National Nutrition Week 2023: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯ ಪೋಷಕಾಂಶಗಳಾವುವು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 01, 2023 | 5:16 PM

ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಲು, ಈ ಪೋಷಕಾಂಶಗಳ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 7ರ ವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ. ಸಮತೋಲಿತ ಆಹಾರವು ಪ್ರತಿಯೊಬ್ಬ ವ್ಯಕ್ತಿಗೆ ಬಹಳ ಅವಶ್ಯಕವಾಗಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಹೆಚ್ಚು ಅವಶ್ಯಕವಾಗಿದೆ. ಏಕೆಂದರೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಸರಿಯಾದ ಬೆಳವಣಿಗೆಗೆ ಗರ್ಭಾವಸ್ಥೆಯಲ್ಲಿ ಉತ್ತಮ ಆಹಾರ ಮತ್ತು ಸಾಕಷ್ಟು ಪೋಷಣೆ ಅತ್ಯಗತ್ಯ.

National Nutrition Week 2023: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯ ಪೋಷಕಾಂಶಗಳಾವುವು?
ಸಾಂದರ್ಭಿಕ ಚಿತ್ರ
Follow us on

ಮಾನವನ ದೇಹಕ್ಕೆ ಪೌಷ್ಟಿಕಾಂಶದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 7 ರ ವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು(National Nutrition Week) ಆಚರಿಸಲಾಗುತ್ತದೆ. ಈ ಒಂದು ವಿಶೇಷ ಅಭಿಯಾನವನ್ನು ಆಚರಿಸುವ ಮಹತ್ವವು ಸರಿಯಾದ ಪೋಷಣೆಯ ಅಗತ್ಯತೆ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ. ಸಮತೋಲಿತ ಆಹಾರವು ಪ್ರತಿಯೊಬ್ಬ ವ್ಯಕ್ತಿಗೆ ಬಹಳ ಅವಶ್ಯಕವಾಗಿದೆ. ಅದರಲ್ಲೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಅವಶ್ಯಕವಾಗಿದೆ. ಏಕೆಂದರೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಸರಿಯಾದ ಬೆಳವಣಿಗೆಗೆ ಗರ್ಭಾವಸ್ಥೆಯಲ್ಲಿ ಉತ್ತಮ ಆಹಾರ ಮತ್ತು ಸಾಕಷ್ಟು ಪೋಷಣೆಯ ಅಗತ್ಯವಿದೆ. ಗರ್ಭಾವಸ್ಥೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವನ್ನು ಪಡೆದರೆ ಮಗು ಆರೋಗ್ಯಕವಾಗಿ ಜನಿಸುತ್ತದೆ. ಹಾಗಿದ್ದರೆ ಗರ್ಭಿಣಿ ಮಹಿಳೆಯರು ಅಗತ್ಯವಾಗಿ ಸೇವಿಸಲೇಬೇಕಾದ ಪೋಷಕಾಂಶಗಳು ಯಾವುವು ಎಂಬುದನ್ನು ನೋಡೋಣ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯವಾದ ಪೋಷಕಾಂಶಗಳ ಪಟ್ಟಿ:

ಫೋಲೇಟ್: ಫೋಲೇಟ್ ಒಂದು ಅತ್ಯಗತ್ಯ ಪೋಷಕಾಂಶವಾಗಿದ್ದು, ಗರ್ಭಾವಸ್ಥೆಯಲ್ಲಿ ಸಾಕಷ್ಟು ಪೋಲೇಟ್ ಸೇವನೆಯು ಭ್ರೂಣದ ಒಟ್ಟಾರೆ ಬೆಳವಣಿಗೆಗ ಅವಶ್ಯಕವಾಗಿದೆ. ನಿರ್ಧಿಷ್ಟವಾಗಿ ಮಗುವಿನ ಮೆದುಳು ಮತ್ತು ಬೆನ್ನುಮೂಳೆಯಲ್ಲಿ ದೋಷಗಳು ಬಾರದಂತೆ ನೋಡಿಕೊಳ್ಳಲು ಫೋಲೇಟ್ ನಿಂದ ಸಮೃದ್ಧವಾಗಿರುವ ಆಹಾರವನ್ನು ಗರ್ಭಿಣಿ ಮಹಿಳೆಯು ಸೇವನೆ ಮಾಡಬೇಕು. ಕಿತ್ತಳೆ, ಹಸಿರು ಎಲೆ ತರಕಾರಿಗಳು, ದ್ವಿದಳ ಧಾನ್ಯಗಳು, ಅವಕಾಡೊಗಳಲಲಿ ಪೋಲೇಟ್ ಅಂಶವು ಹೆಚ್ಚಿರುತ್ತದೆ.

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ: ಮಗುವಿನ ಮೂಳೆಗಳು ಮತ್ತು ಹಲ್ಲುಗಳ ಬಲವಾದ ಬೆಳವಣಿಗೆಯನ್ನು ಬೆಂಬಲಿಸಲು ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಅತ್ಯಗತ್ಯ. ಇದು ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಟಮಿನ್ ಡಿ ಆಹಾರದಿಂದ ಕ್ಯಾಲ್ಸಿಯಂ ನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತರಕಾರಿಗಳು, ಬೇಳೆಕಾಳು, ಸಿರಿಧಾನ್ಯ, ಒಣಹಣ್ಣು, ಅಂಜೂರ, ಏಪ್ರಿಕಾಟ್, ಬಾದಾಮಿ ಸೇವಿಸುವ ಮೂಲಕ ಕ್ಯಾಲ್ಸಿಯಂ ಪೋಷಕಾಂಶವನ್ನು ಪಡೆಯಬಹುದು.

ಇದನ್ನೂ ಓದಿ: ಅತಿಯಾಗಿ ಉಪ್ಪು ಸೇವಿಸುವುದರಿಂದ ಈ ಕಾಯಿಲೆಗಳು ನಿಮ್ಮನ್ನು ಕಾಡಬಹುದು

ಕಬ್ಬಿಣಾಂಶ: ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶದ ಕೊರತೆ ಸಾಮಾನ್ಯವಾಗಿದೆ. ಕೆಂಪು ರಕ್ತಕಣಗಳು ಸರಿಯಾಗಿ ಕಾರ್ಯನಿರ್ವಹಿಸಲು ಕಬ್ಬಿಣಾಂಶವು ಅವಶ್ಯಕವಾಗಿದೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯಕ್ಕೆ ಇದು ನಿರ್ಣಾಯಕವಾಗಿದೆ. ಗರ್ಭಿಣಿಯರು ಕಬ್ಬಿಣ ಅಗತ್ಯ ಮೂಲಗಳನ್ನು ಹಸಿರು ಎಲೆ ತರಕಾರಿಗಳ ಸೇವನೆಯಿಂದ ಪಡೆಯಬಹುದು.

ಅಯೋಡಿನ್: ಅಯೋಡಿನ್ ಥೈರಾಯ್ಡ್​​ನ ಆರೋಗ್ಯ ಮತ್ತು ಅದರ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾದ ಖನಿಜವಾಗಿದೆ. ಥೈರಾಯ್ಡ್ ದೇಹದಲ್ಲಿನ ಅನೇಕ ಪ್ರಮುಖ ಪ್ರಕ್ರಿಯೆಗಳಲ್ಲಿ ತೊಡಗಿರುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಖನಿಜವು ದೇಹದ ಚಯಾಪಚಯವನ್ನು ನಿಯಂತ್ರಿಸಲು ಅವಶ್ಯಕವಾಗಿದೆ. ಮತ್ತು ಇದು ಮಗುವಿನ ಜನನದ ನಂತರ ತಾಯಿಯು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಯೋಡಿನ್ ಕೆಲವು ಉತ್ತಮ ಮೂಲಗಳು ಡೈರಿ ಉತ್ಪನ್ನಗಳು, ಸಮುದ್ರಾಹಾರಗಳು.

ವಿಟಮಿನ್ ಎ: ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವಿಟಮಿನ್ ಎ ಪೋಷಕಾಂಶವು ಅಗತ್ಯವಾಗಿದೆ. ಇದು ಮಗುವಿನ ಚರ್ಮ ಮತ್ತು ದೃಷ್ಟಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಗುವಿನ ಮೂಳೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಹಾಗೂ ತಾಯಿ ಮಗುವಿಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕ್ಯಾರೆಟ್, ಮೊಟ್ಟೆ, ಮೊಸರು, ಸಿಹಿ ಗೆಣಸು ವಿಟಮಿನ ಎ ಯ ಅಗತ್ಯ ಮೂಲಗಳಾಗಿದೆ.

ಪ್ರೋಟೀನ್: ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ದೈಹಿಕ ಬೆಳವಣಿಗೆಗೆ ಪ್ರೋಟೀನ್ ಬಹಳ ಮುಖ್ಯ. ಅದಕ್ಕಾಗಿಯೆ ಪ್ರೋಟೀನ್ ಭರಿತ ಆಹಾರವನ್ನು ಸೇವನೆ ಮಾಡಿ. ಬೇಳೆಕಾಳು, ದ್ವಿದಳ ಧಾನ್ಯಗಳು, ಹಾಲು, ಮೊಸರು, ಚೀಸ್, ಮೊಟ್ಟೆಗಳು ಹೇರಳವಾದ ಪ್ರೋಟೀನ್ ನ್ನು ಒದಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: