
2025 ರ ಮೂರನೇ ತಿಂಗಳಾದ ಮಾರ್ಚ್ ಗೆ ಕಾಲಿಡಲು ಇನ್ನೇನು ಕೆಲವೇ ಕೆಲವೇ ದಿನಗಳಷ್ಟೇ ಬಾಕಿಯಿವೆ. ಈ ಮಾರ್ಚ್ ತಿಂಗಳಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಹೀಗೆ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಗಳನ್ನು ಒಳಗೊಂಡಿದ್ದು, ಸ್ಪಧಾರ್ತಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಹಾಗೂ ಓದುತ್ತಿರುವ ವಿದ್ಯಾರ್ಥಿಗಳು ಪ್ರಚಲಿತ ವಿದ್ಯಾಮಾನದ ಜೊತೆಗೆ ದಿನಾಚರಣೆಗಳ ಕುರಿತಾದ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ.
* ಮಾರ್ಚ್ 01 – ಶೂನ್ಯ ತಾರತಮ್ಯ ದಿನ
* ಮಾರ್ಚ್ 01 – ವಿಶ್ವ ನಾಗರಿಕ ರಕ್ಷಣಾ ದಿನ
* ಮಾರ್ಚ್ 01- ಸ್ವಯಂ ಗಾಯದ ಜಾಗೃತಿ ದಿನ
* ಮಾರ್ಚ್ 03 – ವಿಶ್ವ ಶ್ರವಣ ದಿನ
* ಮಾರ್ಚ್ 03 – ವಿಶ್ವ ವನ್ಯಜೀವಿ ದಿನ
* ಮಾರ್ಚ್ 04 – ರಾಷ್ಟ್ರೀಯ ಭದ್ರತಾ ದಿನ
* ಮಾರ್ಚ್ 04 – ನೌಕರರ ಮೆಚ್ಚುಗೆಯ ದಿನ
* ಮಾರ್ಚ್ 04- ರಾಮಕೃಷ್ಣ ಜಯಂತಿ
* ಮಾರ್ಚ್ 08 – ಅಂತಾರಾಷ್ಟ್ರೀಯ ಮಹಿಳಾ ದಿನ
* ಮಾರ್ಚ್ 10 – CISF ರೈಸಿಂಗ್ ಡೇ
* ಮಾರ್ಚ್ 12 – ಧೂಮಪಾನ ರಹಿತ ದಿನ
* ಮಾರ್ಚ್ 14 – ಪೈ ದಿನ
* ಮಾರ್ಚ್ 14 – ನದಿಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಯಾ ದಿನ
* ಮಾರ್ಚ್ 15 – ವಿಶ್ವ ಗ್ರಾಹಕ ಹಕ್ಕುಗಳ ದಿನ
* ಮಾರ್ಚ್ 16 – ರಾಷ್ಟ್ರೀಯ ಲಸಿಕೆ ದಿನ
* ಮಾರ್ಚ್ 18 – ಆರ್ಡಿನೆನ್ಸ್ ಫಾಕ್ಟರಿ ದಿನ
* ಮಾರ್ಚ್ 20 – ವಿಶ್ವ ಗುಬ್ಬಚ್ಚಿ ದಿನ
* ಮಾರ್ಚ್ 20 – ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್
* ಮಾರ್ಚ್ 21 – ವಿಶ್ವ ಅರಣ್ಯ ದಿನ
* ಮಾರ್ಚ್ 21 – ವಿಶ್ವ ಕಾವ್ಯ ದಿನ
* ಮಾರ್ಚ್ 21- ವಿಶ್ವ ಡೌನ್ ಸಿಂಡ್ರೋಮ್ ದಿನ
* ಮಾರ್ಚ್ 22 – ವಿಶ್ವ ಜಲ ದಿನ
* ಮಾರ್ಚ್ 23 – ವಿಶ್ವ ಹವಾಮಾನ ದಿನ
* ಮಾರ್ಚ್ 24 – ವಿಶ್ವ ಕ್ಷಯರೋಗ ದಿನ
* ಮಾರ್ಚ್ 27 – ವಿಶ್ವ ರಂಗಭೂಮಿ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ