Weight Loss Tips: ರಾತ್ರಿ ಮಲಗುವ ಮೊದಲು ಮಾಡುವ ಈ ತಪ್ಪುಗಳು ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತವೆ
ತೂಕದ ಹೆಚ್ಚಳದೊಂದಿಗೆ ಅನೇಕ ಕಾಯಿಲೆಗಳು ಕೂಡ ಹುಟ್ಟಿಕೊಳ್ಳುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಬಯಸುವವರು ರಾತ್ರಿಯಲ್ಲಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.
ಹೆಚ್ಚು ಆಹಾರ ಸೇವಿಸುವುದು ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ತೂಕ ಹೆಚ್ಚಾಗುತ್ತದೆ. ಇದು ಕ್ರಮೇಣ ಬೊಜ್ಜು ಉಂಟಾಗಲು ಕಾರಣವಾಗುತ್ತದೆ. ಆದರೆ ತೂಕ ಸಮತೋಲನದಲ್ಲಿರುವುದು ಬಹಳ ಮುಖ್ಯ. ಏಕೆಂದರೆ ತೂಕದ ಹೆಚ್ಚಳದೊಂದಿಗೆ ಅನೇಕ ಕಾಯಿಲೆಗಳು ಕೂಡ ಹುಟ್ಟಿಕೊಳ್ಳುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಬಯಸುವವರು ರಾತ್ರಿಯಲ್ಲಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಅದು ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
1. ಸಂಜೆ 7 ರ ನಂತರ ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಿ ಸಂಜೆ ತಿನ್ನುವ ಆಹಾರವು ದೇಹಕ್ಕೆ ಶಕ್ತಿಯನ್ನು ನೀಡುವುದಿಲ್ಲ. ಇದು ಕೊಬ್ಬಾಗಿ ಬದಲಾಗುತ್ತದೆ. ಆದ್ದರಿಂದ, ಹಿರಿಯರು ಬೆಳಿಗ್ಗೆ ತಿನ್ನುವ ಉಪಹಾರವನ್ನು ಮಹಾರಾಜರಂತೆ ದೊಡ್ಡ ಪ್ರಮಾಣದಲ್ಲಿ ಸೇವಿಸಬೇಕು. ಅಂತೆಯೇ ರಾತ್ರಿ ಸೇವಿಸುವ ಆಹಾರ ಬಡವನಂತಿರಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಸಂಜೆ 7 ರ ನಂತರ ಆಹಾರವನ್ನು ಸೇವಿಸಬೇಡಿ.
2. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಮುಕ್ತ ಆಹಾರವನ್ನು ರಾತ್ರಿಯಲ್ಲಿ ತೆಗೆದುಕೊಳ್ಳಬೇಕು ರಾತ್ರಿ ಊಟಕ್ಕೆ ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದರೆ ಕೊಬ್ಬು ಹೆಚ್ಚಾಗುತ್ತದೆ. ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ಟಿಕ್ ಉಂಟಾಗುತ್ತದೆ. ಆದ್ದರಿಂದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬಾರದು. ಹಣ್ಣುಗಳು ಮತ್ತು ತರಕಾರಿಗಳನ್ನು ಮಾತ್ರ ರಾತ್ರಿ ಊಟಕ್ಕೆ ತಿನ್ನಬೇಕು.
3. ಮಲಗುವ ಮುನ್ನ ಚಹಾ ಅಥವಾ ಕಾಫಿ ಕುಡಿಯಬೇಡಿ ರಾತ್ರಿ ಊಟದ ನಂತರ ಚಹಾ ಮತ್ತು ಕಾಫಿಗೆ ವಿದಾಯ ಹೇಳಿ. ರಾತ್ರಿ ಕುಡಿಯುವ ಚಹಾ ಮತ್ತು ಕಾಫಿ ನಿಮ್ಮ ಆರೋಗ್ಯಕ್ಕೆ ಕೆಟ್ಟದು. ಇವು ನಿದ್ರೆಯ ಜತೆಗೆ ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತವೆ.
4. ಊಟದ ನಂತರ ವ್ಯಾಯಾಮ ಮಾಡಬೇಡಿ ಊಟದ ನಂತರ ವ್ಯಾಯಾಮ ಮಾಡಬೇಡಿ. ರಾತ್ರಿಯಲ್ಲಿ ವ್ಯಾಯಾಮ ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
5. ನಿದ್ರೆಗೆ ಹೋಗುವ ಮೊದಲು ಹೆಚ್ಚು ನೀರು ಕುಡಿಯಬೇಡಿ ದಿನವಿಡೀ ಹೆಚ್ಚು ನೀರು ಕುಡಿಯುವುದು ಉತ್ತಮ. ಆದರೆ ರಾತ್ರಿಯಲ್ಲಿ ನೀರಿನ ಸೇವನೆಯನ್ನು ಕಡಿಮೆ ಮಾಡಿ. ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯುವುದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ದೇಹವು ವಿಶ್ರಾಂತಿ ಪಡೆಯುವ ಸಮಯದಲ್ಲಿ ನೀರು ಕುಡಿಯಬಾರದು. ರಾತ್ರಿ ನೀರು ಕುಡಿಯುವುದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
6. ನಿದ್ರೆ ಇಲ್ಲದೆ ಬೊಜ್ಜು ಹೆಚ್ಚಾಗುತ್ತದೆ ನಿದ್ರೆ ಆರೋಗ್ಯದ ಶೇಕಡಾ 50 ಕ್ಕಿಂತ ಹೆಚ್ಚು ವಿಷಯವನ್ನು ಅವಲಂಬಿಸಿರುತ್ತದೆ. ನಿದ್ರೆ ಸರಿಯಾಗಿ ಆಗದೆ ಇದ್ದರೆ ದೇಹವು ತೂಕವನ್ನು ಪಡೆಯುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಕನಿಷ್ಠ ಏಳು ಗಂಟೆ ನಿದ್ರೆ ಪಡೆಯುವುದು ಮುಖ್ಯ.