ತೂಕ ಇಳಿಕೆಗೆ ಸೋಂಪು: ಇದರ 5 ಪ್ರಯೋಜನಗಳೇನು? ಅದನ್ನು ಸೇವಿಸುವುದು ಹೇಗೆ? ಇಲ್ಲಿದೆ ಮಾಹಿತಿ

ತೂಕ ಇಳಿಸಿಕೊಳ್ಳಲು ಸೋಂಪು ಅಥವಾ ಫೆನ್ನೆಲ್ ದೇಹಕ್ಕೆ ಉತ್ತಮವಾಗಿದ್ದು, ಆ ಹೆಚ್ಚುವರಿ ಕಿಲೋಗಳನ್ನು ಹಲವಾರು ರೀತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

ತೂಕ ಇಳಿಕೆಗೆ ಸೋಂಪು: ಇದರ 5 ಪ್ರಯೋಜನಗಳೇನು? ಅದನ್ನು ಸೇವಿಸುವುದು ಹೇಗೆ? ಇಲ್ಲಿದೆ ಮಾಹಿತಿ
Fennel SeedsImage Credit source: 123RF
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Apr 23, 2023 | 3:59 PM

ತೂಕ ಇಳಿಸಿಕೊಳ್ಳುವುದು ಸಾಮಾನ್ಯವಲ್ಲ. ಅದ್ಕಕಾಗಿ ದಿನನಿತ್ಯ ಹಲವಾರು ಅಭ್ಯಾಸಗಳನ್ನು ಮಾಡಬೇಕಾಗುತ್ತದೆ. ಅಂದರೆ ಆಹಾರಕ್ರಮದಲ್ಲಿ ಬದಲಾವಣೆ, ಜೀವನಶೈಲಿಯಲ್ಲಿ ಬದಲಾವಣೆಗಳಿಂದ ಹಿಡಿದು ಫಿಟ್ನೆಸ್ ವರೆಗೆ, ಎಲ್ಲವನ್ನೂ ವ್ಯಕ್ತಿಯ ಅವಶ್ಯಕತೆಗಳೊಂದಿಗೆ ಹೊಂದಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ನಮಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳು, ಪಾನೀಯಗಳು ಮತ್ತು ಇವುಗಳ ಸಂಯೋಜನೆಗಳ ಬಗ್ಗೆ ತಿಳಿದಿರುವುದಿಲ್ಲ. ಪ್ರತಿ ಅಡುಗೆಮನೆಯ ಶೆಲ್ಫ್ನಲ್ಲಿ ಕಂಡುಬರುವ ಒಂದು ಸಾಮಾನ್ಯ ಮಸಾಲೆಗಳಲ್ಲಿ ಸೋಂಪು ಕೂಡ ಒಂದು. ಅಲ್ಲದೆ ಇದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಫಿಟ್ ನೆಸ್ ಗೆ ಆಯುರ್ವೇದ ಮೂಲವಾದ ಸೋಂಪು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪರಿಗಣಿಸಲಾಗಿದೆ.

ತೂಕ ಇಳಿಸಿಕೊಳ್ಳಲು ಸೋಂಪು ಹೇಗೆ ಸಹಾಯ ಮಾಡುತ್ತದೆ?

ಸೋಂಪು ಉತ್ಕರ್ಷಣ ನಿರೋಧಕಗಳು, ಫೈಬರ್, ಖನಿಜಗಳ ಸಮೃದ್ಧವಿರುವ ಮೂಲವಾಗಿದೆ. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಮತ್ತಷ್ಟು ಸಹಾಯ ಮಾಡುತ್ತದೆ.

ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ:

ಸೋಂಪು ಕೊಬ್ಬಿನ ಸಂಗ್ರಹವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ:

ಸೋಂಪು ಅಥವಾ ಫೆನ್ನೆಲ್ ಬೀಜಗಳಲ್ಲಿ ನಾರಿನಂಶ ಸಮೃದ್ಧವಾಗಿದೆ, ಇದು ಹೊಟ್ಟೆ ತುಂಬಿರುವ ಅನುಭವ ನೀಡಲು ಸಹಾಯ ಮಾಡುತ್ತದೆ ಮತ್ತು ಏನೋ ತಿನ್ನಬೇಕು ಎಂಬ ಬಯಕೆಯನ್ನು ಕಡಿಮೆ ಮಾಡಲು ಸಹಕಾರಿ.

ಉತ್ತಮ ಜೀರ್ಣಕ್ರಿಯೆ:

ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಡೈಜೆಟ್ಸಿವ್ ಕಿಣ್ವಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.

ವಿಷವನ್ನು ಹೊರಹಾಕುತ್ತದೆ:

ಸೋಂಪು ಬೀಜಗಳು ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಹಾನಿಯನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಭಾರತದ ಪ್ರಮುಖ ಮಾವಿನ ಹಣ್ಣಿನ ತಳಿಗಳ ಮಾಹಿತಿ ಇಲ್ಲಿವೆ

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:

ಸೋಂಪು ಸೇವನೆಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದಲ್ಲಿನ ಶಕ್ತಿಯನ್ನು ಸಂಸ್ಕರಿಸಿ ಅಧಿಕ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸೋಂಪು ಬೀಜಗಳು ಹೇಗೆ ಸೇವಿಸಬೇಕು ?

ಸೋಂಪು ಅಥವಾ ಫೆನ್ನೆಲ್ ನೀರು:

ಒಂದು ಲೋಟದಲ್ಲಿ ನೀರು ಮತ್ತು ಒಂದು ಹಿಡಿ ಸೋಂಪು ಬೀಜಗಳನ್ನು ರಾತ್ರಿಯಿಡೀ ನೆನೆಸಿಡಿ. ನಂತರ ಬೆಳಿಗ್ಗೆ ಮೊದಲು ಆ ನೀರನ್ನು ಕುಡಿಯಿರಿ.

ಸೋಂಪಿನ ಚಹಾ:

ಗಿಡಮೂಲಿಕೆ ಮತ್ತು ಹಸಿರು ಚಹಾ ಸಹ ತೂಕ ಇಳಿಸುತ್ತದೆ. ಚಹಾ ತಯಾರಿಸಲು ಕೆಲವು ಮಾರ್ಗಗಳಿವೆಯಾದರೂ, ಬಿಸಿ ನೀರಿನಲ್ಲಿ ಒಂದು ಅಥವಾ ಎರಡು ಟೀಸ್ಪೂನ್ ಸೋಂಪು ಅನ್ನು ಸೇರಿಸಬಹುದು. ಅದನ್ನು ಹೆಚ್ಚು ಹೊತ್ತು ಕುದಿಸದೆ ರುಚಿಗಾಗಿ ಪುದೀನಾ ಎಲೆಗಳು, ಶುಂಠಿ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು.ಸೋಂಪು ತೂಕ ನಷ್ಟಕ್ಕೆ ಉತ್ತಮವಾದ ಆಯ್ಕೆಯಾಗಿದೆ. ಆದರೆ ಇದರ ಜೊತೆ ಬೇರೆ ಸಾಮಗ್ರಿಗಳನ್ನುಸೇರಿಸಬೇಕು. ಇಲ್ಲವಾದಲಿ ಇದು ಏಕಾಂಗಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ ತೂಕ ನಷ್ಟವನ್ನು ಸರಿಯಾದ ಆಹಾರ ಪದ್ಧತಿಯೊಂದಿಗೆ ಸಂಯೋಜಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​  ಮಾಡಿ: 

Published On - 3:59 pm, Sun, 23 April 23