ಎಂದಾದರೂ ಅಂಜೂರ ಎಲೆಯ ಚಹಾ ಕುಡಿದಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಅಂಜೂರದ ಹಣ್ಣು ಅದರ ರುಚಿ ಮತ್ತು ಅದರಿಂದ ಸಿಗುವ ಪ್ರಯೋಜನಗಳಿಗೆ ಪ್ರಸಿದ್ಧವಾಗಿದೆ. ಆದರೆ ಅಂಜೂರ ಮರದ ಎಲೆಗಳು ಕೂಡ ಅನೇಕ ರೀತಿಯ ಔಷಧೀಯ ಗುಣಗಳಿಗೆ ಹೆಸರುವಾಸಿ ಎಂಬುದು ಹಲವರಿಗೆ ತಿಳಿದಿಲ್ಲ. ಅದರಲ್ಲಿಯೂ ಈ ಎಲೆಗಳಿಂದ ಚಹಾ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲ, ಇದು ದೇಹಕ್ಕೆ ಹೊಸದಾದ ಚೈತನ್ಯ ನೀಡುತ್ತದೆ. ಹಾಗಾದರೆ ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಸರಳವಾದ ಪಾಕವಿಧಾನ ಇಲ್ಲಿದೆ.

ಎಂದಾದರೂ ಅಂಜೂರ ಎಲೆಯ ಚಹಾ ಕುಡಿದಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ
Fig Leaf Tea

Updated on: Jul 04, 2025 | 9:15 PM

ಅಂಜೂರ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಅಂಜೂರ ಎಲೆಗಳಲ್ಲಿಯೂ ಅನೇಕ ರೀತಿಯ ಔಷಧೀಯ ಗುಣಗಳಿಗೆ ಎಂಬುದು ಹಲವರಿಗೆ ತಿಳಿದಿಲ್ಲ. ಆದರೆ ಅಂಜೂರ ಎಲೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಈ ಅಂಜೂರ ಎಲೆಗಳನ್ನು ಬಳಸಿಕೊಳ್ಳುವ ಸರಳ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಅದು, ಅಂಜೂರ ಎಲೆಯಿಂದ ಚಹಾ (Fig Leaf Tea) ತಯಾರಿಸುವುದು. ಕೇಳುವುದಕ್ಕೆ ಬಹಳ ವಿಚಿತ್ರವೆನಿಸಿದರೂ ಕೂಡ ಇದು ಮಧುಮೇಹ ನಿರ್ವಹಣೆಗೆ ಅತ್ಯುತ್ತಮ ಸೇರ್ಪಡೆ ಎಂದರೆ ತಪ್ಪಾಗಲಾರದು. ಈ ಎಲೆಯ ಆರೋಗ್ಯ (Health) ಪ್ರಯೋಜನವನ್ನು ಸರಳವಾಗಿ ಆನಂದಿಸಲು ಇದಕ್ಕಿಂತ ಒಳ್ಳೆಯ ದಾರಿ ಬೇರೆ ಯಾವುದು ಇಲ್ಲ. ಹಾಗಾದರೆ ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಸರಳವಾದ ಪಾಕವಿಧಾನ ಇಲ್ಲಿದೆ.

ಅಂಜೂರ ಎಲೆಯ ಚಹಾ ಮಾಡಲು ಬೇಕಾಗುವ ಸಾಮಗ್ರಿಗಳು

  • ತಾಜಾ ಅಥವಾ ಒಣಗಿದ ಅಂಜೂರದ ಎಲೆಗಳು
  • ನೀರು

ಮಾಡುವ ವಿಧಾನ:

  • ಅಂಜೂರದ ಎಲೆಗಳು ತಾಜವಾಗಿದ್ದರೆ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸುವ ಮೂಲಕ ಪ್ರಾರಂಭಿಸಿ. ಒಣಗಿದ ಎಲೆಗಳನ್ನು ಬಳಸುತ್ತಿದ್ದರೆ, ಅವು ಈಗಾಗಲೇ ಕುದಿಸಲು ಸೂಕ್ತವಾದ ರೂಪದಲ್ಲಿರುತ್ತದೆ.
  • ಪ್ರತಿ ಕಪ್ ಚಹಾಕ್ಕೆ ಸುಮಾರು ಒಂದು ಟೀ ಚಮಚ ಕತ್ತರಿಸಿದ ಅಂಜೂರದ ಎಲೆಗಳನ್ನು ಹಾಕಬೇಕು.
  • ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಅಂಜೂರದ ಎಲೆಗಳನ್ನು ಸೇರಿಸಿ. ಅವುಗಳನ್ನು ಸುಮಾರು 15 ನಿಮಿಷಗಳ ಕಾಲ ಕುದಿಯಲು ಬಿಡಿ. ಈ ಪ್ರಕ್ರಿಯೆಯು ಎಲೆಗಳಿಂದ ಪ್ರಯೋಜನಕಾರಿ ಸಂಯುಕ್ತಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.
  • ಚೆನ್ನಾಗಿ ಕುದಿ ಬಂದ ಮೇಲೆ ಆ ಮಿಶ್ರಣವನ್ನು ಸೋಸಿಕೊಳ್ಳಿ. ಈಗ ಬಿಸಿ ಬಿಸಿ ಚಹಾ ಕುಡಿಯಲು ಸಿದ್ದವಾಗಿರುತ್ತದೆ.

ಇದನ್ನೂ ಓದಿ: ಮಧುಮೇಹ ಇದ್ಯಾ? ಹಾಗಿದ್ರೆ ಈ ಹಣ್ಣಿನ ಎಲೆ ಸೇವಿಸಿ ನೋಡಿ, ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ

ಈ ಚಹಾ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು:

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು, ಪ್ರತಿದಿನ 1- 2 ಕಪ್ ಕುಡಿಯಬಹುದು. ವೈದ್ಯರು ಕೂಡ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.
ಈ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ದೇಹ ಶಾಂತಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಈ ಚಹಾವನ್ನು ದಿನದ ಯಾವುದೇ ಸಮಯದಲ್ಲಾದರು ಆನಂದಿಸಬಹುದು.

ಇದನ್ನೂ ಓದಿ
ಈ ಚಿತ್ರ ತಿಳಿಸುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ
ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ
ಶಾಪಿಂಗ್‌ ಮಾಡುವಾಗ ಹಣ ಉಳಿಸಲು ಈ ಸಲಹೆ ಪಾಲಿಸಿ

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ