Father’s Day 2021 Date: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ

| Updated By: shruti hegde

Updated on: Jun 17, 2021 | 12:29 PM

ತಂದೆಯ ದಿನಾಚರಣೆ: ಮಕ್ಕಳು ಮತ್ತು ಅಪ್ಪ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್​ ತಿಂಗಳ 20ನೇ ತಾರೀಕಿನಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ.

Fathers Day 2021 Date: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಅಪ್ಪನ ಅದೆಷ್ಟೋ ನೋವು-ಸಂಕಟಗಳನ್ನು ನುಂಗಿ ಮನೆಯವರ ಹಿತಕ್ಕಾಗಿ ದಿನವಿಡೀ ದುಡಿಯುತ್ತಾರೆ. ಹುಟ್ಟಿದಾಗಿನಿಂದ ಉಜ್ವಲ ಭವಿಷ್ಯ ಕಾಣುವವರೆಗೂ ಕೈ ಹಿಡಿದು ನಡೆಸಿದ ಪ್ರತ್ಯಕ್ಷ ದೇವರು ಅವರು. ಹಗಲಿರುಳು ದುಡಿದು- ತನ್ನ ಕಷ್ವ ಬದಿಗಿಟ್ಟು ಮಕ್ಕಳಿಗೆ ಪ್ರೀತಿಯನ್ನು ಮಾತ್ರ ಉಣಬಡಿಸಿದರು ಅಪ್ಪ. ಈ ಎರಡಕ್ಷರದ ಪದದಲ್ಲಿ ಅದೆಷ್ಟು ಗಾಂಭೀರ್ಯ, ದರ್ಪ, ಕೋಪ, ಮುನಿಸು ಜತೆಗೆ ಅಳೆಯಲಾಗದಷ್ಟು ಪ್ರೀತಿ.. ಐ ಲವ್​ ಯು ಅಪ್ಪಾ..

ಮಕ್ಕಳು ಮತ್ತು ಅಪ್ಪ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್​ ತಿಂಗಳ 20ನೇ ತಾರೀಕಿನಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಕಣ್ಣ ಹನಿ ಕೆಳಗೆ ಬೀಳದಂತೆ, ಕಾಲಿಗೆ ಮುಳ್ಳು ಚುಚ್ಚದಂತೆ ಬೆನ್ನ ಮೇಲೆಯೇ ಹೊತ್ತು ಸಾಕಿದ ಪ್ರೀತಿ ಅಪ್ಪನಿಗಾಗಿ ಏನು ಸರ್ಪೈಸ್​​ ಗಿಫ್ಟ್​ ಕೊಡಬೇಕೆಂದಿದ್ದೀರಿ?

ಆಚರಣೆ
ಫಾದರ್ಸ್​ ಡೇ ವರ್ಷದಿಂದ  ವರ್ಷಕ್ಕೆ ಬದಲಾಗುತ್ತದೆ. ಹಲವೆಡೆ ಈ ದಿನವನ್ನು ಜೂನ್​ 3ನೇ ಭಾನುವಾರದಂದು ಆಚರಿಸಲಾಗುತ್ತದೆ. ಸ್ಪೇನ್​ ಮತ್ತು ಪೋರ್ಚುಗಲ್​ನಂತಹ ದೇಶಗಳು ಮಾರ್ಚ್​ 19ರಂದು ಸೇಂಟ್​ ಜೋಸೆಫ್​ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್​ನಲ್ಲಿ ಆಗಸ್ಟ್​ 8ರಂದು ಹಾಗೂ ಥೈಲಾಂಡ್​ನಲ್ಲಿ ಡಿಸೆಂಬರ್​ 5ರಂದು ಆಚರಿಸಲಾಗುತ್ತದೆ.

ತಂದೆಯ ದಿನದ ಹೇಗೆ ಪ್ರಾರಂಭವಾಯಿತು?
ಯುನೈಟೆಡ್​ ಸ್ಟೇಟ್​ನಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಇಲ್ಲೋರ್ವರ ಮಗಳು ಗ್ರೇಸ್​ ಗೋಲ್ಡನ್​ ಕ್ಲೇಟನ್​, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು.

ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್​ ಡಾಡ್​ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್​ ನಿಕ್ಸನ್​ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.

ಇದನ್ನೂ ಓದಿ:

International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಾಮುಖ್ಯತೆ, ದಿನಾಂಕ ಮತ್ತು ಈ ವರ್ಷದ ಥೀಮ್​ ತಿಳಿಯಿರಿ

Tv9 Yoga Class : ವರ್ಕ್ ಫ್ರಂ ಹೋಮ್​ ಮಾಡುವವರು ಆಕ್ಸಿಜನ್ ಹೆಚ್ಚಿಸಲು ಈ ರೀತಿ ಮಾಡಬೇಕು