101 ವರ್ಷದ ನ್ಯೂರೋಲಜಿಸ್ಟ್​ನ ಯಶೋಗಾಥೆ; ಸಾಕ್ಷ್ಯಚಿತ್ರ ತೆಗೆಯಲು ಮುಂದಾದ ಮೊಮ್ಮಗ ಹೇಳೋದೇನು ನೋಡಿ

101 ವರ್ಷ ವಯಸ್ಸಿನ, ನರರೋಗ ತಜ್ಞರಾದ ಡಾ. ಹೊವಾರ್ಡ್ ಟಕರ್ ಅವರ ಕತೆ ಕೇಳಿದರೆ ನಿಮಗೂ ಇವರು ಸ್ಫೂರ್ತಿಯಾಗುತ್ತಾರೆ. ಸದ್ಯ, ಡಾ. ಟಕರ್ ವಿಶ್ವದ ಅತ್ಯಂತ ಹಳೆಯ ವೈದ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ, ಈ ವಯಸ್ಸಿನಲ್ಲೂ ಇವರು ರೋಗಿಗಳ ಆರೈಕೆ ಮಾಡುತ್ತಾರೆ.

101 ವರ್ಷದ  ನ್ಯೂರೋಲಜಿಸ್ಟ್​ನ ಯಶೋಗಾಥೆ; ಸಾಕ್ಷ್ಯಚಿತ್ರ ತೆಗೆಯಲು ಮುಂದಾದ ಮೊಮ್ಮಗ ಹೇಳೋದೇನು ನೋಡಿ
ಡಾ. ಹೋವರ್ಡ್ ಟಕರ್ ಮತ್ತು ಅವರ ಮೊಮ್ಮಗ ಆಸ್ಟಿನ್ ಟಕರ್
Follow us
ನಯನಾ ಎಸ್​ಪಿ
|

Updated on:Aug 19, 2023 | 5:42 PM

ಇತ್ತೀಚಿನ ವರ್ಷಗಳಲ್ಲಿ ಹೆತ್ತ ಅಪ್ಪ-ಅಮ್ಮನೇ ಮಕ್ಕಳಿಗೆ ಹೊರೆ ಆಗುವುದನ್ನು ನಾವು ನೋಡುತ್ತಲೇ ಇದ್ದೇವೆ. ಇನ್ನು ಅದೆಷ್ಟೋ ಮಕ್ಕಳು ಅಜ್ಜ-ಅಜ್ಜಿಯ ಮಮತೆ-ವಾತ್ಸಲ್ಯವಿಲ್ಲದೆ ಬೆಳೆದಿರುತ್ತಾರೆ. ಅಜ್ಜಿಯ ಕೈ ತುತ್ತು, ತಾತನ ಕತೆಗಳನ್ನು ಕೇಳುವ ಸೌಭಾಗ್ಯವನ್ನೇ ತಂದೆ-ತಾಯಿ ಕಿತ್ತುಕೊಂಡಿರುತ್ತಾರೆ ಏಕೆಂದರೆ ವೃದ್ದರನ್ನು ನೋಡಿಕೊಳ್ಳುವುದು ಅದೆಷ್ಟೋ ಜನರಿಗೆ ತಲೆ ನೋವಿನ ಕೆಲಸವೆನಿಸಿಬಿಡುತ್ತದೆ. ವೃದ್ಧರನ್ನು ವೃದ್ಧಾಶ್ರಮದಲ್ಲಿ ಬಿಡುವವರು ಹಲವರಾದರೆ ದಿಕ್ಕು-ದೆಸೆ ಇಲ್ಲದೆ ದಾರಿಯಲ್ಲಿಯೇ ಬಿಡುವ ಕೆಲವು ಕಲ್ಲು ಮನಸ್ಸಿನವರನ್ನೂ ನಾವು ನೋಡಿದ್ದೇವೆ.

ಆದರೆ ಇಲ್ಲೊಬ್ಬ ಮೊಮ್ಮಗ ಮತ್ತೆ ಅಜ್ಜನ ಕತೆ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. 101 ವರ್ಷದ ವೃದ್ಧ ತನ್ನ ಮೊಮ್ಮಗನಿಂದ ಪ್ರತಿ ದಿನ ಒಂದು ಹೊಸ ವಿಷಯವನ್ನು ಕಲಿಯುತ್ತಾನಂತೆ, ಅದೇ ರೀತಿ ಮೊಮ್ಮಗ ತನ್ನ ಪ್ರೀತಿಯ ಅಜ್ಜನ ಬಳಿ ದಿನಕ್ಕೆ ಒಂದರಂತೆ ಹೊಸ ವಿಷಯಗಳನ್ನು ಕಲಿಯುತ್ತಾ ಬಂದಿದ್ದಾನಂತೆ, ಇದೀಗ ತನ್ನ ಪ್ರೀತಿಯ ಅಜ್ಜನ ಸಾಕ್ಷ್ಯಚಿತ್ರ ತೆಗೆಯಲು ಈ ಯುವಕ ಮುಂದಾಗಿದ್ದಾನೆ. ಈ ತಾತ-ಮೊಮ್ಮಗನ ಕತೆ ಓದಿ ನೀವು ಏನು ಕಲಿಯಬಹುದು ಎಂಬುದನ್ನು ತಿಳಿಯಿರಿ.

ಡಾ. ಹೊವಾರ್ಡ್ ಟಕರ್ ಯಶೋಗಾಥೆ

101 ವರ್ಷ ವಯಸ್ಸಿನ, ನರರೋಗ ತಜ್ಞರಾದ ಡಾ. ಹೊವಾರ್ಡ್ ಟಕರ್ ಅವರ ಕತೆ ಕೇಳಿದರೆ ನಿಮಗೂ ಇವರು ಸ್ಫೂರ್ತಿಯಾಗುತ್ತಾರೆ. ಸದ್ಯ, ಡಾ. ಟಕರ್ ವಿಶ್ವದ ಅತ್ಯಂತ ಹಳೆಯ ವೈದ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ, ಈ ವಯಸ್ಸಿನಲ್ಲೂ ಇವರು ರೋಗಿಗಳ ಆರೈಕೆ ಮಾಡುತ್ತಾರೆ. ಈಗ ಇವರು ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡುತ್ತಿದ್ದಾರೆ. ಅವರ ಮೊಮ್ಮಗ, ಆಸ್ಟಿನ್ ಟಕರ್, ಇವರ ಅದ್ಬುತ ಜೀವನದ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡಲು ಮುಂದಾಗಿದ್ದಾರೆ.

26 ವರ್ಷ ವಯಸ್ಸಿನ ಆಸ್ಟಿನ್, ತನ್ನ ಅಜ್ಜನ ಕಲಿಕೆಯ ಉತ್ಸಾಹ ಮತ್ತು ಅವರ ಅಚಲ ನಿರ್ಣಯವನ್ನು ಮೆಚ್ಚುತ್ತಾ ಬೆಳೆದರು. 98 ನೇ ವಯಸ್ಸಿನಲ್ಲಿ, ಡಾ. ಟಕ್ಕರ್ COVID ರೋಗಿಗಳಿಗೆ ಚಿಕಿತ್ಸೆ ನೀಡಲು ಮನೆಯಿಂದ ಕದ್ದು ಹೋದಾಗ, ಇತರರಿಗೆ ಸಹಾಯ ಮಾಡುವಲ್ಲಿ ತನ್ನ ಆಳವಾದ ಬದ್ಧತೆಯನ್ನು ತೋರಿಸುತ್ತಿದ್ದ ಸಮಯವನ್ನು ಆಸ್ಟಿನ್ ನೆನಪಿಸಿಕೊಳ್ಳುತ್ತಾರೆ. ಈಗ, ಆಸ್ಟಿನ್ ತನ್ನ ಅಜ್ಜನ ಅತ್ಯದ್ಭುತ 75 ವರ್ಷಗಳ ವೃತ್ತಿಜೀವನದ ಕುರಿತು ಸಾಕ್ಷ್ಯಚಿತ್ರವನ್ನು ರಚಿಸುಲು ಮುಂದಾಗಿದ್ದಾರೆ.

ಹಿರಿಯರಿಂದ ನಾವು ಪ್ರತಿ ಸಣ್ಣದರಿಂದ ದೊಡ್ಡ ವಿಷಯಗಳನ್ನು ಕಲಿತಿರುತ್ತೇವೆ ಹಾಗಿರುವಾಗ ಅವರಿಗೆ ನಾವು ನೀಡುವುದು ಬಹಳಷ್ಟಿದೆ ಮತ್ತು ಅದನ್ನು ಪಾಲಿಸಬೇಕು ಎಂಬುದನ್ನು ನಮಗೆ ನೆನಪಿಸುವುದು ಸಾಕ್ಷ್ಯಚಿತ್ರದ ಉದ್ದೇಶವಾಗಿದೆ. ಈ ಚಿತ್ರಕ್ಕೆ ಜೀವ ತುಂಬಲು, ಆಸ್ಟಿನ್ ಮತ್ತು ಅವರ ತಂಡವು ‘ಕಿಕ್‌ಸ್ಟಾರ್ಟರ್’ ಮೂಲಕ ಹಣವನ್ನು ಸಂಗ್ರಹಿಸುತ್ತಿದೆ. ಡಾ.ಟಕ್ಕರ್ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ ಅವರು ಇತರರ ಜೀವನದಲ್ಲಿ ಮಾಡಿರುವ ಪ್ರಭಾವವನ್ನು ನೋಡಿ ಖುಷಿಪಡಬೇಕು ಎಂಬುದು ಈ ತಂಡದ ಗುರಿಯಾಗಿದೆ.

ಡಾ. ಟಕ್ಕರ್ ಅವರ ದೀರ್ಘಾಯುಷ್ಯದ ರಹಸ್ಯ

ಡಾ. ಟಕ್ಕರ್ ಅವರ ದೀರ್ಘಾಯುಷ್ಯದ ರಹಸ್ಯಗಳು ಸರಳವಾದರೂ ಆಳವಾಗಿದೆ. ಈ ವಯಸ್ಸಿನಲ್ಲೂಇವರು ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಕುತೂಹಲ ಮತ್ತು ಯುವ ದೃಷ್ಟಿಕೋನವನ್ನು ಕಾಪಾಡಿಕೊಂಡಿದ್ದಾರೆ. ಈ ಸಕ್ರಿಯ ಜೀವನಶೈಲಿಗೆ ತಳಿಶಾಸ್ತ್ರವು ಒಂದು ಕಾರಣ ಎಂದು ಡಾ. ಟಕ್ಕರ್ ಒಪ್ಪಿಕಂಡರೂ, ಅವರ ಮನಸ್ಥಿತಿಯೇ ಅವರನ್ನು ತೀಕ್ಷ್ಣವಾಗಿರಿಸಿದೆ ಎಂದು ಅವರು ಹೇಳುತ್ತಾರೆ. ಪ್ರತಿದಿನ, ಆಸ್ಟಿನ್ ತನ್ನ ಅಜ್ಜನಿಂದ ಹೊಸದನ್ನು ಕಲಿಯುತ್ತಾರೆ ಮತ್ತು ಆ ಪಾಠಗಳನ್ನು ತನ್ನ ಸ್ವಂತ ಜೀವನಕ್ಕೆ ಅನ್ವಯಿಸಲು ಶ್ರಮಿಸುತ್ತಾರೆ.

ಡಾ. ಟಕ್ಕರ್ ಅವರ ಜೀವನದಿಂದ ನಾವು ಕಲಿಯಬೇಕಾದದ್ದು ಏನೆಂದರೆ ಎಂದಿಗೂ ಯಾವ ಕೆಲಸವನ್ನು ಪ್ರಾರಂಭಿಸಿದ ನಂತರ ಮಧ್ಯದಲ್ಲೇ ಬಿಟ್ಟುಕೊಡಬಾರದು ಮತ್ತು ಯಾವಾಗಲೂ ಹೊಸ ಜ್ಞಾನವನ್ನು ಹುಡುಕುವುದನ್ನು ಅಭ್ಯಾಸ ಮಾಡುವುದು. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ ಇವರ ಆಸಕ್ತಿಯಿಂದಲೇ ಡಾ. ಟಕ್ಕರ್ 67 ನೇ ವಯಸ್ಸಿನಲ್ಲಿ ವಕೀಲರಾದರು. ಈಗಲೂ ಸಹ, ಅವರು ನವೀಕೃತವಾಗಿರಲು ತಂತ್ರಜ್ಞಾನದ ಸವಾಲುಗಳನ್ನು ನಿಭಾಯಿಸಲು ಸಿದ್ಧರಿದ್ದಾರೆ.

ಸಂಬಂಧಗಳ ಮೇಲಿನ ಅವರ ದೃಷ್ಟಿಕೋನವು ಅಷ್ಟೇ ಪ್ರಭಾವಶಾಲಿಯಾಗಿದೆ. ದ್ವೇಷವನ್ನು ಹಿಡಿದಿಟ್ಟುಕೊಳ್ಳುವುದರ ವಿರುದ್ಧ ಡಾ. ಟಕರ್ ಸಲಹೆ ನೀಡುತ್ತಾರೆ ಏಕೆಂದರೆ ಅದು ಇತರರಿಗಿಂತ ನಿಮಗೆ ಹೆಚ್ಚು ಹಾನಿ ಮಾಡುತ್ತದೆ. ಅವರ 66 ವರ್ಷಗಳ ನಿರಂತರ ದಾಂಪತ್ಯವು ರಾಜಿ ಮತ್ತು ಪರಸ್ಪರರನ್ನು ಪ್ರಶಂಸೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ: ನಾಗರ ಪಂಚಮಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ಇದರಿಂದ 7 ತಲೆಮಾರಿನವರೆಗೂ ದೋಷ ಅಂಟಿಕೊಳ್ಳುತ್ತದೆ!

101 ವರ್ಷದ ಡಾ. ಟಕ್ಕರ್ ಅವರ ಜೀವನಶೈಲಿ

ಡಾ. ಟಕ್ಕರ್ ಅವರ ಯಶಸ್ಸಿಗೆ ಮತ್ತೊಂದು ಕಾರಣ ಸಮತೋಲಿತ ಜೀವನವನ್ನು ಆನಂದಿಸುತ್ತಾರೆ. ಇವರು ದಿನನಿತ್ಯ ನಿಯಮಿತ ವ್ಯಾಯಾಮ ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ.

ಡಾ. ಹೊವಾರ್ಡ್ ಟಕ್ಕರ್ ಅವರ ಕಥೆಯು ಸ್ಫೂರ್ತಿಯ ದಾರಿದೀಪವಾಗಿದೆ, ಕಲಿಯಲು, ಸಂಬಂಧಗಳನ್ನು ಸರಿದೂಗಿಸಿಕೊಂಡು ಹೋಗಲು ಮತ್ತು ಸಂತೋಷವನ್ನು ಕಂಡುಕೊಳ್ಳಲು ನಮಗೆ ನೆನಪಿಸುತ್ತದೆ. ಅವರ ಪರಂಪರೆಯು ಸಕಾರಾತ್ಮಕ ಮನೋಭಾವದ ಶಕ್ತಿಯನ್ನು ಮತ್ತು ಉತ್ತಮವಾಗಿ ಬದುಕುವ ಜೀವನವನ್ನು ಹೇಳಿಕೊಡುತ್ತದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Sat, 19 August 23