ವಾತ ಮತ್ತು ಕಫಕ್ಕೆ ಪುಲಿ ಚಾಲಿಚತು ಉತ್ತಮ, ಇದನ್ನು ಮಾಡುವುದು ಹೇಗೆ?

ಪ್ರತಿದಿನ ಅಡಿಗೆ ಏನು ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವವರಿಗೆ, ಹಾಗೂ ಹುಳಿ, ಕಾರವಿರುವ ಆಹಾರ ಇಷ್ಟ ಪಡುವವರಿಗೆ, ವಾತ ಮತ್ತು ಕಫದ ಸಮಸ್ಯೆ ಹೊಂದಿರುವವರಿಗೆ ಇದು ತಕ್ಕ ರೆಸಿಪಿಯಾಗಿದೆ. ಮಾಡುವುದು ಹೇಗೆ ಅಂದುಕೊಳ್ಳುತ್ತಿದ್ದೀರಾ? ತುಂಬಾ ಸುಲಭ ರೆಸಿಪಿಯಾಗಿದ್ದು, ಮಾಡುವ ವಿಧಾನ ಇಲ್ಲಿದೆ.

ವಾತ ಮತ್ತು ಕಫಕ್ಕೆ ಪುಲಿ ಚಾಲಿಚತು ಉತ್ತಮ, ಇದನ್ನು ಮಾಡುವುದು ಹೇಗೆ?
ಪುಲಿ ಚಾಲಿಚತು
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 07, 2023 | 11:13 AM

ಹೆಸರು ಕೇಳುವುದಕ್ಕೆ ಸ್ವಲ್ಪ ವಿಚಿತ್ರವಾಗಿದ್ದರೂ ಕೂಡ ಇದರ ರುಚಿ ಮಾತ್ರ ಅಗಣಿತ. ಮನೆಯಲ್ಲಿ ಸುಲಭ ಮತ್ತು ವೇಗವಾಗಿ ಮಾಡಿಕೊಳ್ಳಬಹುದಾದ ಈ ಪದಾರ್ಥ ನಿಮಗೆ ಯಾವುದೇ ರೀತಿಯ ಕೆಲಸ ನೀಡದೆಯೇ ಅತಿ ಹೆಚ್ಚು ರುಚಿ ನೀಡುತ್ತದೆ. ಅಡಿಗೆ ಏನು ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವವರಿಗೆ, ಹಾಗೂ ಹುಳಿ, ಕಾರವಿರುವ ಆಹಾರ ಇಷ್ಟ ಪಡುವವರಿಗೆ. ವಾತ ಮತ್ತು ಕಫದ ಸಮಸ್ಯೆ ಹೊಂದಿರುವವರಿಗೆ ಇದು ತಕ್ಕ ರೆಸಿಪಿಯಾಗಿದೆ. ಮಾಡುವುದು ಹೇಗೆ ಅಂದುಕೊಳ್ಳುತ್ತಿದ್ದೀರಾ? ತುಂಬಾ ಸುಲಭ ರೆಸಿಪಿಯಾಗಿದ್ದು, ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಹುಣಸೆಹಣ್ಣು- ದೊಡ್ಡ ಲಿಂಬೆ ಹಣ್ಣಿನ ಗಾತ್ರದಷ್ಟು (ಹುಳಿ ಜಾಸ್ತಿ ತಿನ್ನುವವರು ಇನ್ನು ಸ್ವಲ್ಪ ಸೇರಿಸಿಕೊಳ್ಳಬಹುದು)

ಈರುಳ್ಳಿ – 1

ಹಸಿ ಮೆಣಸು – 1

ರುಚಿಗೆ ತಕ್ಕಷ್ಟು ಉಪ್ಪು

ಸ್ವಲ್ಪ ತೆಂಗಿನ ಎಣ್ಣೆ

ಇದನ್ನೂ ಓದಿ:ಮನೆಯಲ್ಲಿಯೇ ಆರೋಗ್ಯಕರ ಮ್ಯಾಗಿ ಮ್ಯಾಜಿಕ್ ಮಸಾಲ ತಯಾರಿಸುವುದು ಹೇಗೆ? 

ಮಾಡುವ ವಿಧಾನ:

ಮೊದಲು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಡಿ. ಈರುಳ್ಳಿ ಮತ್ತು ಹಸಿ ಮೆಣಸನ್ನು ಹೆಚ್ಚಿ ಅದನ್ನು ಚೆನ್ನಾಗಿ ಜಜ್ಜಿಕೊಳ್ಳಿ ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಸಿಕೊಳ್ಳಿ. ಜಜ್ಜಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಹುಣಸೆ ನೀರನ್ನು ಅದಕ್ಕೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ. ಇಷ್ಟು ಮಾಡಿದಲ್ಲಿ ಪುಲಿ ಚಾಲಿಚತು ಬಿಸಿ ಅನ್ನದೊಂದಿಗೆ ಬಡಿಸಲು ಸಿದ್ಧ.

ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು mommycooltales_aishu ಎಂಬ ಇನ್ಸ್ಟ್​​​​ಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಹಲವಾರು ಮಂದಿ ರೆಸಿಪಿ ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಕೆಲವರು ನಾವು ಕೂಡ ಇಂದೇ ನಮ್ಮ ಮನೆಯಲ್ಲಿ ಮಾಡಿ ತಿನ್ನುತ್ತೇವೆ ಎಂದಿದ್ದಾರೆ. ಮತ್ತೆ ಕೆಲವರು ಇಂತಹ ಹಲವಾರು ಸುಲಭ ರೆಸಿಪಿಗಳನ್ನು ನಮ್ಮೊಂದಿಗೆ ಮತ್ತೆ ಮತ್ತೆ ಹಂಚಿಕೊಳ್ಳಿ ಎಂದಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ