Irregular Periods: ಮುಟ್ಟು ವಿಳಂಬವಾಗುತ್ತಿದೆಯೇ ಹಾಗಾದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

Irregular Periods: ಋತುಚಕ್ರವೆಂಬುದು ಸ್ತ್ರೀ ಜೀವನದಲ್ಲಿ ಪ್ರಮುಖಪಾತ್ರವನ್ನುವಹಿಸುತ್ತದೆ. ಸರಿಯಾದ ಸಮಯಕ್ಕೆ ಮುಟ್ಟು(Periods) ಬಾರದಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Irregular Periods: ಮುಟ್ಟು ವಿಳಂಬವಾಗುತ್ತಿದೆಯೇ ಹಾಗಾದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಅನಿಯಮಿತ ಮುಟ್ಟು
Edited By:

Updated on: May 15, 2022 | 11:24 AM

ಋತುಚಕ್ರವೆಂಬುದು ಸ್ತ್ರೀ ಜೀವನದಲ್ಲಿ ಪ್ರಮುಖಪಾತ್ರವನ್ನುವಹಿಸುತ್ತದೆ. ಸರಿಯಾದ ಸಮಯಕ್ಕೆ ಮುಟ್ಟು(Periods) ಬಾರದಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒತ್ತಡ, ಬದಲಾದ ಜೀವನಶೈಲಿಯು ಮುಟ್ಟನ್ನು ತಿಂಗಳಿಗೆ ಸರಿಯಾಗಿ ಹೊಂದುವಲ್ಲಿ ಕಷ್ಟವನ್ನು ತಂದೊಡ್ಡುತ್ತದೆ. ಕೆಲವರಿಗೆ ಒಂದು ವಾರ ತಡವಾಡಗಿ, ಕೆಲವರಿಗೆ ಹದಿನೈದು ದಿನ ಕೆಲವರಿಗೆ ಒಂದು ತಿಂಗಳು ತಡವಾಗಿ ಮುಟ್ಟಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ, 30 ಶೇಕಡದಷ್ಟು ಮಹಿಳೆಯರು ಅನಿಯಮಿತ ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ.

ಅನಿಯಮಿತ ಮುಟ್ಟಿನಿಂದಾಗಿ ಹಾರ್ಮೋನ್​ಗಳ ಬದಲಾವಣೆ, ಬೊಜ್ಜು, ತೂಕ ಇಳಿಕೆ, ತೂಕ ಹೆಚ್ಚಳ, ಥೈರಾಯ್ಡ್​ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ. ಸಾಮಾನ್ಯ ಮುಟ್ಟಿನ ಚಕ್ರವು 28 ದಿನಗಳಾಗಿದ್ದು ಇದರಲ್ಲಿ ಕೊಂಚ ವೈಪರೀತ್ಯಗಳು ಉಂಟಾಗುತ್ತಿರುತ್ತದೆ.

ಮುಟ್ಟಿನ ದಿನಗಳು ವಿಳಂಬವಾಗುವುದಕ್ಕೆ ಹಲವಾರು ಕಾರಣಗಳಿರಬಹುದು.

ಆಯುರ್ವೇದ ಗಿಡಮೂಲಿಕೆಗಳಿಂದ ಪರಿಹಾರ
-ಶತಾವರಿ ಪುಡಿಯನ್ನು ಹಾಲಿಗೆ ಹಾಕಿ ಸಕ್ಕರೆ ಅಥವಾ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.

-ದಾಸವಾಳದಲ್ಲಿ ಸಾಕಷ್ಟು ಶಕ್ತಿ ಇದ್ದು, ದಿನಕ್ಕೆ ಎರಡು ಬಾರಿ ದಾಸವಾಳ ಚಹಾವನ್ನು ಕುಡಿಯಬಹುದು ಹಾಗೆಯೇ ಎರಡರಿಂದ ಮೂರು ದಾಸವಾಳದ ಹೂವುಗಳನ್ನು ಫ್ರೈ ಮಾಡಿ ತುಪ್ಪದೊಂದಿಗೆ ಬಿಸಿ ಹಾಲಿನೊಂದಿಗೆ ಸೇವಿಸಿಬೇಕು.

-ಕಪ್ಪು ಸಾಸಿವೆಯನ್ನು ಬೆಲ್ಲದ ಜತೆ ಸೇವಿಸುವುದರಿಂದ ಹಾರ್ಮೋನ್ ಸಮತೋಲನಗೊಳ್ಳುತ್ತದೆ.

-ಅಲೋವೆರಾವು ಉತ್ತಮ ಪರಿಹಾರವಾಗಿದೆ, ಅಲೋವರೆ ಜೆಲ್​ ಅನ್ನು ಜೇನುತುಪ್ಪದೊಂದಿಗೆ ಹಸಿಹೊಟ್ಟೆಯಲ್ಲಿ ಸೇವಿಸಬೇಕು.

-ಪಪ್ಪಾಯ ಹಾಗೂ ಪೈನಾಪಲ್ ಹಣ್ಣುಗಳನ್ನು ಸೇವಿಸಬೇಕು

ಆಯುರ್ವೇದದಲ್ಲಿ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಹಲವಾರು ಗಿಡಮೂಲಿಕೆಗಳಿದ್ದು ಮುಟ್ಟಿನ್ನು ವಿಳಂಬ ಮಾಡುವ ಅಂಶಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಪಾರ್ಸ್ಲಿ ಮತ್ತು ಎಳ್ಳೆಣ್ಣೆಯನ್ನು ಬಳಸಿ ಕೆಳಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.
ಪಾರ್ಸ್ಲಿ ಬೀಜವನ್ನು ಅರೆದು ಅದಕ್ಕೆ ಸ್ವಲ್ಪ ನೀರನ್ನು ಹಾಕಿ. ಇದಕ್ಕೆ ಹಾಲನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿತ್ಯವೂ ಇದನ್ನು ಸೇವಿಸಿ. ಮುಟ್ಟಿನ ದಿನಗಳ ವಿಳಂಬ ಸಮಸ್ಯೆಯನ್ನು ದೂರಮಾಡಲು ಆಯುರ್ವೇದದಲ್ಲಿ ಇದಕ್ಕೆ ಉತ್ತಮ ಸ್ಥಾನವಿದೆ.

ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಲೇಖನವಾಗಿದೆ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us