Art Of Yoga: ಮನುಷ್ಯನ ಹೃದಯಬಡಿತಕ್ಕೆ ಕಾರಣವಾಗುವ ಪ್ರಾಣವಾಯು ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಾಣವಾಯು: ಹೃದಯ ಬಡಿತ( Heart Beat)ಕ್ಕೆ ಕಾರಣವೇ ಪ್ರಾಣವಾಯು(Prana Vayu) ಅದರ ಸ್ಥಳ ಹೃದಯ, ಪ್ರಾಣವಾಯು ಹೃದಯದಲ್ಲಿ ನೆಲೆಗೊಂಡಿದ್ದು, ಅದರ ಶಕ್ತಿಯು ಎದೆಯ ಪ್ರದೇಶವನ್ನು ವ್ಯಾಪಿಸುತ್ತದೆ.
ಹೃದಯ ಬಡಿತ( Heart Beat)ಕ್ಕೆ ಕಾರಣವೇ ಪ್ರಾಣವಾಯು(Prana Vayu) ಅದರ ಸ್ಥಳ ಹೃದಯ, ಪ್ರಾಣವಾಯು ಹೃದಯದಲ್ಲಿ ನೆಲೆಗೊಂಡಿದ್ದು, ಅದರ ಶಕ್ತಿಯು ಎದೆಯ ಪ್ರದೇಶವನ್ನು ವ್ಯಾಪಿಸುತ್ತದೆ. ಪ್ರಾಣವಾಯು ಎಂದರೆ ‘ಮುಂದಕ್ಕೆ ಚಲಿಸುವ ಗಾಳಿ( Moving Air)’ ಎಂದು ಹೇಳಬಹುದು. ಪ್ರಾಣ ವಾಯುವು ಮೂಗಿನ ಮುಖಾಂತರ ಹೃದಯವನ್ನು ಪ್ರವೇಶಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೂ ಇದು ರವಾನೆಯಾಗುತ್ತದೆ. ಅದಕ್ಕೆ ಇದನ್ನು ಪ್ರಾಣ ವಾಯು ಎನ್ನುತ್ತಾರೆ ಮತ್ತು ಪಂಚ ಪ್ರಾಣಗಳಲ್ಲಿ ಇದು ಮೊದಲನೆಯದು.
ಆಹಾರ, ಗಾಳಿ, ಇಂದ್ರಿಯಗಳು ಮತ್ತು ಆಲೋಚನೆಗಳು ಇವಿಷ್ಟನ್ನು ಈ ಪ್ರಾಣವಾಯು ನಿಯಂತ್ರಿಸುತ್ತದೆ. ಈ ವಾಯುವು ದೇಹದಲ್ಲಿನ ಮೂಲಭೂತ ಶಕ್ತಿಯಾಗಿದೆ ಮತ್ತು ನಾಲ್ಕು ಇತರ ವಾಯುಗಳನ್ನು ಕೂಡ ಇದು ಪೋಷಿಸುತ್ತದೆ.
ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಈ ಜ್ವಾಲೆ ಮೇಲ್ಮುಖವಾಗಿ ಹರಿಯುವಂತದ್ದು, ಉಸಿರಾಟದ ಪ್ರಕ್ರಿಯೆಯನ್ನು ನಿರ್ವಹಿಸುವುದೇ ಈ ಪ್ರಾಣ ವಾಯು. ನಾವು ಗಂಟಲಿನ ಬಳಿ ಒಂದು ಬಂಧವನ್ನು ಪ್ರಾಕ್ಟೀಸ್ ಮಾಡಲಾಗುತ್ತದೆ ಅದುವೇ ಜಾಲೇಂದ್ರ ಬಂಧ. ಗಂಟಲಿನಿಂದ ಹೊಕ್ಕಳಿಗೆ ಹಾಗೂ ಹೊಕ್ಕಳಿನಿಂದ ಗಂಟಲಿಗೆ ಗಾಳಿಯ ಸಂಚಾರವಾಗುತ್ತಿರುತ್ತದೆ.
ಉಸಿರಾಟದ ಅಂಗಾಂಗಗಳು, ಮಾತು ಇವುಗಳಿಗೆ ಸಂಬಂಧಪಟ್ಟ ಮಾಂಸಖಂಡಗಳನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವಾಯುವಿನ ಹರಿವಿನಿಂದ ಸಂವೇದನೆ, ಭಾವನೆಗಳ ಅನುಭವ ಆಗುತ್ತದೆ. ಅಷ್ಟೆ ಅಲ್ಲದೆ ಈ ಪ್ರಾಣ ವಾಯುವು ಮನಸ್ಸಿನ ಹತೋಟಿಗೂ ಕಾರಣ ಆಗಿದೆ.
ಅದರ ಅರಿವು ಹರಿವು ಒಳಮುಖವಾಗಿ ಮತ್ತು ಮೇಲಕ್ಕೆ ಇರುತ್ತದೆ. ಇದು ಮೆದುಳು ಮತ್ತು ಕಣ್ಣುಗಳನ್ನು ಪೋಷಿಸುತ್ತದೆ ಮತ್ತು ದೇಹದ ಎಲ್ಲಾ ಭಾಗಗಳನ್ನು ನಿಯಂತ್ರಿಸುತ್ತದೆ.
ವಾಯು ಸಮತೋಲನ ಕಳೆದುಕೊಂಡರೆ ಏನಾಗುತ್ತದೆ? ಈ ವಾಯುವು ದುರ್ಬಲವಾದಾಗ, ಮನಸ್ಸು ಕೇಂದ್ರೀಕರಿಸಲು ಸಾಧ್ಯವಿಲ್ಲ ಮತ್ತು ಅತಿಯಾದ ಚಿಂತೆ, ಖಿನ್ನತೆಯನ್ನು ಅನುಭವಿಸಬೇಕಾಗುತ್ತದೆ. ಉಸಿರಾಟದ ತೊಂದರೆ, ಆತಂಕ, ದೇಹ ದುರ್ಬಲವಾಗುತ್ತದೆ.
ಸಮತೋಲನ ಕಾಯ್ದುಕೊಳ್ಳುವುದು ಹೇಗೆ? ಪ್ರಾಣ ಮುದ್ರಾ ಸೇರಿದಂತೆ ಪ್ರಾಣಾಯಾಮ, ಯೋಗಗಳ ಮೂಲಕ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ.
ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Wed, 18 May 22