Sleep: ಮಲಗುವ ಭಂಗಿ ಸರಿ ಇಲ್ಲದಿದ್ದರೆ ಅನುಭವಿಸುವ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ
ಜೀವನಶೈಲಿ, ಊಟ, ಓದುವ ಹಾಗೂ ಬರೆಯುವ ಹಾಗೆಯೇ ಕೂಡ ಮಲಗಲು ಕೂಡ ರೀತಿಯೆಂಬುದಿರುತ್ತದೆ. ನೀವು ಮಲಗುವ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಡುವ ಅಗತ್ಯವಿದೆ.
ಜೀವನಶೈಲಿ, ಊಟ, ಓದುವ ಹಾಗೂ ಬರೆಯುವ ಹಾಗೆಯೇ ಕೂಡ ಮಲಗಲು ಕೂಡ ರೀತಿಯೆಂಬುದಿರುತ್ತದೆ. ನೀವು ಮಲಗುವ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಡುವ ಅಗತ್ಯವಿದೆ. ಇಲ್ಲವಾದಲ್ಲಿ ನೀವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಲೇಖನದ ಪ್ರಕಾರ, ಯುವ ಮತ್ತು ಆರೋಗ್ಯವಂತ ಜನರು ನಿದ್ರೆಯ ಬಗ್ಗೆ ಅಷ್ಟು ಪ್ರಾಮುಖ್ಯತೆ ನೀಡುವುದಿಲ್ಲ.
ರಾಚೆಲ್ ಸಲಾಸ್ ವಿವರಿಸುವ ಹಾಗೆ, ವಯಸ್ಸಾದಂತೆ ನಮ್ಮ ಆರೋಗ್ಯವು ಬದಲಾಗುತ್ತದೆ. ಈ ಕಾರಣದಿಂದಾಗಿ, ನಮ್ಮ ಮಲಗುವ ಸ್ಥಾನವೂ ಮುಖ್ಯವಾಗಿದೆ.
ಈ ಲೇಖನದಲ್ಲಿ ಮಲಗುವ ವಿಧಾನಗಳ ಬಗ್ಗೆ ನೀವು ತಿಳಿಯಬಹುದು ಮಲಗಲು ಸರಿಯಾದ ಮಾರ್ಗ ಯಾವುದು? ಅನೇಕ ಬಾರಿ ನಾವು ಮಲಗಿದ ನಂತರ ಬೆನ್ನು ಅಥವಾ ಕುತ್ತಿಗೆಯಲ್ಲಿ ನೋವು ಅನುಭವಿಸುತ್ತೇವೆ. ಈ ಕುರಿತು ಡಾ.ರಾಚೆಲ್ ಸಲಾಸ್ ಅವರು ಹೇಳುವಂತೆ ಕುತ್ತಿಗೆ ನೋವು ಇರುವವರು ಬೆನ್ನಿನ ಮೇಲೆ ಮಲಗುವುದರಿಂದ ನೋವು ಉಲ್ಬಣಿಸಬಹುದು. ಮತ್ತೊಂದೆಡೆ, ನಿಮ್ಮ ಬೆನ್ನಿನ ಕೆಳಭಾಗದಲ್ಲಿ ನೋವು ಇದ್ದರೆ, ನಿಮ್ಮ ಬೆನ್ನಿನ ಮೇಲೆ ಮಲಗುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ , ಬೆನ್ನುಮೂಳೆಯಲ್ಲಿ ನೋವಿರುವ ಕಾರಣದಿಂದ ದಿಂಬನ್ನು ಹೊಂದಿಸುವ ಮೂಲಕ ನೀವು ವಿಶ್ರಾಂತಿ ನೀಡಬಹುದು.
ಸರಿಯಾದ ಭಂಗಿ ಮುಖ್ಯ ಮಲಗುವಾಗ ಭಂಗಿಯೂ ಬಹಳ ಮುಖ್ಯ. ನಿದ್ರೆ ಮಾಡುವಾಗ ಅನೇಕರು ತಮ್ಮ ಮೊಣಕಾಲು ಮತ್ತು ಮುಖವನ್ನು ಸೇರಿಕೊಳ್ಳುತ್ತಾರೆ. ಈ ಕಾರಣದಿಂದಾಗಿ , ಕುತ್ತಿಗೆ ಮತ್ತು ಬೆನ್ನುನೋವಿನ ಸಮಸ್ಯೆ ಶುರುವಾಗುತ್ತದೆ.
ಗೊರಕೆ ನಿಲ್ಲಿಸುವುದು ಹೇಗೆ? ಗೊರಕೆಯ ಸಮಸ್ಯೆಯಿಂದಲೂ ಅನೇಕ ಮಂದಿ ತೊಂದರೆಗೊಳಗಾಗುತ್ತಾರೆ. ಇದನ್ನು ತಪ್ಪಿಸಲು ಹೊಟ್ಟೆಯ ಮೇಲೆ ಮಲಗುವುದರಿಂದ ಗೊರಕೆ ಹೊಡೆಯುವ ಅಭ್ಯಾಸವನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ. ನೀವೂ ಎಲ್ಲೆ ಮಲಗಿದರೂ ಮೆತ್ತನೆಯ ಹಾಸಿಗೆ ಹಾಗೂ ಶುಚಿತ್ವವನ್ನು ಮೊದಲು ನೋಡಿ. ಇನ್ನು ಮುಂದೆ ನೀವು ಮಲಗುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ