Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ನೀಡುವುದಕ್ಕಿಂತ ವ್ಯರ್ಥವಾಗದಂತೆ ಮಾಡುವುದೇ ಪುಣ್ಯ

ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರಾಜೆಕ್ಟ್ (ಯುಎನ್‌ಇಪಿ) ಪ್ರಕಟಿಸಿದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ರ ಪ್ರಕಾರ, ಪ್ರತಿ ವರ್ಷ ಉತ್ಪಾದನೆಯ ಒಟ್ಟು ಪ್ರಮಾಣದ ಆಹಾರದ ಮೂರನೇ ಒಂದು ಭಾಗವು ಆಹಾರ ಪೂರೈಕೆ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ವ್ಯರ್ಥವಾಗುತ್ತದೆ.

ಆಹಾರ ನೀಡುವುದಕ್ಕಿಂತ ವ್ಯರ್ಥವಾಗದಂತೆ ಮಾಡುವುದೇ ಪುಣ್ಯ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 07, 2023 | 3:00 PM

ತುಳಸಿ ಮದುವೆಯ ನಂತರ ಶುಭ ಸಮಾರಂಭಗಳ ಭರಬರಾಟೆ ಎಲ್ಲಡೆಯಲ್ಲಿ ದಿನವೊಂದಕ್ಕೆ ಎರಡು ಮೂರು ಶುಭ ಕಾರ್ಯಗಳು ಎಲ್ಲಾ ಕಡೆಗಳಲ್ಲಿಯೂ ಒಂದಕ್ಕಿಂತ ಹೆಚ್ಚು ಸಿಹಿ ಪದಾರ್ಥ. ಬಂದಂತಹ ನೆಂಟರು ಸ್ವೀಕರಿಸಲಿ ಬಿಡಲಿ ಅವರ ಊಟದ ನಂತರವೂ ಬಾಳೆಯಲ್ಲಿ ಪೂರ್ಣ ಆಹಾರ ತುಂಬಿದ್ದೇ ಇರುತ್ತದೆ.ಮೊನ್ನೆ ಒಂದು ಮದುವೆ ಊಟದಲ್ಲಿ ಕುಳಿತಾಗ ಗಮನಕ್ಕೆ ಬಂದ ಸಂಗತಿ 10 ಜನರಲ್ಲಿ ಬಾಳೆಯಲ್ಲಿ ಪಡೆದು ಆಹಾರವನ್ನು ಪೂರ್ಣ ಸ್ವೀಕರಿಸುವವರು ಇಬ್ಬರು ಮಾತ್ರ.ಹೆಚ್ಚಿನ ಪ್ರಮಾಣದಲ್ಲಿ ಬಾಳೆಯಲ್ಲಿ ಆಹಾರ ಬಿಟ್ಟು ಅನ್ನಕ್ಕೆ ಅಗೌರವ ಸೂಚಿಸುವವರೇ ಹೆಚ್ಚು. ಸಾಕಷ್ಟು ಉತ್ಪಾದನೆಯ ಹೊರತಾಗಿಯೂ, ಆಹಾರದ ಕೊರತೆಯು ಪ್ರಪಂಚದ ಆಘಾತಕಾರಿ ಬೃಹತ್ ಭಾಗದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಲಕ್ಷಾಂತರ ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು,  ಪ್ರತಿ ರಾತ್ರಿ ಹಸಿವಿನಿಂದ ಮಲಗುತ್ತಾರೆ  ಸೇವಿಸುವ ಆಹಾರದ ಬೃಹತ್ ಕೊರತೆಯಿಂದಾಗಿ.

ಪ್ರತಿ ಭಾರತೀಯರು ವರ್ಷಕ್ಕೆ 50 ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಾರೆ ಎಂದು ಯುಎನ್‌ಇಪಿ ಹೇಳಿದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರಾಜೆಕ್ಟ್ (ಯುಎನ್‌ಇಪಿ) ಪ್ರಕಟಿಸಿದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ರ ಪ್ರಕಾರ, ಪ್ರತಿ ವರ್ಷ ಉತ್ಪಾದನೆಯ ಒಟ್ಟು ಪ್ರಮಾಣದ ಆಹಾರದ ಮೂರನೇ ಒಂದು ಭಾಗವು ಆಹಾರ ಪೂರೈಕೆ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ವ್ಯರ್ಥವಾಗುತ್ತದೆ.ಸುಮಾರು 931 ಮಿಲಿಯನ್ ಟನ್‌ಗಳಷ್ಟು ಆಹಾರವು ಪ್ರಪಂಚದಾದ್ಯಂತ ಲಭ್ಯವಿರುವ ಒಟ್ಟು ಆಹಾರದ 17% ರಷ್ಟಿದೆ, ಇದು ಒಂದು ವರ್ಷದಲ್ಲಿ ವ್ಯರ್ಥವಾಗುತ್ತದೆ.ಭಾರತವೂ ಇದಕ್ಕೆ ಹೊರತಾಗಿಲ್ಲ. ಯುಎನ್‌ಇಪಿ ವರದಿಯ ಪ್ರಕಾರ, ಪ್ರತಿ ವರ್ಷಕ್ಕೆ ತಲಾ ಆಹಾರ ವ್ಯರ್ಥವಾಗುತ್ತಿರುವ ಭಾರತದ ಅಂದಾಜು 50 ಕೆಜಿಯಷ್ಟಿದ್ದರೆ, ಭಾರತೀಯ ಕುಟುಂಬಗಳಿಂದ ವರ್ಷಕ್ಕೆ ಉಂಟಾದ ವ್ಯರ್ಥವು 68,760,163 ಟನ್‌ಗಳಷ್ಟಿದೆ. ಕುಟುಂಬಗಳ ಹೊರತಾಗಿ, 61 ಪ್ರತಿಶತದಷ್ಟು ಆಹಾರ ವ್ಯರ್ಥಕ್ಕೆ ಹೋಟೆಲುಗಳು,ಸಮಾರಂಭಗಳ ಆಯೋಜನೆಗಳಲ್ಲಿ ಶೇ 39 .ಭಾರತದ ಅತಿ ದೊಡ್ಡ ನೆರೆಯ ರಾಷ್ಟ್ರವಾದ ಚೀನಾ, ಪ್ರತಿ ವರ್ಷಕ್ಕೆ ತಲಾ 64 ಕೆಜಿ ಆಹಾರ ವ್ಯರ್ಥವಾಗುತ್ತಿದೆ ಎಂದು ವರದಿ ಮಾಡಿದೆ,  ಬಾಂಗ್ಲಾದೇಶವು ಪ್ರತಿ ವ್ಯಕ್ತಿಗೆ ಪ್ರತಿ ವರ್ಷಕ್ಕೆ 65 ಕೆಜಿ ಮತ್ತು ಶ್ರೀಲಂಕಾ ಪ್ರತಿ ವ್ಯಕ್ತಿಗೆ ಅಂದಾಜು 76 ಕೆ.ಜಿ.

ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯನ್ನು ವರ್ಷ ಒಂದು ಎರಡು ವರ್ಷ ಎರಡು ವರ್ಷದಂತೆ ಮುಂದುವರಿಸುತ್ತಾ ಇದೆ ಇತ್ತೀಚಿಗನ ದಿನದಲ್ಲಿ ಐದು ವರ್ಷ ಮುಂದುವರಿಸುತ್ತದೆ ಎಂದು ಸುದ್ದಿ ಇದೆ. ಉಚಿತವಾಗಿ ನೀಡಿದಂತಹ ಆಹಾರ ತಾವೇನು ಹಣ ನೀಡಿದ್ದಲ್ಲ ಎಂದು ನಿರಾತಂಕವಾಗಿ ಪ್ರಜೆಗಳು ಅದನ್ನು ವ್ಯರ್ಥ ಮಾಡುತ್ತಾರೆ. ಆದ್ದರಿಂದ ಈ ವ್ಯರ್ಥ ಮಾಡುವ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಮೇಲಿನ ಅಂಕೆಗಿಂತ ಹೆಚ್ಚು. ಈ ವ್ಯರ್ಥವಾಗುವಂತಹ ಆಹಾರದ ಮೇಲೆ ಕಠಿಣ ಕಡಿವಾಣ ಹಾಕುವಂತಹ ಪ್ರಯತ್ನ ಆಗಬೇಕು. ವಿದ್ಯುತ್ ಶಕ್ತಿಯ ಒಂದು ಜಾಹಿರಾತಿನಂತೆ ವಿದ್ಯುತ್ತು ಉಳಿಕೆ ಮಾಡಿದ್ದು ಉತ್ಪಾದನೆ ಮಾಡಿದಂತೆ. ಈ ಮೇಲಿನಂತೆ ಅಂಕೆ ಸಂಖ್ಯೆಗಳಿಂದ ಆಹಾರಕ್ಕೂ ಇದು ಖಂಡಿತವಾಗಿಯೂ ಜಾರಿಗೆ ಬರುತ್ತದೆ ಆಹಾರ ವ್ಯರ್ಥ ಮಾಡುವುದು ತಪ್ಪಿಸಿದರೆ ಆಹಾರ ಉತ್ಪಾದಿಸಿದಂತೆ.

ಅನ್ನಬ್ರಹ್ಮ ಎನ್ನುವುದು ಭಾರತೀಯ ಸಂಸ್ಕೃತಿ ಸಂಸ್ಕೃತಿ ಶಾಸ್ತ್ರ ಹೇಳುವಾಗ ಮಾತ್ರ ಎಲ್ಲರೂ ಅನ್ನಬ್ರಹ್ಮ ಹೇಳುವುದು ಮರೆಯುವುದಿಲ್ಲ ವ್ಯರ್ಥ ಮಾಡುವಾಗ ಮಾತ್ರ ಅನ್ನ ಮತ್ತು ಬ್ರಹ್ಮ ಎರಡನ್ನು ಮರೆಯುತ್ತಾರೆ. ಮದುವೆ ಸಭೆ ಸಮಾರಂಭಗಳಲ್ಲಿ ಅವಶ್ಯವಿರುವಷ್ಟೇ ಆಹಾರವನ್ನು ಬಂದಂತಹ ಅತಿಥಿಗಳಿಗೆ ಉಣಬಡಿಸಿದರೆ ಅನ್ನದಾನ ಮಾಡಿದ್ದಕ್ಕಿಂತ ಹೆಚ್ಚು ಪುಣ್ಯ ಆ ಯಜಮಾನನಿಗೆ ಬರುವುದು ಎನ್ನುವುದು ಈ ಮೇಲಿನ ಎಲ್ಲ ವಿಷಯಗಳಿಂದ ತಿಳಿಯುವಂತಹ ಸಂಗತಿ.

ಇನ್ನು ಹೋಟೆಲ್ ರೆಸ್ಟೋರೆಂಟ್ಗಳು ಕೂಡ ಅನ್ನ ವ್ಯರ್ಥವಾಗದಂತೆ ಒಂದು ವಿಶೇಷ ಯೋಜನೆಯನ್ನ ಕೈಗೊಳ್ಳಬಹುದಾಗಿದೆ ಬಂದಂತಹ ಗ್ರಾಹಕರಲ್ಲಿ ಪುಟ್ಟ ಮಕ್ಕಳು ಆಹಾರ ವ್ಯರ್ಥ ಮಾಡದೇ ಇದ್ದರೆ ಅವರಿಗೆ ಒಂದು ಪುಟ್ಟ ಚಾಕ್ಲೇಟ್ ನಾಲ್ಕು ಜನರ ಎದುರಿಗೆ ನೀಡಿ ಆಹಾರ ವ್ಯರ್ಥ ಮಾಡಿಲ್ಲ ಆ ಕಾರಣಕ್ಕೆ ಈ ಬಹುಮಾನ ಹೇಳುವಂತಹ ಹೊಗಳಿಕೆಯ ಮಾತಿನ ನಿಂದ ನೀಡಿದರೆ ಈ ಪುಟ್ಟ ಮಕ್ಕಳು ಆದಿನದಿಂದ ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಈ ಪುಟ್ಟ ಚಾಕ್ಲೇಟ್ ನಿಮ್ಮ ಹೋಟೆಲ್ ಸದಾ ತುಂಬಿ ತುಳುಕುವಂತೆ ಬರುವ ದಶಕಗಳವರೆಗೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ತಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿ ಈ ಖಾದ್ಯ ಸೇವಿಸುತ್ತಾರೆ; ಏನಿದು ವಿಚಿತ್ರ ಆಹಾರ?

ಹಲವು ವರ್ಷಗಳ ಹಿಂದೆ ಬೆಂಗಳೂರು ಮಹಾನಗರದ ಪ್ರಸಿದ್ಧ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದೆ ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಅಡಿಯಲ್ಲಿ ಬರುವಂತಹ ದೇವಸ್ಥಾನ ಇದಾಗಿದ್ದು ಇಲ್ಲಿ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ ಅಲ್ಲಿ ಒಂದು ವಿಶೇಷ ಯೋಜನೆ ನಾನು ಕಣ್ಣಾರೆ ಕಂಡೆ ಕೈ ತೊಳೆಯುವಲ್ಲಿ ಒಬ್ಬ ಮಹಾತಾಯಿ ಕೈಯಲ್ಲಿ ಒಂದು ಕೋಲು ಹಿಡಿದು ಉಪಸ್ಥಿತ ಅವಳು ಯಾರು ಅನ್ನ ಬ್ರಹ್ಮಕ್ಕೆ ಅಗೌರವ ತೋರಿದ್ದಾರೆ ಎನ್ನುವುದು ನೋಡಿ ಹೇಳುವುದೇ ಅವಳ ಕಾಯಕ. ಈ ಕಾಯಕದ ಮಧ್ಯ ಅನ್ನಕ್ಕೆ ಗೌರವ ನೀಡುವಂತಹ ಎಲ್ಲಾ ಶಬ್ದಾವಳಿಗಳು ಅವಳ ಮಾತಿನಲ್ಲಿ. ಇದೇ ರೀತಿಯಾಗಿ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿಯೂ ಅನ್ನಕ್ಕೆ ಗೌರವ ತೋರುವ ಒಂದು ವಿಶೇಷ ಅಭಿಯಾನ ಮಠಮಾನ್ಯಗಳ ಮುಖ್ಯಸ್ಥರಿಂದ ಪೀಠಾಧಿಪತಿಗಳಿಂದ ಆಗಬೇಕಿದೆ.

ಈ ವರ್ಷವಂತೂ ಬರಗಾಲದ ಪರಿಸ್ಥಿತಿ ಎಂದು ಎಲ್ಲರಿಗೂ ತಿಳಿದಿದ್ದೆ ಇದೆ.ಬರಗಾಲ ಕಾಮಗಾರಿಗಳ ಬಗ್ಗೆ ವಿಪಕ್ಷ ,ಸರ್ಕಾರದ ಗಮನಹರಿಸುವಂತಹ ವಿಚಾರ ಮಾಡುತ್ತಿದ್ದಾರೆ ಹೇಳುವುದು ಅಷ್ಟೇ ಅವಶ್ಯಕ, ಅದರ ಜೊತೆಗೆ ಬರಗಾಲದ ನಿಮಿತ್ತ ಆಹಾರ ವ್ಯರ್ಥ ಮಾಡಬೇಡಿ ಎನ್ನುವುದು ಮಾತು ತಾವೂ ಅನುಸರಿಸಿ ಎಲ್ಲಾ ನಾಯಕರುಗಳಿಂದ ಪದೇಪದೇ ಬರುವಂತಾಗಬೇಕು. ಆಹಾರ ವ್ಯರ್ಥ ಆಗದಂತೆ ಸ್ವಯಂ ಪ್ರೇರಿತರಾಗಿ ಜನರು ಅನುಸರಿಸುವ ಅವಶ್ಯಕತೆ ಹೆಚ್ಚಾಗಿದೆ.(ನನಗೂ ಸೇರಿಸಿ).ಹೇಗೇ ದೇಶಮೊದಲು ಎಂದು ಹೇಳುತ್ತೇವೆ ಹಾಗೆ ನಾನು ಆಹಾರಕ್ಕೆ ಗೌರವಿಸುತ್ತೇನೆ ವ್ಯರ್ಥವಾಗದಂತೆ ವಿಶೇಷ ಗಮನ ಹರಿಸುತ್ತೇನೆ ಎಂದು ಹೇಳುವುದು ಮೊದಲು ಪ್ರಾರಂಭ ಆಗಬೇಕು,ನಂತರ ಅದನ್ನು ಜಾರಿಗೆ ಪ್ರಾರಂಭಿಸಬೇಕು.ಜಗತ್ತಿನಾದ್ಯಂತ ಯುದ್ಧದದ ವಾತಾವರಣ ಇದ್ದೇ ಇದೆ ಜೊತೆಗೆ ಬರಗಾಲ ನೈಸರ್ಗಿಕ ವಿಕೋಪಗಳು ಇವುಗಳ ಮಧ್ಯೆ ಆಹಾರ ವ್ಯರ್ಥ ಮಾಡದಂತಹ ಯುದ್ಧವು ಕೂಡ ತೀವ್ರ ಗತಿಯಲ್ಲಿ ಪ್ರಾರಂಭವಾಗಬೇಕಿದೆ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಮತ್ತಷ್ಟು ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: 

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ