
ಎಷ್ಟೇ ವಯಸ್ಸಾದರೂ ತ್ವಚೆ ಮಾತ್ರ ಯೌವನದಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಸ್ಕಿನ್‌ಕೇರ್ (skincare) ರೂಟೀನ್‌ಗಳನ್ನು ಸಹ ಪಾಲಿಸುತ್ತಾರೆ. ಹೀಗಿದ್ದರೂ 30 ರಿಂದ 40 ದಾಟುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಲಾರಂಭಿಸುತ್ತದೆ, ತ್ವಚೆಯ ಕಾಂತಿಯೂ ಸಹ ಕುಂದುತ್ತದೆ. ಯೌವನದಲ್ಲಿ ಪಾಲಿಸುತ್ತಿದ್ದ ಸ್ಕಿನ್‌ಕೇರ್‌ಗಳನ್ನೇ ಈಗಲೂ ಮಾಡುತ್ತಿದ್ದೇನೆ ಅದ್ರೂ ತ್ವಚೆ ತುಂಬಾನೇ ಡಲ್ ಆಗಿ ಕಾಣಿಸುತ್ತದೆ ಎಂದು ಹಲವರು ಹೇಳುತ್ತಾರೆ. ವಯಸ್ಸಾದ ಮೇಲೂ ತ್ವಚೆ ಯೌವನದಿಂದ ಕೂಡಿರಬೇಕೆಂದರೆ ಪ್ರಾಯಕ್ಕೆ ತಕ್ಕಂತೆ ಸ್ಕಿನ್‌ಕೇರ್ ಕೂಡ ಬದಲಾಗಬೇಕು, ಆಹಾರ ಪದ್ಧತಿಯಲ್ಲೂ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಬೇಕು. ಒಟ್ಟಾರೆಯಾಗಿ 30 ರಿಂದ 40 ವರ್ಷದೊಳಗಿನವರ ತ್ವಚೆಯ ಆರೈಕೆ ಹೇಗಿದ್ದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.
20 ರಿಂದ 30 ವರ್ಷ ವಯಸ್ಸಿನಲ್ಲಿ ಯಾವ ರೀತಿ ಸ್ಕಿನ್ ಕೇರ್ ಮಾಡುತ್ತಿದ್ದರೋ, ಆ ಸ್ಕಿನ್‌ಕೇರ್ 30 ವರ್ಷಗಳ ನಂತರ ಉತ್ತಮ ಫಲಿತಾಂಶವನ್ನು ನೀಡದಿರಬಹುದು. ಕಾಲಜನ್ ಉತ್ಪಾದನೆ, ಸೆಲ್ ಟರ್ನ್‌ಓವರ್, ಚರ್ಮದ ರಕ್ಷಣಾತ್ಮಕ ಪದರಗಳಲ್ಲಿ ಆಗುವ ಬದಲಾವಣೆಗಳಿಂದ ಈ ಸಮಯದಲ್ಲಿ ಉತ್ತಮ ಫಲಿತಾಂಶ ದೊರೆಯುವುದಿಲ್ಲ. ಹಾಗಾಗಿ ಆಹಾರದ ಜೊತೆಗೆ ತ್ವಚೆಯ ಆರೈಕೆಯಲ್ಲಿ 30 ರಿಂದ 40 ವರ್ಷದವರು ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ದೆಹಲಿಯ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಡರ್ಮಟಾಲಜಿ ಡಿಪಾರ್ಟ್‌ಮೆಂಟ್‌ನ ಹಿರಿಯ ಸಲಹೆಗಾರ ಡಾ. ಸಂದೀಪ್ ಅರೋರಾ ನ್ಯೂಸ್ 9 ಡಿಜಿಟಲ್ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಡಾ. ಅರೋರಾ ಅವರ ಪ್ರಕಾರ, 30 ವರ್ಷಕ್ಕೂ ಮುನ್ನ ನಮ್ಮ ಚರ್ಮವು ಕಾಲಜನ್, ಎಲಾಸ್ಟಿನ್ ಮತ್ತು ಹೈಲುರಾನಿಕ್ ಆಮ್ಲದ ಹೆಚ್ಚಿನ ಪೂರೈಕೆಯನ್ನು ಹೊಂದಿರುತ್ತದೆ, ಇದು ಚರ್ಮವನ್ನು ಯಾವುದೇ ಹಾನಿಯಿಂದ ಹೆಚ್ಚು ಪರಿಣಾಮಕಾರಿಯಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ನೀವು 30 ಮತ್ತು 40 ವರ್ಷಕ್ಕೆ ಕಾಲಿಡುತ್ತಿದ್ದಂತೆ, ನಿಮ್ಮ ಚರ್ಮವು ವರ್ಷಕ್ಕೆ ಶೇಕಡಾ 1 ರಷ್ಟು ಕಡಿಮೆ ಕಾಲಜನ್ ಉತ್ಪಾದಿಸಲು ಪ್ರಾರಂಭಿಸುತ್ತದೆ, ಇದರೊಂದಿಗೆ, ಜೀವಕೋಶದ ಚಟುವಟಿಕೆ ಮತ್ತು ತ್ವಚೆಯ ತೇವಾಂಶ ಕಡಿಮೆಯಾಗುತ್ತದೆ. ಹಾರ್ಮೋನುಗಳ ಬದಲಾವಣೆಗಳು, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ಮಾಲಿನ್ಯ ಇವೆಲ್ಲವೂ ಈ ಬದಲಾವಣೆಗಳನ್ನು ಮತ್ತಷ್ಟು ವೇಗಗೊಳಿಸಬಹುದು. ಅಂತಿಮವಾಗಿ ಇದು ಸುಕ್ಕುಗಳು, ಶುಷ್ಕತೆ ಮತ್ತು ಚರ್ಮ ಮಂದವಾಗಿ ಕಾಣಿಸಲು ಕಾರಣವಾಗಬಹುದು. ಹಾಗಾಗಿ ಚರ್ಮದ ಆರೋಗ್ಯವನ್ನು ಬೆಂಬಲಿಸುವ ಆಹಾರ ಪದಾರ್ಥಗಳ ಸೇವನೆಗೆ ಹಾಗೂ ಸರಿಯಾದ ಸ್ಕಿನ್‌ಕೇರ್ ಮೇಲೆ ಗಮನಹರಿಸಬೇಕು ಡಾ. ಅರೋರಾ ಎಂದಿದ್ದಾರೆ.
ಈ ವಯಸ್ಸಿನಲ್ಲಿ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಚರ್ಮದ ದೃಢತೆ ಮತ್ತು ಸ್ಥಿತಿಸ್ಥಾಪಕತ್ವದ ಮೇಲೆ ಪರಿಣಾಮ ಬೀರುತ್ತದೆ, ನಿಧಾನಗತಿಯ ಕೋಶ ಪುನರುತ್ಪಾದನೆಯು ಚರ್ಮದ ಚರ್ಮವನ್ನು ಮಂದವಾಗಿ ಕಾಣುವಂತೆ ಮಾಡುತ್ತದೆ. ಹಾರ್ಮೋನುಗಳಲ್ಲಿನ ಬದಲಾವಣೆಗಳು ಚರ್ಮವು ನಿರ್ಜಲೀಕರಣ, ಹೈಪರ್ಪಿಗ್ಮೆಂಟೆಡ್, ಮೊಡವೆಗಳಿಂದ ಕೂಡಿರುವಂತೆ ಮಾಡಬಹುದು. ಅಲ್ಲದೆ ಸ್ಕಿನ್ ಬ್ಯಾರಿಯರ್ ಅಂದರೆ ಚರ್ಮದ ರಕ್ಷಣಾತ್ಮಕ ಪದರ ದುರ್ಬಲವಾಗಬಹುದು. ಚರ್ಮವು ತೇವಾಂಶವನ್ನು ಕಳೆದುಕೊಳ್ಳಬಹುದು. ಆದ್ದರಿಂದ ಉತ್ತಮ ಜಲಸಂಚಯನವನ್ನು ಒದಗಿಸುವ, ಚರ್ಮದ ರಕ್ಷಣಾತ್ಮಕ ಪದರವನ್ನು ಬಲಗೊಳಿಸುವ ಆಹಾರ ಹಾಗೂ ಉತ್ಕರ್ಷಣ ನಿರೋಧಕಗಳು ಮತ್ತು ಕಾಲಜನ್ ಉತ್ಪತ್ತಿಸಲು ಸಹಾಯ ಮಾಡುವ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದಿದ್ದಾರೆ ಡಾ. ಅರೋರಾ.
ರೆಟಿನಾಯ್ಡ್‌ಗಳು ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುವ, ಜೀವಕೋಶದ ವಹಿವಾಟನ್ನು ಹೆಚ್ಚಿಸುವ ಆಹಾರವನ್ನು ಸೇವನೆ ಮಾಡಬೇಕು. ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ಆಹಾರಗಳು ಉತ್ಕರ್ಷಣ ನಿರೋಧಕ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಹೈಲುರಾನಿಕ್ ಆಮ್ಲ ಮತ್ತು ಸೆರಾಮಿಡ್‌ಗಳನ್ನು ಹೊಂದಿರುವ ಆಹಾರ ಪದಾರ್ಥ ಚರ್ಮದ ರಕ್ಷಣಾತ್ಮಕ ಪದರವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಪೆಪ್ಟೈಡ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ ಚರ್ಮದ ದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಈ ಆಹಾರಗಳನ್ನು ಸೇವಿಸಿ
ಬೆಳಗ್ಗೆ ಮೊದಲು ಕ್ಲೆನ್ಸರ್‌ನಿಂದ ಮುಖವನ್ನು ತೊಳೆಯಬೇಕು. ಮುಖ ಸ್ವಚ್ಛವಾಗಿ ತೊಳೆದ ನಂತರ ವಿಟಮಿನ್ ಸಿ ಹೊಂದಿರುವ ಆಂಟಿಆಕ್ಸಿಡೆಂಟ್ ಸೀರಮ್ ಬಳಸಬೇಕು. ಇದಾದ ನಂತರ ಸೆರಾಮೈಡ್‌ಗಳು ಮತ್ತು ಹೈಲುರಾನಿಕ್ ಆಮ್ಲವನ್ನು ಹೊಂದಿರುವ ಮಾಯಿಶ್ಚರೈಸರ್ ಹಚ್ಚಬೇಕು. ಅಂತಿಮ ಮತ್ತು ಅಗತ್ಯ ಹಂತವೆಂದರೆ SPF 30 ಅಥವಾ ಅದಕ್ಕಿಂತ SPF ಹೊಂದಿರುವ ಸನ್‌ಸ್ಕ್ರೀನ್ ಹಚ್ಚವುದು. ಪ್ರತಿನಿತ್ಯ ಈ ಸ್ಕಿನ್‌ಕೇರ್ ರೂಟೀನ್ ಪಾಲಿಸಲೇಬೇಕು.
ರಾತ್ರಿಯಲ್ಲಿ, ಕಾಲಜನ್ ಉತ್ಪಾದನೆ ಮತ್ತು ಚರ್ಮ ಕೋಶಗಳ ಪುನರುತ್ಪಾದನೆಯನ್ನು ಬೆಂಬಲಿಸುವ ರೆಟಿನಾಯ್ಡ್‌ಗಳು ಅಥವಾ ರೆಟಿನಾಲ್ ಅಂಶಗಳಿಂದ ಕೂಡಿರುವ ಕ್ಲೆನ್ಸರ್‌ನಿಂದ ಮುಖವನ್ನು ತೊಳೆಯಬೇಕು. ನಂತರ ಮಾಯಿಶ್ಚರೈಸರ್ ಹಚ್ಚಬೇಕು.
30 ರಿಂದ 40 ವರ್ಷದವರ ತ್ವಚೆಯ ಆರೈಕೆಯಲ್ಲಿ ಈ ತಪ್ಪುಗಳನ್ನು ಮಾಡಬಾರದು:
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ