ನಿಮ್ಮ ಮಕ್ಕಳು ಊಟ ಮಾಡುವಾಗ ಟಿವಿ ಹಾಕಬೇಡಿ; ಅಚ್ಚರಿಯ ಕಾರಣ ಇಲ್ಲಿದೆ

Child Care: ಈಗಿನ ಮಕ್ಕಳಂತೂ ಮೊಬೈಲ್, ಟಿವಿಗೆ ಸಂಪೂರ್ಣ ದಾಸರಾಗಿಬಿಟ್ಟಿರುತ್ತಾರೆ. ಟಿವಿ ಹಾಕದಿದ್ದರೆ ಅಥವಾ ಮೊಬೈಲ್​ನಲ್ಲಿ ಅವರಿಗಿಷ್ಟವಾದ ವಿಡಿಯೋ ಹಾಕದಿದ್ದರೆ ಊಟವನ್ನೇ ಮಾಡುವುದಿಲ್ಲ ಎಂದು ಹಠ ಮಾಡುತ್ತಾರೆ. ಆದರೆ, ಮಕ್ಕಳಿಗೆ ಟಿವಿ ತೋರಿಸುತ್ತಾ ಎಂದಿಗೂ ಊಟ ಮಾಡಿಸುವುದರಿಂದ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ನಿಮ್ಮ ಮಕ್ಕಳು ಊಟ ಮಾಡುವಾಗ ಟಿವಿ ಹಾಕಬೇಡಿ; ಅಚ್ಚರಿಯ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 15, 2024 | 12:01 PM

ಪೋಷಕರು ತಮ್ಮ ಮಗುವನ್ನು (Child Care) ಬೆಳೆಸಲು ಯಾವ ವಿಧಾನವನ್ನು ಆಯ್ಕೆ ಮಾಡುತ್ತಾರೆ ಎಂಬುದು ಅವರ ಸಮಗ್ರ ಬೆಳವಣಿಗೆಯ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ. ಇದು ದೈಹಿಕ ಮತ್ತು ಭಾವನಾತ್ಮಕ ಅಂಶಗಳೆರಡನ್ನೂ ಒಳಗೊಂಡಿರುತ್ತದೆ. ಊಟದ ಸಮಯದಲ್ಲಿ ಪೋಷಕರು ಮಕ್ಕಳಿಗೆ ಸಮತೋಲಿತ ಪೋಷಣೆಯನ್ನು ಒದಗಿಸುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸುವುದು, ಮಗುವಿನ ದೈಹಿಕ ಆರೋಗ್ಯವನ್ನು ಹೆಚ್ಚಿಸಲು ವಿವಿಧ ಆಹಾರಗಳನ್ನು ಪರಿಚಯಿಸಲು ಆದ್ಯತೆ ನೀಡಬೇಕು. ಊಟದ ಸಮಯವು ತಮ್ಮ ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕಗಳನ್ನು ರೂಪಿಸಲು ಪೋಷಕರಿಗೆ ನೀಡಲಾಗುವ ಅಮೂಲ್ಯವಾದ ಅವಕಾಶವಾಗಿದೆ. ಈ ಮೂಲಕ ಪೋಷಕರು ತಮ್ಮ ಮಗುವಿನೊಂದಿಗಿನ ಬಂಧವನ್ನು ಬಲಪಡಿಸಬಹುದಾಗಿದೆ.

ಮಕ್ಕಳು ಊಟ ಮಾಡುವಾಗ ಟಿವಿಯನ್ನು ಏಕೆ ನೋಡಬಾರದು?:

ತಿನ್ನುವಾಗ ಮಕ್ಕಳಿಗೆ ಟಿವಿ ನೋಡಲು ಬಿಡುವುದು ಯಾಕೆ ಒಳ್ಳೆಯದಲ್ಲ ಎಂಬ ಬಗ್ಗೆ ಇಂಡಿಯಾ ಡಾಟ್ ಕಾಮ್​ಗೆ ಡಾ. ಹಿಮಾನಿ ನರುಲಾ ಮಾಹಿತಿ ನೀಡಿದ್ದಾರೆ. ಟಿವಿ ನೋಡುವುದು ಅಥವಾ ಊಟದ ಸಮಯದಲ್ಲಿ ಮೊಬೈಲ್ ಬಳಸುವುದರಿಂದ ಮಕ್ಕಳಿಗೆ ತಮಗೆ ಹಸಿವಾಗಿದ್ದು ಅಥವಾ ಹೊಟ್ಟೆ ತುಂಬಿದ್ದು ಎರಡರ ಕುರಿತೂ ಗಮನ ಇರುವುದಿಲ್ಲ. ಅವರಿಗೆ ಆ ಬಗ್ಗೆ ತಮ್ಮ ದೇಹ ನೀಡುವ ಸೂಚನೆ ಗೊತ್ತಾಗುವುದಿಲ್ಲ. ಇದು ಅತಿಯಾಗಿ ತಿನ್ನಲು ಕಾರಣವಾಗಬಹುದು ಅಥವಾ ಕಡಿಮೆ ತಿನ್ನುವುದು, ಸ್ಥೂಲಕಾಯತೆ ಅಥವಾ ಪೌಷ್ಟಿಕಾಂಶದ ಅಸಮತೋಲನದ ಅಪಾಯವನ್ನು ಹೆಚ್ಚಿಸಬಹುದು. ಊಟದ ಸಮಯದಲ್ಲಿ ಮಕ್ಕಳು ತಮ್ಮ ಆಹಾರದ ಮೇಲೆ ಮಾತ್ರ ಗಮನಹರಿಸುವಂತೆ ಪ್ರೋತ್ಸಾಹಿಸುವುದು ಜಾಗರೂಕತೆಯಿಂದ ತಿನ್ನುವ ಅಭ್ಯಾಸಗಳನ್ನು ಬೆಳೆಸುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ; ಈ ಲಕ್ಷಣಗಳನ್ನೆಂದೂ ನಿರ್ಲಕ್ಷ್ಯಿಸಬೇಡಿ

ಇದಿಷ್ಟೇ ಅಲ್ಲದೆ, ಟಿವಿಯಲ್ಲಿ ಬರುವ ಜಾಹೀರಾತುಗಳು ಕೂಡ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಟೆಲಿವಿಷನ್ ಜಾಹೀರಾತುಗಳು ಆಕರ್ಷಕ ದೃಶ್ಯಗಳು, ಮ್ಯೂಸಿಕ್ ಮೂಲಕ ಮಕ್ಕಳನ್ನು ಸೆಳೆಯುತ್ತವೆ. ಈ ಜಾಹೀರಾತುಗಳಲ್ಲಿ ಹೆಚ್ಚಿನವು ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಉತ್ಪನ್ನಗಳನ್ನು ಪ್ರಚಾರ ಮಾಡುತ್ತವೆ. ಇದನ್ನು ನೋಡಿ ಮಕ್ಕಳು ಆ ಆಹಾರವೇ ಬೇಕೆಂದು ಹಠ ಹಿಡಿಯಬಹುದು. ಇದು ಮಕ್ಕಳ ಆಹಾರದ ನಿರ್ಧಾರಗಳು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಊಟದ ಸಮಯದಲ್ಲಿ ಟಿವಿಗೆ ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸುವುದು ಆಹಾರದ ಆದ್ಯತೆಗಳ ಮೇಲೆ ಈ ಜಾಹೀರಾತುಗಳ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Child Health: ಮಗುವಿನ ಹೊಟ್ಟೆಯಲ್ಲಿ ಹುಳವಾದರೆ ಏನು ಮಾಡಬೇಕು?

ಹೀಗಾಗಿ, ಅಡುಗೆ ತಯಾರಿಸುವಾಗ ನಿಮ್ಮ ಮಕ್ಕಳನ್ನು ಕೂಡ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ. ಹಾಗೇ, ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಿ. ಆಗ ಮಕ್ಕಳಿಗೆ ಎಲ್ಲರೊಂದಿಗೆ ಕುಳಿತು ಊಟ ಮಾಡುವ, ಊಟವನ್ನು ಎಂಜಾಯ್ ಮಾಡುವ ಮನೋಭಾವ ಬೆಳೆಯುತ್ತದೆ. ಮಗುವಿನ ಮೇಲೆ ಆಹಾರ ಸೇವನೆಯನ್ನು ಹೇರುವುದು ಅಥವಾ ಶಿಕ್ಷೆಯ ಸಾಧನವಾಗಿ ಆಹಾರವನ್ನು ಬಳಸುವುದರಿಂದ ಅವರಿಗೆ ಊಟದ ಮೇಲೆ ತಿರಸ್ಕಾರ ಉಂಟಾಗಬಹುದು. ಮಗುವಿಗೆ ಎಂದಿಗೂ ಅತಿಯಾಗಿ ತಿನ್ನಿಸಬೇಡಿ. ಮಗುವಿಗೆ ಹಸಿವಾದಾಗ ಮಾತ್ರ ತಿನ್ನಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್