Father’s Day 2024: ಅಪ್ಪಂದಿರ ದಿನದ ಇತಿಹಾಸ, ಮಹತ್ವವೇನು? ತಿಳಿಯಿರಿ

ತಂದೆಯ ಪ್ರೀತಿ ಒಂದು ದಿನದ ಆಚರಣೆಯ ಮೇಲೆ ಅವಲಂಬಿತವಾಗಿಲ್ಲವಾದರೂ, ತಮ್ಮ ಮಕ್ಕಳ ಸಂತೋಷ ಎಲ್ಲಕ್ಕಿಂತ ಹೆಚ್ಚು ಎಂದು ಪರಿಗಣಿಸುವ ಎಲ್ಲಾ ಸೂಪರ್ ಡ್ಯಾಡ್ ಗಳನ್ನು ಗೌರವಿಸಲು ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಅಪ್ಪಂದಿರ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ತಂದೆಯ ದಿನದ ಮಹತ್ವ ಮತ್ತು ಇತಿಹಾಸವೇನು? ಇಲ್ಲಿದೆ ಮಾಹಿತಿ.

Father’s Day 2024: ಅಪ್ಪಂದಿರ ದಿನದ ಇತಿಹಾಸ, ಮಹತ್ವವೇನು? ತಿಳಿಯಿರಿ
Father's Day 2024
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Jun 16, 2024 | 10:11 AM

ತಂದೆ ಮತ್ತು ಮಕ್ಕಳ ನಡುವಿನ ಸಂಬಂಧ ತುಂಬಾ ವಿಶೇಷವಾದದ್ದು. ಈ ವಿಶೇಷ ಅನುಬಂಧವನ್ನು ಆಚರಿಸಲು ನಾವು ಪ್ರತಿ ವರ್ಷ ತಂದೆಯ ದಿನವನ್ನು ಆಚರಿಸುತ್ತೇವೆ. ತಂದೆಯ ಪ್ರೀತಿ ಒಂದು ದಿನದ ಆಚರಣೆಯ ಮೇಲೆ ಅವಲಂಬಿತವಾಗಿಲ್ಲವಾದರೂ, ತಮ್ಮ ಮಕ್ಕಳ ಸಂತೋಷ ಎಲ್ಲಕ್ಕಿಂತ ಹೆಚ್ಚು ಎಂದು ಪರಿಗಣಿಸುವ ಎಲ್ಲಾ ಸೂಪರ್ ಡ್ಯಾಡ್ ಗಳನ್ನು ಗೌರವಿಸಲು ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಅಪ್ಪಂದಿರ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ತಂದೆಯ ದಿನದ ಮಹತ್ವ ಮತ್ತು ಇತಿಹಾಸವೇನು? ಇಲ್ಲಿದೆ ಮಾಹಿತಿ.

ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ, ಆತ ಜೊತೆಗಿದ್ದರೆ ಪ್ರಪಂಚವನ್ನೇ ಗೆಲ್ಲುತ್ತೇನೆ ಎಂಬ ವಿಶ್ವಾಸ ನಮ್ಮಲ್ಲಿರುತ್ತದೆ. ಅಪ್ಪ ತನ್ನ ಜೀವನವನ್ನು ತನ್ನ ಕುಟುಂಬಕ್ಕಾಗಿ ಮುಡಿಪಾಗಿಟ್ಟು ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುತ್ತಾನೆ. ಹಾಗಾಗಿ ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಈ ಬಾರಿ ಜೂನ್ 15ರಂದು ವಿಶ್ವ ತಂದೆಯ ದಿನವನ್ನಾಗಿ ಆಚರಿಸಲಾಗುತ್ತದೆ.

ಫಾದರ್ಸ್ ಡೇ ಇತಿಹಾಸ:

ಸೊನೊರಾ ಸ್ಮಾರ್ಟ್ ಡಾಡ್ ಎನ್ನವವರು ಫಾದರ್ಸ್ ಡೇಯ ಸ್ಥಾಪಕಿ. 1909ರಲ್ಲಿ ಡಾಡ್ ಅವರು ಒಮ್ಮೆ ಚರ್ಚ್ ನಲ್ಲಿ ನಡೆದ ತಾಯಂದಿರ ದಿನದ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರ ಮನಸ್ಸಿನಲ್ಲಿ ಫಾದರ್ಸ್ ಡೇ ಆಚರಿಸಬಹುದಲ್ಲ? ಎಂಬ ಆಲೋಚನೆ ಮೊಳಕೆಯೊಡೆಯುತ್ತದೆ. ಸಿವಿಲ್ ವಾರ್ ನ ವಿಲಿಯಮ್ ಜಾಕ್ಸನ್ ಸ್ಮಾರ್ಟ್ ಅವರ ಮಗಳಾಗಿರುವ ಡಾಡ್, ತಂದೆಗೆ ಕೂಡ ಒಂದು ವಿಶೇಷ ದಿನದ ಆಚರಣೆಯ ಅಗತ್ಯವಿದೆ ಎಂದು ಹೇಳಿ ಹೊಸ ಅಭಿಯಾನವನ್ನು ಆರಂಭಿಸಿ ಅದರಲ್ಲಿ ಯಶಸ್ವಿಯಾಗಿ 1910ರ ಜೂನ್ 19ರಂದು ಮೊದಲ ಸಲ ಫಾದರ್ಸ್ ಡೇ ಆಚರಣೆ ಮಾಡುತ್ತಾರೆ. ಬಳಿಕ 1972ರಲ್ಲಿ ಈ ದಿನ ಅಧಿಕೃತವಾಗಿ ಆಚರಣೆ ಬಂದಿದ್ದು ಅಲ್ಲಿಂದ ಪ್ರತೀ ವರ್ಷ ಜೂನ್ ನ ಮೂರನೇ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಅಪ್ಪಂದಿರ ದಿನವನ್ನು ವಿಶೇಷವಾಗಿ ಆಚರಿಸಿ, ನಿಮ್ಮ ತಂದೆಯನ್ನು ಖುಷಿಪಡಿಸಿ

ಅಪ್ಪಂದಿರ ದಿನದ ಮಹತ್ವ:

ಈ ದಿನವು ನಮ್ಮ ಜೀವನದಲ್ಲಿ ತಂದೆಯ ಮಹತ್ವದ ಪಾತ್ರವನ್ನು ನೆನಪಿಸುತ್ತದೆ. ಜೊತೆಗೆ ತಂದೆಯ ಸ್ಥಾನದಲ್ಲಿ ನಿಂತು ಪ್ರೀತಿ ತೋರುವ ಅಜ್ಜ, ದೊಡ್ಡಪ್ಪ, ಚಿಕ್ಕಪ್ಪ, ಮಾವನಿಗೂ ಕೂಡ ಈ ದಿನವನ್ನು ಅರ್ಪಿಸಲಾಗುತ್ತದೆ. ಈ ದಿನ ಮುಖ್ಯವಾಗಿ ತಂದೆಗೆ ಕೃತಜ್ಞತೆ ವ್ಯಕ್ತಪಡಿಸಿ ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಬೆನ್ನೆಲುಬಾಗಿ ನಿಂತು ಸಲಹಿದ್ದಕ್ಕೆ ಪ್ರೀತಿ ಪೂರ್ವಕ ನಮನಗಳನ್ನು ಸಲ್ಲಿಸಿ, ಪ್ರತಿದಿನವೂ ನೀವು ಖುಷಿಯಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ನಮಗೆ ನಾವೇ ಪ್ರಮಾಣ ಮಾಡುವುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: