ಚಳಿಗಾಲದಲ್ಲಿ ಚರ್ಮದ ಸಮಸ್ಯೆ ನಿವಾರಣೆಗೆ ಕೆಲವು ಸಲಹೆಗಳು: ಡಾ ರವಿಕಿರಣ ಪಟವರ್ಧನ
ಚಳಿಗಾಲದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ತೊಂದರೆ ಕೊಡುವ ಪ್ರಥಮ ಅಂಶ ಅಂದ್ರೆ ಚರ್ಮ ತನ್ನ ತೇವಾಂಶವನ್ನು ಕಳೆದುಕೊಂಡು ಕಾಲು ಕೈ ಒಡೆಯುವುದು ನೋವಿನ ತೊಂದರೆ ಇದ್ದವರಿಗೆ ನೋವುಗಳು ಹೆಚ್ಚಾಗುವಂತದ್ದು ,ಇನ್ನು ಕೆಲವರಿಗೆ ಹಸಿವೆಯನ್ನು ಹೆಚ್ಚಾಗಬಹುದು, ಕೂದಲು ತೇವಾಂಶ ಕಡಿಮೆಯಾಗಿ ಕೂದಲು ಒರಟಾಗಬಹುದು ಇನ್ನು ಕೆಲವರಲ್ಲಿ ನೆಗಡಿ ಶೀತ ಕೆಮ್ಮಿನ ಸಮಸ್ಯೆ ಆಗಬಹುದು..

ಚಳಿಗಾಲದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ತೊಂದರೆ ಕೊಡುವ ಪ್ರಥಮ ಅಂಶ ಅಂದ್ರೆ ಚರ್ಮ ತನ್ನ ತೇವಾಂಶವನ್ನು ಕಳೆದುಕೊಂಡು ಕಾಲು ಕೈ ಒಡೆಯುವುದು ನೋವಿನ ತೊಂದರೆ ಇದ್ದವರಿಗೆ ನೋವುಗಳು ಹೆಚ್ಚಾಗುವಂತದ್ದು ,ಇನ್ನು ಕೆಲವರಿಗೆ ಹಸಿವು ಹೆಚ್ಚಾಗಬಹುದು, ಕೂದಲು ತೇವಾಂಶ ಕಡಿಮೆಯಾಗಿ ಕೂದಲು ಒರಟಾಗಬಹುದು ಇನ್ನು ಕೆಲವರಲ್ಲಿ ನೆಗಡಿ ಶೀತ ಕೆಮ್ಮಿನ ಸಮಸ್ಯೆ ಆಗಬಹುದು.ಈ ಮೇಲಿನ ಎಲ್ಲ ಸಮಸ್ಯೆಗಳಿಗೆ ನಮ್ಮ ಆಹಾರ ವಿಹಾರದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ನಾವು ತರಬೇಕು ಇವೆಲ್ಲವೂ ಗಳಿಗೆ ಸುಲಭವಾಗಿ ಆಹಾರದಲ್ಲಿ ಬದಲಾವಣೆ ಮಾಡುವಂಥದ್ದು ಈ ಮುಂದಿನದು ಎಳ್ಳು ಬೆಲ್ಲ ಅಥವಾ ಎಳ್ಳು ಸಕ್ಕರೆ ಪ್ರತಿದಿನ ತಿನ್ನಬಹುದು (ಮಧುಮೇಹಿ ರೋಗಿಗಳು ಕೇವಲ ಎಳ್ಳು ಮಾತ್ರ) ಸಂಕ್ರಮಣದ ಸಂದರ್ಭದಲ್ಲಿ ಎಳ್ಳು ಬೆಲ್ಲ ಎಳ್ಳು ಸಕ್ಕರೆ ಹಂಚುವುದು ವಾಡಿಕೆ ಹೇಳುವುದು ತಮಗೆಲ್ಲರಿಗೂ ತಿಳಿದಂತಹ ಸಂಗತಿ ಹಿಂದೂ ಸಂಸ್ಕೃತಿ ಕಾಲದಲ್ಲಿ ಆಗುವಂಥ ಬದಲಾವಣೆ ತಕ್ಕಂತೆ ಹಬ್ಬಗಳನ್ನು ಆಚರಿಸುವುದು ಈ ಮೊದಲಿನಿಂದಲೂ ಬಂದಂತಹ ಪರಂಪರೆ ಆ ಎಳ್ಳು ಬೆಲ್ಲ ಸಕ್ಕರೆಯನ್ನು ಚಳಿಗಾಲದಲ್ಲಿ ಪ್ರತಿದಿನ ಸೇವಿಸಿದರೆ ಈ ಹೆಚ್ಚಿನ ಸಮಸ್ಯೆಗಳಿಗೆ ನಿವಾರಣೆಗೆ ಸಹಾಯವಾಗಬಹುದು..
ಸಂಪೂರ್ಣ ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಚಳಿಗಾಲದಲ್ಲಿ ಹಲವರು ಈಗಾಗಲೇ ರೂಢಿಸಿಕೊಂಡಿದ್ದರೆ, ಇದರಲ್ಲಿ ಉಪಯೋಗಿಸಲು ಉತ್ತಮವಾದಂತ ಎಣ್ಣೆ ಯಾವುದು ಕೆಲವರಿಗೆ ತಿಳಿದಿದೆ ಎಳ್ಳೆಣ್ಣೆ ಈ ಕಾಲಕ್ಕೆ ಅಭ್ಯಂಗಕ್ಕೆ ಉತ್ತಮವಾದ ಅಂತಹ ಎಣ್ಣೆ ಯಾಗಿದೆ . ಎಳ್ಳೆಣ್ಣೆ ಉತ್ತಮ ಎಂದು ಪೇಟೆಯಲ್ಲಿ ಲಭ್ಯವಿರುವಂತಹ ಎಲ್ಲ ಎಳ್ಳೆಣ್ಣೆಗಳು ಉತ್ತಮ ಎಂದ ಅರ್ಥ ಅಲ್ಲ ಯಾವ ಎಣ್ಣೆ ಉತ್ತಮ ಎಂದರೆ ಆಹಾರ ದರ್ಜೆಯ ಎಳ್ಳೆಣ್ಣೆಯನ್ನೇ ಕಡ್ಡಾಯವಾಗಿ ಬಳಸಿ ಅಂದರೆ ಎಣ್ಣೆಯ ಬಾಟಲಿನ ಮೇಲೆ ಬರೆದಿರುವಂತಹ ಅಂಶವನ್ನು ಗಮನಿಸಿ ಖರೀದಿಸಿ ಹೊರ ಉಪಯೋಗಕ್ಕೆ ಮಾತ್ರ ,ದೀಪಕ್ಕೆ ಮಾತ್ರ ಎಂದು ವಿವಿಧ ಸೂಚನೆಗಳು ಎಣ್ಣೆಯ ಮೇಲೆ ಇರುತ್ತವೆ ಆದರೆ ಆಹಾರ ದರ್ಜೆಯ ಎಣ್ಣೆ ಉಪಯೋಗಕ್ಕೆ ಉತ್ತಮ.
ಹಲವರಲ್ಲಿ ಎಣ್ಣೆ ಹಚ್ಚೋದು ಹೇಳಿದ್ರೆ ಸ್ವಾಮಿ ಸಾಬೂನು ಬಗ್ಗೆ ಹೇಳಿಲ್ಲ ಅಂತ ಕೆಲವರು ವಿಚಾರಕ್ಕೆ ಬೀಳಬಹುದು ಖಂಡಿತವಾಗಿಯೂ ನಾವು ಬಳಸುವಂತಹ ಸಾಬೂನು ಚಳಿಗಾಲಕ್ಕೆ ನಮ್ಮ ಚರ್ಮಕ್ಕೆ ಕೂದಲಿಗೆ ಉತ್ತಮ ಇರುವಂತಹ ಸಾಬೂನು ಆಯ್ಕೆ ಆಗಬೇಕು ಸಾಬುನಿನ ಮೇಲೆ ಬರೆದಿರುವಂತಹ ಮಾಹಿತಿಗಳನ್ನ ಗಮನವಿಟ್ಟು ತಾವು ಓದಿದರೆ ಅದರಲ್ಲಿ ಗ್ರೇಡ್ ಒನ್ ಹೇಳುವಂತಹ ವಿಷಯ ಗ್ರೇಡ್ 2 ಹೇಳುವಂತದ್ದು ತಮಗೆ ಗಮನಕ್ಕೆ ಬರುತ್ತದೆ ಅಥವಾ ಟಿಎಫ್ಎಂ 76%, ಟಿಎಫ್ಎಂ 80% ,ಟಿಎಫ್ಎಂ 70% ಎಂದು ನಮೂದಿಸಿದ್ದು ತಮ್ಮೆಲ್ಲರಕ್ಕೆ ಗಮನಕ್ಕೆ ಈಗಾಗಲೇ ಬಂದಿರಬಹುದು ಈ ಚಳಿಗಾಲಕ್ಕೆ ಪ್ರಥಮ ದರ್ಜೆಯ ಅಥವಾ ಹೆಚ್ಚಿಗೆ ಸ್ಲಿಗ್ಧತ್ವ ಅಂದರೆ ಟಿಎಫ್ಎಂ 76% ಅಥವಾ ಇದಕ್ಕಿಂತ ಹೆಚ್ಚಿರುವ ಇರುವ ಸಾಬೂನು ಆಯ್ಕೆ ಮಾಡಿಕೊಳ್ಳಿ ಇದೆಲ್ಲ ತಾಂತ್ರಿಕ ಮಾಹಿತಿ ಹೇಳುವಂತಹ ವಿಷಯ ಯಾಕೆ ಎಂದರೆ ಸಾಬೂನು ಜಿಡ್ಡು ಹಾಗೂ ಸುಣ್ಣದ ಅಂಶದಿಂದ ತಯಾರಿಸಲಾಗಿರುತ್ತದೆ ಇವೆಲ್ಲರು ಯಾವ ಬ್ರಾಂಡ್ ಉಪಯೋಗಿಸುತ್ತಿರೋ ಆ ಬ್ರಾಂಡ್ನಲ್ಲಿ ಮೇಲಿನ ಮಾಹಿತಿಯನ್ನು ಗಮನಿಸಿ ಖರೀದಿಸಿ ಟಿವಿಯಲ್ಲಿ ಬರುವಂತಹ ಜಾಹೀರಾತುಗಳಿಗೆ ಮುಳ್ಳಾಗುವುದು ಬೇಡ . ಅಲ್ಲದೆ ಆಯುರ್ವೇದದ ಹೆಸರಿನಲ್ಲಿ ಹಲವು ಸಾಬೂನುಗಳು ಈಗಾಗಲೇ ಪೇಟೆಯಲ್ಲಿ ಅವುಗಳಲ್ಲಿ ಕೂಡ ಈ ಮೇಲಿನ ಮಾಹಿತಿಯನ್ನು ಸೂಚನೆ ಮಾಹಿತಿಯನ್ನು ಗಮನಿಸಿ ಯೋಚಿಸಿ ಖರೀದಿಸಿ.
ಮನೆಯಲ್ಲಿರುವಾಗ ಉಷ್ಣಾಂಶದಲ್ಲಿ ಇಳಿಕೆ ಆದರೆ ಬೆಚ್ಚಗಿನ ಬಟ್ಟೆಯನ್ನ ಎಲ್ಲರೂ ಧರಿಸುತ್ತಾರೆ ಆದರೆ ಉಷ್ಣಾಂಶ ಕಡಿಮೆ ಇರುವಾಗ ಮನೆಯಿಂದ ಹೊರಗೆ ಪ್ರಯಾಣಿಸುವಾಗ ಅಥವಾ ಹೊರಕ್ಕೆ ಹೋಗುವಾಗ ಕಡ್ಡಾಯ ಸಂಪೂರ್ಣವಾಗಿ ಮೈಮುಚ್ಚುವಂತಹ ಬೆಚ್ಚಗಿನ ಬಟ್ಟೆಯನ್ನು ಧರಿಸಿ . ಕಿವಿಗೆ ಹತ್ತಿಯನ್ನು, ಸ್ಕಾರ್ಫ್ ಅನ್ನು ಅಥವಾ ಕಿವಿ ಮುಚ್ಚುವಂಥ ಟೋಪಿಯನ್ನು ಧರಿಸಿ. ಹಲವು ವಯೋವೃದ್ದರು ಚಳಿಗಾಲದಲ್ಲಿ ಟೋಪಿ ಧರಿಸುವುದು ತಾವೆಲ್ಲರೂ ಗಮನಿಸಿದ್ದೀರಿ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಟೋಪಿ ಧರಿಸುವುದು ಪ್ರಾರಂಭವಾಗಿದೆ ಚಳಿ ಬೀಳುವ ಮೊದಲೇ ಚಲನಚಿತ್ರದಲ್ಲಿ ಇರುವಂತಹ ನಾಯಕರುನಾಯಕಿಯರು ಧರಿಸಿ ದಂತಹ ರೀತಿಯ ಟೋಪಿ ಧರಿಸುವುದು ಕಾಣಲು ಸಿಗುತ್ತದೆ. ಗಮನಿಸಿ ನೋಡಿದರೆ ಅವು ಕೂದಲಿನ ಮೇಲೆ ಇರುತ್ತದೆ ಬಿಟ್ಟರೆ ಕಿವಿಯನ್ನ ಸಂಪೂರ್ಣವಾಗಿ ಮುಚ್ಚಿ ಇರುವುದಿಲ್ಲ ಅಂದರೆ ಅವಶ್ಯಕ ಉದ್ದೇಶದ ಬಳಕೆ ಮಾಡದೆ ಹೆಚ್ಚಾಗಿದೆ ಫ್ಯಾಷನ್ ಆಗಿ ಎಂದು ಅರ್ಥ ಅಷ್ಟೇ.
ಇನ್ನು ಮುಂದೆ ಕಾಲಿಗೆ ಧರಿಸುವಂತಹ ಬೂಟು ಚಪ್ಪಲಿಗಳಲ್ಲಿ ಬೂಟು ಹೆಚ್ಚು ಈ ಕಾಲಕ್ಕೆ ಅವಶ್ಯ. ಆದರೆ ಬೂಟು ಬೂಟಿನ ಒಳಗಡೆ ಧರಿಸುವಂತಹ ಸಾಕ್ಸ್ ಗಳನ್ನ ತೊಳೆಯುವುದು ಮರೆಯುವುದು ಬೇಡ, ಹಲವು ದಿನಗಳ ಕಾಲ ದುರ್ವಾಸನೆಯುಕ್ತ ಸಾಕ್ಸ್ ಗಳನ್ನು ಬಳಸುವುದರಿಂದ ಚರ್ಮ ವ್ಯಾಧಿಗಳಿಗೆ ಕಾರಣ ಇದಾಗಬಹುದು. ಸ್ವಚ್ಛ ತೊಳದಂತಹ ಸಾಕ್ಸ್ ಬಳಸಿ. ಚಳಿಯಂದು ಒಂದು ಗಂಟೆ ಹೆಚ್ಚಿಗೆ ಮಲಗದೆ ನಿಯಮಿತ ವ್ಯಾಯಾಮದ ರೂಡಿ ಈ ಚಳಿಗಾಲದಲ್ಲಿ ಅತಿಅವಶ್ಯ. ಚಳಿಗಾಲದಲ್ಲಿ ಚಳಿಗೆ ಬೆಚ್ಚಗೆ ಮಲಗಿಕೊಳ್ಳುವಂತಹ ಕ್ಕಿಂತ ಅತಿ ಹೆಚ್ಚಿನ ಆರಾಮದಾಯಕ ಇತರ ವಿಷಯಗಳು ಇರುವುದಿಲ್ಲ ಹೌದು ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಿಯಮಿತ ವ್ಯಾಯಾಮ ಯೋಗ ಧ್ಯಾನ ಚಳಿಗಾಲದಲ್ಲಿ ಅವಶ್ಯವಾಗಿ ತಪ್ಪದೇ ಅನುಸರಿಸಬೇಕು.
ಹಾಗಾದರೆ ಈಲೇಪಗಳು ಮನೆಯಲ್ಲಿ ಮಾಡುವುದು ಸಾಧ್ಯವೇ ಖಂಡಿತವಾಗಿ ಸಾಧ್ಯ ತಾವು ಮನೆಯಲ್ಲಿಯೇ ಇದನ್ನ ಮಾಡಿದರೆ ಇದು ಪೆಟ್ರೋಲಿಯಂ ರಹಿತ ಒಂದು ಉತ್ಪನ್ನ ವಾಗುವುದು , ಮನೆಯಲ್ಲಿಯೇ ಇರುವಂತಹ ವಸ್ತುಗಳು ಯಾವ್ಯಾವುದು ಎಂದರೆ ತುಪ್ಪ ,ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಇವುಗಳು ಲೇಪವನ್ನು ಮಾಡಬಹುದು. ಹೆಚ್ಚಾಗಿ ಕೈ ಕಾಲುಗಳು ಮೈ ಒಡೆದಾಗ ಸುಲಭವಾಗಿ ಈ ಮೇಲಿನ ವಸ್ತುಗಳನ್ನ ಹೆಚ್ಚಿಗೆ ಪರಿಣಾಮಕಾರಿ ಸುಲಭವಾಗಿ ಉಪಯೋಗಿಸುವಂತಹ ಒಂದು ಸರಳ ಉಪಾಯ ಎಂದರೆ 500 ಗ್ರಾಂ ಯಾವುದೇ ,ಎಣ್ಣೆಗೆ ಒಂದು 150 ಗ್ರಾಂ ನಷ್ಟು ಉತ್ತಮ ಶುದ್ಧ ಜೇನು ಮೇಣವನ್ನು ಸೇರಿಸಿ ಬಿಸಿ ಮಾಡಿ ಎರಡನ್ನ ಕರಗಿಸಿ ಶೇಖರಿಸಿ ಇಟ್ಟುಕೊಳ್ಳಬಹುದು. ಇದು ಚಳಿಗಾಲದ ಲೇಪಕ್ಕೆ ಕೈ ಕಾಲು ತುಟಿ ಮುಖ ಇವುಗಳಿಗೆ ಯಾವುದೇ ತೊಂದರೆ ಇಲ್ಲದೆ ಉಪಯೋಗಿಸಬಹುದು. ಹೆಚ್ಚಿಗೆ ಪ್ರಮಾಣದಲ್ಲಿ ಇದನ್ನ ತಯಾರಿಸಿ ಇಟ್ಟುಕೊಳ್ಳುವುದು ಬೇಡ ಕೆಲವೇ ಕೆಲವು ದಿನಗಳ ಮಟ್ಟಿಗೆ ಬೇಕಾಗುವಷ್ಟು ತಯಾರಿಸಿ ಶೇಖರಿಸಿ. ಇದು ಪೆಟ್ರೋಲಿಯಂ ಜಲಿಯಂತೆ ಚರ್ಮದ ಮೇಲೆ ಕವಚದಂತೆ ಕೆಲಸ ಮಾಡದೆ ಎಣ್ಣೆ ಮತ್ತು ಜೇನುಮೇಣ ಚರ್ಮದ ಒಳಕ್ಕೆ ಹೋಗಿ ಚರ್ಮದರಕ್ಷಣೆಯನ್ನು ರುಕ್ಷತೆಯನ್ನು ಕಡಿಮೆ ಮಾಡುತ್ತದೆ ಹೇಳುವುದು ಇದರ ಹಿಂದಿನ ದೊಡ್ಡ ವಾಸ್ತವಂಶ. ಈ ರೀತಿ ತಯಾರಿಸಿದಂತಹ ಲೇಪ ಚರ್ಮ ತುಟಿ ಕೈ ಕಾಲು ಮುಖ ಇವೆಲ್ಲವುಗಳಿಗೂ ಲೇಪನಕ್ಕೆ ಬಳಸಬಹುದು ಇಲ್ಲವಾದಲ್ಲಿ ಪೇಟೆಯಲ್ಲಿ ನೀವು ಒಮ್ಮೆ ನೋಡಿದರೆ ದೇಹದ ಪ್ರತಿ ಭಾಗಕ್ಕೂ ಪ್ರತ್ಯೇಕ ಪ್ರತ್ಯೇಕವಾದಂತಹ ಲೇಪ ದ ಸಾಮಗ್ರಿಗಳನ್ನು ಖರೀದಿಸಬೇಕಾಗುತ್ತದೆ.
ಲೇಖನ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ
ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 9:59 pm, Wed, 6 December 23