ನೀವು ಪ್ರೀತಿಸುವವರು ನಿಮ್ಮ ಜೊತೆ ಟೈಂಪಾಸ್ ಮಾಡುತ್ತಿದ್ದಾರಾ ಎಂದು ತಿಳಿಯುವುದು ಹೇಗೆ?
ನಿಮ್ಮ ಹುಡುಗ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾನಾ? ಅಥವಾ ನಿಮ್ಮೊಂದಿಗೆ ಸುಮ್ಮನೆ ಟೈಂಪಾಸ್ ಮಾಡುತ್ತಿದ್ದಾನಾ? ಎಂಬುದನ್ನು ನಿಮ್ಮ ಸಂಗಾತಿಯ ಕೆಲವು ಅಭ್ಯಾಸಗಳಿಂದ ನೀವು ತಿಳಿದುಕೊಳ್ಳಬಹುದು. ಅದನ್ನು ತಿಳಿದುಕೊಳ್ಳುವುದು ಹೇಗೆಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
ನೀವು ಒಬ್ಬರನ್ನು ಪ್ರೀತಿಸುವಾಗ ಅವರು ಕೂಡ ನಿಮ್ಮನ್ನು ಅಷ್ಟೇ ಪ್ರೀತಿಸಬೇಕೆಂದು ಬಯಸುವುದು ಸಹಜ. ಆ ಕಡೆಯಿಂದ ನೀವು ನಿರೀಕ್ಷೆ ಮಾಡಿದಷ್ಟು ಪ್ರೀತಿ, ಕಾಳಜಿ ಸಿಗದೇ ಹೋದಾಗ ಬೇಸರವಾಗುವುದು ಕೂಡ ಸಹಜ. ನಿಮ್ಮ ಸಂಗಾತಿಯು ನಿಮ್ಮನ್ನು ಗೌರವಿಸಬೇಕು, ನಿಮ್ಮನ್ನು ಪ್ರೀತಿಸಬೇಕು ಮತ್ತು ನಿಮಗೆ ಎಂದೂ ಸುಳ್ಳು ಹೇಳಬಾರದು ಎಂಬುದು ನಿಮ್ಮ ನಿರೀಕ್ಷೆಯಾಗಿರುತ್ತದೆ. ಪ್ರೀತಿಯ ಸಂಬಂಧದಲ್ಲಿ ಎಷ್ಟು ಪ್ರೀತಿಯಿರುತ್ತದೋ ಅಷ್ಟೇ ಪ್ರಮಾಣದ ಸಂಘರ್ಷವೂ ಇರುತ್ತದೆ. ಆದರೆ ಕೆಲವೊಮ್ಮೆ ಈ ಸಂಘರ್ಷವು ತುಂಬಾ ದೊಡ್ಡದಾಗಿ ತಮ್ಮ ಪಾರ್ಟನರ್ಗಳ ಮೇಲೆ ಅನುಮಾನ ವ್ಯಕ್ತಪಡಿಸಲು ಶುರು ಮಾಡುತ್ತಾರೆ. ಹಾಗಾದರೆ, ನಿಮ್ಮ ಸಂಗಾತಿ ನಿಮಗೆ ತಕ್ಕವರಾ? ಅವರು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಿದ್ದಾರಾ? ಎಂದು ತಿಳಿಯುವುದು ಹೇಗೆ?
ನಿಮ್ಮ ಹುಡುಗ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾನಾ? ಅಥವಾ ನಿಮ್ಮೊಂದಿಗೆ ಸುಮ್ಮನೆ ಟೈಂಪಾಸ್ ಮಾಡುತ್ತಿದ್ದಾನಾ? ಎಂಬುದನ್ನು ನಿಮ್ಮ ಸಂಗಾತಿಯ ಕೆಲವು ಅಭ್ಯಾಸಗಳಿಂದ ನೀವು ತಿಳಿದುಕೊಳ್ಳಬಹುದು. ಹಾಗಾದರೆ ಈ ಅಭ್ಯಾಸಗಳು ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಿದ್ರೆಗೂ ನಿಮ್ಮ ತೂಕಕ್ಕೂ ಏನು ಸಂಬಂಧ?
ಒಂದು ವೇಳೆ ನಿಮಗೆ ದುಃಖವಾಗಿದ್ದರೆ ನಿಮ್ಮ ಸಂಗಾತಿಯು ನಿಮ್ಮನ್ನು ನೋಡಿದ ತಕ್ಷಣ ಅದನ್ನು ಅರ್ಥ ಮಾಡಿಕೊಂಡರೆ ಅದು ಅವನು ನಿಮ್ಮನ್ನು ಪ್ರೀತಿಸುವ ಸಂಕೇತವಾಗಿರಬಹುದು. ಆದರೆ ನಿಮ್ಮ ಸಂಗಾತಿಯು ನಿಮ್ಮ ಮನಸ್ಥಿತಿಯ ಬಗ್ಗೆ ಗಮನ ನೀಡದೆ ತನ್ನ ಬಗ್ಗೆ ಮಾತ್ರ ಯೋಚಿಸಿದರೆ ಅಥವಾ ನಿಮ್ಮ ಬಗ್ಗೆ ಗಮನ ಹರಿಸದಿದ್ದರೆ ಅವನು ಟೈಂಪಾಸ್ ಮಾಡುತ್ತಿರಬಹುದು. ಅದು ನಿಜವಾದ ಪ್ರೀತಿ ಅಲ್ಲದೇ ಇರಬಹುದು.
ನಿಮ್ಮ ಸಂಗಾತಿ ನೀವು ತಪ್ಪು ಮಾಡಿದಾಗ ನಿಮ್ಮನ್ನು ಗದರಿಸಿದರೆ, ಅವನು ನಿಮ್ಮ ಬಗ್ಗೆ ಚಿಂತೆ ಮಾಡುತ್ತಿದ್ದಾನೆ ಮತ್ತು ಅವನು ನಿಮ್ಮನ್ನು ಪ್ರೀತಿಸುತ್ತಾನೆ ಎಂದರ್ಥ. ಆದರೆ, ನೀವು ಯಾವುದೇ ತಪ್ಪು ಹೆಜ್ಜೆ ಇಟ್ಟರೂ ಸಹ ನಿಮ್ಮ ಸಂಗಾತಿ ನಿಮಗೆ ಏನನ್ನೂ ಹೇಳದಿದ್ದರೆ, ಅವನು ಸುಮ್ಮನೆ ಸಮಯ ಕಳೆಯುತ್ತಿದ್ದಾನೆ ಎಂದರ್ಥ.
ಇದನ್ನೂ ಓದಿ: ಕಪ್ಪು ಬಣ್ಣದ ಮೇಲೆ ನಟಿ ಶ್ರುತಿ ಹಾಸನ್ಗೆ ಇದೆ ಸಿಕ್ಕಾಪಟ್ಟೆ ಪ್ರೀತಿ
ನೀವು ಪ್ರೀತಿಸುತ್ತಿರುವ ವ್ಯಕ್ತಿ ನಿಮ್ಮನ್ನು ಅವರ ಕುಟುಂಬಕ್ಕೆ ಪರಿಚಯಿಸಲು ಹಿಂಜರಿಯುವುದಿಲ್ಲ. ಆದರೆ, ಆತ ನಿಮ್ಮನ್ನು ಅವರ ಕುಟುಂಬದಿಂದ ದೂರ ಇಟ್ಟರೆ ಅದು ಟೈಂಪಾಸ್ ಪ್ರೀತಿ ಆಗಿರಬಹುದು. ಆತನ ಕುಟುಂಬಕ್ಕೆ ನಿಮ್ಮನ್ನು ಪರಿಚಯ ಮಾಡಿಸಿದರೆ ಅವನು ನಿಮ್ಮೊಂದಿಗೆ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ಬಯಸುತ್ತಾನೆ ಎಂದರ್ಥ. ಆದರೆ ನಿಮ್ಮ ಸಂಗಾತಿ ಕುಟುಂಬವನ್ನು ಭೇಟಿ ಮಾಡುವ ವಿಷಯವನ್ನು ಮುಂದೂಡಿದರೆ ಅಥವಾ ತಪ್ಪಿಸಿದರೆ, ಅವನು ನಿಮ್ಮೊಂದಿಗೆ ಸಮಯ ಕಳೆಯುತ್ತಿದ್ದಾನೆ ಎಂದು ಸೂಚಿಸುತ್ತದೆ.
ನಿಮ್ಮ ಸಂಗಾತಿ ಯಾವಾಗಲೂ ನಿಮ್ಮೊಂದಿಗೆ ಮಾತನಾಡುತ್ತಿದ್ದರೆ, ನಿಮ್ಮೊಂದಿಗೆ ಸಮಯ ಕಳೆಯುತ್ತಿದ್ದರೆ, ನಿಮ್ಮ ದುಃಖ ಮತ್ತು ತೊಂದರೆಗಳಲ್ಲಿ ಯಾವಾಗಲೂ ನಿಮ್ಮೊಂದಿಗೆ ನಿಂತರೆ ಅದು ಉತ್ತಮ ಸಂಬಂಧದ ಸಂಕೇತವಾಗಿದೆ. ನಿಮ್ಮ ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ, ನೀವು ಫೋನ್ ಮಾಡಿದಾಗ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಅಥವಾ ನಿಮ್ಮನ್ನು ಅವಾಯ್ಡ್ ಮಾಡುತ್ತಿದ್ದರೆ ಅವನು ನಿಮ್ಮೊಂದಿಗೆ ಸಮಯ ಕಳೆಯುತ್ತಿರಬಹುದು ಎಂದರ್ಥ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ