Fat Burning Juices: ದೇಹದ ತೂಕ ಇಳಿಸಲು ಈ 5 ಜ್ಯೂಸ್​ಗಳನ್ನು ನಿಯಮಿತವಾಗಿ ಸೇವಿಸಿ

ಕ್ಯಾರೆಟ್​ನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಅಡಕವಾಗಿರುತ್ತದೆ. ಹೀಗಾಗಿ ಕ್ಯಾರೆಟ್​ ಜ್ಯೂಸ್​​ ಸೇವನೆಯಿಂದ  ದೇಹದ ತೂಕವನ್ನು ಇಳಿಸಿಕೊಳ್ಳಬಹುದು.

Fat Burning Juices: ದೇಹದ ತೂಕ ಇಳಿಸಲು ಈ 5 ಜ್ಯೂಸ್​ಗಳನ್ನು ನಿಯಮಿತವಾಗಿ ಸೇವಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 02, 2022 | 2:39 PM

ದೇಹದಲ್ಲಿ ಶೇಖರಣೆಯಾದ ಅತಿಯಾದ ಕೊಬ್ಬಿನಿಂದ ದೇಹದ ತೂಕ ಹೆಚ್ಚುತ್ತದೆ. ಇದರಿಂದ ಅತಿಯಾದ ರಕ್ತದೊತ್ತಡ ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಯೋಗ, ವ್ಯಾಯಾಮ ಪರಿಹಾರ ನೀಡುತ್ತದೆ. ಆದರೆ ಅದೇ ರೀತಿ ಸೇವಿಸುವ ಆಹಾರದಿಂದಲೂ ದೇಹದ ಕೊಬ್ಬನ್ನು ಕರಗಿಸಿಕೊಳ್ಳಬಹುದಾಗಿದೆ. ಅದರಲ್ಲಿ ದ್ರವ ಆಹಾರಗಳು ದೇಹದಲ್ಲಿನ ಕೊಬ್ಬನ್ನು ಕರಗಿಸಿ ಆರೋಗ್ಯವಾಗಿಡುತ್ತದೆ. ಅವುಗಳಲ್ಲಿ ಕೆಲವು ತರಕಾರಿಗಳ ಜ್ಯೂಸ್ (Juice)​ ನಿಮಗೆ ಹೆಚ್ಚು ಸಹಾಯವಾಗಬಲ್ಲದು. ಹಣ್ಣು ಮತ್ತು ತರಕಾರಿಗಳ ಜ್ಯೂಸ್​ನಲ್ಲಿ ಯಥೇಚ್ಚವಾದ ವಿಟಮಿನ್​ (Vitamin) ಮತ್ತು ಮಿನರಲ್ಸ್​ಗಳನ್ನು ಒಳಗೊಂಡಿರುತ್ತವೆ. ಇವು ದೇಹದಲ್ಲಿನ ಅತಿಯಾದ ಕೊಬ್ಬನ್ನು ಕರಗಿಸಿ ದೇಹವನ್ನು ಸುಸ್ಥಿಯಲ್ಲಿಡುತ್ತದೆ. ತೂಕ ಇಳಿಕೆಗೆ (Weight Loss) ನೆರವಾಗುತ್ತದೆ.

ಕ್ಯಾರೆಟ್​ ಜ್ಯೂಸ್​ ಕ್ಯಾರೆಟ್​ನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಅಡಕವಾಗಿರುತ್ತದೆ. ಹೀಗಾಗಿ ಕ್ಯಾರೆಟ್​ ಜ್ಯೂಸ್​​ ಸೇವನೆಯಿಂದ  ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಕೇವಲ ಕ್ಯಾರೆಟ್​ ಮಾತ್ರವಲ್ಲದೆ ಕ್ಯಾರೆಟ್​ನೊಂದಿಗೆ ಸೇಬು, ಕಿತ್ತಳೆಯನ್ನು ಸೇರಿಸಿ ಜ್ಯೂಸ್​ ಮಾಡಿ ಸೇವಿಸಬಹುದು. ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸುವುದರಿಂದ ದೇಹದ ಅತಿಯಾದ ಕೊಬ್ಬು ಕರಗುತ್ತದೆ.

ಹಾಗಲಕಾಯಿ ಜ್ಯೂಸ್​ ಪುರಾತನ ಕಾಲದಿಂದಲೂ ಹಾಗಲಕಾಯಿ  ತೂಕ ಇಳಿಕೆಗೆ ಹೆಸರುವಾಸಿಯಾದ ತರಕಾರಿ. ಅತಿ ಕಡಿಮೆ ಕ್ಯಾಲೋರಿಯುಳ್ಳ ತರಕಾರಿ ಕಹಿಯಾದರೂ ದೇಹಕ್ಕೆ ಉತ್ತಮ ಆಹಾರವಾಗಿದೆ. ಹೀಗಾಗಿ ದೇಹದ ತೂಕ ಇಳಿಕೆಗೆ ಹಾಗಲಕಾಯಿ ಜ್ಯೂಸ್​ನ ಬಳಕೆ ಹೆಲ್ತಿ ಎನ್ನುತ್ತಾರೆ ತಜ್ಞರು.

ಸೌತೆಕಾಯಿ ಜ್ಯೂಸ್​ ಯಥೇಚ್ಛವಾದ ನೀರಿನ ಅಂಶವಿರುವ ಸೌತೆಕಾಯಿ ದೇಹದ ತೂಕ ಇಳಿಕೆಗೆ ಉತ್ತಮ ತರಕಾರಿಯಾಗಿದೆ. ಕನಿಷ್ಠ ಮಟ್ಟದ ಕ್ಯಾಲೋರಿಯುಳ್ಳ ಈ ತರಕಾರಿಯಲ್ಲಿ ಸಮೃದ್ದವಾದ ಫೈಬರ್​ ಅಂಶವೂ ಅಡಗಿದೆ. ಹೀಗಾಗಿ ಕೊಬ್ಬು ಕರಗಿಸಲು ಸೌತೆ ಜ್ಯೂಸ್​ ಅನ್ನು ನೀವು ಟ್ರೈ ಮಾಡಲೇಬೇಕು.

ನೆಲ್ಲಿಕಾಯಿ ಜ್ಯೂಸ್​ ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್​ಅನ್ನು ಸೇವಿಸಿದರೆ ನಿಮ್ಮ ಚಯಾಪಚಯಕ್ಕೂ ಉತ್ತಮ ಆಹಾರಾವಗುತ್ತದೆ. ಜತೆಗೆ ದೇಹದ ತೂಕ ನಿಯಂತ್ರಣಕ್ಕೂ ಇದು ನೆರವಾಗಲಿದೆ. ನೆನಪಿಡಿ ನೆಲ್ಲಿಕಾಯಿ ಹುಳಿ ಅಂಶವಿರುವ ಆಹಾರವಾದ್ದರಿಂದ ಪಿತ್ತದ ದೇಹ ಪ್ರಕೃತಿಯುಳ್ಳವರು ಸೇವಿಸುವ ಮುನ್ನ ಎಚ್ಚರವಹಿಸಿ.

ದಾಳಿಂಬೆ ಜ್ಯೂಸ್​ ಕೇವಲ ತೂಕ ಇಳಿಕೆಗೆ ಮಾತ್ರವಲ್ಲ  ಕೂದಲಿನ ಆರೋಗ್ಯಕ್ಕೂ ದಾಳಿಂಬೆ ಹಣ್ಣು ನೆರವಾಗುತ್ತದೆ. ಹೀಗಾಗಿ ನಿಯಮಿತವಾದ ದಾಳಿಂಬೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಹಲವು ವಿಧಧ ಪೌಷ್ಟಿಕಾಂಶ ದೊರೆಯಲಿದೆ. ಅಲ್ಲದೆ ದಾಳಿಂಬೆಯಲ್ಲಿರುವ  ಆ್ಯಂಟಿಆಕ್ಸಿಡೆಂಟ್​ ಅಂಶ ಮತ್ತು ಸಂಯೋಜಿತ ಲಿನೋಲೆನಿಕ್ ಆಮ್ಲ ದೇಹದಲ್ಲಿದ ಕೊಬ್ಬನ್ನು ಕರಗಿಸುತ್ತದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯಾ.ಕಾಂ ವರದಿಯನ್ನು ಆಧರಿಸಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.)

ಇದನ್ನೂ ಓದಿ: 

Misunderstandings: ತಪ್ಪುತಿಳುವಳಿಕೆಯಾದಾಗ ಅರ್ಥಮಾಡಿಸಲು ಹೀಗೆ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?