AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲುಜ್ಜುವ ಬ್ರಷ್ ಬಳಸುವ ಬದಲು ಈ ಮೂರು ಗಿಡಮೂಲಿಕೆ ಕಡ್ಡಿ ಬಳಸಿ, ಹಲ್ಲಿನಲ್ಲಿ ಮ್ಯಾಜಿಕ್​​​​​ ನೋಡಿ

ಹಲ್ಲುಗಳ ಆರೋಗ್ಯಕ್ಕೆ ಟೂತ್‌ಪೇಸ್ಟ್​​​ಗಿಂತ ನೈಸರ್ಗಿಕವಾಗಿ ಸಿಗುವ ಬೇವು ಮತ್ತು ಅಕೇಶಿಯಾದ ಕಡ್ಡಿಗಳನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ. ನಮ್ಮ ಹಿರಿಯರು ಬಳಸಿದ ಈ ಕ್ರಮವನ್ನು ಅನುಸರಿಸಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ. ಇದನ್ನು ಬಳಸುವ ವಿಧಾನ ಹೇಗೆ? ಇದರ ಪ್ರಯೋಜಗಳೇನು ಎಂಬ ಮಾಹಿತಿ ಇಲ್ಲಿದೆ.

ಹಲ್ಲುಜ್ಜುವ ಬ್ರಷ್ ಬಳಸುವ ಬದಲು ಈ ಮೂರು ಗಿಡಮೂಲಿಕೆ ಕಡ್ಡಿ ಬಳಸಿ, ಹಲ್ಲಿನಲ್ಲಿ ಮ್ಯಾಜಿಕ್​​​​​ ನೋಡಿ
ಗಿಡಮೂಲಿಕೆಯ ಬ್ರಷ್‌
ಸಾಯಿನಂದಾ
|

Updated on:Sep 17, 2025 | 7:16 PM

Share

ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವುದು ಇದ್ದೇ ಇರುತ್ತದೆ. ಹೊಳೆಯುವ ಹಲ್ಲಿಗಾಗಿ ಇಲ್ಲಸಲ್ಲದ ಟೂತ್‌ಪೇಸ್ಟ್​​​ಗಳನ್ನು (toothbrush) ಬಳಸುತ್ತೇವೆ. ಆದರೆ ಇದರಿಂದಲೇ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ದುರ್ಬಲ ಒಸಡುಗಳು ಉಂಟಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ನಮ್ಮ ಹಿರಿಯರು ಅಂದಿನ ಕಾಲದಲ್ಲಿ ಟೂತ್‌ಪೇಸ್ಟ್​​​ಗಳನ್ನು ಬಳಸುತ್ತಿರಲಿಲ್ಲ. ಬದಲಾಗಿ ಬೇವು ಮತ್ತು ಅಕೇಶಿಯಾದ ಆ ನೈಸರ್ಗಿಕ ಕಡ್ಡಿಗಳನ್ನು ಬಳಸುತ್ತಿದ್ದರು. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಈ ಬೇವು ಮತ್ತು ಅಕೇಶಿಯಾದ ಕಡ್ಡಿಗಳನ್ನು ಬಳಸುತ್ತಿದ್ದಾರೆ. ಅವರ ಹಲ್ಲುಗಳು ಇಂದಿಗೂ ಅವರ ಹಲ್ಲುಗಳು ಆರೋಗ್ಯವಾಗಿದೆ.

ದಾತುನ್ ಎಂದರೇನು?

ದಾತುನ್ ಎಂಬುದು ಬೇವು, ಅಕೇಶಿಯಾ ಅಥವಾ ಕಾರಂಜಾ ಮುಂತಾದ ಮರಗಳ ಕಡ್ಡಿಗಳಿಂದ ತಯಾರಿಸಿದ ನೈಸರ್ಗಿಕವಾದ ಹಲ್ಲುಜ್ಜುವ ಬ್ರಷ್, ಇದನ್ನು ಅಗಿಯುವುದರಿಂದ ಹಲ್ಲು ಸ್ವಚ್ಛಗೊಳ್ಳುತ್ತದೆ, ಒಸಡುಗಳಿಗೆ ಉತ್ತಮ ಮಸಾಜ್​ ಆಗುತ್ತದೆ. ಇದರ ಜತೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಲ್ಲುಜ್ಜುವ ಬ್ರಷ್‌ಗಳು ಅಥವಾ ರಾಸಾಯನಿಕ ಪೇಸ್ಟ್‌ಗಳು ಇಲ್ಲದಿದ್ದಾಗ, ಈ ದಾತುನ್ ಬಳಸುತ್ತಿದ್ದರು.

ಇದರ ಪ್ರಯೋಜನಗಳು:

ನೈಸರ್ಗಿಕ ನಂಜುನಿರೋಧಕ:  ಬೇವು ಮತ್ತು ಅಕೇಶಿಯಾದ ಕಹಿ ಕಡ್ಡಿಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿವೆ.

ಇದನ್ನೂ ಓದಿ
Image
ಮಲ್ಲಿಗೆಯ ಸುವಾಸನೆಯಲ್ಲಿದೆ ಆರೋಗ್ಯದ ಗುಟ್ಟು
Image
ತಡವಾಗಿ ಉಪಾಹಾರ ಸೇವಿಸಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತೆ
Image
ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ
Image
ಚೀನಿ ವ್ಯಾಯಾಮ ಸೂತ್ರ, ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ

ನೈಸರ್ಗಿಕ ಫ್ಲೋಸಿಂಗ್ : ಇವುಗಳನ್ನು ಅಗಿಯುವುದರಿಂದ ಅದರ ನಾರುಗಳು ಹಲ್ಲುಗಳ ನಡುವೆ ತೂರಿಕೊಂಡು ಸಿಕ್ಕಿಬಿದ್ದ ಆಹಾರ ಮತ್ತು ಪ್ಲೇಕ್ ಅನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.

ಒಸಡುಗಳನ್ನು ಬಲಪಡಿಸುವುದು: ದಾತುನ್ ಒಸಡುಗಳನ್ನು ನಿಧಾನವಾಗಿ ಮಸಾಜ್ ಮಾಡುತ್ತದೆ, ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಹಾಗೂ ಒಸಡುಗಳನ್ನು ಬಲಪಡಿಸುತ್ತದೆ.

ಹಳದಿ ಬಣ್ಣ ಹೋಗುತ್ತದೆ: ನಿಯಮಿತ ಬಳಕೆಯಿಂದ, ಹಲ್ಲುಗಳ ಹಳದಿ ಬಣ್ಣವೂ ಹೋಗುತ್ತದೆ.

ಬಾಯಿಯ ದುರ್ವಾಸನೆಯಿಂದ ಪರಿಹಾರ: ಈ ಕಡ್ಡಿಗಳು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ: ತಡವಾಗಿ ಉಪಾಹಾರ ಸೇವಿಸಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತೆ; ಅಧ್ಯಯನದಿಂದ ಬಹಿರಂಗ

ಇದನ್ನು ಬಳಸುವುದು ಹೇಗೆ?

ಬೆಳಿಗ್ಗೆ ಬೇವು ಅಥವಾ ಅಕೇಶಿಯಾದ ತೆಳುವಾದ ಕಡ್ಡಿಯನ್ನು ತೆಗೆದುಕೊಳ್ಳಿ. ಅದರ ಒಂದು ತುದಿಯನ್ನು ಅಗಿಯಿರಿ, ಅದನ್ನು ನಾರಿನಂತೆ ಮಾಡಿ. ನಂತರ ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ ಮತ್ತು ಒಸಡುಗಳಿಗೆ ಮಸಾಜ್ ಮಾಡಿ. ದಿನಕ್ಕೆ ಒಮ್ಮೆ ಬಳಸಿದರೆ ಸಾಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Wed, 17 September 25