ನಮ್ಮಲ್ಲಿ ಪ್ರತಿಯೊಬ್ಬರಿಗೂ ಆತಂಕವು (anxiety) ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಅದು ದೈಹಿಕವಾಗಿಯೂ ಕಾಣಿಸಿಕೊಳ್ಳಬಹುದು. ಆತಂಕ ಭಯ ಮತ್ತು ಎಚ್ಚರಿಕೆಯ ಮೂಲಕ ಅಪಾಯ ಅಥವಾ ಹಠಾತ್ ಬೆದರಿಕೆಯ ಬದಲಾವಣೆಯು ಹತ್ತಿರದಲ್ಲಿದೆ ಎಂದು ಸಂಕೇತಿಸುತ್ತದೆ. ಆದರೆ ಕೆಲವೊಮ್ಮೆ ಆತಂಕವು ಉತ್ಪೆಕ್ಷಿತ, ಅನಾರೋಗ್ಯಕರ ಪ್ರಕ್ರಿಯೆಯಾಗುತ್ತದೆ. ಅನೇಕ ಮಕ್ಕಳು ಭಯ ಮತ್ತು ಚಿಂತೆಯನ್ನು ಹೊಂದಿರುತ್ತಾರೆ. ಹಾಗೂ ಕಾಲ ಕಾಲಕ್ಕೆ ದುಃಖ ಮತ್ತು ಹತಾಶೆಯನ್ನು ಅನುಭವಿಸಬಹುದು. ಮಕ್ಕಳ ಬೆಳವಣಿಗೆಯ ಸಮಯದಲ್ಲಿ ವಿವಿಧ ಭಯ ಕಾಣಿಸಿಕೊಳ್ಳಬಹುದು.
ಮಕ್ಕಳಲ್ಲಿ ಭಯ ಮತ್ತು ಚಿಂತೆಗಳು ವಿಶಿಷ್ಟವಾಗಿದ್ದರೂ, ತೀವ್ರವಾದ ಭಯ ಮತ್ತು ದುಃಖವು ಆತಂಕ ಅಥವಾ ಖಿನ್ನತೆಯ ಕಾರಣದಿಂದಾಗಿರಬಹುದು. ಈ ರೋಗಲಕ್ಷಣಗಳು ಪ್ರಾಥಮಿಕವಾಗಿ ಆಲೋಚನೆಗಳು ಮತ್ತು ಭಾವನೆಗಳನ್ನು ಒಳಗೊಂಡಿರುವುದರಿಂದ ಅವುಗಳನ್ನು ಕೆಲವೊಮ್ಮೆ ಆಂತರಿಕ ಅಸ್ವತ್ಥತೆ ಎಂದು ಕರೆಯಲಾಗುತ್ತದೆ. ಆರಂಭಿಕ ವಯಸ್ಸಿನ ಆತಂಕವು ವಿವಿಧ ಕಾರಣಗಳಿಂದ ಉಂಟಾಗಬಹುದು ಮತ್ತು ಇದು ಕೋವಿಡ್ ನಂತರದ ಶಾಲಾಪೂರ್ವ ಮಕ್ಕಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ. ಏಕೆಂದರೆ ಈ ವಯಸ್ಸಿನ ಗುಂಪು ಹೆಚ್ಚು ಪ್ರತ್ಯೇಕವಾಗಿದೆ ಮತ್ತು ಹೊರಗಿನ ಪ್ರಪಂಚಕ್ಕೆ ಶೂನ್ಯಕ್ಕಿಂತ ಕಡಿಮೆ ಒಡ್ಡಿಕೊಳ್ಳುತ್ತಿದೆ.
ಈ ಮಕ್ಕಳು ತಮ್ಮ ಗೆಳೆಯರೊಂದಿಗೆ ಯಾವುದೇ ಸಾಮಾಜಿಕ ಸಂವಹನವನ್ನು ಹೊಂದಿಲ್ಲ. ದುರದೃಷ್ಟವಶಾತ್ ಅವರು ಮನೆಯೊಳಗೆ ಸೀಮಿತವಾಗಿದ್ದಾರೆ. ಆದ್ದರಿಂದ ಈ ವಯಸ್ಸಿನ ಮಕ್ಕಳು ತಮ್ಮ ವಿರಾಮಕ್ಕಾಗಿ ಮೊಬೈಲ್ ಫೋನ್‌ಗಳನ್ನು ಆಶ್ರಯಿಸಿದರು. ಇದು ಅವರ ಒಟ್ಟಾರೆ ಅಭಿವೃದ್ಧಿ ಕೌಶಲ್ಯಗಳ ಮೇಲೆ ಪರಿಣಾಮ ಬೀರಿತು. ಪ್ರಿಸ್ಕೂಲ್‌ಗೆ ಹಾಜರಾಗುವುದು ಮತ್ತು ನಿಯಮಿತವಾಗಿ ಮನೆಯಿಂದ ಹೊರಗೆ ಹೋಗುವುದು ಮಗುವಿಗೆ ಸಾಮಾಜಿಕ ಸಂವಹನದ ಪರಿಕಲ್ಪನೆಯನ್ನು ಪರಿಚಯಿಸುತ್ತದೆ. ಮಕ್ಕಳು, ಹದಿಹರೆಯದವರು ಅಥವಾ ಯಾರೇ ಆತಂಕಕ್ಕೊಳಗಾದಾಗ ಗಮನಿಸಬೇಕಾದ ಕೆಲವು ಚಿಹ್ನೆಗಳ ಬಗ್ಗೆ ತಿಳಿಯೋಣಾ ಹಾಗೂ ಅದನ್ನು ಮನೆಯಲ್ಲಿ ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎಂಬುದನ್ನು ನೋಡೋಣಾ.
ಪುಣೆಯ ಪಿಂಪ್ರಿಯಲ್ಲಿರುವ ಡಾ.ಡಿವೈ ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮನೋವೈದ್ಯಶಾಸ್ತç ವಿಭಾಗದ ಪ್ರೊಫೆಸರ್ ಮತ್ತು ಹೆಚ್.ಒ.ಡಿ ಆಗಿರುವ ಡಾ. ಸುಪ್ರಕಾಶ್ ಚೌಧರಿ ಅವರು ಹೇಳುವಂತೆ ಆತಂಕವು ಅನುವಂಶಿಕ ಕಾರಣಗಳಿಂದಾಗಿ ಮತ್ತು ಜೀವನದ ಒತ್ತಡಗಳ ಪರಿಣಾಮವಾಗಿ ಉಂಟಾಗಬಹುದು. ಸಮಸ್ಯೆ ತೀವ್ರವಾಗಿದ್ದರೆ ಅಥವಾ ನಿರಂತರವಾಗಿದ್ದರೆ ಮನೋವೈದ್ಯರಿಂದ ಸ್ಪಷ್ಟ ರೋಗನಿರ್ಣಯವನ್ನು ಪಡೆಯುವುದು ಉತ್ತಮ ಎಂದು ಅವರು ಹೇಳಿದರು. ಇವರ ಪ್ರಕಾರ ಆತಂಕದ ಅಸ್ವಸ್ಥತೆಗಳೆಂದರೆ
ಇದನ್ನು ಓದಿ:lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ
ಪ್ರತ್ಯೇಕತೆಯ ಆತಂಕ: ಭದ್ರತೆ ಅಥವಾ ಸುರಕ್ಷತೆಯ ಭಾವನೆಗಳನ್ನು ಒದಗಿಸಿವ ವ್ಯಕ್ತಿ ಅಥವಾ ಸ್ಥಳದಿಂದ ಬೇರ್ಪಟ್ಟ ನಂತರ ಹೆಚ್ಚಿನ ಮಟ್ಟದ ಆತಂಕವು ಪ್ರತ್ಯೇಕತೆಯ ಆತಂಕದ ಅಸ್ವಸ್ಥತೆಗೆ ಕಾರಣವಾಗುತ್ತದೆ.
ಸಾಮಾಜಿಕ ಆತಂಕ: ಇದು ಸಾಮಾಜಿಕ ಸಂದಂರ್ಭಗಳಲ್ಲಿ ಇತರರಿಂದ ನಕಾರಾತ್ಮಕ ತೀರ್ಪು ಅಥವಾ ಮುಜುಗರದ ಭಯ.
ಆಯ್ದ ಮೌನತೆ: ಇದು ಕೆಲವು ಮಕ್ಕಳು ಅನುಭವಿಸುವ ಆತಂಕದ ಒಂದು ರೂಪವಾಗಿದೆ. ಇದರಲ್ಲಿ ಅವರು ಪರಿಚಿತ ಜನರ ಸುತ್ತಲೂ ಅತ್ಯುತ್ತಮ ಮೌಖಿಕ ಸಂವಹನ ಕೌಶಲ್ಯಗಳನ್ನು ಹೊಂದಿದ್ದರೂ ಸಹ, ಶಾಲೆಯಂತಹ ಕೆಲವು ಸ್ಥಳಗಳಲ್ಲಿ ಅಥವಾ ಸಂದರ್ಭಗಳಲ್ಲಿ ಮಾತನಾಡಲು ಸಾಧ್ಯವಾಗುವುದಿಲ್ಲ.
ಫೋಬಿಯಾ: ಇದು ಒಂದು ನಿರ್ದಿಷ್ಟ ವಸ್ತು ಅಥವಾ ಸನ್ನಿವೇಶದ ಅಭಾಗಲಬ್ಧ ಭಯ ಮತ್ತು ತಪ್ಪಿಸಿಕೊಳ್ಳುವಿಕೆ. ಫೋಬಿಯಾಗಳು ಇತರ ಆತಂಕದ ಅಸ್ವಸ್ಥತೆಗಳಂತೆ ಅಲ್ಲ, ಏಕೆಂದರೆ ಅವು ನಿರ್ದಿಷ್ಟ ಕಾರಣಕ್ಕೆ ಸಂಬಂಧಿಸಿವೆ.
ಪ್ಯಾನಿಕ್ ಡಿಸಾರ್ಡರ್: ಇದು ಮಕ್ಕಳು ತೀವ್ರ ಆತಂಕದಿಂದ ಪದೇ ಪದೇ ಬಳಲುವುದರ ಜೊತೆಗೆ ದೈಹಿಕ ಲಕ್ಷಣಗಳಾದ ಬಡಿತ, ಬೆವರುವುದು, ಅಲುಗಾಡುವಿಕೆ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಯಾಗಿದೆ.
ದೆಹಲಿಯ ಪಂಚಶೀಲ್ ಪಾರ್ಕ್ನಲ್ಲಿರುವ ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಸೆಂಟರ್‌ನ ಮಾನಸಿಕ ಆರೋಗ್ಯ ಮತ್ತು ವರ್ತನೆಯ ವಿಜ್ಞಾನ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಸಮೀರ್ ಮಲ್ಹೋತ್ರಾ ಅವರ ಪ್ರಕಾರ ಅನುವಂಶಿಕ ಪ್ರವೃತ್ತಿ, ಒತ್ತಡದ ಕೌಟುಂಬಿಕ ವಾತಾವರರಣ ವಿವಿಧ ಅಂಶಗಳು ಆತಂಕಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲಿನ ಭಾವನೆಗಳ ಉಚ್ಚಾರಣೆ, ಪೋಷಕರ ಅಪಶ್ರುತಿ, ಭಾವನಾತ್ಮಕ ಆಘಾತ, ಅತಿಯಾದ ನಿಬಂಧನೆಗಳು, ಅತಿಯಾದ ಮೊಬೈಲ್ ಬಳಕೆ, ಅನಾರೋಗ್ಯಕರ ಜೀವನ ಶೈಲಿ, ನಿದ್ರಾಹೀನತೆ ಮುಂತಾದವೆಲ್ಲಾ ಆತಂಕಕ್ಕೆ ಕಾರಣಗಳಾಗಿವೆ.
ಡಾ. ಸುಪ್ರಕಾಶ್ ಅವರು ಆರಂಭಿಕ ವಯಸ್ಸಿನ ಆತಂಕದ ಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ. ಮಾನಸಿಕ ಒತ್ತಡದ ಭಾವನೆ, ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದೇ ಇರುವುದು, ನಿದ್ರಿಸುವಾಗ ತೊಂದರೆ, ಆಗಾಗ ದುಸ್ವಪ್ನಗಳು ಬೀಳುವುದು, ಕಳಪೆಯಾಗಿ ತಿನ್ನುವುದು, ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುವುದು, ಹೊಟ್ಟೆಯ ಅಸ್ವಸ್ಥತೆ ಇವೆಲ್ಲಾ ಆತಂಕದ ರೋಗಲಕ್ಷಣಗಳು.
ಚೈಲ್ಡ್ ಸೈಕಾಲಜಿಸ್ಟ್ ಅರುಣಾ ಅಗರ್ವಲ್ ಅವರು ಪ್ರಕಾರ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಆತಂಕದ ರೋಗಲಕ್ಷಣಗಳು ಯಾವುದೆಂದರೆ, ಮಕ್ಕಳು ಜೋರಾಗಿ ಅಳುವುದು, ಸ್ನೇಹಪರವಾಗದೆ ಇರುವುದು, ಪೋಷಕರಿಗೆ ಅಂಟಿಕೊಂಡಿರುವುದು, ಚಡಪಡಿಕೆ, ಆಹಾರ ತಿನ್ನದಿರುವುದು. ಹೊಟ್ಟೆಯ ಅಸ್ವಸ್ಥತೆ, ಸಾಮಾಜಿಕ ಆತಂಕ
ಡಾ. ಸುಪ್ರಕಾಶ ಚೌಧರಿ ಹೇಳುವಂತೆ ಚಿಕಿತ್ಸೆಗಳು- ಮಾನಸಿಕ ಚಿಕಿತ್ಸೆ, ವರ್ತನೆಯ ಚಿಕಿತ್ಸೆ ಮತ್ತು ಔಷಧಿಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಆಲ್ಕೋಹಾಲ್ ಅವಲಂಬನೆ, ಖಿನ್ನತೆ ಅಥವಾ ಇತರ ಪರಿಸ್ಥಿತಿಗಳು ಕೆಲವೊಮ್ಮೆ ಮಾನಸಿಕ ಯೋಗಕ್ಷೇಮದ ಮೇಲೆ ಬಲವಾದ ಪರಿಣಾಮವನ್ನು ಬೀರಬಹುದು. ಆತಂಕದ ಅಸ್ವಸ್ಥತೆಯ ಚಿಕಿತ್ಸೆಯು ಯಾವುದೇ ಆಧಾರವಾಗಿರುವ ಪರಿಸ್ಥಿತಿಗಳು ನಿಯಂತ್ರಣಕ್ಕೆ ಬರುವವರೆಗೆ ಕಾಯಬೇಕಾಗುತ್ತದೆ. ಮಗುವಿನೊಂದಿಗೆ ಅವರ ಅವರ ಸಮಸ್ಯೆಗಳು ಅಥವಾ ಭಯಗಳ ಬಗ್ಗೆ ಅಪಹಾಸ್ಯ ಮಾಡದೆ ಅಥವಾ ಹಗುರವಾಗಿಸದೆ ಸರಿಯಾಗಿ ಮಾತನಾಡಿ. ಶಾಲೆಯಲ್ಲಿನ ಸಮಸ್ಯೆಗಳು, ಶಿಕ್ಷಕರು ಅಥವಾ ಇತರ ಸಿಬ್ಬಂಧಿಗಳ ಭಯ ಅಥವಾ ಇತರ ವಿದ್ಯಾರ್ಥಿಗಳ ಬೆದರಿಸುವ ಬಗ್ಗೆ ವಿಚಾರಿಸಿ.
ಮಕ್ಕಳ ಮನಶಾಸ್ತಜ್ಞ ಅವರು ಕೆಲವು ಪ್ರಕರಣಗಳನ್ನು ಸರಳ ಪರಿಹಾರದೊಂದಿಗೆ ಮನೆಯಲ್ಲಿಯೇ ನಿಭಾಯಿಸಬಹುದು ಎಂದು ಹೇಳಿದ್ದಾರೆ. ಪ್ರತಿದಿನವು ಮಗುವಿಗೆ ಹೆಚ್ಚು ಆತಂಕ ಉಂಟಾದರೆ ಶಿಸು ವೈದ್ಯರು ಅಥವಾ ಮಕ್ಕಳ ಮನಶಾಸ್ತಜ್ಞರನ್ನು ಸಂಪರ್ಕಿಸಿ ಎಂದು ಹೇಳಿದರು. ಮತ್ತು ಅವರು ಕೆಲವೊಂದು ಚಿಕಿತ್ಸಾ ಪರಿಹಾರಗಳನ್ನು ಸೂಚಿಸಿದರು. ಮಕ್ಕಳೊಂದಿಗೆ ಚೆನ್ನಾಗಿ ಮಾತನಾಡುವುದು, ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದು ಮತ್ತು ಮಗುವನ್ನು ಸಂಬಂಧಿಕರ ಅಥವಾ ಸ್ನೇಹಿತರ ಮನೆಗೆ ಕರೆದುಕೊಂಡು ಹೋಗಿ ಇತರರೊಂದಿಗೂ ಬೆರೆಯುವಂತೆ ಮಾಡಬೇಕು.
ಡಾ. ತರುಣ್ ಸೆಹಗಲ್ ಶಿಫಾರಸ್ಸು ಮಾಡಿರುವ ಚಿಕಿತ್ಸಾ ತಂತ್ರಗಳೆಂದರೆ ಧ್ಯಾನ, ಯೋಗ, ಸಂಗೀತವನ್ನು ಆಳಿಸುವುದು, ಸರಿಯಾದ ವಿಶ್ರಾಂತಿ ಮಾಡುವುದು, ಮನಸ್ಸಿಗೆ ನೆಮ್ಮದಿ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು
ಹೆಚ್ಚಿನ ಪ್ರಮಾಣದ ಆತಂಕದಿಂದ ಬಳಲುತ್ತಿದ್ದರೆ ವೈದ್ಯರ ಬಳಿ ಪರಿಶೀಲಿಸಿ ಸರಿಯಾದ ಚಿಕಿತ್ಸೆಯನ್ನು ಪಡೆಯಬೇಕು. ಏನು ಸಮಸ್ಯೆ ಎಂಬುವುದನ್ನು ಮೊದಲೇ ಪತ್ತೆ ಹಚ್ಚಿದರೆ ಚಿಕಿತ್ಸೆಯು ಸುಲಭವಾಗುತ್ತದೆ.
ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Fri, 20 January 23