ಹಸಿವಾದಾಗ ನಿಮ್ಗೂ ಸಿಕ್ಕಾಪಟ್ಟೆ ಕೋಪ ಬರುತ್ತಾ? ಇದಕ್ಕೆ ಕಾರಣ ಏನ್‌ ಗೊತ್ತಾ?

ಹಸಿದಾಗ ಮನುಷ್ಯ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾನೆ ಅನ್ನೋ ಮಾತನ್ನು ನೀವು ಕೂಡ ಕೇಳಿರಬಹುದು ಅಲ್ವಾ. ಆ ಮಾತಿನಂತೆ ಬೇರೆ ಸಣ್ಣಪುಟ್ಟ ವಿಷಯಗಳಿಗೆ ಕೋಪ ಬರುವಂತೆ ನಿಮಗೂ ಕೂಡಾ ತುಂಬಾ ಹಸಿವಾದಾಗ ಕೋಪ ಬರುತ್ತಾ, ಒಂಥರಾ ಕಿರಿಕಿರಿ ಭಾವನೆ ಉಂಟಾಗುತ್ತಾ? ಹೀಗೆ ಹಸಿದಾಗ ಕೋಪ ಬರುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಹಸಿವಾದಾಗ ನಿಮ್ಗೂ ಸಿಕ್ಕಾಪಟ್ಟೆ ಕೋಪ ಬರುತ್ತಾ? ಇದಕ್ಕೆ ಕಾರಣ ಏನ್‌ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 21, 2025 | 6:03 PM

ನಮ್ಮ ದೇಹಕ್ಕೆ  ಆಹಾರ ಎನ್ನುವಂತಹದ್ದು ಬಹಳ ಮುಖ್ಯ. ನಾವು ಸದೃಢವಾಗಿರಲು ಮತ್ತು ಆರೋಗ್ಯವಾಗಿರಲು ಪ್ರತಿದಿನ ಸರಿಯಾದ ಪ್ರಮಾಣದ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಹೀಗೆ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಸೇವಿಸುವ ಆಹಾರ (Healthy Food) ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಯೋಗಕ್ಷೇಮದ ಮೇಲೂ ಗಮನಾರ್ಹ ಪರಿಣಾಮ ಬೀರುತ್ತದೆ. ಹೌದು ಒಂದು ವೇಳೆ ದೀರ್ಘಕಾಲ ಆಹಾರ ಸೇವಿಸದೆ ಹಸಿವಿನಿಂದ ಇದ್ದರೆ, ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ನಿಮಗೂ ಕೂಡ ಹಸಿದಾಗ ಕೋಪ, ಕಿರಿಕಿರಿಯ ಭಾವನೆ ಉಂಟಾಗಿರಬಹುದಲ್ವಾ. ಹೀಗೆಹಸಿವಾದಾಗ ಮನುಷ್ಯನಿಗೆ ಕೋಪ ಬರುತ್ತೆ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆ. ಅಷ್ಟಕ್ಕೂ ಹಸಿದಾಗ ಕೋಪ ಏಕೆ ಬರುತ್ತೇ (why get angry when hungry) ಎಂಬುದನ್ನು ನೋಡೋಣ ಬನ್ನಿ.

ಹಸಿವಾದಾಗ ಮನುಷ್ಯನಿಗೆ ಕೋಪ ಬರುವುದೇಕೆ?

ಹಸಿದಾಗ ಮನುಷ್ಯನಿಗೆ ಕೋಪ ಮತ್ತು ಕಿರಿಕಿರಿ ಉಂಟಾಗುತ್ತದೆ, ಕೋಪಕ್ಕೂ ಹಸಿವಿಗೂ ಸಂಬಂಧವಿದೆ ಎಂಬುದು ಸಂಶೋಧನೆಯಿಂದಲೂ ಸಾಬೀತಾಗಿದೆ. ನೀವು ಕೂಡಾ ಹಸಿದಾಗ ಕೋಪಗೊಂಡು ಇತರರ ಮೇಲೆ ರೇಗಾಡಿರುತ್ತೀರಿ ಅಥವಾ ಹಸಿದಾಗ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡವರನ್ನು, ಹಸಿವಾದಾಗ ಮಕ್ಕಳು ಅಳುವುದನ್ನು ನೋಡಿರಬಹುದಲ್ವಾ. ಇದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ.

ಅದೇನೆಂದರೆ ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಶಕ್ತಿಯ ಅಗತ್ಯವಿದೆ. ಮೆದುಳು ತನಗೆ ಬೇಕಾದ ಶಕ್ತಿಯನ್ನು ಪಡೆಯಲು ರಕ್ತದಲ್ಲಿರುವ ಗ್ಲೂಕೋಸ್‌ ಅನ್ನು ಬಳಸುತ್ತದೆ. ಆದರೆ ಹಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮೆದುಳಿಗೆ ಅಗತ್ಯವಿರುವ ಶಕ್ತಿ ಸಿಗುವುದಿಲ್ಲ. ಇದರಿಂದ ಕೋಪ, ಬೇಸರ, ಕಿರಿಕಿರಿಯ ಭಾವನೆ ಉಂಟಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ
ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುವುದ ಹಿಂದಿನ ಕಾರಣವೇನು?
ಸಾರಾ ತೆಂಡೂಲ್ಕರ್ ಕೇಶ ಸೌಂದರ್ಯದ ರಹಸ್ಯ ಏನು ಗೊತ್ತಾ?
ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ
Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ?

ಇದನ್ನೂ ಓದಿ: ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ

ಹಸಿದಾಗ ಉಂಟಾಗುವ ಕೋಪಕ್ಕೆ ಈ ಹಾರ್ಮೋನುಗಳೇ ಕಾರಣ:

ದೀರ್ಘಕಾಲ ಹಸಿವಿನಿಂದ ಇದ್ದರೆ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ, ನಮ್ಮ ದೇಹವು ಗ್ಲೂಕೋಸ್ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರಲು ಮತ್ತು ಮೆದುಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು  ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌  ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡದ ಹಾರ್ಮೋನುಗಳೆಂದು ಕರೆಯಲ್ಪಡುವ ಈ ಹಾರ್ಮೋನು ಬಿಡುಗಡೆಯಾದಾಗ ಮನುಷ್ಯನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಮತ್ತು ಕಿರಿಕಿರಿಯ ಭಾವನೆ ಉಂಟಾಗುತ್ತದೆ. ಹೌದು ಈ ಹಾರ್ಮೋನುಗಳು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮತ್ತು ಇದರಿಂದ ಕೋಪ, ಬೇಸರ, ಕಿರಿಕಿರಿ ಎಲ್ಲಾ ರೀತಿಯ ಭಾವನೆಗಳು ಹೊರ ಬರುತ್ತವೆ.

ಈ ಕೋಪವನ್ನು ಕಡಿಮೆ ಮಾಡಲು ಏನು ಮಾಡಬೇಕು?

ಹಸಿವಾದಾಗ ಹೆಚ್ಚಿನವರಿಗೆ ಕೋಪ ಬರುತ್ತದೆ. ಹೀಗೆ ನಿಮಗೂ ಕೋಪ ಬಂದ್ರೆ ತಕ್ಷಣ ಚಾಕೊಲೇಟ್‌ ಅಥವಾ ಹಣ್ಣುಗಳನ್ನು ತಿನ್ನಬೇಕು. ಇಲ್ಲವೆ ಹಸಿವಾಗಲು ಪ್ರಾರಂಭವಾದ ತಕ್ಷಣ ಹೊಟ್ಟೆ ತುಂಬಾ ಊಟ ಮಾಡಿ.

 ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ