ಗಡತ್ತಾಗಿ ನಿದ್ರೆ ಬರಬೇಕಾ? ಮಲಗುವ ಮೊದಲು ಈ ಹಣ್ಣನ್ನು ಸೇವಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2023 | 6:08 PM

ರಾತ್ರಿ ಉತ್ತಮ ನಿದ್ರೆ ಮಾಡುವ ಪ್ರಯತ್ನದಲ್ಲಿ, ಹಲವಾರು ಜನರು ಗಿಡಮೂಲಿಕೆ ಚಹಾದಿಂದ ಹಿಡಿದು ಸಂಗೀತ ಕೇಳುವ ವರೆಗೆ ವಿವಿಧ ರೀತಿಯ ಪರಿಹಾರಗಳನ್ನು ಹುಡುಕುತ್ತಾರೆ. ಆದರೆ ನಿದ್ರೆಯ ಗುಣಮಟ್ಟವು ಮಲಗುವ ಮೊದಲು ನೀವು ಏನು ತಿನ್ನುತ್ತೀರಿ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಹಾಗಾಗಿ ಮಲಗುವ ಮೊದಲು ಸುಲಭ ಮತ್ತು ರುಚಿಕರವಾದ ಪರಿಹಾರ ಹುಡುಕುವುದಾದರೆ ರಾತ್ರಿ ಸಮಯದಲ್ಲಿ ಬಾಳೆಹಣ್ಣು ತಿನ್ನುವುದು ಉತ್ತಮವಾಗಿದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ತಿಳಿದುಕೊಳ್ಳಿ.

ಗಡತ್ತಾಗಿ ನಿದ್ರೆ ಬರಬೇಕಾ? ಮಲಗುವ ಮೊದಲು ಈ ಹಣ್ಣನ್ನು ಸೇವಿಸಿ
ಸಾಂದರ್ಭಿಕ ಚಿತ್ರ
Follow us on

ಮನೆ ಮತ್ತು ಕೆಲಸದಲ್ಲಿ ನಿರಂತರ ಒತ್ತಡವಿದ್ದಾಗ, ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಪಡೆಯುವುದು ಕನಸಿನ ಮಾತಾಗಿರುತ್ತದೆ. ಆದರೆ ನಿದ್ದೆ ಎಲ್ಲರಿಗೂ ಅತ್ಯಾವಶ್ಯಕವಾಗಿ ಬೇಕೇ ಬೇಕು ಹಾಗಾಗಿ ಅರೆ ನಿದ್ರೆ ಅಥವಾ ಇನ್ನಿತರ ನಿದ್ರೆ ಸಮಸ್ಯೆ ಎದುರಿಸುತ್ತಿರುವವರು ಈಗಲೇ ಎಚ್ಚೆತ್ತುಕೊಳ್ಳಬೇಕು. ಇನ್ನು ಕೆಲವರು ಈಗಾಗಲೇ ಚೆನ್ನಾಗಿ ನಿದ್ರೆ ಮಾಡಲು, ಸುವಾಸನೆಯುಕ್ತ ಕ್ಯಾಮೊಮೈಲ್ ಚಹಾವನ್ನು ಹೀರುತ್ತಿರಬಹುದು, ಇನ್ನು ಕೆಲವರು ಪರಿಮಳಯುಕ್ತ ಮೇಣದಬತ್ತಿಯನ್ನು ಹೊತ್ತಿಸುತ್ತಿರಬಹುದು, ಕೆಲವರು ಹಿತವಾದ ಸಂಗೀತ ಕೇಳುವ ಅಭ್ಯಾಸವನ್ನು ರೂಢಿಸಿಕೊಂಡಿರಬಹುದು ಮತ್ತು ನಿದ್ರೆಗೆ ಅನುಕೂಲವಾಗಲು, ಒತ್ತಡ ಮುಕ್ತ ವಾತಾವರಣವನ್ನು ಸೃಷ್ಟಿಸಿಕೊಳ್ಳಲುಸುತ್ತಲೂ ಪರದೆಗಳನ್ನು ಹಾಕಿಕೊಂಡು ಮಲಗಬಹುದು. ಇಷ್ಟೆಲ್ಲಾ ಮಾಡಿದರೂ ಕೂಡ ನಿಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಮುಖ್ಯವಾದ ಕಾರಣ ನೀವು ಮಲಗುವ ಹಿಂದಿನ ಹಲವು ಗಂಟೆಗಳಲ್ಲಿ ಏನು ತಿಂದಿದ್ದೀರಿ ಎಂಬುದು ಹೆಚ್ಚು ಮುಖ್ಯವಾಗಿರುತ್ತದೆ. ಮಲಗುವ ಮೊದಲು ಹೊಟ್ಟೆ ಬಿರಿವಷ್ಟು ಊಟ ಸೇವಿಸಬಾರದು ಎಂಬುದು ಸಾಮಾನ್ಯ ನಿಯಮ, ಏಕೆಂದರೆ ಇದು ಅಸ್ವಸ್ಥತೆ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು. ಆದರೆ ಮನೆಯಲ್ಲಿರುವ ಕೆಲವು ಆಹಾರಗಳು ನಿಮ್ಮ ಮೆದುಳನ್ನು ಶಾಂತಗೊಳಿಸಬಹುದು, ಆರೋಗ್ಯಕರ ನಿದ್ರೆ ಮಾಡಲು ನಿಮ್ಮನ್ನು ಪ್ರೇರೇಪಿಸಬಹುದು. ಅದರಲ್ಲಿಯೂ ಮಲಗುವ ಮೊದಲು ಬಾಳೆಹಣ್ಣು ತಿನ್ನುವುದರಿಂದ ಉತ್ತಮ ನಿದ್ರೆ ಮಾಡಲು ನಿಮಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹಾಗಾದರೆ ಮಲಗುವ ಮೊದಲು ಬಾಳೆಹಣ್ಣನ್ನು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು? ಈ ಬಗ್ಗೆ ಹೆಲ್ತ್ ಶಾಟ್ಸ್ ಪೌಷ್ಟಿಕತಜ್ಞ ಅವನಿ ಕೌಲ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮಲಗುವ ಮೊದಲು ಬಾಳೆಹಣ್ಣು ತಿನ್ನುವುದರಿಂದ ರಾತ್ರಿ ಸಮಯದಲ್ಲಿ ನಿಮ್ಮ ಸಿಹಿ ತಿಂಡಿ ತಿನ್ನುವ ಬಯಕೆಯನ್ನು ತೃಪ್ತಿಪಡಿಸುವುದಲ್ಲದೆ, ರಾತ್ರಿ ವಿಶ್ರಾಂತಿ ಪಡೆಯಲು ನಿಮಗೆ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಲಗುವ ಮೊದಲು ಬಾಳೆಹಣ್ಣು ಏಕೆ ತಿನ್ನಬೇಕು?

1. ಬಾಳೆಹಣ್ಣು ನಿದ್ರೆಯನ್ನು ಪ್ರಚೋದಿಸುವ ಕೆಲವು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ

“ಬಾಳೆಹಣ್ಣುಗಳು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು, ಅವು ನಿದ್ರೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿದೆ. ಇದರ ಪ್ರಮುಖ ಅಂಶವೆಂದರೆ ಅಮೈನೋ ಆಮ್ಲ ಟ್ರಿಪ್ಟೋಫಾನ್. ಇದು ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸುವ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ನರಪ್ರೇಕ್ಷಕವಾದ ಸೆರೊಟೋನಿನ್ಗೆ ಪೂರ್ವಗಾಮಿಯಾಗಿದೆ ” ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಸಿರೊಟೋನಿನ್ ಅನ್ನು ಮೆಲಟೋನಿನ್ ಆಗಿ ಪರಿವರ್ತಿಸಲಾಗುತ್ತದೆ, ಇದು ನಿದ್ರೆ ಚಕ್ರವನ್ನು ಹೆಚ್ಚಿಸುವ ಹಾರ್ಮೋನ್ ಆಗಿದೆ. ಬಾಳೆಹಣ್ಣುಗಳನ್ನು ತಿನ್ನುವ ಮೂಲಕ, ಶಾಂತಿಯುತ ನಿದ್ರೆಗೆ ಜಾರಲು ನಿಮಗೆ ಅನುವು ಮಾಡಿಕೊಡುತ್ತದೆ.

2. ಬಾಳೆಹಣ್ಣು ಸ್ನಾಯುಗಳನ್ನು ಸಡಿಲಗೊಳಿಸುವ ಗುಣಗಳನ್ನು ಹೊಂದಿದೆ

ಈ ಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕೂಡ ಇದೆ, ಸ್ನಾಯುಗಳನ್ನು ಸಡಿಲಗೊಳಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಅಗತ್ಯ ಖನಿಜಗಳನ್ನು ಹೊಂದಿದೆ ಮತ್ತು ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಂಯೋಜನೆಯು ಉದ್ವೇಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ನಿಮ್ಮ ದೇಹವನ್ನು ನಿರಾಳಗೊಳಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ:ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದರಿಂದಾಗುವ ಅಪಾಯವೇನು?

3. ಬಾಳೆಹಣ್ಣಿನಲ್ಲಿ ಅಗತ್ಯ ಕಾರ್ಬೋಹೈಡ್ರೇಟ್​ಗಳಿವೆ

ಬಾಳೆಹಣ್ಣುಗಳು ಕಾರ್ಬೋಹೈಡ್ರೇಟ್ ಗಳ ಉತ್ತಮ ಮೂಲವಾಗಿದೆ. ಮಲಗುವ ಮೊದಲು ಹೆಚ್ಚಿನ ಕಾರ್ಬೋಹೈಡ್ರೇಟ್ ಊಟವನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುವುದಿಲ್ಲವಾದರೂ, ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳು ರಾತ್ರಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. “ಈ ಸಕ್ಕರೆಗಳಿಂದ ನಿಧಾನಗತಿಯ ಶಕ್ತಿ ಬಿಡುಗಡೆಯಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಯಾಗುವುದನ್ನು ತಡೆಯುತ್ತದೆ, ಹಸಿವು ಅಥವಾ ಅಸ್ವಸ್ಥತೆಯಿಂದಾಗಿ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ” ಎಂದು ಕೌಲ್ ಹೇಳುತ್ತಾರೆ.

4. ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ

ಮಲಗುವ ಮೊದಲು ಬಾಳೆಹಣ್ಣು ತಿನ್ನುವ ಆಚರಣೆಯು ಮಾನಸಿಕವಾಗಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮನ್ನು ವಿಶ್ರಾಂತಿ ಗೊಳಿಸಿ ಚೆನ್ನಾಗಿ ನಿದ್ರೆ ಮಾಡಲು ನಿಮ್ಮನ್ನು ಸಿದ್ಧಪಡಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: