Health Tips: ಆಲ್ಕೋಹಾಲ್ ಜತೆಗೆ ಈ 5 ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ

ಪಾರ್ಟಿಯಲ್ಲಿ ಅಥವಾ ಬೇರೆಡೆ ಆಲ್ಕೋಹಾಲ್​ನೊಂದಿಗೆ ಕೆಲವು ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

Health Tips: ಆಲ್ಕೋಹಾಲ್ ಜತೆಗೆ ಈ 5 ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
Updated By: preethi shettigar

Updated on: Jul 26, 2021 | 7:42 AM

ಮದ್ಯಪಾನ ಮಾಡುವಾಗ ಹಲವರಿಗೆ ಜತೆಯಲ್ಲಿ ಏನಾದರೂ ಒಂದು ಆಹಾರವನ್ನು ಸೇವಿಸುವ ಅಭ್ಯಾಸ ಇರುತ್ತದೆ. ಆದರೆ ನೆನಪಿಡಿ, ಪಾರ್ಟಿಯಲ್ಲಿ ಅಥವಾ ಬೇರೆಡೆ ಆಲ್ಕೋಹಾಲ್​ನೊಂದಿಗೆ( Alcohol) ಕೆಲವು ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಹೊಟ್ಟೆ ನೋವು, ಎದೆಯ ಉರಿಯೂತ ಮತ್ತು ವಾಂತಿಗೆ ಕಾರಣವಾಗಬಹುದು. ಹಾಗಿದ್ದರೆ ಯಾವೆಲ್ಲಾ ಆಹಾರವನ್ನು ಸೇವಿಸಬಾರದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

1. ಚಾಕೊಲೇಟ್
ವೈನ್​ನೊಂದಿಗೆ ಚಾಕೊಲೇಟ್ ತಿನ್ನುವುದು ಉತ್ತಮ ಅಭ್ಯಾಸ ಎಂದು ಭಾವಿಸಲಾಗಿದೆ. ಆದರೆ ಇದು ಅಪಾಯಕಾರಿ. ಚಾಕೊಲೇಟ್ ಹೊಟ್ಟೆಯಲ್ಲಿ ಗ್ಯಾಸ್ಟಿಕ್​ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹೀಗೆ ಆಲ್ಕೋಹಾಲ್ ಜತೆ ಚಾಕೊಲೇಟ್​ ತಿನ್ನುವುದು ಜೀರ್ಣಕ್ರಿಯೆಯನ್ನು ಹಾನಿ ಮಾಡುತ್ತದೆ.

2. ಬೀನ್ಸ್
ಬೀನ್ಸ್ ಅನ್ನು ಕೆಂಪು ವೈನ್​ನೊಂದಿಗೆ ತೆಗೆದುಕೊಳ್ಳಬಾರದು. ಊಟಕ್ಕೆ ಮೊದಲು ಅಥವಾ ಆಲ್ಕೋಹಾಲ್ ಸಮಯದಲ್ಲಿ ಬೀನ್ಸ್ ತಿನ್ನಬಾರದು. ಏಕೆಂದರೆ ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ಕಬ್ಬಿಣದಿಂದ ಸಮೃದ್ಧವಾಗಿವೆ. ಆಲ್ಕೋಹಾಲ್ ಕುಡಿದಾಗ ಕಬ್ಬಿಣವು ದೇಹದೊಂದಿಗೆ ಬೆರೆಯುವುದಿಲ್ಲ. ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು.

3. ಹುರಿದ ಉಪ್ಪಿನಾಂಶಯುಕ್ತ ಆಹಾರ
ಹೆಚ್ಚಿನ ಜನರು ಕುಡಿಯುವಾಗ ಹುರಿದ ಆಹಾರವನ್ನು ಇಷ್ಟಪಡುತ್ತಾರೆ. ಇವುಗಳನ್ನು ತಿನ್ನುವುದರಿಂದ ನಿಮ್ಮ ದೇಹವು ಹೈಡ್ರೀಕರಿಸುತ್ತದೆ. ಇದಲ್ಲದೆ ಶಕ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಆಲ್ಕೋಹಾಲ್ ತೆಗೆದುಕೊಳ್ಳುವಾಗ ಬೇಯಿಸಿದ ಕೋಳಿ ಸೇವಿಸಿ.

4. ಬ್ರೆಡ್
ಬ್ರೆಡ್ ಮತ್ತು ಬಿಯರ್‌ ಅನ್ನು ಒಟ್ಟಿಗೆ ಸೇವಿಸಬಾರದು. ಆಲ್ಕೋಹಾಲ್ ಜತೆ ಬ್ರೆಡ್ ತಿನ್ನುವುದರಿಂದ ಗ್ಯಾಸ್ಟಿಕ್​ ಉಂಟಾಗುತ್ತದೆ. ಇದು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಹೆಚ್ಚು ಬಿಯರ್ ಮತ್ತು ಬ್ರೆಡ್ ಸೇವಿಸಿದರೆ ವಾಂತಿ ಕೂಡ ಉಂಟಾಗುತ್ತದೆ.

5. ಕಾಫಿ
ಕಾಫಿ ಮತ್ತು ಆಲ್ಕೋಹಾಲ್ ಒಟ್ಟಿಗೆ ಸೇವಿಸಬಾರದು. ಕಾಫಿಯೊಂದಿಗೆ ಆಲ್ಕೋಹಾಲ್ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ.

ಇದನ್ನೂ ಓದಿ:

ತಲೆ ಬೋಳಾಗಬಹುದು ಎಂಬ ಚಿಂತೆಯೇ? ಯೌವನದಲ್ಲಿ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ರಾಮಬಾಣ

Health Tips: ಮುಂಜಾನೆಯ ವಾಕಿಂಗ್ ತೂಕ ಇಳಿಕೆಗಷ್ಟೇ ಎಂಬ ಭ್ರಮೆಯಿಂದ ಹೊರ ಬನ್ನಿ; ನೀವು ಹಾಕುವ ಪ್ರತಿ ಹೆಜ್ಜೆ ಹಲವು ಆರೋಗ್ಯಕರ ಬದಲಾವಣೆಗೆ ಕಾರಣವಾಗುತ್ತದೆ