವೆ. ಅನೇಕ ಸಂದರ್ಭಗಳಲ್ಲಿ ವಯೋಸಂಬಂಧಿ ಬಣ್ಣಗೆಡುವಿಕೆಯು ಆಂತರಿಕ ಮತ್ತು ಬಾಹ್ಯ ಕಾರಣಗಳೆರಡರಿಂದಲೂ ಸಂಭವಿಸಬಹುದು.

ಹಲ್ಲುಗಳು ಬೇರೆ ಬಣ್ಣಕ್ಕೆ ತಿರುಗುವುದು ಹಳದಿ: ಧೂಮಪಾನ ಮಾಡುವವರು ಅಥವಾ ತಂಬಾಕು ಜಗಿಯುವವರ ಹಲ್ಲುಗಳಲ್ಲಿ ಹಳದಿ ಕಲೆಗಳು ಉಂಟಾಗಬಹುದು. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಈ ಕೆಳಗಿನವು ಕೂಡ ಕಾರಣವಾಗಬಹುದು: – ಚಹಾ, ಕಾಫಿ ಅಥವಾ ಕೆಂಪು ವೈನ್‌ -ಸರಳ ಸಕ್ಕರೆ ಹೆಚ್ಚು ಪ್ರಮಾಣದಲ್ಲಿರುವ ಆಹಾರ – ಕೆಲವು ಔಷಧಗಳು – ಬಾಯಿಯ ಕಳಪೆ ನೈರ್ಮಲ್ಯ – ದೀರ್ಘ‌ಕಾಲದಿಂದ ಬಾಯಿ ಒಣಗಿರುವುದು

ಕಂದು: ಹಲ್ಲುಗಳ ಮೇಲೆ ಕಂದು ಕಲೆಗಳು ಅಥವಾ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಕೆಲವು ಸಾಮಾನ್ಯ ಕಾರಣಗಳೆಂದರೆ: – ತಂಬಾಕು ಬಳಕೆ – ಚಹಾ, ಕಾಫಿ, ಕೋಲಾ ಮತ್ತು ಕೆಂಪು ವೈನ್‌ನಂತಹ ಪಾನೀಯಗಳು – ಬ್ಲೂಬೆರಿ, ಬ್ಲ್ಯಾಕ್‌ಬೆರಿ ಮತ್ತು ದಾಳಿಂಬೆಯಂತಹ ಹಣ್ಣುಗಳು – ಚಿಕಿತ್ಸೆ ನೀಡದ ಹಲ್ಲು ಹುಳುಕು – ಪಾಚಿ ಶೇಖರವಾಗುವುದು

ಬಿಳಿ: ದಂತಕುಳಿಯಿಂದಾಗಿ ಹಲ್ಲಿನ ಮೇಲೆ ಬಿಳಿ ಕಲೆ ಉಂಟಾಗಬಹುದು. ಕುಳಿ ಉಲ್ಬಣಗೊಳ್ಳುತ್ತಿದ್ದಂತೆ ಇದು ಗಾಢವಾಗುತ್ತದೆ. ಫ್ಲೋರೈಡ್‌ ಪ್ರಮಾಣ ಹೆಚ್ಚಿರುವುದರಿಂದಲೂ ಹಲ್ಲುಗಳ ಮೇಲೆ ಬಿಳಿ ಕಲೆ ಕಾಣಿಸಿಕೊಳ್ಳಬಹುದು.

ಕಪ್ಪು: ಹಲ್ಲುಗಳ ಮೇಲೆ ಕಪ್ಪು ಕಲೆ ಅಥವಾ ಕೊಳಕು ಈ ಕೆಳಗಿನ ಕಾರಣಗಳಿಂದ ಉಂಟಾಗಬಹುದು: – ಮುಂದುವರಿದ ಸ್ಥಿತಿಯಲ್ಲಿರುವ ದಂತಕುಳಿ – ಸಿಲ್ವರ್‌ ಸಲ್ಫೆ„ಡ್‌ ಹೊಂದಿರುವ ಫಿಲ್ಲಿಂಗ್‌ ಮತ್ತು ಕ್ರೌನ್‌ಗಳು – ದ್ರವರೂಪದ ಕಬ್ಬಿಣಾಂಶ ಪೂರಕ ಆಹಾರಗಳು

ನೇರಳೆ: ನಿಯಮಿತವಾಗಿ ವೈನ್‌ ಸೇವಿಸುವ ಅಭ್ಯಾಸ ಹೊಂದಿರುವವರ ಹಲ್ಲುಗಳು ಸ್ವಲ್ಪ ನೇರಳೆ ವರ್ಣಕ್ಕೆ ತಿರುಗಬಹುದು.

ಪಾಚಿಗಟ್ಟಿರುವುದನ್ನು ನಿವಾರಿಸಲು ನೀವೇನು ಮಾಡಬಹುದು? ಹಲ್ಲುಗಳು ಪಾಚಿಗಟ್ಟಿರುವುದನ್ನು ನಿವಾರಿಸಲು ಅಥವಾ ಕಡಿಮೆ ಮಾಡಲು ಅನೇಕ ಉತ್ಪನ್ನಗಳು ಮತ್ತು ಚಿಕಿತ್ಸೆಗಳು ಲಭ್ಯವಿವೆ. ಸಾಮಾನ್ಯವಾಗಿ ಹೇಳುವುದಾದರೆ ಹಲ್ಲು ಬಿಳುಪು ಮಾಡುವ ಆಯ್ಕೆಗಳಲ್ಲಿ ಮೂರು ವಿಭಾಗಗಳಿವೆ:

ಕ್ಲಿನಿಕ್‌ನಲ್ಲಿ ಚಿಕಿತ್ಸೆ: ನಿಮ್ಮ ದಂತವೈದ್ಯರು ಸಾಮಾನ್ಯವಾಗಿ ಹಲ್ಲಿನ ಕಲೆಗಳನ್ನು ನಿವಾರಿಸಿ ಬಿಳುಪುಗೊಳಿಸಲು ಮನೆಗಳಲ್ಲಿ ಉಪಯೋಗಿಸುವುದಕ್ಕಿಂತ ಹೆಚ್ಚು ಸಾಂದ್ರತೆಯ ಹೈಡ್ರೋಜನ್‌ ಪೆರಾಕ್ಸೆ„ಡ್‌ ಉಪಯೋಗಿಸುತ್ತಾರೆ. ಕ್ಲಿನಿಕ್‌ನಲ್ಲಿ ನೀಡುವ ಚಿಕಿತ್ಸೆ ಹೆಚ್ಚು ಕ್ಷಿಪ್ರವಾಗಿ ಫ‌ಲಿತಾಂಶ ನೀಡುತ್ತದೆ ಮತ್ತು ಇತರ ವಿಧಾನಗಳಿಗಿಂತ ಹೆಚ್ಚು ದೀರ್ಘ‌ಕಾಲ ಬಾಳಿಕೆ ಹೊಂದಿರುತ್ತದೆ.

ದಂತವೈದ್ಯರ ಮೂಲಕ ಮನೆಯಲ್ಲಿ ಚಿಕಿತ್ಸೆ. ಮನೆಯಲ್ಲಿ ಹಲ್ಲುಗಳ ಮೇಲೆ ಇರಿಸಿಕೊಳ್ಳುವುದಕ್ಕಾಗಿ ದಂತವೈದ್ಯರು ನಿಮ್ಮ ಹಲ್ಲುಗಳಿಗೆ ಸರಿಹೊಂದುವ ಟ್ರೇಗಳನ್ನು ತಯಾರಿಸಿ ನೀಡುತ್ತಾರೆ, ಈ ಟ್ರೇಗೆ ವೈದ್ಯರು ನೀಡುವ ಜೆಲ್‌ ಹಾಕಿ ದಿನಕ್ಕೆ ಒಂದು ತಾಸು ಅಥವಾ ವೈದ್ಯರು ಹೇಳಿದಷ್ಟು ಹೊತ್ತು ಹಲ್ಲುಗಳ ಮೇಲಿರಿಸಬೇಕು. ಉತ್ತಮ ಫ‌ಲಿತಾಂಶ ಸಿಗಲು ಕೆಲವು ವಾರಗಳ ಕಾಲ ಹೀಗೆ ಟ್ರೇ ಇರಿಸಿಕೊಳ್ಳಬೇಕಾಗಬಹುದು.

ಇಲ್ಲಿ ನೀಡಲಾದ ಮಾಹಿತಿ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಮನೆಮದ್ದು ಆಧರಿಸಿದ ಸಾಮಾನ್ಯ ಮಾಹಿತಿಯಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?