
ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಯ ಅಂದವನ್ನು ಹೆಚ್ಚಿಸುವ ಸಲುವಾಗಿ ಮನೆಯ ಗೋಡೆಯ ಮೇಲೆ ವಿವಿಧ ರೀತಿಯ ಫೋಟೋಗಳನ್ನು(wall frames) ನೇತು ಹಾಕುತ್ತಾರೆ. ಈ ಫೋಟೋಗಳು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮನೆಯಲ್ಲಿ ಸಕಾರಾತ್ಮಕತೆ, ನಕಾರಾತ್ಮಕತೆ ಹರಡುವ ಶಕ್ತಿಯನ್ನೂ ಹೊಂದಿರುತ್ತವೆ. ಹೌದು ಕೆಲವು ಫೋಟೋಗಳು ಮನೆಯಲ್ಲಿ ಸಮೃದ್ಧಿಯನ್ನು ತಂದರೆ, ಮನೆಯಲ್ಲಿ ನೇತು ಹಾಕುವ ಕೆಲವು ಫೋಟೋಗಳು ನಕಾರಾತ್ಮಕತೆಯನ್ನು ಹರಡುತ್ತವೆ. ಆದರೆ ಹೀಗೆ ಮನೆಯಲ್ಲಿ ಯಾವ ಫೋಟೋ ಇಡಬೇಕು, ಇಡಬಾರದು ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹೀಗಿರುವಾಗ ಯಾವ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತು ಹಾಕಿದರೆ (Avoid putting these photo on walls)ನಕಾರಾತ್ಮಕ ಶಕ್ತಿ ಹರಡುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಯುದ್ಧದ ಚಿತ್ರ: ಯುದ್ಧಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಥವಾ ಬೇಟೆಗೆ ಸಂಬಂಧಿಸಿದ ಚಿತ್ರಗಳನ್ನು ಮನೆಯಲ್ಲಿ ಇಡಲೇಬಾರದು ಎಂದು ಹೇಳುತ್ತಾರೆ. ಅವು ಯಾವಾಗಲೂ ಮನೆಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತದೆ. ಜೊತೆಗೆ ಮನೆಯಲ್ಲಿ ಅಪಶ್ರುತಿಯ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ.
ತಾಜ್ ಮಹಲ್ ಫೋಟೋ: ಪ್ರೀತಿಯ ಸಂಕೇತ ಎಂದು ಕೆಲವರು ಮನೆಯಲ್ಲಿ ತಾಜ್ ಮಹಲ್ ಫೋಟೋವನ್ನು ಇಡುತ್ತಾರೆ. ಆದ್ರೆ ಈ ಫೋಟೋವನ್ನು ಮನೆಯಲ್ಲಿ ಇಡಲೇಬಾರದು. ಶಾಸ್ತ್ರಗಳ ಪ್ರಕಾರ, ಸಮಾಧಿಯ ಚಿತ್ರವನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.
ನೋವು: ನೋವು, ದುಃಖಿತ, ಕೋಪ ಭಾವನೆಯಂತಿರುವ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತು ಹಾಕಬಾರದು. ಅಷ್ಟೇ ಅಲ್ಲದೇ ಆಕ್ರಮಣಕಾರಿ ಪ್ರಾಣಿಗಳ ಚಿತ್ರವನ್ನು ಸಹ ಮನೆ ಗೋಡೆಯ ಮೇಲೆ ನೇತು ಹಾಕಬಾರದು. ಇವುಗಳು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವಾಗಲೂ ಸಂತೋಷ ಮತ್ತು ಖುಷಿಯ ಸೂಚಕವಾದ ಫೋಟೋಗಳನ್ನು ಮಾತ್ರ ಇಟ್ಟುಕೊಳ್ಳಬೇಕು.
ಮಗು ಅಳುವ ಫೋಟೋ: ನಿಮ್ಮ ಮನೆಯ ಗೋಡೆಯ ಮೇಲೆ ಮಗು ಅಳುವ ಫೋಟೊವನ್ನು ಎಂದಿಗೂ ನೇತು ಹಾಕಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಮುಳುಗುತ್ತಿರುವ ಹಡಗು: ಕೆಲವರು ಮನೆಯ ಗೋಡೆಯ ಮೇಲೆ ಮುಳುಗುತ್ತಿರುವ ಹಡಗಿನ ಫೋಟೋವನ್ನು ನೇತು ಹಾಕುತ್ತಾರೆ. ಆದರೆ ಅಂತಹ ಫೋಟೋಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಶಾಂತಿಯನ್ನು ಉಂಟು ಮಾಡುತ್ತದೆ. ಅಲ್ಲದೆ ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.
ಗುಲಾಬಿ ಗಿಡ: ಕೆಲವರಿಗೆ ಗುಲಾಬಿ ಗಿಡಗಳೆಂದರೆ ಇಷ್ಟ. ಅದಕ್ಕಾಗಿ ಮನೆಯ ಗೋಡೆಯ ಮೇಲೆ ಗುಲಾಬಿ ಗಿಡಗಳ ಫೋಟೋವನ್ನು ಸಹ ನೇತು ಹಾಕುತ್ತಾರೆ. ಆದರೆ ಮುಳ್ಳುಗಳಿರುವ ಈ ಗಿಡಗಳ ಫೋಟೋ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದು ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದ್ರೆ ನಿಮ್ಮ ಇಡೀ ದಿನ ಚೆನ್ನಾಗಿರುತ್ತಂತೆ
ಜಲಪಾತದ ಚಿತ್ರ: ಕೆಲವರು ಮನೆಯಲ್ಲಿ ಜಲಪಾತಗಳ ಫೋಟೋವನ್ನು ಗೋಡೆಗೆ ನೇತು ಹಾಕುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಈ ಫೋಟೋಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಏಕೆಂದರೆ ಇದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ನೀರು ಹರಿದಂತೆ ನಿಮ್ಮ ಹಣವೂ ಹರಿದು ಹೋಗುತ್ತದೆ ಎಂದು ಹೇಳಲಾಗುತ್ತದೆ.
ಹೀಗಿರುವಾಗ ನಿಮ್ಮ ಮನೆಯಲ್ಲಿ ನೀವು ಇರಿಸಿಕೊಳ್ಳುವ ಯಾವುದೇ ಫೋಟೋಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಮಸುಕಾದ, ತುಂಡಾದ ಅಥವಾ ಒಡೆದ ಗಾಜನ್ನು ಹೊಂದಿರುವ ಫೋಟೋಗಳನ್ನು ಎಂದಿಗೂ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ