Tulsi Puja: ತುಳಸಿ ಮದುವೆಯಲ್ಲಿ ನೆಲ್ಲಿಕಾಯಿಯನ್ನು ಯಾಕೆ ಪೂಜಿಸಬೇಕು? ಚಳಿಗಾಲದಲ್ಲಿ ಇದನ್ನು ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

ಆಮ್ಲಾ ಅಥವಾ ನೆಲ್ಲಿಕಾಯಿಯನ್ನು ನಾವು ವಿಷ್ಣುವಿನ ಪ್ರತೀಕವಾಗಿ ಪೂಜಿಸುತ್ತೇವೆ. ಪುರಾಣಗಳ ಉಲ್ಲೇಖದ ಪ್ರಕಾರ ವಿಷ್ಣು ವರಾಹ ರೂಪ ತಾಳಿದ್ದಾಗ ಅವನ ಕಣ್ಣಿನಿಂದ ಬಿದ್ದ ಹನಿಗಳಿಂದ ನೆಲ್ಲಿಕಾಯಿ ಗಿಡ ಹುಟ್ಟಿಕೊಂಡಿತು. ಹಾಗಾಗಿ ಆ ಗಿಡದಲ್ಲಿ ವಿಷ್ಣುವಿನ ಅಂಶವಿದೆ ಎಂದು ನಂಬಲಾಗುತ್ತದೆ. ಇದರಿಂದ ತುಳಸಿ ಜೊತೆ ನೆಲ್ಲಿಕಾಯಿಯ ಗಿಡವನ್ನು ವಿಷ್ಣುವಿನ ರೂಪವಾಗಿ ಪೂಜಿಸಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣಗಳು ಇವೆ. ಏನು ಕಾರಣ? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Tulsi Puja: ತುಳಸಿ ಮದುವೆಯಲ್ಲಿ ನೆಲ್ಲಿಕಾಯಿಯನ್ನು ಯಾಕೆ ಪೂಜಿಸಬೇಕು? ಚಳಿಗಾಲದಲ್ಲಿ ಇದನ್ನು ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Nov 24, 2023 | 5:37 PM

ತುಳಸಿ ಪೂಜೆ ಒಂದು ಸಾಂಕೇತಿಕವಾದ ಕಾರ್ಯಕ್ರಮ. ಕಾರ್ತಿಕ ಶುಕ್ಲ ದ್ವಾದಶಿಯಂದು ತುಳಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇಲ್ಲಿ ತುಳಸಿಯನ್ನು ಲಕ್ಷ್ಮೀ ರೂಪದಲ್ಲಿ ಮತ್ತು ನೆಲ್ಲಿಕಾಯಿಯನ್ನು ಕೃಷ್ಣ ಅಥವಾ ವಿಷ್ಣುವಿನ ರೂಪವನ್ನು ಸಂಕೇತಿಸುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಧನ್ವಂತರಿ ಅಮೃತವನ್ನು ಹಂಚಬೇಕಾದರೆ ಅಮೃತದ ಕೆಲವು ಹನಿಗಳು ಭೂಮಿಗೆ ಬೀಳುತ್ತದೆ ಆ ಹನಿಗಳು ತುಳಸಿ ಗಿಡಗಳಾದವು ಎಂಬ ನಂಬಿಕೆ ಇದೆ. ಈ ತುಳಸಿ ಆಯುರ್ವೇದ, ಈಸ್ಟರ್ನ್ ಮೆಡಿಸಿನ್ ಗಳಲ್ಲಿ “ಕ್ವೀನ್ ಆಫ್ ಹರ್ಬ್ಸ್” ಎಂದು ಗುರುತಿಸಿಕೊಂಡಿದೆ. ಅಂದರೆ ಎಲ್ಲ ಗುಣಪಡಿಸುವಂತಹ ಶಕ್ತಿಯನ್ನು ಹೊಂದಿದೆ ಎಂಬ ಅರ್ಥವನ್ನು ನೀಡುತ್ತದೆ.

ಇನ್ನು ಆಮ್ಲಾ ಅಥವಾ ನೆಲ್ಲಿಕಾಯಿಯನ್ನು ನಾವು ವಿಷ್ಣುವಿನ ಪ್ರತೀಕವಾಗಿ ಪೂಜಿಸಲಾಗುತ್ತದೆ. ಪುರಾಣಗಳ ಉಲ್ಲೇಖದ ಪ್ರಕಾರ ವಿಷ್ಣು ವರಾಹ ರೂಪ ತಾಳಿದ್ದಾಗ ಅವನ ಕಣ್ಣಿನಿಂದ ಬಿದ್ದ ಹನಿಗಳಿಂದ ನೆಲ್ಲಿಕಾಯಿ ಗಿಡ ಹುಟ್ಟಿಕೊಂಡಿತು. ಹಾಗಾಗಿ ಆ ಗಿಡದಲ್ಲಿ ವಿಷ್ಣುವಿನ ಅಂಶವಿದೆ ಎಂದು ನಂಬಲಾಗುತ್ತದೆ. ಹಾಗಾಗಿ ತುಳಸಿ ಜೊತೆ ನೆಲ್ಲಿಕಾಯಿಯ ಗಿಡವನ್ನು ವಿಷ್ಣುವಿನ ರೂಪವಾಗಿ ಪೂಜಿಸಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣಗಳು ಇವೆ. ಏನು ಕಾರಣ? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಜ್ಯೋತಿಷ್ಯ, ವಾಸ್ತು ಶಾಸ್ತ್ರಗಳು ಹೇಳುವುದೇನು?

ವಾಸ್ತು ಶಾಸ್ತ್ರದಲ್ಲಿ ಪೂರ್ವ ದಿಕ್ಕಿನಲ್ಲಿ ನೆಲ್ಲಿ ಗಿಡವನ್ನು ನೆಡುವುದರಿಂದ ಕೆಟ್ಟ ಶಕ್ತಿಯಿಂದ ದೂರವಿರಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಪೂರ್ವ ದಿಕ್ಕೇ ಏಕೆ ಎಂಬ ಪ್ರಶ್ನೆ ಬರಬಹುದು, ಏಕೆಂದರೆ? ನೆಲ್ಲಿ ಗಿಡ ತುಂಬಾ ಎತ್ತರಕ್ಕೆ ಬೆಳೆಯುವುದಿಲ್ಲ. ಜೊತೆಗೆ ಬೆಳಕು ಬರುವುದನ್ನು ಸಹ ತಡೆಯುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ, ನೆಲ್ಲಿಕಾಯಿಯನ್ನು ಒಂದು ತೂತು ಮಾಡಿ ಅದನ್ನು ನೀರಿನಲ್ಲಿ ಹಾಕಿಟ್ಟು ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಲವು ಗ್ರಹಚಾರಗಳಿಂದ ಮುಕ್ತಿ ಹೊಂದಬಹುದು ಎನ್ನಲಾಗುತ್ತದೆ. ಜೊತೆಗೆ ನೆಲ್ಲಿಕಾಯಿ ರಸವನ್ನು ಬಳಸುವುದರಿಂದ ಚರ್ಮ ಮತ್ತು ಕೂದಲಿಗೆ ಅನೇಕ ರೀತಿಯ ಲಾಭಗಳಿವೆ ಎಂದು ವೈಜ್ಞಾನಿಕವಾಗಿಯೂ ತಿಳಿದು ಬಂದಿದೆ. ಧಾರ್ಮಿಕ ಗ್ರಂಥಗಳಲ್ಲಿ ಹೇಳುವ ಪ್ರಕಾರ ಒಂದು ನೆಲ್ಲಿ ಗಿಡವನ್ನು ನೆಟ್ಟು ಬೆಳೆಸುವುದು ಒಂದು ರಾಜಸೂಯ ಯಾಗವನ್ನು ಮಾಡಿದಷ್ಟು ಪೂಣ್ಯ ಲಭಿಸುತ್ತದೆ ಎನ್ನಲಾಗುತ್ತದೆ.

ವಾತ, ಪಿತ್ತ, ಕಫಾ ಈ ಮೂರನ್ನು ಗುಣಪಡಿಸುತ್ತದೆ?

ಆಯುರ್ವೇದದಲ್ಲಿ ಇದನ್ನು ಧಾತ್ರಿ ಎಂದು ಕರೆಯಲಾಗುತ್ತದೆ ಅಂದರೆ ತಾಯಿ ಅಥವಾ ಪೋಷಣೆ ನೀಡುವವಳು ಎಂಬ ಅರ್ಥವನ್ನು ಸೂಚಿಸುತ್ತದೆ. ಇದು ನಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪೋಷಣೆ ಒದಗಿಸುವುದರಿಂದಲೂ ಈ ಅರ್ಥ ಸಮರ್ಥವೆನಿಸುತ್ತದೆ. ಆಯುರ್ವೇದದಲ್ಲಿ ಆಚಾರ್ಯ ಚರಕರು ಹೇಳುವ ಪ್ರಕಾರ ನೆಲ್ಲಿಕಾಯಿ ಪ್ರತಿನಿತ್ಯವೂ ಸೇವಿಸಬಹುದಾದ ಏಕೈಕ ಹಣ್ಣಾಗಿದೆ. ನಾವು ಇದನ್ನು ದಿನವೂ ಉಪಯೋಗಿಸುವುದರಿಂದ ನಮ್ಮ ಆರೋಗ್ಯ ನಮ್ಮ ಹಿಡತದ್ಲಲಿರುತ್ತದೆ ಎನ್ನುತ್ತಾರೆ. ಏಕೆ ಇದನ್ನು ಪ್ರತಿನಿತ್ಯವೂ ಉಪಯೋಗಿಸಬಹುದು ಎಂದರೆ ಇದು ಸಮಧಾತು, ಅಂದರೆ ವಾತ, ಪಿತ್ತ, ಕಫಾ ಈ ಮೂರರಲ್ಲಿಯೂ ಯಾವುದೇ ರೀತಿಯ ತೊಂದರೆಗಳಿದ್ದರೂ ಅದನ್ನು ಸರಿಪಡಿಸುವ ಶಕ್ತಿ ನೆಲ್ಲಿಯಲ್ಲಿದೆ. ಆಯುರ್ವೇದ ಪ್ರಕಾರ ಚಳಿಗಾಲದಲ್ಲಿ ನಾವು ಸಿಹಿ ಹುಳಿ ಮತ್ತು ಲವನಾಂಶವಿರುವ ಆಹಾರವನ್ನು ತೆಗೆದುಕೊಳ್ಳಬೇಕು ಎಏಕೆಂದರೆ ತಂಡಿಯ ಸಮಯದಲ್ಲಿ ಅಗ್ನಿ ಜಾಸ್ತಿ ಇರುತ್ತದೆ. ಆಗ ವಾತ ಪ್ರವೃತ್ತಿ ಜಾಸ್ತಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಇದನ್ನು ತಡೆಯುವುದು ಹುಳಿಯಿರುವ ಪದಾರ್ಥಗಳು ಮಾತ್ರ. ಹಾಗಾಗಿ ಚಳಿಗಾಲದಲ್ಲಿ ಹುಳಿಯಿರುವ ಹಣ್ಣುಗಳು ನಿಮಗೆ ಹೆಚ್ಚಾಗಿ ಕಂಡುಬರುತ್ತದೆ.

ಚಳಿಗಾಲದಲ್ಲಿ ನೆಲ್ಲಿ ಸೇವನೆ ಯಾಕಾಗಿ ಮಾಡಬೇಕು?

ಆಯುರ್ವೇದದಲ್ಲಿ ಹೇಳುವ ಪ್ರಕಾರ ಎಲ್ಲ ಕಾಯಿಲೆಗಳು ಹುಟ್ಟುವುದು ಕರುಳಿನಲ್ಲಿ, ಹಾಗಾಗಿ ವಾತ ಶುರುವಾಗುವುದು ಕೂಡ ಅಲ್ಲಿಂದಲೇ. ಇದರ ಮೊದಲ ಪರಿಣಾಮ ಆಗುವುದು ಜೀರ್ಣ ಕ್ರಿಯೆಯ ಮೇಲೆ. ಅಂದರೆ ಮಲಬದ್ಧತೆ, ಹೊಟ್ಟೆ ಉಬ್ಬರ, ನೋವು ಕಾಣಿಸಿಕೊಳ್ಳುತ್ತದೆ ಇದು ಬಳಿಕ ದೇಹಕ್ಕೆ ಹರಡುತ್ತದೆ. ಇದು ಚರ್ಮಕ್ಕೆ ಬಂದಾಗ ಒಣ ಚರ್ಮ ನಿಮ್ಮನ್ನು ಕಾಡುತ್ತದೆ. ಚಳಿಗಾಲದಳ್ಳಿ ಚರ್ಮ ಒಡೆದು ಇನ್ಫೆಕ್ಷನ್ ಆಗುತ್ತದೆ. ಇದಕ್ಕೆ ಮುಖ್ಯವಾಗಿ ಮಾಡಬೇಕಾದ ಪರಿಹಾರಗಳಲ್ಲಿ ಎಣ್ಣೆ ಸ್ನಾನ ಮೊದಲನೇಯದಾದರೆ ಎರಡನೇಯದು ಹುಳಿ ಇರುವ ಆಹಾರಗಳನ್ನು ಸೇವನೆ ಮಾಡುವುದು. ಅದರಲ್ಲಿಯೂ ನೆಲ್ಲಿಕಾಯಿಯನ್ನು ದಿನವೂ ಸೇವಿಸುವುದರಿಂದ ಒಣ ಚರ್ಮ ಆಗುವುದನ್ನು ಕಡಿಮೆ ಮಾಡಬಹುದು.

ನೆಲ್ಲಿಕಾಯಿಯಲ್ಲಿ ವಿಟಮಿಸ್ ಸಿ ಹೇರಳವಾಗಿದೆ. ಇನ್ನು ಇದು ಗಂಟುಗಳಲ್ಲಿ ಬಾಹುಗಳು ಬರುವುದನ್ನು ತಡೆಯುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮಕ್ಕಳ ಆರೋಗ್ಯಕ್ಕೂ ಕೂಡ ಇದು ಸಹಕಾರಿಯಾಗಿದೆ. ಕಾರ್ತೀಕ ಮಾಸದಲ್ಲಿ ಇದನ್ನು ವಿಷ್ಣುವಿನ ಪ್ರತೀಕವಾಗಿ ಬಳಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನೆಲ್ಲಿಕಾಯಿ ಬಿಡಲು ಪ್ರಾರಂಭವಾಗಿರುತ್ತದೆ. ಇನ್ನು ಬರುವ ಮೂರು ಮಾಸಗಳಲ್ಲಿ ಅಂದರೆ ಹೇಮಂತ ಋತು, ಶರದ್ ಋತು ಮತ್ತು ಶಿಶಿರ ಋತುವಿನಲ್ಲಿ ಈ ನೆಲ್ಲಿಕಾಯಿಯನ್ನು ವಿವಿಧ ರೂಪದಲ್ಲಿ ಬಳಸುವುದರಿಂದ ವಾತ ಕಾಯಿಲೆ ಯನ್ನು ತಡೆಯಲು ಸಹಾಯವಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದೂ ಸಂಸ್ಕ್ರತಿಯಲ್ಲಿ ತುಳಸಿ ಪೂಜೆಯ ನಂತರದ ದಿನಗಳಲ್ಲಿ ನೆಲ್ಲಿಕಾಯಿಯನ್ನು ಪ್ರತಿನಿತ್ಯ ಸೇವಿಸಬೇಕು ಎಂದು ಹೇಳಲಾಗುತ್ತದೆ.

ಮಾಹಿತಿ: ಡಾ. ಅನಿರುದ್ಧ ಉಡುಪ ಶ್ವಾಶಕೋಶ ತಜ್ಞರು, ವಿಡಿಯೋ ಕೃಪೆ: ಹಿಂದುತ್ವ ಮತ್ತು ಆರೋಗ್ಯ ಯೂಟ್ಯೂಬ್ ಚಾನಲ್

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್