AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಪತಿಗೆ ಪ್ರಿಯವಾದ ಗರಿಕೆಯಲ್ಲಿದೆ ರೋಗ ನಿವಾರಕ ಗುಣ, ಇಲ್ಲಿದೆ ಸರಳ ಮನೆಮದ್ದು

ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಕಾಣಸಿಗುವ ಈ ಗರಿಕೆ ಹುಲ್ಲು ಗಣಪತಿಗೆ ಅತ್ಯಂತ ಅತಿ ಪ್ರಿಯವಾದ ಸಸ್ಯವಾಗಿದೆ. ಈ ಗರಿಕೆಯು ಪೋಷಕಾಂಶ ಸಮೃದ್ಧವಾಗಿದ್ದು, ಆಯುರ್ವೇದ ಔಷಧದಲ್ಲಿ ಸಾಂಪ್ರದಾಯಿಕ ಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಪೂಜೆಗೆ ಮಾತ್ರವಲ್ಲದೇ, ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಹೀಗಾಗಿ ಮನೆಮದ್ದನ್ನು ತಯಾರಿಸಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ.

ಗಣಪತಿಗೆ ಪ್ರಿಯವಾದ ಗರಿಕೆಯಲ್ಲಿದೆ ರೋಗ ನಿವಾರಕ ಗುಣ, ಇಲ್ಲಿದೆ ಸರಳ ಮನೆಮದ್ದು
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 26, 2024 | 12:41 PM

Share

ಗರಿಕೆ ಈ ಹೆಸರು ಎಲ್ಲರೂ ಕೇಳಿಯೇ ಇರುತ್ತಾರೆ. ಗರಿಕೆಯ ಎಲೆಗಳು ಉದ್ದವಾಗಿದ್ದು ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತದೆ. ಮಳೆಗಾಲದಲ್ಲಿ ದಟ್ಟವಾಗಿ ಬೆಳೆಯುವ ಈ ಗರಿಕೆಯೂ ಎಲ್ಲೆಡೆ ಹರಡಿಕೊಂಡಿರುತ್ತದೆ. ವಿಘ್ನ ವಿನಾಶಕನ ಪೂಜೆಯಲ್ಲಿ ಪ್ರಧಾನವಾಗಿರುವ ಈ ಗರಿಕೆಯನ್ನು ದೇವರಿಗೆ ಅರ್ಪಿಸಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಾರೆ. ಇದರಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಅಂಶಗಳಿದ್ದು, ರೋಗ ನಿವಾರಕ ಗುಣವನ್ನು ಹೊಂದಿರುವ ಔಷಧಿಗಳಲ್ಲಿ ಬಳಸಲಾಗುತ್ತದೆ.

* ಗರಿಕೆ ಹುಲ್ಲಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣಿನ ಸಮಸ್ಯೆಯಾಗುತ್ತಾರೆ.

* ನಾಲ್ಕು ಚಮಚ ಗರಿಕೆ ರಸದಲ್ಲಿ ಒಂದು ಲೋಟ ನೊರೆ ಹಾಲು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಉರಿಮೂತ್ರ ಸಮಸ್ಯೆಯು ದೂರವಾಗುತ್ತದೆ.

* ಸ್ವಲ್ಪ ಪ್ರಮಾಣದಷ್ಟು ಗರಿಕೆ, ಎರಡು ಚಮಚ ಜೀರಿಗೆ ಮತ್ತು ಒಂದು ಚಮಚ ಕಾಳು ಮೆಣಸಿನ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ, ಈ ಕಷಾಯವನ್ನು ಕುಡಿಯುವುದರಿಂದ ಅಲರ್ಜಿಯು ಗುಣಮುಖವಾಗುತ್ತದೆ.

* ಸುಟ್ಟ ಗಾಯಗಳಿಗೆ ಗರಿಕೆಯ ರಸವನ್ನು ಕೊಬ್ಬರಿ ಎಣ್ಣೆಯ ಜೊತೆ ಬೆರೆಸಿ ಹಚ್ಚಿದರೆ ಗಾಯವು ಮಾಗಿ, ಕಲೆಗಳು ಮಾಯವಾಗುತ್ತದೆ.

* ಗರಿಕೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಅರ್ಜಿರ್ಣ ಸಮಸ್ಯೆಯೂ ದೂರವಾಗುತ್ತದೆ.

* ನಿಶಕ್ತಿಯಾಗಿದ್ದಾಗ ಗರಿಕೆ ರಸಕ್ಕೆ ಜೇನು ಬೆರೆಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.

* ಹಸಿವಾಗದಿದ್ದಲ್ಲಿ ಗರಿಕೆ ರಸಕ್ಕೆ ಶುಂಠಿಪುಡಿ, ಜೀರಿಗೆ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಹಸಿವು ಕಡಿಮೆಯಾಗುತ್ತದೆ.

* ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಗರಿಕೆ ಹುಲ್ಲಿನ ರಸ ಕುಡಿಯುವುದರಿಂದ ಶಮನವಾಗುತ್ತದೆ.

* ಮೂಲವ್ಯಾಧಿ ಸಮಸ್ಯೆಯಿರುವವರು ಗರಿಕೆಯ ರಸವನ್ನು ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ನಿವಾರಣೆಯಾಗುತ್ತದೆ.

* ಗರಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಸೇವಿಸುತ್ತಿದ್ದರೆ ವಾಂತಿಯಾಗುವುದು ನಿಲ್ಲುತ್ತದೆ.

* ಉರಿಮೂತ್ರ ಸಮಸ್ಯೆಯಿದ್ದಲ್ಲಿ ಗರಿಕೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.

* ಗರಿಕೆಯ ರಸವನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಬೇಕೆಂದರೆ ಈ ಮಾರ್ಗಗಳನ್ನು ಅನುಸರಿಸಿ

* ಶೀತ ಮತ್ತು ಕಫದ ತೊಂದರೆಯಿದ್ದರೆ ಗರಿಕೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಗುಣಮುಖ ಕಾಣುತ್ತದೆ.

* ಬಾಯಿಯಿಂದ ದುರ್ವಾಸನೆಯಿಂದ ಬರುತ್ತಿದ್ದರೆ ಗರಿಕೆ ರಸವನ್ನು ಸೇವಿಸುವುದು ಪರಿಣಾಮಕಾರಿ.

* ಗರಿಕೆ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.

* ನಿದ್ರಾ ಹೀನತೆ, ಆಯಾಸದಿಂದ ಬಳಳುತ್ತಿದ್ದರೆ ಗರಿಕೆ ರಸವನ್ನು ಸೇವಿಸುವುದು ಉತ್ತಮವಾದ ಮನೆ ಔಷಧಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ