ಹೆಸರು ಕೇಳುವುದಕ್ಕೆ ಸ್ವಲ್ಪ ವಿಚಿತ್ರವಾಗಿದ್ದರೂ ಕೂಡ ಇದರ ರುಚಿ ಮಾತ್ರ ಅಗಣಿತ. ಮನೆಯಲ್ಲಿ ಸುಲಭ ಮತ್ತು ವೇಗವಾಗಿ ಮಾಡಿಕೊಳ್ಳಬಹುದಾದ ಈ ಪದಾರ್ಥ ನಿಮಗೆ ಯಾವುದೇ ರೀತಿಯ ಕೆಲಸ ನೀಡದೆಯೇ ಅತಿ ಹೆಚ್ಚು ರುಚಿ ನೀಡುತ್ತದೆ. ಅಡಿಗೆ ಏನು ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವವರಿಗೆ, ಹಾಗೂ ಹುಳಿ, ಕಾರವಿರುವ ಆಹಾರ ಇಷ್ಟ ಪಡುವವರಿಗೆ. ವಾತ ಮತ್ತು ಕಫದ ಸಮಸ್ಯೆ ಹೊಂದಿರುವವರಿಗೆ ಇದು ತಕ್ಕ ರೆಸಿಪಿಯಾಗಿದೆ. ಮಾಡುವುದು ಹೇಗೆ ಅಂದುಕೊಳ್ಳುತ್ತಿದ್ದೀರಾ? ತುಂಬಾ ಸುಲಭ ರೆಸಿಪಿಯಾಗಿದ್ದು, ಮಾಡುವ ವಿಧಾನ ಇಲ್ಲಿದೆ.
ಹುಣಸೆಹಣ್ಣು- ದೊಡ್ಡ ಲಿಂಬೆ ಹಣ್ಣಿನ ಗಾತ್ರದಷ್ಟು (ಹುಳಿ ಜಾಸ್ತಿ ತಿನ್ನುವವರು ಇನ್ನು ಸ್ವಲ್ಪ ಸೇರಿಸಿಕೊಳ್ಳಬಹುದು)
ಈರುಳ್ಳಿ – 1
ಹಸಿ ಮೆಣಸು – 1
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ತೆಂಗಿನ ಎಣ್ಣೆ
ಇದನ್ನೂ ಓದಿ:ಮನೆಯಲ್ಲಿಯೇ ಆರೋಗ್ಯಕರ ಮ್ಯಾಗಿ ಮ್ಯಾಜಿಕ್ ಮಸಾಲ ತಯಾರಿಸುವುದು ಹೇಗೆ?
ಮೊದಲು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಡಿ. ಈರುಳ್ಳಿ ಮತ್ತು ಹಸಿ ಮೆಣಸನ್ನು ಹೆಚ್ಚಿ ಅದನ್ನು ಚೆನ್ನಾಗಿ ಜಜ್ಜಿಕೊಳ್ಳಿ ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಸಿಕೊಳ್ಳಿ. ಜಜ್ಜಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಹುಣಸೆ ನೀರನ್ನು ಅದಕ್ಕೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ. ಇಷ್ಟು ಮಾಡಿದಲ್ಲಿ ಪುಲಿ ಚಾಲಿಚತು ಬಿಸಿ ಅನ್ನದೊಂದಿಗೆ ಬಡಿಸಲು ಸಿದ್ಧ.
ಈ ವಿಡಿಯೋವನ್ನು mommycooltales_aishu ಎಂಬ ಇನ್ಸ್ಟ್ಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಹಲವಾರು ಮಂದಿ ರೆಸಿಪಿ ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಕೆಲವರು ನಾವು ಕೂಡ ಇಂದೇ ನಮ್ಮ ಮನೆಯಲ್ಲಿ ಮಾಡಿ ತಿನ್ನುತ್ತೇವೆ ಎಂದಿದ್ದಾರೆ. ಮತ್ತೆ ಕೆಲವರು ಇಂತಹ ಹಲವಾರು ಸುಲಭ ರೆಸಿಪಿಗಳನ್ನು ನಮ್ಮೊಂದಿಗೆ ಮತ್ತೆ ಮತ್ತೆ ಹಂಚಿಕೊಳ್ಳಿ ಎಂದಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ