
ಹೆಣ್ಮಕ್ಕಳು ಮುಖಕ್ಕೆ ಮೇಕಪ್ ಮಾಡಿಕೊಂಡರೂ, ಮಾಡಿಕೊಳ್ಳದಿದ್ದರೂ ತುಟಿಗೆ ಲಿಪ್‌ಸ್ಟಿಕ್ (Lipstick) ಹಚ್ಚಲು ಮಾತ್ರ ಮರೆಯೋದೇ ಇಲ್ಲ. ಮುಖದ ನೋಟವನ್ನು ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಲಿಪ್‌ಸ್ಟಿಕ್ ಎಂದ್ರೆ ಮಹಿಳೆಯರಿಗೆ ತುಂಬಾನೇ ಇಷ್ಟ. ರಾಸಾಯನಿಕಗಳನ್ನು ಹೊಂದಿರುವ ಕಾರಣ ಅತಿಯಾಗಿ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ, ಅದರಿಂದ ಆರೋಗ್ಯದ ಮೇಲೆ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುತ್ತದೆ. ಅದರಲ್ಲೂ ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್ ಯಾವುದೇ ಕಾರಣಕ್ಕೂ ಬಳಸಬಾರದು ಎನ್ನುತ್ತಾರೆ ಆರ್ಥೋಪೆಡಿಕ್ ಸರ್ಜನ್ ಡಾ. ಮನನ್ ವೋರಾ (Dr. Manan Vora). ಅಷ್ಟಕ್ಕೂ ಆ ರಾಸಾಯನಿಕ ಅಂಶಗಳಾದರೂ ಯಾವುವು? ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಆರ್ಥೋಪೆಡಿಕ್ ಸರ್ಜನ್ ಡಾ. ಮನನ್ ವೋರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲಿಪ್‌ಸ್ಟಿಕ್‌ನ ದುಷ್ಪರಿಣಾಮಗಳ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಎರಡು ಅಂಶಗಳನ್ನು ಹೊಂದಿರುವ ಲಿಪ್‌ಸ್ಟಿಕ್ ಹಾರ್ಮೋನು ಅಸಮತೋಲನ, ಮುಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಕೆಲವು ಲಿಪ್‌ಸ್ಟಿಕ್‌ಗಳು ಅದರಲ್ಲೂ ಕಡಿಮೆ ಬೆಲೆಯ ಲಿಪ್‌ಸ್ಟಿಕ್‌ಗಳಲ್ಲಿ ಇಂತಹ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ, ಆದ್ದರಿಂದ ಅವುಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿ ಕಂಡುಬರುವ BPA (ಬಿಸ್ಫೆನಾಲ್ ಎ), ಮೀಥೈಲ್ ಪ್ಯಾರಾಬೆನ್ ಅಥವಾ ಪ್ರೊಪೈಲ್ ಪ್ಯಾರಾಬೆನ್ ಅಂಶಗಳು ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣ ಎಂದು ಡಾ. ಮನನ್ ಹೇಳಿದ್ದಾರೆ. ಈ ಎರಡು ಅಂಶಗಳು ಹಾರ್ಮೋನು ಅಸಮತೋಲನಕ್ಕೆ ಕಾರಣ. ಇದು ದೇಹದ ಹಾರ್ಮೋನು ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ. ಇದರಿಂದ ಮುಟ್ಟಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ಏನಾಗುತ್ತದೆ ಗೊತ್ತಾ?
ಹಾಗಾಗಿ ಲಿಪ್‌ಸ್ಟಿಕ್ ಪ್ಯಾಕೆಜಿಂಗ್‌ನಲ್ಲಿ PPA ಫ್ರೀ ಅಥವಾ ಪ್ಯಾರಾಬೆನ್ ಫ್ರೀ ಎಂದು ಬರೆದಿರುವ ಲಿಪ್‌ಸ್ಟಿಕ್ ಮಾತ್ರ ಖರೀದಿಸಿ ಎಂದು ಅವರು ಹೇಳಿದ್ದಾರೆ. ಜೊತೆಗೆ ಇಕೋಸರ್ಟ್, ಕಾಸ್ಮೊಸ್ ಆರ್ಗಾನಿಕ್ ಅಥವಾ ನ್ಯಾಚುರಲ್, ಯುಎಸ್‌ಡಿಎ ಆರ್ಗಾನಿಕ್ ಮತ್ತು ಪೆಟಾ ಇಂಡಿಯಾ ಕ್ರೂಯಲ್ಟಿ ಫ್ರಿ ಲೇಬಲ್‌ಗಳನ್ನು ಹೊಂದಿರುವ ಲಿಪ್‌ಸ್ಟಿಕ್ ಖರೀದಿಸುವುದು ಉತ್ತಮ. ಪ್ಯಾಕೆಜಿಂಗ್‌ನಲ್ಲಿ ಈ ರೀತಿಯ ಮಾನದಂಡಗಳಿರುವ ಲಿಪ್‌ಸ್ಟಿಕ್‌ಗಳು ಸುರಕ್ಷಿತವಾಗಿರುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Mon, 18 August 25