ನೀವೂ ಸಿಹಿ ತಿಂಡಿ ಪ್ರಿಯರಾಗಿದ್ದರೆ ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ಖರ್ಜೂರದ ಬರ್ಫಿ(Dates Milk Barfi) ಯನ್ನು ತಯಾರಿಸಿ. ಇದು ನಿಮಗೆ ಸಿಹಿ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಖರ್ಜೂರ, ಹಾಲು, ಏಲಕ್ಕಿ ಬೀಜಗಳು, ಒಣದ್ರಾಕ್ಷಿಗಳಿಂದ ರುಚಿಕರವಾದ ಡೇಟ್ಸ್ ಮಿಲ್ಕ್ ಬರ್ಫಿಯನ್ನು ಮನೆಯಲ್ಲಿಯೇ ಪ್ರಯತ್ನಿಸಿ. ನೀವು ಇದನ್ನು ಇನ್ನಷ್ಟು ಆರೋಗ್ಯಕರವಾಗಿ ಮಾಡಲು ಬಯಸಿದರೆ, ಬಾದಾಮಿ / ಓಟ್ ಹಾಲನ್ನು ಸಹ ಬಳಸಬಹುದು.
ಬೇಕಾಗುವ ಸಾಮಾಗ್ರಿಗಳು:
1 ಲೀಟರ್ ಪೂರ್ಣ ಕೆನೆ ಹಾಲು
1 ಚಮಚ ಏಲಕ್ಕಿ
1/4 ಕಪ್ ಹುರಿದ ಗೋಡಂಬಿ
1/4 ಕಪ್ ಒಣದ್ರಾಕ್ಷಿ
1 ಕಪ್ ಖರ್ಜೂರ
1 ಚಮಚ ತುಪ್ಪ
1/4 ಕಪ್ ಬಾದಾಮಿ
3 ಚಮಚ ನೀರು
ಡೇಟ್ಸ್ ಮಿಲ್ಕ್ ಬರ್ಫಿ ಮಾಡುವ ವಿಧಾನ:
ಹಂತ 1 ನಯವಾದ ಖರ್ಜೂರದ ಮಿಶ್ರಣವನ್ನು ಮಾಡಿ
ಬೀಜಗಳನ್ನು ತೆಗೆದ ಖರ್ಜೂರವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಸ್ವಲ್ಪ ಹೊತ್ತಿನ ನಂತರ ಮೃದುವಾಗುವರೆಗೆ ಮಿಶ್ರಣ ಮಾಡಿ.
ಹಂತ 2 ಬರ್ಫಿ ಮಿಶ್ರಣವನ್ನು ಮಾಡಿ
ಮುಂದೆ, ಪ್ಯಾನ್ ಅಥವಾ ಒಂದು ಪಾತ್ರೆ ತೆಗೆದು ಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಹಾಲು ಹಾಕಿ. ಹಾಲು ಕುದಿ ಬರುತ್ತಿದ್ದಂತೆ ಅದಕ್ಕೆ ಖರ್ಜೂರದ ಮಿಶ್ರಣ, ಏಲಕ್ಕಿ ಪುಡಿ, ಒಣದ್ರಾಕ್ಷಿ ಸೇರಿಸಿ. 5 ನಿಮಿಷಗಳ ಕಾಲ ಉರಿಯಲ್ಲಿಡಿ.
ಇದನ್ನು ಓದಿ: ನಟಿ ರಶ್ಮಿಕಾಗೆ ನಿತ್ಯ ಊಟದಲ್ಲಿ ಸಿಹಿ ಬೇಕೇ ಬೇಕಂತೆ: ಸಿಹಿ ತಿನ್ನುವುದರ ಹಿಂದಿರುವ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ
ಹಂತ 3 ಬರ್ಫಿ ಸಿದ್ದವಾಗಿದೆ
ನಂತರ ಒಂದು ಅಗಲದ ಪಾತ್ರೆ ಅಥವಾ ಬಟ್ಟಲಿಗೆ ಸ್ವಲ್ಪ ತುಪ್ಪ ಸವರಿ ಈಗ ಈ ಮಿಶ್ರಣವನ್ನು ಸುರಿಯಿರಿ. ಇದನ್ನು ಒಂದೇ ಆಕಾರದಲ್ಲಿ ಕತ್ತರಿಸಿ ಹಾಗೂ 10 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿ ಇರಿಸಿ. ರುಚಿಕರ ಹಾಗೂ ಆರೋಗ್ಯಕರ ಡೇಟ್ಸ್ ಮಿಲ್ಕ್ ಬರ್ಫಿ ಸಿದ್ದವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: