ಕೆಲವು ಮಹಿಳೆಯರ ಮುಖದಲ್ಲಿ ಅಸಹಜ ಕೂದಲುಗಳು ಕಾಣಿಸಿಕೊಳ್ಳುತ್ತವೆ. ಇದು ಅವರಿಗೆ ಮುಜುಗರವನ್ನು ಉಂಟುಮಾಡಬಹುದು. ಹೀಗೆ ಮುಖದ ಮೇಲೆ ಕಾಣಿಸಿಕೊಳ್ಳುವ ಹಿರ್ಸುಟಿಸಮ್ ಅಥವಾ ಅನಗತ್ಯ ಕೂದಲು ಪಿಸಿಓಎಸ್ (ಪಾಲಿಸಿಸ್ಟಿಕ್ ಓವರ್ ಸಿಂಡ್ರೋಮ್) ನ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಸ್ತ್ರೀ ದೇಹದಲ್ಲಿನ ಅಂಡಾಶಯಗಳು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಸ್ತ್ರೀ ಲೈಂಗಿಕ ಹಾರ್ಮೋನುಗಳನ್ನು ಮತ್ತು ಆಂಡ್ರೋಜೆನ್ ಎಂಬ ಸಣ್ಣ ಸಂಖ್ಯೆಯ ಪುರುಷ ಲೈಂಗಿಕ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತವೆ. ಈ ಲೈಂಗಿಕ ಹಾರ್ಮೋನುಗಳ ಅಸಮತೋಲನ ಹಾಗೂ ಅಸಹಜ ಪ್ರಮಾಣದ ಆಂಡ್ರೋಜೆನ್ ಹಾರ್ಮೋನು ಉತ್ಪಾದನೆಯು ಪಿ.ಸಿ.ಓ.ಎಸ್ ಗೆ ಕಾರಣ.
“ಪಿಸಿಓಎಸ್ ಸಮಸ್ಯೆ ಮತ್ತು ಮುಖದಲ್ಲಿ ಅನಿಯಮಿತ ಕೂದಲು ಬೆಳವಣಿಗೆಯು ಜೊತೆ ಜೊತೆಯಲ್ಲಿ ಸಾಗುತ್ತದೆ. ಇದಕ್ಕೆ ಏಕಕಾಲದಲ್ಲಿ ಚಿಕಿತ್ಸೆ ನೀಡಬೇಕು. ಪಿಸಿಓಎಸ್ ಅಂಡಾಶಯದಲ್ಲಿನ ಹಾರ್ಮೋನು ಅಸ್ವಸ್ಥತೆಯಾಗಿದ್ದು, ಇದು ಮುಟ್ಟಿನ ಸಮಸ್ಯೆ, ತೂಕ ಹೆಚ್ಚಾಗುವುದು, ಮೊಡವೆ ಕಾಣಿಸಿಕೊಳ್ಳುವುದು, ತಲೆ ಕೂದಲು ಉದುರುವುದು, ಹಾಗೂ ಮುಖ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಅಸಹಜ ಕೂದಲು ಬೆಳವಣಿಗೆಗೆ ಕೂಡಾ ಕಾರಣವಾಗುತ್ತದೆ. ಅಲ್ಲದೆ ಇದು ರೋಗಿಯ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ” ಎಂದು ರೂಬಿ ಹಾಲ್ ಕ್ಲಿನಿಕ್ ನ ಚರ್ಮರೋಗ ತಜ್ಞರಾದ ಡಾ. ರಶ್ಮಿ ಅಡೆರಾವ್ ಹೇಳುತ್ತಾರೆ.
• ಬಂಜೆತನ
• ಮುಖ, ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಅತಿಯಾದ ಕೂದಲು ಬೆಳವಣಿಗೆ
• ಎಣ್ಣೆಯುಕ್ತ ಚರ್ಮ ಮತ್ತು ಮೊಡವೆ
ಇದನ್ನೂ ಓದಿ:ಮಹಿಳೆಯರಲ್ಲಿ ಕಂಡುಬರುವ ಮುಖದ ಕೂದಲಿನ ಸಮಸ್ಯೆಗೆ ಶೇವಿಂಗ್ ಎಷ್ಟು ಸೂಕ್ತ?
• ಮೊದಲನೆಯದಾಗಿ, ಹಾರ್ಮೋನುಗಳ ಅಸಮತೋಲನಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು.
• ನಿಯಮಿತ ವ್ಯಾಯಾಮವನ್ನು ಮಾಡುವುದು
• ಸಾಕಷ್ಟು ಪ್ರೋಟೀನ್ ಗಳು ಹಾಗೂ ಸಮತೋಲಿತ ಆಹಾರ ಸೇವನೆ
• ಅತಿಯಾದ ಸಕ್ಕರೆ, ಜಂಕ್ ಆಹಾರಗಳು ಹಾಗೂ ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುವುದು.
ಸರಿಯಾದ ಚಿಕಿತ್ಸೆ ಮತ್ತು ಔಷಧಿಗಳೊಂದಿಗೆ ಮುಖದ ಮೇಲೆ ಬೆಳೆಯುವ ಹೊಸ ಕೂದಲ ಬೆಳವಣಿಗೆಯನ್ನು ನಿಲ್ಲಿಸಬಹುದು. ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಕೂದಲನ್ನು ವಿವಿಧ ವಿಧಾನಗಳ ಮೂಲಕ ತೆಗೆದುಹಾಕಬಹುದು:
• ಕೂದಲಿಗೆ ಬ್ಲೀಚಿಂಗ್ ಕೆಮಿಕಲ್ ಡಿಪಿಲೇಷನ್ ಶೇವಿಂಗ್ ಮಾಡಬಹುದು
• ಮುಖದ ಮೇಲಿನ ಅಸಹಜ ಕೂದಲನ್ನು ತೆಗೆಯಲು ಎಲೆಕ್ಟ್ರೋಲೈಸಿಸ್ ಚಿಕಿತ್ಸೆಯನ್ನು ನೀಡಬಹುದು.
• ಲೇಸರ್ ಚಿಕಿತ್ಸೆಯೂ ಉತ್ತಮವಾಗಿದೆ
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ