ಈರುಳ್ಳಿ ಕತ್ತರಿಸುವಾಗ ಅಳಲು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಸುಲಭ ವಿಧಾನ

ಈರುಳ್ಳಿಯಲ್ಲಿ ಆರೋಗ್ಯ ಇರುವುದು ಖಂಡಿತ, ಅದು ದೇಹದ ಆರೋಗ್ಯಕ್ಕೆ ತುಂಬಾ ಸಹಾಯವನ್ನು ಮಾಡುತ್ತದೆ. ಆದರೆ ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರುತ್ತದೆ. ಇದು ಅನೇಕರಿಗೆ ಹಿಂಸೆ, ಕಿರಿಕಿರಿಯನ್ನು ಉಂಟು ಮಾಡುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಈರುಳ್ಳಿಯಿಂದ ಕಣ್ಣಿನಲ್ಲಿ ಬರುವ ನೀರನ್ನು ತಡೆಯಲು ಸುಲಭ ವಿಧಾನ ಇಲ್ಲಿದೆ ನೋಡಿ.

ಈರುಳ್ಳಿ ಕತ್ತರಿಸುವಾಗ ಅಳಲು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಸುಲಭ ವಿಧಾನ
ಸಾಂದರ್ಭಿಕ ಚಿತ್ರ

Updated on: Sep 17, 2025 | 5:02 PM

ಈರುಳ್ಳಿ (onion) ಕತ್ತರಿಸುವಾಗ​​ ಸಹಜವಾಗಿ ಕಣ್ಣಿನಲ್ಲಿ ನೀರು ಬರುತ್ತದೆ. ಈರುಳ್ಳಿ ಖಾರವನ್ನು ತಡೆಯಲಾದೇ ಹಿಂಸೆಯನ್ನು ಅನುಭವಿಸುವುದು ಇದೆ. ಆದರೆ ಈ ಹಿಂಸೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?  ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದರ ಖಾರ ದೇಹಕ್ಕೂ, ಕಣ್ಣಿಗೂ ಒಳ್ಳೆಯದು ಎಂದು ಹೇಳುತ್ತಾರೆ. ಪ್ರತಿದಿನ ಅಡುಗೆ ಮಾಡುವವರಿಗೆ ಇದು ಅಭ್ಯಾಸವಾದರೂ, ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬಂದೇ ಬರುತ್ತದೆ. ಆದರೆ ಇದಕ್ಕೆ ಒಂದು ಪರಿಹಾರ ಇದೆ. ಈ ನಿಯಮವನ್ನು ಪಾಲನೆ ಮಾಡಿದ್ರೆ, ಒಂದೇ ಒಂದು ಹನಿ ಕಣ್ಣೀರು ಬರುವುದಿಲ್ಲ. ಖ್ಯಾತ ಪೌಷ್ಟಿಕತಜ್ಞೆ ಲಿಮಾ ಮಹಾಜನ್ ಅವರು ತಮ್ಮ ಇನ್ಸ್ಟಾಗ್ರಾಮ್​​​​​​​ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈರುಳ್ಳಿ ಕತ್ತರಿಸುವ ಮೊದಲು ಕೆಲವು ಸರಳ ಹಂತಗಳನ್ನು ಅನುಸರಿಸುವುದರಿಂದ  ಕಣ್ಣಿನಲ್ಲಿ ನೀರು ಬರುವುದಿಲ್ಲ.

ಏನು ಮಾಡಬೇಕು?

  • ಈರುಳ್ಳಿ ಕತ್ತರಿಸುವ ಮೊದಲು, ಸಿಪ್ಪೆ ಸುಲಿದು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
  • ಸುಮಾರು 10 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಟ್ಟು ತಣ್ಣಗಾಗಿಸಿ.

ಇದನ್ನೂ ಓದಿ: ಈ ಜನರಿಗೆ ಸಹಾಯ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ

ಇದನ್ನೂ ಓದಿ
ಪತಂಜಲಿ ಟಿಪ್ಸ್: ತಪ್ಪಿಸಬೇಕಾದ ಆಹಾರ ಸಂಯೋಜನೆಗಳು
ಈ ಜನರಿಗೆ ಸಹಾಯ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ
ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ
ಚೀನಿ ವ್ಯಾಯಾಮ ಸೂತ್ರ, ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ

ವಿಡಿಯೋ ಇಲ್ಲಿದೆ ನೋಡಿ:

ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತ ಅಂಶವನ್ನು ಹೊಂದಿದ್ದು, ಈರುಳ್ಳಿಯನ್ನು ಕತ್ತರಿಸಿದಾಗ, ಈ ಸಂಯುಕ್ತಗಳು ಗಾಳಿಯೊಂದಿಗೆ ಸೇರಿಕೊಂಡು ಅನಿಲ ಉತ್ಪಾದಿಸುತ್ತದೆ. ಆಗಾ ಈ ಸಂಯುಕ್ತಗಳು ಕಣ್ಣಿನ ಸಂಪರ್ಕಕ್ಕೆ ಬಂದು ಕಣ್ಣಿನಲ್ಲಿ ಊರಿಯನ್ನು ಸೃಷ್ಟಿಸಿ, ಕಣ್ಣೀರು ಬರುವಂತೆ ಮಾಡುತ್ತದೆ. ಆದರೆ ಈರುಳ್ಳಿಯ ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿದಾಗ ಅದು ಊರಿಯುಕ್ತ ಅಂಶಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈರುಳ್ಳಿಯನ್ನು ಕತ್ತರಿಸುವ ಮೊದಲು ನೀರಿನಲ್ಲಿ ಹಾಕು ಅಥವಾ ಅಡುಗೆ ಮಾಡುವ ಮೊದಲೇ ರೆಫ್ರಿಜರೇಟರ್‌ನಲ್ಲಿ ನಂತರ ಕತ್ತರಿಸಿ, ಹೀಗೆ ಮಾಡಿದ್ರೆ ಕಣ್ಣಿನಲ್ಲಿ ಕಿರಿಕಿರಿ ಉಂಟಾಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ