AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Shivaratri 2025 : ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಹಾ ಶಿವರಾತ್ರಿ ವೈಭವ, 1000 ವರ್ಷಗಳ ಹಳೆಯ ಸೋಮನಾಥ ಜ್ಯೋತಿರ್ಲಿಂಗದ ದರ್ಶನ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಶ್ರೀ ಶ್ರೀ ರವಿಶಂಕರ ಗುರುದೇವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ವರ್ಷದ ಉತ್ಸವವು ಭಕ್ತವೃಂದಕ್ಕೆ ಮರೆಯಲಾಗದ ಅನುಭವ ನೀಡಲಿದೆ. ಹೌದು, ಮಹಾ ಶಿವರಾತ್ರಿ ಉತ್ಸವವು ಭಕ್ತಿ ಭಾವದೊಂದಿಗೆ ಜಪ-ತಪ, ಧ್ಯಾನ ಮತ್ತು ರುದ್ರಪೂಜೆಯ ಮಂತ್ರಘೋಷಗಳೊಂದಿಗೆ ಭಕ್ತಿ ಸಾಗರದಲ್ಲಿ ಭಕ್ತರು ಮುಳುಗಿ ಮಿಂದೇಳಲಿದ್ದಾರೆ. ಹಾಗಾದ್ರೆ ಈ ಬಾರಿಯ ಮಹಾಶಿವರಾತ್ರಿ ಉತ್ಸವದ ವಿಶೇಷತೆಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Maha Shivaratri 2025 : ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಹಾ ಶಿವರಾತ್ರಿ ವೈಭವ, 1000 ವರ್ಷಗಳ ಹಳೆಯ ಸೋಮನಾಥ ಜ್ಯೋತಿರ್ಲಿಂಗದ ದರ್ಶನ
ಮಹಾ ಶಿವರಾತ್ರಿ ಉತ್ಸವ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 24, 2025 | 4:37 PM

ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಶಿವರಾತ್ರಿಯನ್ನು ಎಲ್ಲರೂ ಭಕ್ತಿ ಭಾವದೊಂದಿಗೆ ಆಚರಿಸಲಾಗುತ್ತದೆ. ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಈ ಹಬ್ಬದಂದು ಶಿವನ ದೇವಾಲಯದ ವಿಶೇಷ ಪೂಜೆಗಳಿರುತ್ತದೆ. ಆದರೆ ಈ ಬಾರಿ ಬೆಂಗಳೂರು ಹೊರವಲಯದ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಬಹಳ ಸಡಗರ ಸಂಭ್ರಮದೊಂದಿಗೆ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಹೌದು, ಈ ವರ್ಷದ ಶಿವರಾತ್ರಿಯ ಮತ್ತೊಂದು ವಿಶೇಷತೆಯೆಂದರೆ 1000 ವರ್ಷಗಳ ನಂತರ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ಬಹಿರಂಗ ಪ್ರಕಟಣೆಯಾಗುತ್ತಿದೆ.

ದಾಳಿಗೆ ನಾಶವಾಗಿದ್ದ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ಪುನರ್ ಉದಯ ಕ್ರಿ.ಶ.1025 ರಲ್ಲಿ ಮಹ್ಮದ್ ಘಜ್ನಿಯು ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದನು. ಆದರೆ ಆ ಲಿಂಗವು ಸಂಪೂರ್ಣ ನಾಶವಾಗಿರಲಿಲ್ಲ. ಸೋಮನಾಥ ಜ್ಯೋತಿರ್ಲಿಂಗ ಒಂದು ವಿಶೇಷವಾದ ಶಿಲೆಯಿಂದ ಮಾಡಲ್ಪಟ್ಟಿದ್ದು, ಭೂಮಿಯಿಂದ 2 ಅಡಿ ಎತ್ತರದಲ್ಲಿ ಅದು ತೇಲುತ್ತಿತ್ತು. ಘಜ್ನಿಯ ದಾಳಿಯ ಬಳಿಕ ಅಗ್ನಿಹೋತ್ರಿ ಬ್ರಾಹ್ಮಣರು ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕೊಂಡೊಯ್ದು, ದಕ್ಷಿಣ ಭಾರತದಲ್ಲಿ ರಹಸ್ಯವಾಗಿ ಆರಾಧಿಸುತ್ತಿದ್ದರು. ಹೀಗೆ ಅದೆಷ್ಟೋ ಪೀಳಿಗೆಗಳ ಬಳಿಕ ಈ ಲಿಂಗವು ಸೀತಾರಾಮ ಶಾಸ್ತ್ರಿಗಳ ಕೈಗೆ ಸೇರಿತು. ಹೀಗಿರುವಾಗ ಕಳೆದ 20 ವರ್ಷಗಳಿಂದ ಸೋಮನಾಥ ಜ್ಯೋತಿರ್ಲಿಂಗದ ಪುನಃ ಪ್ರತಿಷ್ಠಾಪನೆಯ ನಿರೀಕ್ಷೆಯಲ್ಲಿದ್ದರು.

ಅದಲ್ಲದೇ ಈ ಹಿಂದೆ ಸಂತ ಶ್ರೀ ಪ್ರಣವೇಂದ್ರ ಸರಸ್ವತಿಯವರು 1924ರಲ್ಲಿ ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕಂಚಿ ಶಂಕರಾಚಾರ್ಯ ಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿಯವರಿಗೆ ಅರ್ಪಿಸಿದ್ದರು. ಅವರು “ಇದನ್ನು ಪ್ರತಿಷ್ಠಾಪಿಸಲು ಇನ್ನೂ 100 ವರ್ಷಗಳು ಬೇಕಾಗುತ್ತದೆ” ಎಂದು ಭವಿಷ್ಯವಾಣಿ ನುಡಿದಿದ್ದರು. 2024ರಲ್ಲಿ ಇವಾಗಿನ ಕಂಚಿ ಶಂಕರಾಚಾರ್ಯರ ಆಶೀರ್ವಾದ ಪಡೆದು, ಈ ಪವಿತ್ರ ಲಿಂಗವನ್ನು ಶ್ರೀ ಶ್ರೀ ರವಿಶಂಕರರ ಬಳಿಗೆ ತರಲು ಮುಂದಾದರು. ಇದೇ ಜನವರಿಯಲ್ಲಿ, ಪವಿತ್ರ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್‌ನ್ಯಾಷನಲ್ ಕೇಂದ್ರಕ್ಕೆ ತಂದು ಸಾವಿರಾರು ಭಕ್ತರ ಎದುರು ಗುರುದೇವರು ಸಾವಿರ ವರ್ಷಗಳ ಹಳೆಯ ಲಿಂಗವನ್ನು ಅನಾವರಣ ಮಾಡಿದರು. ಈ ಲಿಂಗವನ್ನು ಕೈಯಲ್ಲಿ ಹಿಡಿದು, ಇದರಲ್ಲಿರುವ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ತೋರಿಸಿದರು.

ಇದನ್ನೂ ಓದಿ: ಮಹಾಶಿವರಾತ್ರಿ ಉಪವಾಸದ ಸಮಯದಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು?

ಅದ್ಭುತ ಕಾಂತೀಯ ಗುಣಗಳು : ವೈಜ್ಞಾನಿಕ ಅಧ್ಯಯನದಲ್ಲಿ ದೃಢ

ಸಾವಿರ ವರ್ಷಗಳ ಹಳೆಯ ಲಿಂಗದ ಕುರಿತು 2007ರಲ್ಲಿ ನಡೆಸಿದ ಭೌಗೋಳಿಕ ಅಧ್ಯಯನ ನಡೆಸಲಾಯಿತು. ಈ ವೇಳೆಯಲ್ಲಿ ಈ ವಿಶೇಷ ಲಿಂಗದಲ್ಲಿ ಸಾಮಾನ್ಯ ಭೌತಿಕಶಾಸ್ತ್ರಕ್ಕೆ ನಿಲುಕದ, ವಿಶೇಷ ಚುಂಬಕೀಯ ಶಕ್ತಿಯ ಗುಣಗಳು ಇವೆ ಎನ್ನುವುದು ಪತ್ತೆಯಾಗಿತ್ತು. ಈ ಲಿಂಗದಲ್ಲಿರುವ ಲೋಹದ ಅಂಶವು ಅಯಸ್ಕಾಂತತೆಗೆ ಸಾಕಷ್ಟು ಕಡಿಮೆಯಾಗಿದ್ದು, ಇದರ ಬಗ್ಗೆ ತಿಳಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದ್ದಾರೆ.

Original Somnath Jyotirlinga

Original Somnath Jyotirlinga

ಪವಿತ್ರ ಸೋಮನಾಥ ಜ್ಯೋತಿರ್ಲಿಂಗದ ಸಾನ್ನಿಧ್ಯದಲ್ಲಿ ಭಕ್ತರಿಗೆ ಹೊಸ ಅನುಭವ

ಈ ಮಹಾ ಶಿವರಾತ್ರಿ ಉತ್ಸವದಂದು ಆಶ್ರಮದಲ್ಲಿ 1000 ವರ್ಷಗಳ ನಂತರ ಮೂಲ ಸೋಮನಾಥ ಜ್ಯೋತಿರ್ಲಿಂಗದ ದರ್ಶನವನ್ನು ಪಡೆಯಬಹುದಾಗಿದೆ. ಇಂತಹ ಅಪರೂಪದ ಅವಕಾಶವನ್ನು ಭಕ್ತರಿಗೆ ಒದಗಿಸಲಾಗಿದೆ. ಫೆಬ್ರವರಿ 26ರ ಸಂಜೆ 6:30 ಗಂಟೆಗೆ ಮಹಾ ರುದ್ರಾಭಿಷೇಕ ಮತ್ತು ಮಹಾ ಸತ್ಸಂಗದೊಂದಿಗೆ ಈ ಉತ್ಸವವು ಪ್ರಾರಂಭವಾಗಲಿದೆ. ಫೆಬ್ರವರಿ 27ರ ಮುಂಜಾನೆ 4:00 ಗಂಟೆಗೆ ಮಹಾ ರುದ್ರ ಹೋಮ ನಡೆಯಲಿದೆ. ಈ ಬಾರಿಯ ಮಹಾ ಶಿವರಾತ್ರಿಯಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಭಕ್ತಿ ಭಾವದೊಂದಿಗೆ ಈ ಐತಿಹಾಸಿಕ ಕ್ಷಣಕ್ಕೆ ನೀವು ಸಾಕ್ಷಿಯಾಗಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ