ಬಾಯಾರಿಕೆಯನ್ನು ನೀಗಿಸಲು ಈ ಸಿಹಿಯಾದ ಪಾನೀಯವನ್ನು ಕುಡಿಯುವುದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಅಪಾಯವು ಹೆಚ್ಚು ಎನ್ನುವುದನ್ನು ಸಿಯೋಲ್‌ನ ಯೋನ್ಸೆ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ತಜ್ಞರು ಸ್ಪಷ್ಟ ಪಡಿಸಿದ್ದಾರೆ. ಹೌದು, ಜಮಾ ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಮಾಹಿತಿಯಲ್ಲಿ, ಅಧ್ಯಯನದ ವೇಳೆ 127,830 ಹೆಚ್ಚು ವಿದೇಶಿಗರನ್ನು ಪರೀಕ್ಷೆಗೆ ಒಳಪಡಿಸಲಾಯಿತು ಎನ್ನಲಾಗಿದೆ. ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಆಗುವ ಅಪಾಯದ ಮಟ್ಟವನ್ನು ಕಂಡು ಹಿಡಿಯುವ ಸಲುವಾಗಿ ಒಂದು ದಿನದಲ್ಲಿ ಈ ತಂಪು ಪಾನೀಯಗಳನ್ನು ಎಷ್ಟು ಬಾರಿ ಸೇವಿಸಿದ್ದಾರೆ ಎಂದು ಪ್ರಶ್ನೆ ಕೇಳಲಾಯಿತು.
ಈ ಅಧ್ಯಯನ ಬಳಿಕ ಸರಾಸರಿ 10 ವರ್ಷಗಳಲ್ಲಿ 4,459 ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಕೃತಕವಾದ ಈ ಸಿಹಿ ಪಾನೀಯಗಳನ್ನು ಸೇವಿಸುವುದರಿಂದ ರೋಗದಿಂದ ಬಳಲುತ್ತಿರುವ ಸಾಧ್ಯತೆಯು ಶೇಕಡಾ 10 ರಷ್ಟಿದೆ. ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುವ ಪ್ರಮಾಣವು ಶೇಕಡಾ 26 ರಷ್ಟು ಹೆಚ್ಚಾಗಬಹುದು ಎಂದು ದಕ್ಷಿಣ ಕೊರಿಯಾದ ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!
ನಿತ್ಯವು ಈ ಫಿಜ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಈ ಮಾರಣಾಂತಿಕ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆಯು ಐದನೇ ಒಂದು ಭಾಗದಷ್ಟು ಹೆಚ್ಚಾಗಬಹುದು. 10 ವರ್ಷಗಳವರೆಗೆ ಪ್ರತಿದಿನ ಒಂದು ಲೋಟ ಸೋಡಾ ಮಿಶ್ರಿತ ಪಾನೀಯವನ್ನು ಸೇವಿಸುವ ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುವ ಅಪಾಯವು ಹೆಚ್ಚಾಗಿರುತ್ತದೆ. ಆದರೆ ನೀರು ಅಥವಾ ಹಣ್ಣಿನ ರಸಗಳನ್ನು ಸೇವಿಸುವುದರಿಂದ ಈ ರೋಗಗಳ ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.
ನೈಸರ್ಗಿಕವಾಗಿ ತಯಾರಿಸಿದ ಹಣ್ಣಿನ ರಸವನ್ನು ಸೇವಿಸುವುದರಿಂದ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯು ಬರುವ ಸಾಧ್ಯತೆಯು ಕಡಿಮೆ ಎನ್ನಲಾಗಿದೆ. ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಈ ರೋಗದ ಅಪಾಯದ ವಿರುದ್ಧ ಹೋರಾಡಲು ಒಂದು ಸಾಧನವಾಗಿದೆ. ಹೀಗಾಗಿ ಮೂತ್ರಪಿಂಡವನ್ನು ರಕ್ಷಿಸಲು ಹಣ್ಣಿನ ರಸಗಳನ್ನು ಸೇವಿಸುವುದು ಒಳ್ಳೆಯ ಅಭ್ಯಾಸ ಎಂದು ಸಲಹೆಯನ್ನು ನೀಡಿದ್ದಾರೆ. ಒಂದು ವೇಳೆ ಮೂತ್ರಪಿಂಡ ಕಾಯಿಲೆಯು ಗಂಭೀರವಾದ ಬಳಿಕ ಕಾಣುವ ರೋಗಲಕ್ಷಣಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ