Child Health: ಮಗುವಿನ ಹೊಟ್ಟೆಯಲ್ಲಿ ಹುಳವಾದರೆ ಏನು ಮಾಡಬೇಕು?

ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ. ಅವರಿಗೆ ಬೇಗ ಸೋಂಕುಗಳು ತಗುಲುತ್ತವೆ. ಅದರಲ್ಲೂ 2 ವರ್ಷದೊಳಗಿನ ಮಕ್ಕಳ ಕೈಗಳು ಮತ್ತು ಮೈ ಗಲೀಜಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವರ ಕೈಗಳ ಉಗುರಿನ ಸಂದಿಯಲ್ಲೂ ಕೊಳಕು ತುಂಬಿರುತ್ತದೆ. ಇದರಿಂದ ಮಗುವಿನ ಹೊಟ್ಟೆಯಲ್ಲಿ ಹುಳ ಬೆಳೆಯುವ ಸಾಧ್ಯತೆ ಹೆಚ್ಚು. ಹೀಗಾದಾಗ ಏನು ಮಾಡಬೇಕು?

Child Health: ಮಗುವಿನ ಹೊಟ್ಟೆಯಲ್ಲಿ ಹುಳವಾದರೆ ಏನು ಮಾಡಬೇಕು?
ಮಗುವಿನ ಹೊಟ್ಟೆಯಲ್ಲಿ ಹುಳImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 13, 2024 | 5:58 PM

ಸಾಮಾನ್ಯವಾಗಿ 1ರಿಂದ 10 ವರ್ಷದೊಳಗಿನ ಮಕ್ಕಳಿಗೆ ಹೊಟ್ಟೆಯಲ್ಲಿ ಬೆಳೆಯುವ ಹುಳಗಳು ಸೋಂಕು ತರುತ್ತವೆ. ಹೆಚ್ಚಿನ ಹುಳಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಮಕ್ಕಳು ಮಲವಿಸರ್ಜನೆ ಮಾಡುವ ಜಾಗದಲ್ಲಿ ಕೆಂಪಾಗಿರುತ್ತದೆ, ತುರಿಕೆಯೂ ಇರುತ್ತದೆ. ರಾತ್ರಿ ವೇಳೆ ಹುಳಗಳು ಹೊರಗೆ ಬಂದು ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಮಕ್ಕಳು ರಾತ್ರಿ ನಿದ್ರೆ ಮಾಡಲಾಗದೆ ಒದ್ದಾಡುತ್ತಾರೆ. ಮಕ್ಕಳಲ್ಲಿ ಹುಳುಗಳು ಉಂಟಾಗುವಿಕೆಗೆ ಶುಚಿತ್ವದ ಕೊರತೆ ಮುಖ್ಯ ಕಾರಣ.

ಈ ಹುಳಗಳು ಸಾಮಾನ್ಯವಾಗಿ ಕಳಪೆ ವೈಯಕ್ತಿಕ ನೈರ್ಮಲ್ಯ ಮತ್ತು ಅಶುಚಿಯಾದ ಪರಿಸರದಿಂದ ಉಂಟಾಗುತ್ತದೆ. ಮಕ್ಕಳ ಕೈಗಳನ್ನು ಆಗಾಗ ತೊಳೆಸುವುದು, ಅವರು ಬಾಯಿಗೆ ಹಾಕುವ ವಸ್ತುಗಳನ್ನು ತೊಳೆದು ಕ್ಲೀನ್ ಆಗಿಡುವುದು ಬಹಳ ಮುಖ್ಯ. ಇದು ಮಗುವಿನ ಒಟ್ಟಾರೆ ಯೋಗಕ್ಷೇಮ ಮತ್ತು ಭವಿಷ್ಯವನ್ನು ರಕ್ಷಿಸುತ್ತದೆ. ಮಕ್ಕಳಲ್ಲಿ ಹುಳುಗಳು ಉಂಟಾಗುವಿಕೆಯ ಕೆಲವು ಲಕ್ಷಣಗಳು ಇಲ್ಲಿವೆ.

ಇದನ್ನೂ ಓದಿ: ನೊಣ ಬಿದ್ದ ಆಹಾರ ಸೇವಿಸುತ್ತೀರಾ?; ನಿಮಗೆ ಗೊತ್ತಿಲ್ಲದ ಸಂಗತಿ ಇಲ್ಲಿದೆ

ಹುಳುಗಳು ಉಂಟಾಗಿರುವುದರ ಸಾಮಾನ್ಯ ಲಕ್ಷಣಗಳೆಂದರೆ ಮಗುವಿನ ಗುದದ್ವಾರದಲ್ಲಿ ತುರಿಕೆ ಮತ್ತು ಹಸಿವಿನ ಕೊರತೆ. ಊಟದ ನಂತರ ಹೊಟ್ಟೆ ಉಬ್ಬುವುದು ಮತ್ತು ಆಗಾಗ ಅಜೀರ್ಣ ಉಂಟಾಗುವುದು. ಕೆಲವೊಮ್ಮೆ ವಾಂತಿ ಕೂಡ ಆಗಬಹುದು. ಈ ಹೊಟ್ಟೆ ಹುಳಗಳ ಆರಂಭಿಕ ಚಿಹ್ನೆಗಳನ್ನು ಕಡೆಗಣಿಸಿದರೆ ದೀರ್ಘಕಾಲದ ಸಮಸ್ಯೆ ಹಾಗೂ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಇದರಿಂದ ಮಗುವಿನ ತೂಕ ಕಡಿಮೆಯಾಗುತ್ತದೆ, ಕಣ್ಣುಗಳು ಒಣಗುತ್ತದೆ, ವಿಟಮಿನ್ ಎ ಕೊರತೆ, ಕಿರಿಕಿರಿ, ರಕ್ತಹೀನತೆಯ ಲಕ್ಷಣಗಳು ಮತ್ತು ಅಪೌಷ್ಟಿಕತೆ ಕೂಡ ಉಂಟಾಗುತ್ತದೆ.

ತೀವ್ರವಾದ ಸೋಂಕುಗಳು ಹೆಣ್ಣು ಮಕ್ಕಳಲ್ಲಿ ಯೋನಿಯ ತುರಿಕೆ ಮತ್ತು ಸ್ರವಿಸುವಿಕೆಗೆ ಕಾರಣವಾಗಬಹುದು. ಈ ದೀರ್ಘಾವಧಿಯ ತೊಡಕುಗಳನ್ನು ತಡೆಗಟ್ಟಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯು ನಿರ್ಣಾಯಕವಾಗಿದೆ.

ಮಕ್ಕಳಲ್ಲಿ ಹೊಟ್ಟೆ ಹುಳ ನಿಯಂತ್ರಿಸುವುದು ಹೇಗೆ?:

ಸರಿಯಾದ ಆಹಾರ ನಿರ್ವಹಣೆ:

ಮಕ್ಕಳಿಗೆ ನೀಡುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ.

ಶುದ್ಧ ನೀರು:

ಕಲುಷಿತ ನೀರನ್ನು ಮಕ್ಕಳಿಗೆ ಕೊಡಬೇಡಿ. ನೀರನ್ನು ಕುದಿಸಿದ ನಂತರ ಕುಡಿಸಿ.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ; ಈ ಲಕ್ಷಣಗಳನ್ನೆಂದೂ ನಿರ್ಲಕ್ಷ್ಯಿಸಬೇಡಿ

ನೈರ್ಮಲ್ಯದ ಅಭ್ಯಾಸಗಳನ್ನು ಉತ್ತೇಜಿಸಿ:

ನಿಯಮಿತವಾಗಿ ಮಕ್ಕಳಿಗೆ ಸ್ನಾನ ಮಾಡಿಸಿ ಮತ್ತು ಬಟ್ಟೆಗಳನ್ನು ಬದಲಾಯಿಸಿ. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ. ಹುಳುಗಳ ಮೊಟ್ಟೆಗಳನ್ನು ಸೇವಿಸುವ ಅಪಾಯವನ್ನು ಕಡಿಮೆ ಮಾಡಲು ಊಟಕ್ಕೆ ಮೊದಲು ಮತ್ತು ಶೌಚಾಲಯವನ್ನು ಬಳಸಿದ ನಂತರ ಸಾಬೂನು ಮತ್ತು ನೀರಿನಿಂದ ಮಕ್ಕಳಿಗೆ ಕೈಗಳನ್ನು ತೊಳೆಯಲು ಕಲಿಸಿ.

ಪರಿಸರ ಸ್ವಚ್ಛತೆ:

ಮಕ್ಕಳು ಓಡಾಡುವ ಪ್ರದೇಶಗಳನ್ನು ಸ್ವಚ್ಛವಾಗಿಡಿ ಮತ್ತು ಹುಳುಗಳ ಮೊಟ್ಟೆಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ